ತಪ್ಪು ಟಿವಿ ಜಾಹೀರಾತಿನಿಂದ ಇಕ್ಕಟ್ಟಿಗೆ ಸಿಲುಕಿದ ಬಜಾಜ್ ಪಲ್ಸರ್

ಅಪಾಯಕಾರಿ ಸ್ಟಂಟ್ ಜಾಹೀರಾತು ಮೂಲಕ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಬಿತ್ತರಿಸುತ್ತಿರುವ ಬಜಾಜ್‌ಗೆ ಸಂಕಷ್ಟ ಎದುರಾಗಿದೆ. ಅಪಾಯಕಾರಿ ಜಾಹೀರಾತು ನೀಡಿದ್ದರ ವಿರುದ್ಧ ASCI ಕ್ರಮಕ್ಕೆ ಮುಂದಾಗಿದೆ.

By Praveen

ಭಾರತ ಪ್ರಮುಖ ದ್ವಿಚಕ್ರ ವಾಹನ ಉತ್ವಾದನಾ ಸಂಸ್ಥೆಗಳಲ್ಲಿ ಬಜಾಜ್ ಕೂಡಾ ಒಂದು. ಆದ್ರೆ ಪಲ್ಸರ್ ಮಾದರಿಯ ಜಾಹೀರಾತು ವಿಚಾರದಲ್ಲಿ ಎಡವಿದೆ. ಯಾಕೇಂದ್ರೆ ಅಪಾಯಕಾರಿ ಸ್ಟಂಟ್ ನಡೆಸಿರುವ ಜಾಹೀರಾತು ಬಿತ್ತರಿಸಿದ್ದು, ಬಜಾಜ್ ಪಲ್ಸರ್ ವಿರುದ್ಧ ಕಾನೂನು ಉಲ್ಲಂಘನೆ ಆರೋಪ ಕೇಳಿಬಂದಿದೆ.

ತಪ್ಪು ಟಿವಿ ಜಾಹೀರಾತಿನಿಂದ ಇಕ್ಕಟ್ಟಿಗೆ ಸಿಲುಕಿದ ಬಜಾಜ್ ಪಲ್ಸರ್

ಸಾರ್ವಜನಿಕರ ದೂರುಗಳ ಅನ್ವಯ ಭಾರತೀಯ ಜಾಹೀರಾತು ಸ್ವಯಂ ನಿಯಂತ್ರಣ ಸಂಸ್ಥೆ(ASCI), ದೇಶದ 100 ತಪ್ಪು ಜಾಹೀರಾತುಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಬಜಾಜ್ ಪಲ್ಸರ್ ಹೆಸರು ಪ್ರಕಟಗೊಂಡಿದೆ. ಜೊತೆಗೆ ಇನ್ನೊಂದು ಪ್ರಮುಖ ಬೈಕ್ ಉತ್ವಾದನಾ ಸಂಸ್ಥೆ ಬ್ರಿಡ್ಜ್ ಹೆಸರು ಕೂಡಾ ತಪ್ಪು ಜಾಹೀರಾತು ಪಟ್ಟಿಯಲ್ಲಿದೆ.

ತಪ್ಪು ಟಿವಿ ಜಾಹೀರಾತಿನಿಂದ ಇಕ್ಕಟ್ಟಿಗೆ ಸಿಲುಕಿದ ಬಜಾಜ್ ಪಲ್ಸರ್

ಪ್ರಮುಖ ಎರಡು ಕಾರಣಕ್ಕೆ ಬಜಾಜ್ ಪಲ್ಸರ್ ಜಾಹೀರಾತು ತಪ್ಪು ಎಂದು ಪರಿಗಣಿಸಲಾಗಿದೆ. ಒಂದು ಬೈಕ್ ವೀಲ್ಹಿಂಗ್ ನಡೆಸುತ್ತಿರುವ ಜಾಹೀರಾತಿನಿಂದಾಗಿ ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತೆ ಎನ್ನುವುದನ್ನು ಕಡೆಗಣಿಸಲಾಗಿರುವುದು, ಇನ್ನೊಂದು ಜನದಟ್ಟಣೆ ಮಾರುಕಟ್ಟೆಯಲ್ಲಿ ಬೈಕ್ ಸಾಹಸ ನಡೆಸಿ ಚಿತ್ರೀಕರಣ ನಡೆಸಿ ಕಾನೂನು ಉಲ್ಲಂಘನೆ ಮಾಡಿದೆ.

ತಪ್ಪು ಟಿವಿ ಜಾಹೀರಾತಿನಿಂದ ಇಕ್ಕಟ್ಟಿಗೆ ಸಿಲುಕಿದ ಬಜಾಜ್ ಪಲ್ಸರ್

ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಸಾಹಸ ಪ್ರದರ್ಶನಗಳಿಂದ ಅಪಘಾತಗಳಿಗೆ ಕಾರಣವಾಗಬಹುದು. ಅದರಲ್ಲೂ ವೀಲ್ಹಿಂಗ್ ಮಾಡಿ ಜಾಹೀರಾತು ನೀಡುವುದು ಯುವಕರನ್ನು ತಪ್ಪು ದಾರಿಗೆ ಎಳೆದಂತಾಗುತ್ತೆ. ಇನ್ನೊಂದು ಪ್ರಮುಖ ಅಂಶವೇನೆಂದರೆ, ಇಂತಹ ಸಾಹಸ ಪ್ರದರ್ಶನ ಮಾಡಲೇಬೇಕು ಎಂದಾದಲ್ಲಿ ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡು ಚಿತ್ರೀಕರಣ ನಡೆಸಬೇಕು. ಆದ್ರೆ ಬಜಾಜ್ ನಿಯಮ ಮೀರಿ ಜಾಹೀರಾತು ಬಿತ್ತರ ಮಾಡಿದೆ.

ತಪ್ಪು ಟಿವಿ ಜಾಹೀರಾತಿನಿಂದ ಇಕ್ಕಟ್ಟಿಗೆ ಸಿಲುಕಿದ ಬಜಾಜ್ ಪಲ್ಸರ್

ದೇಶದಲ್ಲಿ ಜಾಹೀರಾತುಗಳ ಮೇಲೆ ನಿಯಂತ್ರಣ ಸಾಧಿಸುವ ASCI, ಗ್ರಾಹಕರ ದೂರುಗಳ ಕೌನಿಲ್ಸ್ (CCC)ಮೂಲಕ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೆ. ಈ ಮೂಲಕ ಹದ್ದು ಮೀರಿ ಪ್ರಚಾರ ಪಡೆಯುವ ಜಾಹೀರಾತುಗಳಿಗೆ ಕಡಿವಾಣ ಹಾಕುತ್ತದೆ.

ತಪ್ಪು ಟಿವಿ ಜಾಹೀರಾತಿನಿಂದ ಇಕ್ಕಟ್ಟಿಗೆ ಸಿಲುಕಿದ ಬಜಾಜ್ ಪಲ್ಸರ್

ಸದ್ಯ 100 ತಪ್ಪು ಜಾಹೀರಾತು ಪಟ್ಟಿಯಲ್ಲಿ ಬಜಾಜ್ ಪಲ್ಸರ್ ಹೆಸರು ಕೇಳಿಬಂದಿದ್ದು, ಭಾರತೀಯ ಜಾಹೀರಾತು ಸ್ವಯಂ ನಿಯಂತ್ರಣ ಸಂಸ್ಥೆ ಕಾನೂನು ಕ್ರಮ ಕೈಗೊಳ್ಳಲಿದೆ. ತಪ್ಪು ದಾರಿಗೆಳೆಯುವ, ಅಸಭ್ಯ, ಅಕ್ರಮ, ಸುಳ್ಳು ಎಂದು ಕಂಡುಬಂದಲ್ಲಿ ನೀವು ಕೂಡಾ ದೂರು ದಾಖಲಿಸಬಹುದಾಗಿದೆ.

ತಪ್ಪು ಟಿವಿ ಜಾಹೀರಾತಿನಿಂದ ಇಕ್ಕಟ್ಟಿಗೆ ಸಿಲುಕಿದ ಬಜಾಜ್ ಪಲ್ಸರ್

ಒಟ್ಟಿನಲ್ಲಿ ತಪ್ಪು ಜಾಹೀರಾತಿನಿಂದಾಗಿ ಬಜಾಜ್ ಸಂಸ್ಥೆಗೆ ಸಂಕಷ್ಟ ಎದುರಾಗಿದ್ದು, ತಪ್ಪಿಸ್ಥರ ಮೇಲೆ ASCI ಕಾನೂನು ಕ್ರಮ ಕೈಗೊಳ್ಳಲಿದೆ. ಇನ್ನಾದರೂ ತಪ್ಪು ಜಾಹೀರಾತುಗಳ ಮೂಲಕ ಸಮಾಜದ ಸ್ವಾಸ್ಥ ಕದಡುವುದು ನಿಯಂತ್ರಣವಾಗಬೇಕಿದೆ.

ನೀವು ಬಜಾಜ್ ಡೋಮಿನಾರ್ 400 ಅಭಿಮಾನಿಗಳಾಗಿದ್ದರೆ ಈ ಕೆಳಗಿನ ಚಿತ್ರಗಳ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Most Read Articles

Kannada
English summary
The ASCI has claimed that the Bajaj Pulsar TVC is misleading on two counts, and encourages people to replicate dangerous moves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X