ರಾಯಲ್ ಎನ್‌ಫೀಲ್ಡ್ 350 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಬೆನೆಲ್ಲಿ ಇಂಪೀರಿಯಲ್ 400

ಇಟಲಿಯ ಮೋಟಾರ್ ಸೈಕಲ್ ತಯಾರಕ ಬೆನೆಲ್ಲಿ ತನ್ನ ಹೊಸ ರೆಟ್ರೋ-ಶೈಲಿಯ ಕ್ರೂಸರ್ ಇಂಪೀರಿಯಲ್ 400 ಮೋಟಾರ್ ಸೈಕಲ್ ಅನ್ನು ಇಟಲಿಯ ಮಿಲನ್‌ನಲ್ಲಿ ನೆಡೆದ 2017 EICMA ಬೈಕ್ ಪ್ರದರ್ಶನದಲ್ಲಿ ಅನಾವರಣಗೊಳಿಸಿದೆ.

By Girish

ಈ ಹಿಂದೆ, ಬೆನೆಲ್ಲಿ ಕಂಪನಿಯು 300 ಸಿಸಿ ಮತ್ತು 400 ಸಿಸಿ ವಿಭಾಗದಲ್ಲಿ ತನ್ನ ಹೊಸ ಮೋಟಾರ್‌ಸೈಕಲ್ ಪರಿಚಯಿಸಲಿದೆ ಎಂದು ತಿಳಿಸಿತ್ತು. ಹೊಸ ಮಾದರಿಯು 2018ರ ಆಟೋ ಎಕ್ಸ್‌ಪೋದಲ್ಲಿ ಬಹಿರಂಗಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು.

ರಾಯಲ್ ಎನ್‌ಫೀಲ್ಡ್ 350 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಬೆನೆಲ್ಲಿ ಇಂಪೀರಿಯಲ್ 400

ಆದರೆ ಈಗ, ಇಂಪೀರಿಯಲ್ 400 ಎಂಬ ಹೆಸರಿನ ಹೊಸ ಮೋಟಾರ್‌ಸೈಕಲ್ ಬಿಡುಗಡೆಗೊಳಿಸಿದ್ದು, ಈ ವಾಹನವು ಭಾರತಕ್ಕೆ ಪ್ರವೇಶವನ್ನು ಮಾಡಲು ಸಿದ್ಧವಾಗಿದೆ. 2018ರ ಮೂರನೇ ತ್ರೈಮಾಸಿಕದಲ್ಲಿ ಹೊಸ ರೆಟ್ರೊ-ಶೈಲಿಯ ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.

ರಾಯಲ್ ಎನ್‌ಫೀಲ್ಡ್ 350 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಬೆನೆಲ್ಲಿ ಇಂಪೀರಿಯಲ್ 400

ರಾಯಲ್ ಎನ್‌ಫೀಲ್ಡ್ 350 ಸಿಸಿ ವಾಹನದ ಪ್ರತಿಸ್ಪರ್ದಿಯಾಗಿ ಈ ಇಂಪೀರಿಯಲ್ 400 ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆಯಾಗಲಿದ್ದು, ದೀರ್ಘಪ್ರಯಾಣಕ್ಕೆ ಹೇಳಿ ಮಾಡಿಸಿದೆ ವಾಹನ ಎನ್ನಬಹುದು.

ರಾಯಲ್ ಎನ್‌ಫೀಲ್ಡ್ 350 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಬೆನೆಲ್ಲಿ ಇಂಪೀರಿಯಲ್ 400

ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಮುಂಭಾಗದಲ್ಲಿ ವಿನ್ಯಾಸದಲ್ಲಿ ಕ್ಲಾಸಿಕ್ ರೌಂಡ್ ಹೆಡ್‌ಲ್ಯಾಂಪ್, ಕ್ರೋಮ್ ಫ್ರಂಟ್ ಮತ್ತು ಹಿಂಭಾಗದ ಫೆಂಡರ್‌ಗಳು, ಸ್ಪೋಕ್ ವೀಲ್‌ಗಳು ಮತ್ತು ಡಿಜಿಟಲ್ ಡಿಸ್‌ಪ್ಲೇಯೊಂದಿಗೆ ಟ್ವಿನ್-ಪಾಡ್ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ರೆಟ್ರೊ ನಿಲುವನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್ 350 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಬೆನೆಲ್ಲಿ ಇಂಪೀರಿಯಲ್ 400

ಬೆನೆಲ್ಲಿ ಇಂಪೀರಿಯಲ್ 400 ಬೈಕ್ 373.5 ಸಿಸಿ ಏರ್ ಕೋಲ್ಡ್, ಸಿಂಗಲ್-ಸಿಲಿಂಡರ್, ಫ್ಯುಯೆಲ್ ಇಂಜೆಕ್ಟ್ ಎಂಜಿನ್‌ನಿಂದ 19 ಬಿಎಚ್‌ಪಿ ಮತ್ತು 28 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ಗೆ 5-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ 350 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಬೆನೆಲ್ಲಿ ಇಂಪೀರಿಯಲ್ 400

ಈ ಮೋಟಾರ್‌ಸೈಕಲ್ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಅವಳಿ ಶಾಕ್ ಅಬ್ಸಾರ್‌ಬರ್ ಹೊಂದಿದೆ. ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, 300 ಎಂಎಂ ಮುಂಭಾಗದ ಡಿಸ್ಕ್ ಮತ್ತು 240 ಎಂಎಂ ಹಿಂಭಾಗದ ಡಿಸ್ಕ್ ಮೂಲಕ ನಿರ್ವಹಿಸಲಾಗುತ್ತದೆ.

ರಾಯಲ್ ಎನ್‌ಫೀಲ್ಡ್ 350 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಬೆನೆಲ್ಲಿ ಇಂಪೀರಿಯಲ್ 400

ಬೆನೆಲ್ಲಿ ಇಂಪೀರಿಯಲ್ 400 ಬೈಕ್, 200 ಕೆಜಿ ತೂಕ ಭಾರ ಪಡೆದುಕೊಂಡಿದೆ ಹಾಗು ಇಂಧನ ಟ್ಯಾಂಕ್ ಸಾಮರ್ಥ್ಯವು 12 ಲೀಟರ್‌ಗಳಷ್ಟಿದೆ. ಕ್ಲಾಸಿಕ್ 350ಗೆ ಹೋಲಿಸಿದರೆ, ಇಂಪೀರಿಯಲ್ 400 ಇಂಧನ ಇಂಜೆಕ್ಷನ್ ಮತ್ತು ಎಬಿಎಸ್‌ನಂತಹ ಆಧುನಿಕ ತಂತ್ರಜ್ಞಾನದೊಂದಿಗೆ ಬರುತ್ತದೆ.

Most Read Articles

Kannada
English summary
Italian motorcycle manufacturer Benelli has unveiled its new retro-styled cruiser motorcycle, the Imperiale 400 at the 2017 EICMA motorcycle show in Milan, Italy. Previously, Benelli had revealed that the company would introduce a new motorcycle in the 300cc to 400cc segment in India. The new model was expected to be revealed at the 2018 Auto Expo.
Story first published: Friday, November 10, 2017, 16:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X