ಬೆನೆಲ್ಲಿ ಲಿಯೊನ್ಸಿನೊ ದ್ವಿಚಕ್ರ ವಾಹನದ ಸ್ಪೈ ಚಿತ್ರಗಳು ಸೋರಿಕೆ

ಮುಂದಿನ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬೆನೆಲ್ಲಿ ಲಿಯೊನ್ಸಿನೊ ದ್ವಿಚಕ್ರ ವಾಹನವನ್ನು ಭಾರತದಲ್ಲಿ ಸದ್ಯ ಪರೀಕ್ಷೆಗೊಳಪಡಿಸಿದೆ. ಈ ಬೈಕ್ ಭಾರತೀಯ ರಸ್ತೆಗಳಲ್ಲಿ ಕಾಣಿಸಿಕೊಂಡಿದೆ.

By Girish

ಕಾಣಿಸಿಕೊಂಡಿರುವ ಲಿಯೊನ್ಸಿನೊ ಬೈಕಿನ ಸಾಕಷ್ಟು ಭಾಗವು ಮರೆಮಾಚುವಿಕೆಯನ್ನು ಹೊಂದಿದೆ. ನವೀನ ರೆಟ್ರೊ ಮೋಟಾರ್ ಸೈಕಲ್ ವಿಶಿಷ್ಟ ವಿನ್ಯಾಸದ ಮುಂಭಾಗವನ್ನು ಪಡೆದುಕೊಂಡಿದೆ. ಸುತ್ತಿವರಿದ ವಿನ್ಯಾಸದ ಹೆಡ್‌ಲೈಟ್, ಸ್ಕ್ರ್ಯಾಂಬ್ಲರ್ ಸ್ಟೈಲ್ ಸೀಟ್, ಸ್ಲಿಮ್ ಟೈಲ್ ಲೈಟ್ ಮತ್ತು ದಪ್ಪವಾಗಿರುವ ಅವಳಿ ರಂದ್ರದ ಎಕ್ಸ್‌ಸಾಸ್ಟ್ ಅಳವಡಿಕೆಗೊಂಡಿದೆ.

ಬೆನೆಲ್ಲಿ ಲಿಯೊನ್ಸಿನೊ ದ್ವಿಚಕ್ರ ವಾಹನದ ಸ್ಪೈ ಚಿತ್ರಗಳು ಸೋರಿಕೆ

ಭಾರತೀಯ ರಸ್ತೆಗಳಿಗೆ ಹೊಂದುವ ಲಿಯಾನ್ಸಿನೊ ಬೈಕನ್ನು ಭಾರತಕ್ಕೆ ಕರೆತರುತ್ತಿದೆ. ಬಲಿಷ್ಠ ಲಿಯೊನ್ಸಿನೊ ಬೈಕ್ ಸಿಂಗಲ್ ಲಿಕ್ವಿಡ್ ಕೋಲ್ಡ್ 499.6 ಸಿಸಿ ಫ್ಯುಯೆಲ್ ಇಂಜೆಕ್ಟ್ ಪ್ಯಾರಲಲ್ ಅವಳಿ ಎಂಜಿನ್ ಹೊಂದಿದೆ.

ಬೆನೆಲ್ಲಿ ಲಿಯೊನ್ಸಿನೊ ದ್ವಿಚಕ್ರ ವಾಹನದ ಸ್ಪೈ ಚಿತ್ರಗಳು ಸೋರಿಕೆ

ಈ ಎಂಜಿನ್ 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿಸಲಾಗಿದೆ ಮತ್ತು ಈ ಎಂಜಿನ್ 47 ಬಿಎಚ್‌ಪಿ ಮತ್ತು 45 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಬೆನೆಲ್ಲಿ ಲಿಯೊನ್ಸಿನೊ ದ್ವಿಚಕ್ರ ವಾಹನದ ಸ್ಪೈ ಚಿತ್ರಗಳು ಸೋರಿಕೆ

2016ರ ಇಇಸಿಎಂಎ ಶೋನಲ್ಲಿ ಪ್ರದರ್ಶನಗೊಂಡ ಈ ಲಿಯೊನ್ಸಿನೊ ಬೈಕ್, ಉಕ್ಕಿನ ಹಂದರದ ಪ್ಲಾಟ್‌ಫಾರಂ ಹೊಂದಿದೆ. ಮುಂಭಾಗದಲ್ಲಿ 50 ಮಿ.ಮೀ ಅಪ್‌ಸೈಡ್ ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ 112 ಮಿ.ಮೀ ಮೋನೋಶಾಕ್ ಆಯ್ಕೆಯನ್ನು ಪಡೆದಿರುವುದನ್ನು ಚಿತ್ರದಲ್ಲಿ ಗಮನಿಸಬಹುದಾಗಿದೆ.

ಬ್ರ್ಯಾಕಿಂಗ್ ಕರ್ತವ್ಯಗಳ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂ.ಎಂ ಅವಳಿ-ಡಿಸ್ಕ್ ಜೊತೆ ನಾಲ್ಕು ಪಿಸ್ಟನ್ ಕ್ಯಾಲಿಪರ್ ಮತ್ತು ಹಿಂಭಾಗದಲ್ಲಿ ಸಿಂಗಲ್ 260 ಎಂ.ಎಂ ಡಿಸ್ಕ್ ಮೂಲಕ ನಿರ್ವಹಿಸಲಾಗುತ್ತದೆ.

ಬೆನೆಲ್ಲಿ ಲಿಯೊನ್ಸಿನೊ ದ್ವಿಚಕ್ರ ವಾಹನದ ಸ್ಪೈ ಚಿತ್ರಗಳು ಸೋರಿಕೆ

ಎಬಿಎಸ್ ಸ್ಟ್ಯಾಂಡರ್ಡ್ ಆಯ್ಕೆಯಾಗಿ ಅಳವಡಿಕೆಗೊಂಡಿರುವ ಈ ಬೈಕ್, 17 ಇಂಚಿನ ಮಿಶ್ರಲೋಹದ ಚಕ್ರಗಳು ಪೈರೆಲಿ ಏಂಜಲ್ ST ಟೈರ್‌ಗಳನ್ನು ಪಡೆದುಕೊಂಡಿದೆ. ಈ ವಾಹನವು 207 ಕೆ.ಜಿ ತೂಗುತ್ತದೆ ಮತ್ತು 13.5-ಲೀಟರ್ ಇಂಧನ ಟ್ಯಾಂಕ್ ಹೊಂದಿದೆ.

ಬೆನೆಲ್ಲಿ ಲಿಯೊನ್ಸಿನೊ ದ್ವಿಚಕ್ರ ವಾಹನದ ಸ್ಪೈ ಚಿತ್ರಗಳು ಸೋರಿಕೆ

ಬೆನೆಲ್ಲಿ ಲಿಯೊನ್ಸಿನೊ ಮೋಟಾರ್ ಸೈಕಲ್ 785 ಎಂ.ಎಂ ಆಸನ ಎತ್ತರವನ್ನು ಹೊಂದಿದೆ. ಸಂಪೂರ್ಣವಾಗಿ ಭಾರತದಲ್ಲೇ ಜೋಡಣೆಯಾಗುವ ಈ ಬೈಕ್ ಸುಮಾರು ರೂ.4.5 ಲಕ್ಷ ಎಕ್ಸ್ ಷೋರೂಂ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

Most Read Articles

Kannada
English summary
Read in Kannada about The Benelli Leoncino has been spotted testing in India ahead of its debut in February next year.
Story first published: Wednesday, November 22, 2017, 17:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X