ಕೆಟಿಎಂ ಡ್ಯೂಕ್ 200 ಬೈಕಿಗೆ ಟಕ್ಕರ್ ಕೊಡಲು ಬರ್ತಿದೆ ಬೆನೆಲ್ಲಿ ಟಿಎನ್‌ಟಿ 200

ಇಟಲಿಯ ಮೋಟಾರ್ ಸೈಕಲ್ ತಯಾರಕ ಬೆನೆಲ್ಲಿ ತನ್ನ ಹೊಸ ಕ್ರೀಡಾ ಬೈಕ್ ಟಿಎನ್‌ಟಿ 200 ದ್ವಿಚಕ್ರವನ್ನು ಇಟಲಿಯ ಮಿಲನ್‌ನಲ್ಲಿ ನೆಡೆದ ಇಐಸಿಎಂಎ ಮೋಟಾರ್ ಸೈಕಲ್ ಪ್ರದರ್ಶನದಲ್ಲಿ ಬಹಿರಂಗಪಡಿಸಿದ್ದು, ಕೆಟಿಎಂ ಡ್ಯೂಕ್ 200 ಜೊತೆ ಸ್ಪರ್ಧೆ ನೆಡೆಸಲಿದೆ.

By Girish

ಬೆನೆಲ್ಲಿ ಟಿಎನ್‌ಟಿ 200 ವಾಹನವು 9,500 ಆರ್‌ಪಿಎಂನಲ್ಲಿ 21.5 ಬಿಎಚ್‌ಪಿ ಮತ್ತು 7,000 ಆರ್‌ಪಿಎಂನಲ್ಲಿ 18 ಎನ್ಎಂ ಟಾರ್ಕ್ ಉತ್ಪಾದಿಸುವ ಸಿಂಗಲ್-ಸಿಲಿಂಡರ್ 199.4 ಸಿಸಿ ದ್ರವ ತಂಪಾಗಿಸುವ ಎಂಜಿನ್ ಆಯ್ಕೆಯನ್ನು ಹೊಂದಿದೆ ಮತ್ತು 6-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಕೆಯಾಗಲಿದೆ.

ಕೆಟಿಎಂ ಡ್ಯೂಕ್ 200 ಬೈಕಿಗೆ ಟಕ್ಕರ್ ಕೊಡಲು ಬರ್ತಿದೆ ಬೆನೆಲ್ಲಿ ಟಿಎನ್‌ಟಿ 200

ಬೆನೆಲ್ಲಿ ಬೆನೆಲ್ಲಿ ಟಿಎನ್ 200ರ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ, ಬೆನೆಲ್ಲಿ ಟಿಎನ್‌ಟಿ 200 ಬೈಕ್ ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ 45 ಮಿ.ಮೀ ಮತ್ತು 120 ಮಿ.ಮೀ ಮತ್ತು ಪೂರ್ವ ಲೋಡ್ ಮಾಡಿಕೊಳ್ಳುವ ತಲೆಕೆಳಗಾದ ಫೋರ್ಕ್‌ನೊಂದಿಗೆ ಬರುತ್ತದೆ.

ಕೆಟಿಎಂ ಡ್ಯೂಕ್ 200 ಬೈಕಿಗೆ ಟಕ್ಕರ್ ಕೊಡಲು ಬರ್ತಿದೆ ಬೆನೆಲ್ಲಿ ಟಿಎನ್‌ಟಿ 200

ತನ್ನ ಸಹೋದರರಂತೆ, ಬೆನೆಲ್ಲಿ ಟಿಎನ್‌ಟಿ 200 ಟ್ರೆಸ್ಟೆಲ್ ಚೌಕಟ್ಟನ್ನು ಬಳಸಿಕೊಳ್ಳುತ್ತದೆ(ಕೆಂಪು ಬಣ್ಣ) ಮತ್ತು ಈ ಬೈಕ್ 2,050 ಮಿ.ಮೀ ಉದ್ದ, 810 ಮಿ.ಮೀ ಅಗಲ ಮತ್ತು 1,065 ಮಿ.ಮೀ ಎತ್ತರವನ್ನು ಪಡೆದಿದೆ.

ಕೆಟಿಎಂ ಡ್ಯೂಕ್ 200 ಬೈಕಿಗೆ ಟಕ್ಕರ್ ಕೊಡಲು ಬರ್ತಿದೆ ಬೆನೆಲ್ಲಿ ಟಿಎನ್‌ಟಿ 200

13 ಲೀಟರ್ ಇಂಧನ ಟ್ಯಾಂಕ್ ಇರುವಂತಹ ಈ ಬೈಕ್ 164 ಕೆಜಿ ತೂಗುತ್ತದೆ. ಮುಂಭಾಗದಲ್ಲಿ ನಾಲ್ಕು ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 260 ಎಂಎಂ ಸಿಂಗಲ್ ಡಿಸ್ಕ್ ಮತ್ತು ಹಿಂಭಾಗಳಲ್ಲಿ 240 ಮಿ.ಮೀ ಪಿಸ್ಟನ್ ಕ್ಯಾಲಿಪರ್ ಡಿಸ್ಕ್ ಹೊಂದಿದೆ. ಆದಾಗ್ಯೂ, ಈ ಬೈಕಿನಲ್ಲಿ ಎಬಿಎಸ್ ಸೌಲಭ್ಯ ನೀಡಲಾಗಿಲ್ಲ.

ಕೆಟಿಎಂ ಡ್ಯೂಕ್ 200 ಬೈಕಿಗೆ ಟಕ್ಕರ್ ಕೊಡಲು ಬರ್ತಿದೆ ಬೆನೆಲ್ಲಿ ಟಿಎನ್‌ಟಿ 200

200 ಮತ್ತು 250 ಸಿಸಿ ವಿಭಾಗದಲ್ಲಿ ಪ್ರಸ್ತುತ ಕೆಟಿಎಂ ಡ್ಯೂಕ್ 200 ಮತ್ತು ಭಾರತದಲ್ಲಿ ಬಜಾಜ್ ಪಲ್ಸರ್ ಎನ್ಎಸ್ 200 ಬೈಕುಗಳು ಪ್ರಾಬಲ್ಯ ಹೊಂದಿವೆ. ಟಿಎನ್‌ಟಿ 200ರೊಂದಿಗೆ, ಬೆನೆಲ್ಲಿ ಕಂಪನಿಯು ಕೆಟಿಎಂ ಮತ್ತು ಬಜಾಜ್ ಕಾಂಬೊವನ್ನು ಕಡಿಮೆಗೊಳಿಸುವ ನಿರೀಕ್ಷೆಯಿದೆ.

ಕೆಟಿಎಂ ಡ್ಯೂಕ್ 200 ಬೈಕಿಗೆ ಟಕ್ಕರ್ ಕೊಡಲು ಬರ್ತಿದೆ ಬೆನೆಲ್ಲಿ ಟಿಎನ್‌ಟಿ 200

ಈ ವಿಭಾಗವು ಪ್ರಸ್ತುತ ಭಾರತದಲ್ಲಿ ಅಭೂತಪೂರ್ವ ಜನಪ್ರಿಯತೆಯನ್ನು ಪಡೆದುಕೊಂಡಿದೆ ಮತ್ತು ಟಿಎನ್‌ಟಿ 200 ಬಿಡುಗಡೆಗೊಳಿಸುವ ಮೂಲಕ ಇಟಾಲಿಯನ್ ಕಂಪನಿ ಖಂಡಿತವಾಗಿ ಈ ಪ್ರಯೋಜನವನ್ನು ಪಡೆಯಲಿದೆ ಎನ್ನಬಹುದು.

Most Read Articles

Kannada
English summary
Italian motorcycle manufacturer, Benelli has revealed its new naked sports bike TNT 200 at the 2017 EICMA motorcycle show in Milan, Italy.
Story first published: Thursday, November 16, 2017, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X