ಎಕ್ಸ್‌ಕ್ಯೂಸಿವ್- ಖರೀದಿಗೆ ಲಭ್ಯವಾದ ಬೆನೆಲ್ಲಿ ಟಿಎನ್‌ಟಿ 300 ಎಬಿಎಸ್ ಆವೃತ್ತಿ

ಇಟಲಿಯ ಐಕಾನಿಕ್ ಸೂಪರ್ ಬೈಕ್ ಸಂಸ್ಥೆಯಾಗಿರುವ ಬೆನೆಲ್ಲಿಯು ಭಾರತೀಯ ಮಾರುಕಟ್ಟೆಯಲ್ಲಿ ಟಿಎನ್‌ಟಿ 300 ಎಬಿಎಸ್ ಸೂಪರ್ ಬೈಕ್ ಆವೃತ್ತಿಯನ್ನು ಪರಿಚಯಿಸಿದ್ದು, ಈಗಾಗಲೇ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಕೂಡಾ ಶುರುವಾಗಿದೆ.

By Praveen

ಇಟಲಿಯ ಐಕಾನಿಕ್ ಸೂಪರ್ ಬೈಕ್ ಸಂಸ್ಥೆಯಾಗಿರುವ ಬೆನೆಲ್ಲಿಯು ಭಾರತೀಯ ಮಾರುಕಟ್ಟೆಯಲ್ಲಿ ಟಿಎನ್‌ಟಿ 300 ಎಬಿಎಸ್ ಸೂಪರ್ ಬೈಕ್ ಆವೃತ್ತಿಯನ್ನು ಪರಿಚಯಿಸಿದ್ದು, ಈಗಾಗಲೇ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಕೂಡಾ ಶುರುವಾಗಿದೆ.

ಖರೀದಿಗೆ ಲಭ್ಯವಾದ ಬೆನೆಲ್ಲಿ ಟಿಎನ್‌ಟಿ 300 ಎಬಿಎಸ್ ಆವೃತ್ತಿ

ಮೊನ್ನೇಯಷ್ಟೇ 302ಆರ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದ ಬೆನೆಲ್ಲಿ ಸಂಸ್ಥೆಯು ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟಿಎನ್‌ಟಿ 300 ಮಾದರಿಯನ್ನು ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸ್ಟಿಸಂ) ತಂತ್ರಜ್ಞಾನದೊಂದಿಗೆ ಬಿಡುಗಡೆಗೊಳಿಸಿದೆ.

ಖರೀದಿಗೆ ಲಭ್ಯವಾದ ಬೆನೆಲ್ಲಿ ಟಿಎನ್‌ಟಿ 300 ಎಬಿಎಸ್ ಆವೃತ್ತಿ

ಸದ್ಯ ಬೆನೆಲ್ಲಿ ಅಧಿಕೃತ ಮಾರಾಟ ಮಳಿಗೆ ಡಿಎಸ್‌ಕೆ ಬೆನೆಲ್ಲಿಯಲ್ಲಿ ಹೊಸ ಬೈಕ್‌ ಅನ್ನು ಮುಂಗಡವಾಗಿ ಬುಕ್ ಮಾಡಬಹುದಾಗಿದ್ದು, ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್‌ಗಳನ್ನು ಕಂಪನಿ ಪೂರೈಕೆ ಮಾಡಲಿದೆ.

Recommended Video

MV Agusta Brutale Launched In India | In Kannada - DriveSpark ಕನ್ನಡ
ಖರೀದಿಗೆ ಲಭ್ಯವಾದ ಬೆನೆಲ್ಲಿ ಟಿಎನ್‌ಟಿ 300 ಎಬಿಎಸ್ ಆವೃತ್ತಿ

ಈ ಬಗ್ಗೆ ದೇಶಾದ್ಯಂತ ವಿವಿಧ ಡಿಎಸ್‌ಕೆ ಬೆನೆಲ್ಲಿ ಡಿಲರ್ಸ್‌ಗಳ ಬಳಿ ಅಧಿಕೃತಿ ಮಾಹಿತಿ ಪಡೆದಿರುವ ಡ್ರೈವ್ ಸ್ಪಾರ್ಕ್ ಟೀಂ, ಎಬಿಎಸ್ ಟಿಎನ್‌ಟಿ 300 ಮಾದರಿ ಕುರಿತಾದ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದೆ.

ಖರೀದಿಗೆ ಲಭ್ಯವಾದ ಬೆನೆಲ್ಲಿ ಟಿಎನ್‌ಟಿ 300 ಎಬಿಎಸ್ ಆವೃತ್ತಿ

ಹೊಸ ಬೈಕ್ ಕಾಯ್ದಿಸಲು ರೂ.25 ಸಾವಿರ ಮುಂಗಡ ಪಾವತಿಸಬೇಕಾಗಿದ್ದು, ತದನಂತರವಷ್ಟೇ ನಿಗದಿತ ಅವಧಿಯಲ್ಲಿ ಹೊಸ ಬೈಕ್ ಪೂರೈಕೆ ಮಾಡಲಾಗುತ್ತದೆ. ಇನ್ನು ಎಬಿಎಸ್ ಅಳವಡಿಕೆ ಹಿನ್ನೆಲೆ ಹೊಸ ಬೈಕ್ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.3.29 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ಖರೀದಿಗೆ ಲಭ್ಯವಾದ ಬೆನೆಲ್ಲಿ ಟಿಎನ್‌ಟಿ 300 ಎಬಿಎಸ್ ಆವೃತ್ತಿ

ಇನ್ನು ಈ ಹಿಂದಿನ ಎಂಜಿನ್ ಮಾದರಿಯನ್ನೇ ಹೊಸ ಅವತರಣಿಕೆಯಲ್ಲೂ ಮುಂದುವರಿಸಲಾಗಿದ್ದು, 300 ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಸಿಲಿಂಡರ್ ಜೋಡಣೆ ಹೊಂದಿದೆ. ಹೀಗಾಗಿ ಹೊಸ ಬೈಕ್ ಮಾದರಿಯೂ 37-ಬಿಎಚ್‌ಪಿ ಹಾಗೂ 26.5-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಪೂರೈಸಲಾಗಿದೆ.

ಖರೀದಿಗೆ ಲಭ್ಯವಾದ ಬೆನೆಲ್ಲಿ ಟಿಎನ್‌ಟಿ 300 ಎಬಿಎಸ್ ಆವೃತ್ತಿ

ಜೊತೆಗೆ ಹೊಸ ಬೈಕ್ ಮಾದರಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಬದಿಯ ಚಕ್ರದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಹಾಗೂ ಸುಧಾರಿತ ಮಾದರಿಯ ಹ್ಯಾಂಡಲ್ ನೀಡಲಾಗಿದೆ.

ಖರೀದಿಗೆ ಲಭ್ಯವಾದ ಬೆನೆಲ್ಲಿ ಟಿಎನ್‌ಟಿ 300 ಎಬಿಎಸ್ ಆವೃತ್ತಿ

ಎಬಿಎಸ್ ಅಲ್ಲದ ಮಾದರಿಗಿಂತ ಹೊಸ ಬೈಕ್ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಪಡೆದುಕೊಂಡಿದ್ದು, 196 ಕೆಜಿ ಭಾರ ಹೊಂದಿದೆ. ಅಲ್ಲದೇ 16 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಮತ್ತು ಗ್ರೀನ್, ವೈಟ್, ರೆಡ್ ಮತ್ತು ಬ್ಲ್ಯಾಕ್ ಬಣ್ಣದಲ್ಲಿ ಟಿಎನ್‌ಟಿ 300 ಅನ್ನು ಆಯ್ಕೆ ಮಾಡಬಹುದಾಗಿದೆ.

Most Read Articles

Kannada
English summary
Read in Kannada about Benelli TNT 300 ABS Now Available In India.
Story first published: Saturday, September 16, 2017, 19:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X