ಹೀರೊ HX250R ವಾಹನದ ಉತ್ಪಾದನೆ ಮಾಡುವುದಿಲ್ಲವೆಂದ ಹೀರೊ ಮೊಟೊಕಾರ್ಪ್

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಹೀರೊ ಮೊಟೊಕಾರ್ಪ್ 2014ರಲ್ಲಿ ನೆಡೆದ ಆಟೋ ಎಕ್ಸ್‌ಪೋದಲ್ಲಿ HX250R ವಾಹನದ ಪರಿಕಲ್ಪನೆಯನ್ನು ಪ್ರದರ್ಶಿಸಿತ್ತು.

By Girish

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಹೀರೊ ಮೊಟೊಕಾರ್ಪ್ 2014ರಲ್ಲಿ ನೆಡೆದ ಆಟೋ ಎಕ್ಸ್‌ಪೋದಲ್ಲಿ HX250R ವಾಹನದ ಪರಿಕಲ್ಪನೆಯನ್ನು ಪ್ರದರ್ಶಿಸಿತ್ತು.

ಹೀರೊ HX250R ವಾಹನದ ಉತ್ಪಾದನೆ ಮಾಡುವುದಿಲ್ಲವೆಂದ ಹೀರೊ ಮೊಟೊಕಾರ್ಪ್

ಎರಡು ವರ್ಷಗಳ ನಂತರ, ಈ ಮೋಟಾರ್ ಸೈಕಲ್‌ನ ನೀಲಿ ಬಣ್ಣದ ಉತ್ಪಾದನಾ ಆವೃತಿಯನ್ನೂ ಸಹ ಹೀರೊ ಮೊಟೊಕಾರ್ಪ್ ಕಂಪನಿ ಪರಿಚಯಿಸಿತ್ತು. ಆದರೆ ಈ ವಾಹನದಲ್ಲಿ 'ಆರ್' ಎಂಬ ಅಕ್ಷರವನ್ನು ಕೈಬಿಡಲಾಗಿತ್ತು, ಇದರಂತೆ, ಈ ಬೈಕಿನ ಹೆಸರನ್ನು HX250 ಎಂದು ಹೆಸರಿಸಲಾಗಿತ್ತು.

ಹೀರೊ HX250R ವಾಹನದ ಉತ್ಪಾದನೆ ಮಾಡುವುದಿಲ್ಲವೆಂದ ಹೀರೊ ಮೊಟೊಕಾರ್ಪ್

ಈಗ, ಹೀರೊ ಮೊಟೊಕಾರ್ಪ್ ಭಾರತದಲ್ಲಿ HX250R ವಾಹನದ ಉತ್ಪಾದನೆಯ ಯೋಜನೆಯನ್ನು ಕೈಬಿಟ್ಟಿದೆ ಎಂಬ ಮಾಹಿತಿಯನ್ನು ಹೀರೊ ಮೊಟೊಕಾರ್ಪ್‌ನ ಮುಖ್ಯ ತಾಂತ್ರಿಕ ಅಧಿಕಾರಿ, ಮಾರ್ಕಸ್ ಬ್ರೌನ್ ಸ್ಪೇರ್‌ಗೇರ್ ತಿಳಿಸಿದ್ದಾರೆ.

ಹೀರೊ HX250R ವಾಹನದ ಉತ್ಪಾದನೆ ಮಾಡುವುದಿಲ್ಲವೆಂದ ಹೀರೊ ಮೊಟೊಕಾರ್ಪ್

250 ಸಿಸಿ ಸೆಗ್ಮೆಂಟ್ ವಿಭಾಗವು ಹೆಚ್ಚು ಕಡಿಮೆ ಕಣ್ಮರೆಯಾಗುತ್ತಿದ್ದು, ಎಲ್ಲಾ ದ್ವಿಚಕ್ರ ವಾಹನ ತಯಾರಕ ಕಂಪನಿಗಳೂ ಕೂಡ 300 ಸಿಸಿ ಎಂಜಿನ್ ಬೈಕಿನ ಕಡೆ ಗಮನ ಹರಿಸುತ್ತಿದ್ದು, ಇದೇ ನಿರ್ದಾರವನ್ನು ಹೀರೊ ಕಂಪನಿ ಕೂಡ ತೆಗೆದುಕೊಂಡಿದೆ.

ಹೀರೊ HX250R ವಾಹನದ ಉತ್ಪಾದನೆ ಮಾಡುವುದಿಲ್ಲವೆಂದ ಹೀರೊ ಮೊಟೊಕಾರ್ಪ್

ಭವಿಷ್ಯದ ಉತ್ಪನ್ನಗಳ ಬಗ್ಗೆ ಮಾತನಾಡಿರುವ ಬ್ರೌನ್ ಸ್ಪೇರ್‌ಗೇರ್, ಕಂಪೆನಿಯು HX250R ಬೈಕಿಗಿಂತ ಹೆಚ್ಚು ಮುಂದುವರಿದ ಮತ್ತು ಉತ್ತಮವಾದ ಮೋಟಾರ್ ವಾಹನವನ್ನು ಪ್ರಾರಂಭಿಸುವ ಕಡೆ ಗಮನಹರಿಸಿದ್ದು, ಹೊಸ ತಂತ್ರಜ್ಞಾನದೊಂದಿಗೆ HX250R ವಾಹನವನ್ನು ಪ್ರಸಕ್ತ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಹೇಳಿದರು.

ಹೀರೊ HX250R ವಾಹನದ ಉತ್ಪಾದನೆ ಮಾಡುವುದಿಲ್ಲವೆಂದ ಹೀರೊ ಮೊಟೊಕಾರ್ಪ್

ಪರಿಕಲ್ಪನೆಯ ಹೀರೊ HX250R ವಾಹನವು, ಅವಳಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು, ಎಲ್ಇಡಿ ಹಗಲಿನ ಹೊತ್ತು ಬೆಳಗುವ ದೀಪಗಳು, ಕ್ಲಿಪ್-ಆನ್ ಹ್ಯಾಂಡಲ್, ಡಿಜಿಟಲ್ ಸಲಕರಣೆಯ ಕ್ಲಸ್ಟರ್ ಅಳವಡಿಕೆಗೊಂಡಿತ್ತು ಹಾಗು ಸಿಟಿ ಮತ್ತು ಸ್ಪೋರ್ಟ್ ಎಂಬ ಎರಡು ಡ್ರೈವಿಂಗ್ ಮೋಡ್‌ಗಳನ್ನೂ ಸಹ ಪಡೆದುಕೊಂಡಿತ್ತು.

ಹೀರೊ HX250R ವಾಹನದ ಉತ್ಪಾದನೆ ಮಾಡುವುದಿಲ್ಲವೆಂದ ಹೀರೊ ಮೊಟೊಕಾರ್ಪ್

HX250R ಬೈಕ್, ಶಕ್ತಿಯುತ 249 ಸಿಸಿ ಇಂಧನ ಇಂಜೆಕ್ಟ್, ಲಿಕ್ವಿಡ್ ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿದ್ದು, ಈ ಎಂಜಿನ್ 31 ಬಿಎಚ್‌ಪಿ ಮತ್ತು 26 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ 6 ಸ್ಪೀಡ್ ಗೇರ್‌ಬಾಕ್ಸ್ ಜೋಡಣೆಗೊಂಡಿದೆ. ಹೀರೋ ಅವರು 2.7 ಸೆಕೆಂಡುಗಳ 0-60 ಕಿಮೀ / ಗಂ ಸಮಯವನ್ನು ಹೊಂದಿದ್ದರು.

Most Read Articles

Kannada
English summary
Hero MotoCorp’s 250cc Supersport Will Not Be Launched In India; Here’s Why
Story first published: Monday, December 18, 2017, 19:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X