ಯಮಹಾ ಫ್ಯಾಸಿನೊಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಹೀರೊ 125 ಸಿಸಿ ಸ್ಕೂಟರ್

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೊ ಮೊಟೊಕಾರ್ಪ್ ದೇಶದಲ್ಲಿ ನೂತನ ಉತ್ಪನ್ನಗಳನ್ನು ಪರಿಚಯಿಸಲು ಮುಂದಾಗಿದ್ದು, ತನ್ನ ಹೊಚ್ಚ ಹೊಸ 125 ಸಿಸಿ ಸ್ಕೂಟರ್ ಪ್ರಾರಂಭಿಸಲಿದೆ ಎಂಬ ಖಚಿತ ಮಾಹಿತಿ ಬಂದಿದೆ.

By Girish

ಭಾರತದಲ್ಲಿ ಪ್ಯಾಷನ್ ಎಕ್ಸ್‌ಪೊ ಬಿಡುಗಡೆ ಮಾಡುವುದಾಗಿ ಈಗಾಗಲೇ ಹೇಳಿಕೆ ನೀಡಿರುವ ಹೀರೊ ಕಂಪನಿಯು ಸ್ಕೂಟರ್ ವಿಭಾಗದಲ್ಲಿ 125 ಸಿಸಿ ಉತ್ಪನ್ನವನ್ನು ಪರಿಚಯಿಸಲಿದೆ. ಭಾರತದಲ್ಲಿ ಸದ್ಯ ಈ ವಿಭಾಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಪಿಯಾಜಿಯೋ ವೆಸ್ಪಾ ಮತ್ತು ಯಮಹಾ ಫಾಸ್ಸಿನೊ ವಾಹನಗಳೊಂದಿಗೆ ಈ ದ್ವಿಚಕ್ರ ವಾಹನವು ಸ್ಪರ್ಧೆ ನೆಡೆಸಲಿದೆ.

ಯಮಹಾ ಫ್ಯಾಸಿನೊಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಹೀರೊ 125 ಸಿಸಿ ಸ್ಕೂಟರ್

ಸದ್ಯ ಭಾರತದಲ್ಲಿ, ಪ್ರಯಾಣಿಕರ ಮೋಟಾರ್ ಸೈಕಲ್ ವಿಭಾಗದಲ್ಲಿ ಹೀರೊ ಮೊಟೊಕಾರ್ಪ್ ಕಂಪನಿಯು ಹೆಚ್ಚು ಪ್ರಬಲವಾಗಿದೆ, ಆದರೆ ಸ್ಕೂಟರ್ ವಿಭಾಗದಲ್ಲಿ ಹೀರೋ ಕಂಪನಿಯು ಹೋಂಡಾ, ಟಿವಿಎಸ್ ಮತ್ತು ಸುಜುಕಿ ಸಂಸ್ಥೆಗಳೊಂದಿಗೆ ಈಗಲೂ ಸಹ ಸೆಣೆಸಾಡುತ್ತಿದೆ.

ಯಮಹಾ ಫ್ಯಾಸಿನೊಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಹೀರೊ 125 ಸಿಸಿ ಸ್ಕೂಟರ್

ಈ ವಿಚಾರವನ್ನು ಅರಿತಿರುವ ಹೀರೊ, ತನ್ನ ಹೊಸ ಉತ್ಪನ್ನವನ್ನು ಬಿಡುಗಡೆಗೊಳಿಸುವ ಮೂಲಕ ಕಂಪನಿಯು ಸ್ಕೂಟರ್ ಸೆಗ್ಮೆಂಟ್‌ನಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಬಯಸಿದೆ.

ಯಮಹಾ ಫ್ಯಾಸಿನೊಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಹೀರೊ 125 ಸಿಸಿ ಸ್ಕೂಟರ್

ನಗರದ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆ ಮಾಡಿರುವ ಈ ಸ್ಕೂಟರ್, ಜನಪ್ರಿಯ ರೆಟ್ರೊ ಶೈಲಿ ವಿನ್ಯಾಸದ ಥೀಮ್ ಹೊಂದುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸ್ತುತ, ಕಂಪನಿಯು ಮೇಸ್ಟ್ರೊ ಎಡ್ಜ್, ಡುಯೆಟ್ ಮತ್ತು ಪ್ಲೇಷರ್ ಸ್ಕೂಟರ್‌ಗಳನ್ನು ಭಾರತದಲ್ಲಿ ಚಿಲ್ಲರೆ ಮಾರಾಟ ಮಾಡುತ್ತದೆ.

ಯಮಹಾ ಫ್ಯಾಸಿನೊಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಹೀರೊ 125 ಸಿಸಿ ಸ್ಕೂಟರ್

ಹೊಸ 125 ಸಿಸಿ ಸ್ಕೂಟರ್‌ನ ತಾಂತ್ರಿಕ ವಿವರಗಳನ್ನು ಹೀರೊ ಮೊಟೊಕಾರ್ಪ್ ಬಹಿರಂಗ ಪಡಿಸಿಲ್ಲ. ವೆಸ್ಪಾ ಸ್ಕೂಟರ್ ಗಮನದಲ್ಲಿಟ್ಟುಕೊಂಡು ಸ್ಪರ್ಧಾತ್ಮಕ ಬೆಲೆಯಲ್ಲಿ ಈ ವಾಹನ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.

ಯಮಹಾ ಫ್ಯಾಸಿನೊಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಹೀರೊ 125 ಸಿಸಿ ಸ್ಕೂಟರ್

ದೇಶದಲ್ಲಿ ಪ್ರಸ್ತುತ ಸೆಗ್ಮೆಂಟ್‌ನ ಲೀಡರ್ ಎಂದೇ ಕರೆಯಲ್ಪಡುವ ಆಕ್ಟಿವಾ ದ್ವಿಚಕ್ರ ವಾಹನದ ಪ್ರಾಬಲ್ಯವನ್ನು ಕಡಿಮೆಗೊಳಿಸಲು ಹೀರೊ ಸಂಸ್ಥೆ ಪ್ರಯಾತಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ಸಂಬಂಧ ಹೆಚ್ಚು ಹೆಚ್ಚು ಸ್ಕೂಟರ್ ಆಯ್ಕೆಗಳನ್ನು ನೀಡಲು ಹೀರೊ ಮುಂದಾಗಿದೆ.

ಯಮಹಾ ಫ್ಯಾಸಿನೊಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಹೀರೊ 125 ಸಿಸಿ ಸ್ಕೂಟರ್

ಈ ಹೊಸ ಸ್ಕೂಟರ್ ಯುನಿಸೆಕ್ಸ್ ಮಾದರಿಯಾಗಿರುತ್ತದೆ ಮತ್ತು ಯುವ ಖರೀದಿದಾರರನ್ನು ಆಕರ್ಷಿಸಲು ಸಾಕಷ್ಟು ವೈಶಿಷ್ಟ್ಯಗಳನ್ನು ಪಡೆಯಲಿದೆ. ಕಂಪನಿಯ ನಿರ್ಣಾಯಕ ಉತ್ಪನ್ನವಾಗಿರುವ ಈ ಸ್ಕೂಟರ್ ಜನವರಿಯಿಂದ ಮಾರಾಟಗೊಳ್ಳಲಿದ್ದು, ಸುಮಾರು ರೂ. 60,000 ಎಕ್ಸ್ ಶೋರೂಂ ಬೆಲೆಯನ್ನು ನಿರೀಕ್ಷಿಸಬಹುದು.

ಯಮಹಾ ಫ್ಯಾಸಿನೊಗೆ ಟಕ್ಕರ್ ಕೊಡಲು ಬರ್ತಿದೆ ಹೊಸ ಹೀರೊ 125 ಸಿಸಿ ಸ್ಕೂಟರ್

ಹೀರೊ ಮೊಟೊಕಾರ್ಪ್‌ ಕಂಪನಿಯು ಸ್ಕೂಟರ್ ವಿಭಾಗದಲ್ಲಿ ಹೆಚ್ಚಿನ ಮಟ್ಟದ ಹೂಡಿಕೆ ಮಾಡುವುದಾಗಿ ಹೇಳಿಕೊಂಡಿದೆ. ಈ ಹೂಡಿಕೆ ಎಷ್ಟರ ಮಟ್ಟಿಗೆ ಹೋಂಡಾ ಕಂಪನಿಯ ಪಾರುಪತ್ಯವನ್ನು ಕಡಿಮೆಗೊಳಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Hero MotoCorp will introduce a new 125cc scooter in the Indian market on December 18, 2017. The new scooter will rival the likes of Piaggio Vespa and Yamaha Fascino.
Story first published: Monday, November 20, 2017, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X