ಡಾಕರ್ ರ‍್ಯಾಲಿಗಾಗಿ ವಿನೂತನ ಆರ್‌ಆರ್ 450 ಬೈಕ್ ಅನಾವರಣಗೊಳಿಸಿದ ಹಿರೋ

2018ರ ಡಾಕರ್ ರ‍್ಯಾಲಿಗಾಗಿ ತನ್ನ ತಂಡದ ಸದಸ್ಯರ ಬಗ್ಗೆ ಮಾಹಿತಿ ಹೊರಹಾಕಿರುವ ಹಿರೋ ಮೋಟೋಕಾರ್ಪ್ ಸಂಸ್ಥೆಯು ಈ ಬಾರಿ ಉತ್ತಮ ಪ್ರದರ್ಶನ ತೊರುವ ತವಕದಲ್ಲಿದ್ದು, ಆರ್‌ಆರ್ 450 ಸೂಪರ್ ಬೈಕ್ ಅನ್ನು ಅನಾವರಣಗೊಳಿಸಿದೆ.

By Praveen

ಮೋಟಾರ್ ಸ್ಪೋರ್ಟ್ ವಿಭಾಗದಲ್ಲೇ ಅತಿ ಹೆಚ್ಚು ಜನಪ್ರಿಯಗೊಂಡಿರುವ ಅಂತಾರಾಷ್ಟ್ರೀಯ ಮಟ್ಟದ ಡಾಕರ್ ರ‍್ಯಾಲಿಗೆ ದಿನಗಣನೆಗಳು ಶುರುವಾಗಿದ್ದು, ಹಿರೋ ಮೋಟೋಕಾರ್ಪ್ ಸಂಸ್ಥೆಯು ತನ್ನ ತಂಡದ ಪ್ರತಿನಿಧಿಗಳಾಗಿ ವಿನೂತನ ಆರ್‌ಆರ್ 450 ಸೂಪರ್ ಬೈಕ್ ಅನ್ನು ಪರಿಚಯಿಸಿದೆ.

Recommended Video

TVS Apache RR 310 Launched In India
ಡಾಕರ್ ರ‍್ಯಾಲಿಗಾಗಿ ವಿನೂತನ ಆರ್‌ಆರ್ 450 ಬೈಕ್ ಅನಾವರಣಗೊಳಿಸಿದ ಹಿರೋ

ಜೊತೆಗೆ ತಂಡದ ಸದಸ್ಯರಾದ ಸಿಎಸ್ ಸಂತೋಷ್ ಮತ್ತು ಜೋಕ್ವಿಮ್ ರೊಡ್ರಿಗಸ್ ಡಾಕರ್ ರ‍್ಯಾಲಿಯಲ್ಲಿ ಹಿರೋ ಮೋಟೋಕಾರ್ಪ್ ತಂಡವನ್ನು ಪ್ರತಿನಿಧಿಸಲಿದ್ದು, ಮೋಟಾರ್ ಸ್ಪೋರ್ಟ್‌ನ ಹೊಸ ಪ್ರತಿಭೆಯಾದ ಓರಿಯೊಲ್ ಮೆನಾ ಅವರಿಗೂ ಈ ಬಾರಿ ಹಿರೋ ತಂಡದಲ್ಲಿ ಅವಕಾಶ ನೀಡಲಾಗಿದೆ.

ಡಾಕರ್ ರ‍್ಯಾಲಿಗಾಗಿ ವಿನೂತನ ಆರ್‌ಆರ್ 450 ಬೈಕ್ ಅನಾವರಣಗೊಳಿಸಿದ ಹಿರೋ

ಹೀಗಾಗಿ ಡಾಕರ್ ರ‍್ಯಾಲಿಯಲ್ಲಿ ಭಾಗಿಯಾಗಲಿರುವ ಆರ್‌ಆರ್ 450 ಸೂಪರ್ ಬೈಕ್ ಬಗ್ಗೆ ಹರ್ಷ ವ್ಯಕ್ತಪಡಸಿರುವ ಹಿರೋ ಸಂಸ್ಥೆಯು ಕಳೆದ ಬಾರಿಗಿಂತ ಹೊಸ ಆರ್‌ಆರ್ 450 ಬೈಕಿನ ತಂತ್ರಜ್ಞಾನಗಳು ಸಾಕಷ್ಟು ಉನ್ನತಿಕರಣಗೊಂಡಿದ್ದು, ಹೊಸ ವಿನ್ಯಾಸಗಳು ಮತ್ತು ಸ್ಟೈಲಿಂಗ್‌ಗಳು ಕಠಿಣ ಪರಿಸ್ಥಿತಿಯಲ್ಲೂ ಸುಲಭ ಬೈಕ್ ಸವಾರಿಗೆ ಸಹಕಾರಿಯಾಗಲಿದೆ ಎಂದಿದೆ.

ಡಾಕರ್ ರ‍್ಯಾಲಿಗಾಗಿ ವಿನೂತನ ಆರ್‌ಆರ್ 450 ಬೈಕ್ ಅನಾವರಣಗೊಳಿಸಿದ ಹಿರೋ

ಇನ್ನು ಬಹುನೀರಿಕ್ಷಿತ ಡಾರಕ್ ರ‍್ಯಾಲಿ ಬಗೆಗೆ ಹೇಳುವುದಾದರೇ ಜನವರಿ 6ರಿಂದ ದ.ಅಮೆರಿಕದ ಪೇರುನಿಂದ ಆರಂಭಗೊಳ್ಳಿರುವ ಡಾಕರ್ ರ‍್ಯಾಲಿಯು 20ರ ತನಕ ನಡೆಯಲಿದ್ದು, 60 ದೇಶಗಳ 500ಕ್ಕೂ ಮೋಟಾರ್ ಸ್ಪೋರ್ಟ್ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ.

ಡಾಕರ್ ರ‍್ಯಾಲಿಗಾಗಿ ವಿನೂತನ ಆರ್‌ಆರ್ 450 ಬೈಕ್ ಅನಾವರಣಗೊಳಿಸಿದ ಹಿರೋ

ಒಟ್ಟು 15 ದಿನಗಳ ಕಾಲ ನಡೆಯಲಿರುವ ಡಾಕರ್ ರ‍್ಯಾಲಿಯಲ್ಲಿ ಯಶಸ್ಸು ಸಾಧಿಸಲು ಬರೋಬ್ಬರಿ 9 ಸಾವಿರ ಕಿ.ಮಿ ದೂರವನ್ನು ಕ್ರಮಿಸಬೇಕಿದ್ದು, ಒಟ್ಟು 14 ವಿಭಾಗಗಳಲ್ಲಿ ಮೋಟಾರ್ ಸ್ಪರ್ಧೆಗಳನ್ನು ಕೈಗೊಳ್ಳಲಾಗುತ್ತಿದೆ.

ಡಾಕರ್ ರ‍್ಯಾಲಿಗಾಗಿ ವಿನೂತನ ಆರ್‌ಆರ್ 450 ಬೈಕ್ ಅನಾವರಣಗೊಳಿಸಿದ ಹಿರೋ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ವಿಶ್ವದ ಪ್ರಸಿದ್ದ ಮೋಟಾರ್ ಸ್ಪೋರ್ಟ್‌ಗಳಲ್ಲಿ ಒಂದಾಗಿರುವ ಡಾಕರ್ ರ‍್ಯಾಲಿಯು 1978ದಿಂದ ಪ್ರತಿವರ್ಷ ಕೈಗೊಳ್ಳಲಾಗುತ್ತಿದ್ದು, ಕಳೆದ ಎರಡು ರ‍್ಯಾಲಿಯಲ್ಲಿ ಅನುಭವ ಹೊಂದಿರುವ ಸಂತೋಷ್ ಮತ್ತು ಜೋಕ್ವಿಮ್ ರೊಡ್ರಿಗಸ್ ಈ ಬಾರಿ ಸ್ಪರ್ಧೆ ಅತ್ಯುತ್ತಮ ಪ್ರದರ್ಶನ ತೊರುವ ತವಕದಲ್ಲಿದ್ದಾರೆ.

Most Read Articles

Kannada
Read more on hero motocorp motorsports
English summary
Read in Kannada about Hero MotoSports Showcases 'Hero RR 450' Rally Bike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X