ಬಿಡುಗಡೆಯಾಗಿ ಕೇವಲ 21 ದಿನಗಳಲ್ಲಿ ದಾಖಲೆ ಮಾರಾಟ ಕಂಡ ಹೋಂಡಾ ಗ್ರಾಜಿಯಾ

ಹೋಂಡಾ ಗ್ರಾಜಿಯಾ ಸ್ಕೂಟರ್ ವಿನೂತನ ದಾಖಲೆ ಮಾಡಿದ್ದು, ಬಿಡುಗಡೆಯಾಗಿ ಕೇವಲ 21 ದಿನಗಳಲ್ಲಿ ಸುಮಾರು 15 ಸಾವಿರ ಸ್ಕೂಟರ್‌ಗಳು ಮಾರಾಟಗೊಂಡಿರುವುದು ಸ್ಕೂಟರ್ ಮಾರಾಟ ವಿಭಾಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

By Praveen

ಇದೇ ತಿಂಗಳು 8ರಂದು ಬಿಡುಗಡೆಯಾಗಿ ಭರ್ಜರಿ ಮಾರಾಟಗೊಳ್ಳುತ್ತಿರುವ ಹೋಂಡಾ ಗ್ರಾಜಿಯಾ ಸ್ಕೂಟರ್ ವಿನೂತನ ದಾಖಲೆ ಮಾಡಿದ್ದು, ಬಿಡುಗಡೆಯಾಗಿ ಕೇವಲ 21 ದಿನಗಳಲ್ಲಿ ಸುಮಾರು 15 ಸಾವಿರ ಸ್ಕೂಟರ್‌ಗಳು ಮಾರಾಟಗೊಂಡಿರುವುದು ಸ್ಕೂಟರ್ ಮಾರಾಟ ವಿಭಾಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಬಿಡುಗಡೆಯಾಗಿ ಕೇವಲ 21 ದಿನಗಳಲ್ಲಿ ದಾಖಲೆ ಮಾರಾಟ ಕಂಡ ಹೋಂಡಾ ಗ್ರಾಜಿಯಾ

ಈ ಹಿಂದೆ 2 ಹೊಸ ಸ್ಕೂಟರ್ ಮಾದರಿಗಳನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದ ಹೋಂಡಾ ಮೋಟಾರ್ಸ್ ಇಂಡಿಯಾ ಸಂಸ್ಥೆಯು ನ.8 ರಂದು ಗ್ರಾಜಿಯಾ ಸ್ಕೂಟರ್ ಅನ್ನು ಬಿಡುಗಡೆ ಮಾಡಿತ್ತು. ಜೊತೆಗೆ ಹೊಸ ಸ್ಕೂಟರ್ ಆರಂಭಿಕ ಬೆಲೆಯನ್ನು ರೂ.57,827 ಗಳಿಗೆ ನಿಗದಿಗೊಳಿಸಿತ್ತು.

ಬಿಡುಗಡೆಯಾಗಿ ಕೇವಲ 21 ದಿನಗಳಲ್ಲಿ ದಾಖಲೆ ಮಾರಾಟ ಕಂಡ ಹೋಂಡಾ ಗ್ರಾಜಿಯಾ

ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ನಿರ್ಮಾಣದ ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ವರ್ಗದ ಜನರನ್ನು ಸೆಳೆಯುವ ಉದ್ದೇಶದಿಂದ ಗ್ರಾಜಿಯಾ ಸ್ಕೂಟರ್ ಪರಿಚಯಿಸಿರುವುದು ಭರ್ಜರಿ ಮಾರಾಟಕ್ಕೆ ಕಾರಣವಾಗಿದೆ.

Recommended Video

TVS Apache RR 310 Launched In India - DriveSpark
ಬಿಡುಗಡೆಯಾಗಿ ಕೇವಲ 21 ದಿನಗಳಲ್ಲಿ ದಾಖಲೆ ಮಾರಾಟ ಕಂಡ ಹೋಂಡಾ ಗ್ರಾಜಿಯಾ

ಬೆಲೆಗಳು

ಗ್ರಾಜಿಯಾ ಮಾದರಿಗಳು -ಬೆಲೆಗಳು(ದೆಹಲಿ ಎಕ್ಸ್‌ಶೋರಂ ಪ್ರಕಾರ)

ಗ್ರಾಜಿಯಾ ಎಸ್‌ಟಿಡಿ -ರೂ. 57,827

ಗ್ರಾಜಿಯಾ ಅಲಾಯ್ -ರೂ. 57,897

ಗ್ರಾಜಿಯಾ ಡಿಎಲ್ಎಕ್ಸ್ -ರೂ. 62,269

ಬಿಡುಗಡೆಯಾಗಿ ಕೇವಲ 21 ದಿನಗಳಲ್ಲಿ ದಾಖಲೆ ಮಾರಾಟ ಕಂಡ ಹೋಂಡಾ ಗ್ರಾಜಿಯಾ

ಗ್ರಾಜಿಯಾ ಎಂಜಿನ್ ಸಾಮರ್ಥ್ಯ

ಹೋಂಡಾ ಗ್ರಾಜಿಯಾ ಸ್ಕೂಟರ್ ಆವೃತ್ತಿಯು ಆಕ್ಟಿವಾ ಮಾದರಿಯಲ್ಲೇ 124.9ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.52-ಬಿಎಚ್‌ಪಿ ಮತ್ತು 10.54 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.

ಬಿಡುಗಡೆಯಾಗಿ ಕೇವಲ 21 ದಿನಗಳಲ್ಲಿ ದಾಖಲೆ ಮಾರಾಟ ಕಂಡ ಹೋಂಡಾ ಗ್ರಾಜಿಯಾ

ಗ್ರಾಜಿಯಾ ವಿನ್ಯಾಸಗಳು

ಗ್ರಾಜಿಯಾ ಸ್ಕೂಟರ್ ಹೋಂಡಾ ಸ್ಕೂಟರ್ ಮಾದರಿಗಳಲ್ಲೇ ವಿಭಿನ್ನವಾಗಿದ್ದು, 1,812 ಎಂಎಂ ಉದ್ದ, 697ಎಂಎಂ ಅಗಲ, 1,146 ಎಂಎಂ ಎತ್ತರ, 1,260 ಲಾಂಗ್ ವೀಲ್ಹ್ ಬೇಸ್, 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಬಿಡುಗಡೆಯಾಗಿ ಕೇವಲ 21 ದಿನಗಳಲ್ಲಿ ದಾಖಲೆ ಮಾರಾಟ ಕಂಡ ಹೋಂಡಾ ಗ್ರಾಜಿಯಾ

ಜೊತೆಗೆ 5.3 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಜೋಡಣೆ ಮಾಡಲಾಗಿದ್ದು, 12 ಇಂಚಿನ ಅಲಾಯ್ ವೀಲ್ಹ್, ಮುಂಭಾಗದ ಚಕ್ರದಲ್ಲಿ 190 ಎಂಎಂ ಗಾತ್ರದ ಡಿಸ್ಕ್ ಬ್ರೇಕ್ ಪಡೆದುಕೊಂಡಿರುವುದು ಡಿಯೋ ಸ್ಕೂಟರ್‌ಗಿಂತಲೂ ಉತ್ತಮ ಎನ್ನಬಹುದಾಗಿದೆ.

ಬಿಡುಗಡೆಯಾಗಿ ಕೇವಲ 21 ದಿನಗಳಲ್ಲಿ ದಾಖಲೆ ಮಾರಾಟ ಕಂಡ ಹೋಂಡಾ ಗ್ರಾಜಿಯಾ

ಗ್ರಾಜಿಯಾ ಹೊರನೋಟ

ಟ್ವಿನ್ ಪಾಡ್ ಎಲ್‌ಇಡಿ ಹೆಡ್ ಲ್ಯಾಂಪ್ ಹೊಂದಿರುವ ಗ್ರಾಜಿಯಾ ಸ್ಕೂಟರ್ ಮಾದರಿಯು ಮುಂಭಾಗದಲ್ಲಿ ವಿ ಆಕಾರವನ್ನು ಪಡೆದುಕೊಂಡಿದ್ದು, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಮತ್ತು 18 ಲೀಟರ್‌ನಷ್ಟು ಸೀಟ್ ತಳಹದಿ ಸ್ಪೆಸ್ ಬಿಡಲಾಗಿದೆ.

ಬಿಡುಗಡೆಯಾಗಿ ಕೇವಲ 21 ದಿನಗಳಲ್ಲಿ ದಾಖಲೆ ಮಾರಾಟ ಕಂಡ ಹೋಂಡಾ ಗ್ರಾಜಿಯಾ

ಲಭ್ಯವಿರುವ ಬಣ್ಣಗಳು

ಗ್ರಾಜಿಯಾ ಹೊಸ ಸ್ಕೂಟರ್ ನಿಯೋ ಆರೇಂಜ್ ಮೆಟಾಲಿಕ್, ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್, ಪರ್ಲ್ ಸ್ಪ್ಯಾರ್ಟನ್ ರೆಡ್, ಪರ್ಲ್ ಅಮೆಜಿಂಗ್ ವೈಟ್, ಮ್ಯಾಟೆ ಆಕ್ಸಿಸ್ ಗ್ರೆ ಮೆಟಾಲಿಕ್ ಮತ್ತು ಮ್ಯಾಟೆ ಮಾರ್ರವೆಲ್ ಬ್ಲೂ ಮೆಟಾಲಿಕ್ ಬಣ್ಣದಲ್ಲಿ ಪರಿಚಯಿಸಲಾಗಿದೆ.

Most Read Articles

Kannada
English summary
Read in Kannada about Honda Grazia touches 15,000 sales mark since its launch.
Story first published: Thursday, November 30, 2017, 18:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X