Just In
- 5 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 9 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 11 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 21 min ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುಬಾರಿ ಬೈಕ್ ಖರೀದಿ ಇನ್ನು ಅಷ್ಟು ಸುಲಭವಲ್ಲ- ಬೃಹತ್ ಆದಾಯಕ್ಕೆ ಕೈ ಹಾಕಿದ ಸಿಎಂ ಸಿದ್ದರಾಮಯ್ಯ..!!
ರಾಜ್ಯದಲ್ಲಿ ಇನ್ಮುಂದೆ ಬೈಕ್ ಖರೀದಿ ದುಬಾರಿಯಾಗಲಿದೆ. ಚಾಲ್ತಿಯಲ್ಲಿರುವ ತೆರಿಗೆ ನೀತಿಯನ್ನು ಪರಿಷ್ಕರಣೆ ಮಾಡಲಾಗಿದ್ದು, ಹೊಸ ನಿಯಮದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಬೃಹತ್ ಗಾತ್ರದ ಬಜೆಟ್ ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಹೊಸ ಹೊಸ ಮಾರ್ಗಗಳ ಮೂಲಕ ಸಂಪನ್ಮೂಲ ಕ್ರೂಢೀಕರಣಕ್ಕೆ ಪ್ಲ್ಯಾನ್ ಮಾಡಿದ್ದು, ದುಬಾರಿ ಬೈಕ್ಗಳ ಖರೀದಿ ಮೇಲೆ ಭಾರೀ ಪ್ರಮಾಣದ ತೆರಿಗೆ ವಿಧಿಸಲು ನಿರ್ಧರಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಭಾರೀ ಪ್ರಮಾಣದ ಆದಾಯ ಬರಲಿದ್ದು, ದುಬಾರಿ ಬೈಕ್ ಪ್ರಿಯರಿಗೆ ಸರ್ಕಾರ ಶಾಕ್ ನೀಡಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ದ್ವಿಚಕ್ರ ವಾಹನಗಳ ಖರೀದಿಗೆ ಬ್ರೇಕ್ ಹಾಕುಲು ಮುಂದಾಗಿರುವ ರಾಜ್ಯ ಸರ್ಕಾರ ಪ್ರಸ್ತುತ ತೆರಿಗೆ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. 1 ಲಕ್ಷ ರೂಪಾಯಿ ಮೇಲ್ಪಟ್ಟ ಬೈಕ್ ಖರೀದಿ ಮೇಲೆ ಶೇ.12 ರಿಂದ ಶೇ.18ರವರೆಗೆ ತೆರಿಗೆ ಪಾವತಿಸಬೇಕಿದ್ದು, ಈ ಮೂಲಕ ಸರ್ಕಾರ ಭಾರೀ ಪ್ರಮಾಣದ ಆದಾಯ ನೀರಿಕ್ಷೆ ಮಾಡಿದೆ.
ಈ ಹಿಂದೇ ಇದ್ದ ಶೇ.12ರಷ್ಟು ತೆರಿಗೆಯನ್ನು ಇದೀಗ ಶೇ.18ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಹೆಚ್ಚುವರಿಯಾಗಿ ಶೇ.6ರಷ್ಟು ತೆರಿಗೆ ಪಾವತಿ ಮಾಡಬೇಕಿದ್ದು, ದುಬಾರಿ ಬೈಕ್ಗಳ ಖರೀದಿ ಭರಾಟೆಗೆ ಬ್ರೇಕ್ ಹಾಕಲಾಗಿದೆ.
ಅಂಕಿಅಂಶಗಳ ಪ್ರಕಾರ ಕಳೆದ ಒಂದು ವರ್ಷದ ಅವಧಿಯಲ್ಲಿ 1.27 ಕೋಟಿ ದ್ವಿಚಕ್ರ ವಾಹನಗಳು ರಾಜ್ಯದಲ್ಲಿ ಮಾರಾಟಗೊಂಡಿದ್ದು, ದಿನದಿನಕ್ಕೆ ದಿನಕ್ಕೆ ಖರೀದಿ ಸಂಖ್ಯೆ ಹೆಚ್ಚುತ್ತಲೆ ಇದೆ. ಇದನ್ನು ಮನಗಂಡಿರುವ ರಾಜ್ಯ ಸರ್ಕಾರ, ಬೈಕ್ ಖರೀದಿಗೆ ಬ್ರೇಕ್ ಹಾಕುವುದಲ್ಲದೇ ಅದರಿಂದಲೇ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ.
ದುಬಾರಿ ಬೈಕ್ಗಳ ನೋಂದಣಿಯಿಂದಲೇ ಸದ್ಯ ಪ್ರತಿವರ್ಷ ರಾಜ್ಯ ಸರ್ಕಾರಕ್ಕೆ 45 ರಿಂದ 50ಕೋಟಿ ಆದಾಯವಿದ್ದು, ಇದನ್ನು 60 ಕೋಟಿಗೆ ಹೆಚ್ಚಿಸುವ ಗುರಿಹೊಂದಿದೆ. ಹೀಗಾಗಿ ಬೈಕ್ ಖರೀದಿಗೂ ಮುನ್ನ ಯೋಚನೆ ಮಾಡಲೇಬೇಕಿದೆ.
ಹೊಸ ನಿಯಮದ ಅನ್ವಯ ಹೇಗೆ ಎಂದು ತಿಳಿಯುವುದಾದರೇ ಒಂದು ಹೊಚ್ಚ ಹೊಸ ಎನ್ಫೀಲ್ಡ್ ಬೈಕ್ ಬೆಲೆ ಸರಾಸರಿ ಬೆಲೆ ರೂ. 1.23 ಲಕ್ಷ ಇದೆ ಎಂದಾದರೇ ಅದನ್ನು ಖರೀದಿಸಲು ಹೆಚ್ಚುವರಿಗಾಗಿ 22 ಸಾವಿರ ರೂಪಾಯಿ ಪಾವತಿ ಮಾಡಬೇಕಾಗುತ್ತೆ.
ಹೊಸ ತೆರಿಗೆ ನೀತಿಯಿಂದ ಕೆಲವು ಬೈಕ್ ಉತ್ಪಾದಕರಿಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಹೆಚ್ಚು ಮಾರಾಟಗೊಳ್ಳುವ ರಾಯಲ್ ಎನ್ಫೀಲ್ಡ್ ಮತ್ತು ಕೆಟಿಎಂ ಬೈಕ್ ಖರೀದಿ ಮೇಲೆ ವ್ಯತರಿಕ್ತ ಪರಿಣಾಮ ಬಿಳಬಹುದು ಎನ್ನಲಾಗಿದೆ.
ಬಜೆಟ್ ಮಂಡನೆ ವೇಳೆ ಹೊಸ ತೆರಿಗೆ ಪದ್ದತಿ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯನವರು, ರೂ. 1 ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಬೈಕ್ಗಳಿಗೆ ಮಾತ್ರ ಈ ತೆರಿಗೆ ಅನ್ವಯವಾಗಲಿದ್ದು, ಲಕ್ಷಕ್ಕಿಂತ ಕಡಿಮೆ ಬೈಕ್ಗಳ ನೋಂದಣಿಗೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲವೆಂದಿದ್ದಾರೆ.
ಸರ್ಕಾರದ ಹೊಸ ನಿಯಮದಿಂದ ದುಬಾರಿ ಬೈಕ್ಗಳ ಖರೀದಿ ತಗ್ಗುವ ಸಾಧ್ಯತೆಗಳಿದ್ದು, ಲಕ್ಷಕ್ಕಿಂತ ಕಡಿಮೆ ಬೆಲೆಯ ಬೈಕ್ಗಳ ಖರೀದಿ ದ್ವಿಗುಣಗೊಳ್ಳಲಿದೆ. ಹೊಸ ನಿಯಮವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ಕೆಲವು ಬೈಕ್ ಉತ್ಪಾದನಾ ಸಂಸ್ಥೆಗಳು ಲಕ್ಷಕ್ಕಿಂತ ಕಡಿಮೆ ಉತ್ಪಾದನೆಗೆ ಹೊಸ ಹೊಸ ಯೋಜನೆ ರೂಪಿಸುತ್ತಿವೆ.
ದುಬಾರಿ ಬೈಕ್ಗಳ ಖರೀದಿಗೆ ಕಡಿವಾಣ ಹಾಕಲು ಸರ್ಕಾರ ಜಾರಿಗೆ ತಂದಿರುವ ನೂತನ ತೆರಿಗೆ ನೀತಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುವುದೋ ಗೊತ್ತಿಲ್ಲ. ಆದ್ರೆ ಬೃಹತ್ ಪ್ರಮಾಣದಲ್ಲಿ ಆದಾಯ ಹರಿದುಬರಲಿದ್ದು, ದುಬಾರಿ ಬೈಕ್ ಪ್ರಿಯರಿಗೆ ಸರ್ಕಾರದ ಹೊಸ ನಿಯಮ ಶಾಕ್ ನೀಡಿದ್ದು ಮಾತ್ರ ಸುಳ್ಳಲ್ಲ.
ಡ್ರೈವ್ಸ್ಪಾರ್ಕ್ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ:
ಜಾಗ್ವಾರ್ ಕಂಪನಿಯ ಈ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ !!
ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-IV ಎಂಜಿನ್ ಟಿವಿಎಸ್ ಜೂಪಿಟರ್
ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750; ಬೆಲೆ ಮತ್ತು ಗ್ಯಾಲರಿ ಇಲ್ಲಿದೆ
ಮಣಪ್ಪುರಂನಲ್ಲಿ ಭೀಕರ ಅಪಘಾತ- ಒಂದೇ ಹೊಡೆತಕ್ಕೆ ತಿಪ್ಪರಲಾಗ ಹಾಕ್ತು ಹೋಂಡಾ ಸಿಟಿ ಕಾರ್..!!
ಬೈಕ್ ಗ್ಯಾಲರಿಯನ್ನು ವೀಕ್ಷಿಸಿ
2017ರ ಕವಾಸಕಿ ನಿಂಜಾ ಝೆಡ್ ಎಕ್ಸ್-10 ಆರ್ ಆರ್ ಫೋಟೋಗಳನ್ನು ವೀಕ್ಷಿಸಿ.