ಎರಡು ಬಗೆಯ ಆಫ್-ರೋಡ್ ಮೋಟಾರ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಕವಾಸಕಿ

ಕವಾಸಕಿಯು ತನ್ನ ಎರಡು ಆಫ್-ರೋಡ್ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ವಿಶೇಷವಾಗಿ ಅಡ್ವೆಂಚರ್ ಪ್ರಿಯರಿಗೆಂದೇ ಪ್ರಾರಂಭಿಸಿರುವ ಈ ದ್ವಿಚಕ್ರ ವಾಹನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

By Girish

ಕವಾಸಕಿ ಕೆಎಕ್ಸ್450ಎಫ್ ಮತ್ತು ಕೆಎಲ್‌ಎಕ್ಸ್450ಆರ್ ಆಫ್ ರೋಡ್ ಮೋಟಾರ್ ಸೈಕಲ್‌ಗಳನ್ನು ಪ್ರಾರಂಭಿಸಿದೆ. ಕೆಎಕ್ಸ್450ಎಫ್ ರೂ. 7.97 ಲಕ್ಷ ಮತ್ತು ಕೆಎಲ್‌ಎಕ್ಸ್450ಆರ್ ರೂ. 8.49 ಲಕ್ಷ ಬೆಲೆ(ಎಕ್ಸ್ ಶೋ ರೂಂ ದೆಹಲಿ)ಗಳನ್ನು ಪಡೆದುಕೊಂಡಿವೆ.

ಎರಡು ಬಗೆಯ ಆಫ್-ರೋಡ್ ಮೋಟಾರ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಕವಾಸಕಿ

ಕೆಎಕ್ಸ್450ಎಫ್ ಮತ್ತು ಕೆಎಲ್‌ಎಕ್ಸ್450ಆರ್ ಎರಡೂ ಬೈಕುಗಳೂ ಸಹ ಭಾರತೀಯ ಮಾರುಕಟ್ಟೆಯಲ್ಲಿ ಸಿಬಿಯು(ಕಂಪ್ಲೀಟ್ಲಿ ಬಿಲ್ಟ್ ಯುನಿಟ್) ಮಾರ್ಗವಾಗಿ ಮಾರಲ್ಪಡುತ್ತವೆ. ಈ ಮೋಟಾರ್ ಸೈಕಲ್‌ಗಳು ರಸ್ತೆ ಮೇಲೆ ಬಳಸಲು ಕಾನೂನುಬದ್ದವಾಗಿಲ್ಲವಾದ್ದರಿಂದ ಆಫ್-ರೋಡ್ ಬಳಕೆಗೆ ಮಾತ್ರ ಬಳಸಬೇಕಾಗುತ್ತದೆ.

ಎರಡು ಬಗೆಯ ಆಫ್-ರೋಡ್ ಮೋಟಾರ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಕವಾಸಕಿ

ಕವಾಸಕಿಯ ಕೆಎಕ್ಸ್450ಎಫ್ ಬೈಕಿನ ಎಂಜಿನ್ ಮತ್ತು ಚಾರ್ಸಿ ವಿಭಾಗದಲ್ಲಿ ಗಮನಾರ್ಹವಾಗಿ ತೂಕ ಕಡಿತಗೊಂಡಿದ್ದು, ಇದರಿಂದಾಗಿ ಈ ಮೋಟಾರ್ ಸೈಕಲ್ ತನ್ನ ವರ್ಗದಲ್ಲಿಯೇ ಹಗುರವಾದ ವಾಹನ ಎಂಬ ಖ್ಯಾತಿ ಪಡೆಯಲಿದೆ.

ಎರಡು ಬಗೆಯ ಆಫ್-ರೋಡ್ ಮೋಟಾರ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಕವಾಸಕಿ

ಈ ಕೆಎಕ್ಸ್450ಎಫ್ ಬೈಕ್ 449 ಸಿಸಿ ಸಿಂಗಲ್ ಸಿಲಿಂಡರ್ ಶಕ್ತಿಯನ್ನು ಸೆಳೆಯುತ್ತದೆ ಮತ್ತು 5 ಸ್ಪೀಡ್ ಫ್ಯುಯೆಲ್ ಇಂಜೆಕ್ಟ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಈ ಮೋಟಾರ್ ಸೈಕಲ್‌ನ ತೂಕ ಕೇವಲ 108.8 ಕಿ.ಗ್ರಾಂ ಎಂದರೆ ನೀವು ನಂಬಲೇ ಬೇಕು ಓದುಗರೇ.

ಎರಡು ಬಗೆಯ ಆಫ್-ರೋಡ್ ಮೋಟಾರ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಕವಾಸಕಿ

ಕವಾಸಕಿ ಕೆಎಲ್‌ಎಕ್ಸ್450ಆರ್ ಮೋಟಾರ್ ಸೈಕಲ್ 449 ಸಿಸಿ ಸಿಂಗಲ್ ಸಿಲಿಂಡರ್ ಕಾರ್ಬ್ಯುರೇಟೆಡ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, 5 ಸ್ಪೀಡ್ ಗೇರ್‌ಬಾಕ್ಸ್ ಒಳಗೊಂಡಿರಲಿದೆ.

ಎರಡು ಬಗೆಯ ಆಫ್-ರೋಡ್ ಮೋಟಾರ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಕವಾಸಕಿ

ಈ ಮೋಟಾರ್ ಸೈಕಲ್ ಮುಂಭಾಗದಲ್ಲಿ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಯುನಿ-ಟ್ರ್ಯಾಕ್ ಹೊಂದಾಣಿಕೆಯ ಮೊನೊಶಾಕ್ ಸೌಲಭ್ಯವನ್ನು ನೋಡಬಹುದಾಗಿದೆ.

ಎರಡು ಬಗೆಯ ಆಫ್-ರೋಡ್ ಮೋಟಾರ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಕವಾಸಕಿ

ಇದಲ್ಲದೆ ಈ ಆಫ್-ರೋಡ್ ಮೋಟರ್ ಸೈಕಲ್‌ಗಳು ಡಿಜಿಟಲ್ ಸಲಕರಣೆ ಕ್ಲಸ್ಟರ್, ಎಲೆಕ್ಟ್ರಿಕ್ ಸ್ಟಾರ್ಟ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಅಳವಡಿಕೆಯೊಂದಿಗೆ ಬಿಡುಗಡೆಗೊಂಡಿವೆ. ಕೆಎಲ್‌ಎಕ್ಸ್450ಆರ್ ಬೈಕಿನ ತೂಕವು ಕೆಎಕ್ಸ್450ಎಫ್ ಬೈಕಿಗಿಂತಲೂ ಭಾರವಾಗಿದ್ದು, 126 ಕಿ.ಗ್ರಾಂ ತೂಗುತ್ತದೆ.

Most Read Articles

Kannada
English summary
Kawasaki has launched its two off-road motorcycles, the KX450F and KLX450R in India. The KX450F is priced at Rs 7.97 lakh and the KLX450R carries a price tag of Rs 8.49 lakh. Both prices are ex-showroom (Delhi).
Story first published: Wednesday, October 4, 2017, 17:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X