ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಕರ್ನಾಟಕ ಸರ್ಕಾರ ಇತ್ತೀಚಿಗೆ ವಿಚಿತ್ರ ನಿಯಮವನ್ನು ಜಾರಿಗೆ ತಂದಿದ್ದು, ಈ ವಿಚಿತ್ರ ನಿಯಮ ಖಂಡಿತ ನಗು ತರಿಸದೆ ಇರಲಾರದು. ಹೌದು, ನಾವು ಮಾತನಾಡುತ್ತಿರುವುದು ಹಿಂಬದಿ ಸವಾರಿ ನಿಷೇಧದ ಬಗ್ಗೆ...

By Girish

ನಗರದಲ್ಲಿ ಹೆಚ್ಚುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸ ಮಾರ್ಗ ಕಂಡುಕೊಂಡಿರುವ ರಾಜ್ಯ ಸರ್ಕಾರ ಮೂರು ದಿನಗಳ ಹಿಂದೆ ದ್ವಿಚಕ್ರ ವಾಹನಗಳ ಮೇಲೆ ಎರಡು ಜನ ಸವಾರಿ ಮಾಡುವುದನ್ನು ನಿಷೇಧಿಸುವುದಾಗಿ ಆದೇಶ ಹೊರಡಿಸಿತ್ತು. ಏನಪ್ಪಾ ಇದು... ಅಪಘಾತಕ್ಕೂ ಹಿಂಬದಿ ಸವಾರಿಗೂ ಏನು ಸಂಬಂಧ ಅಂತ ಕೇಳ್ತಾ ಇದ್ದೀರಾ ? ಮುಂದೆ ಓದಿ...

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಬೆಂಗಳೂರಿನ ರಸ್ತೆಗುಂಡಿಗಳಿಂದ ಅಪಘಾತವಾಗುತ್ತಿರುವವರ ಸಂಖ್ಯೆ ದಿನೇ ದಿನೇ ಏರುತ್ತಲೇ ಇರೋದ್ರಿಂದ ದ್ವಿಚಕ್ರ ವಾಹನದಲ್ಲಿ ಸವರಿ ಮಾಡುವಾಗ ಉಂಟಾಗುವ ಅಪಘಾತವನ್ನು ತಪ್ಪಿಸಲು ರಾಜ್ಯ ಸರ್ಕಾರ ಈ ಹೊಸ ಆದೇಶ ಹೊರಡಿಸಲು ನಿರ್ಧರಿಸಿತ್ತು.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಸಾರಿಗೆ ಇಲಾಖೆ ಅಂಕಿಅಂಶಗಳ ಪ್ರಕಾರ 2016ರಲ್ಲಿ ಕರ್ನಾಟಕದಲ್ಲಿ ಒಟ್ಟು 16,217 ದ್ವಿಚಕ್ರ ವಾಹನ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 4,119 ಸವಾರರು ಮೃತಪಟ್ಟಿದ್ದಾರೆ. 8,429 ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಹುತೇಕ ಅಪಘಾತ ಪ್ರಕರಣಗಳಲ್ಲಿ ಹಿಂಬದಿ ಸವಾರರೇ ಹೆಚ್ಚಾಗಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಅಂಕಿ ಅಂಶ ಏನೋ ಸರಿ ಇರುತ್ತೆ ಎಂದುಕೊಳ್ಳಿ, ಆದ್ರೆ ಅಪಘಾತಕ್ಕೆ ನಿಜವಾದ ಕಾರಣ ರಸ್ತೆ ಸರಿ ಇಲ್ಲ ಎಂಬುದನ್ನು ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ ಎನ್ನಬಹುದು. ಹೌದು, ತಮ್ಮ ತಪ್ಪುಗಳನ್ನು ಮುಚ್ಚಿಕೊಂಡು ಬೇರೆಯವರ ಸಾವಿಗೆ ಕಾರಣವಾಗಿ, ಈಗ ಈ ರೀತಿಯ ಆದೇಶ ಹೊರಡಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರೆಶ್ನೆಯಾಗಿದೆ.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಇನ್ನೊಂದು ವಿಶೇಷವೆಂದರೆ ಸರ್ಕಾರದ ಈ ಆದೇಶ ಹೊಸದಾಗಿ ಖರೀದಿಸುವ 100ಸಿಸಿ ಮತ್ತು 100ಕ್ಕಿಂತ ಕಡಿಮೆ ಸಿಸಿ ಸಾಮರ್ಥ್ಯ ಹೊಂದಿರುವ ಬೈಕುಗಳಿಗೆ ಮಾತ್ರ ಅನ್ವಯವಾಗುತ್ತೆ. ಒಂದೇ ಸೀಟು ಇರುವಂಥಹ ವಾಹನಗಳನ್ನು ನಿರ್ಮಿಸುವಂತೆ ಕಂಪನಿಗಳಿಗೆ ಸೂಚಿಸಲಾಗುತ್ತೆ.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಹಾಗಾದ್ರೆ ಯಾವ ವಾಹನಗಳ ಮೇಲೆ ಈ ಆದೇಶ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದ್ದು, ಈ ಕೆಳಗಿನ ವಾಹನಗಳನ್ನು ಖರೀದಿಸುವ ಮುನ್ನ ಒಮ್ಮೆ ಯೋಚಿಸಿ...

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಟಿವಿಎಸ್ ಸ್ಕೂಟಿ ಪೆಪ್‌ಲೆಸ್ :

ಹೌದು, ಮಾಧ್ಯಮ ವರ್ಗದ ನೆಚ್ಚಿನ ಸ್ಕೂಟರ್ ಎನ್ನಬಹುದು. ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಈ ಬೈಕ್, ಇನ್ಮುಂದೆ ನೋಂದಣಿ ಆಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಈ ಸ್ಕೂಟರ್, 87.8 ಸಿಸಿ ಎಂಜಿನ್, 95 ಕೆ.ಜಿ ತೂಕದ ಮತ್ತು 5 ಲೀಟರ್ ಇಂಧನ ಸಾಮರ್ಥ್ಯವನ್ನು ಪಡೆದುಕೊಂಡಿದೆ ಮತ್ತು 65 ಕೀ.ಮೀ. ಮೈಲೇಜ್ ನೀಡಲಿದೆ.

Trending On DriveSpark Kannada:

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಭಾರತದ ಮೊಟ್ಟ ಮೊದಲ ಮೆಕ್‌ಲರೇನ್ 720ಎಸ್ ಖರೀದಿ ಮಾಡಿದ ಬೆಂಗಳೂರಿಗ !!

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಟಿವಿಎಸ್ ಸ್ಟಾರ್ ಸಿಟಿ :

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರು ಕಂಪನಿಯ ಈ ಜನಪ್ರಿಯ ಬೈಕ್, ಪ್ರತಿ ಲೀಟರ್‌ಗೆ 95 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಈ ಬೈಕ್ ರೂ. 38,676 (ಕರ್ನಾಟಕ ಎಕ್ಸ್ ಶೋ ರೂಂ) ಬೆಲೆ ಪಡೆದುಕೊಂಡಿದ್ದು, ಆಲ್ ಗೇರ್ ಎಲೆಕ್ಟ್ರಿಕ್ ಸ್ಟ್ಯಾರ್ಟ್, ಅಲ್ಯೂಮಿನಿಯಂ ಗ್ರಾಬ್ ರೈಲ್, ಕ್ರೋಮ್ ಮಫ್ಲರ್ ಗಾರ್ಡ್, ಕ್ರೀಡಾತ್ಮಕ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯಗಳನ್ನು ಹೊಂದಿದೆ. ಇನ್ಮುಂದೆ ಈ ವಾಹನ ಕೂಡ ನೊಂದಣಿ ಆಗೋದಿಲ್ಲ ಎನ್ನಬಹುದು.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಹೀರೋ ಎಚ್‌ಎಫ್ ಡಿಲಕ್ಸ್ ಮತ್ತು ಎಚ್‌ಎಫ್ ಡಿಲಕ್ಸ್ ಇಕೊ :

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಸಂಸ್ಥೆಯ ಎಚ್‌ಎಫ್ ಡಿಲಕ್ಸ್ ಬೈಕ್ ಕೂಡ ಈ ನಿಯಮಕ್ಕೆ ತಲೆದಂಡ ಕೊಡುವ ಸಂಭವ ಇದೆ ಎಂಬ ಮಾಹಿತಿ ಇದೆ. ಯಾಕೆಂದರೆ, ಈ ಬೈಕ್ ಕೂಡ 97.2 ಸಿಸಿ ಪಡೆದುಕೊಂಡಿದೆ.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

8.04 ಎನ್‌ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ರೂ. 50,500 ದರವನ್ನು ಹೊಂದಿದೆ ಹಾಗು ಫೋರ್ ಸ್ಪೀಡ್ ಗೇರ್ ಬಾಕ್ಸ್ ಪೆಡದುಕೊಳ್ಳಲಿದೆ.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಪ್ರೊ :

ಹೀರೋ ಹೋಂಡಾ ಸಂಸ್ಥೆಗೆ ಹಳೆಯ ಸ್ಪ್ಲೆಂಡರ್ ಮೇಲೆ ಅದೇನೋ ಮೋಹ. ಏನಾದರೊಂದು ವಿಶೇಷತೆ ಸೇರಿಸಿ, ಹೆಸರನ್ನು ಬದಲಾಯಿಸಿ ಮತ್ತೆ ಈ ಬೈಕ್ ಬಿಡುಗಡೆಗೊಳಿಸುತ್ತದೆ. ಆದ್ರೆ, ಈಗ ಈ 97.2 ಸಿಸಿ ಬೈಕ್ ನೊಂದಣಿಯನ್ನು ಸರ್ಕಾರ ನಿಷೇದಿಸಿದ್ದು, ಮುಂಬರುವ ದಿನಗಳಲ್ಲಿ ಕಂಪನಿ ಮತ್ತೆ ಈ ಬೈಕನ್ನು ರಸ್ತೆಗಿಳಿಸುವುದು ಖಂಡಿತ ಎನ್ನಬಹುದು.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಟಿವಿಎಸ್ ಎಕ್ಸ್‌ಎಲ್ 100 :

ಸಣ್ಣ ವ್ಯಾಪಾರಿಗಳಿಗೆ ಅತಿ ಹೆಚ್ಚು ಉಪಯುಕ್ತವೆನಿಸಿರುವ 99.7 ಸಿಸಿ ಟಿವಿಎಸ್ ಎಕ್ಸ್.ಎಲ್ ಮೊಪೆಡ್ ಸ್ಕೂಟರ್ ಹಳ್ಳಿಯ ಕಡೆ ಹೆಚ್ಚು ಖ್ಯಾತಿ ಪಡೆದುಕೊಂಡಿದೆ. ಸರಕು ಸಾಗಿಸಲು ಸಾಕಷ್ಟು ಸ್ಥಳಾವಕಾಶವಿರುವ ಈ ಮೊಪೆಡ್ ಸ್ಕೂಟರ್ ಮುಂಬರುವ ದಿನಗಳಲ್ಲಿ ರಸ್ತೆಯ ಮೇಲೆ ಕಾಣಿಸುವುದು ಅನುಮಾನವಾಗಿದೆ.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಬಜಾಜ್ ಸಿಟಿ 100 :

ದೇಶದ ಅತಿ ಅಗ್ಗದ ಬೈಕ್ ಎಂಬ ಖ್ಯಾತಿಗೆ ಸಿಟಿ 100 ಪಾತ್ರವಾಗಿದ್ದು, ಮೈಲೇಜ್ ಕೂಡ ಹೆಚ್ಚು ನೀಡಲಿದೆ ಎಂಬುದನ್ನು ನೀವು ಗಮನಿಸಬಹುದಾಗಿದೆ. ಪ್ರತಿ ಲೀಟರ್‌‌ಗೆ 89.5 ಕೀ.ಮೀ ಮೈಲೇಜ್ ನೀಡಲಿರುವ ಈ ಬೈಕ್ 97.2 ಸಿಸಿ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್, 8.08 ಅಶ್ವಶಕ್ತಿ, 8.04 ಎನ್‌ಎಂ ತಿರುಗುಬಲ ಮತ್ತು ಕೇವಲ ರೂ. 31,888 ಪುಣೆ ಎಕ್ಸ್ ಶೋರೂಂ ಬೆಲೆ ಹೊಂದಿದೆ.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಹೀರೋ ಪ್ಯಾಷನ್ ಪ್ರೊ ಐ3ಎಸ್ :

ಹೀರೋ ಸಂಸ್ಥೆಯ ಮತ್ತೊಂದು ಪ್ರಖ್ಯಾತ ಬೈಕ್ ಎನ್ನಿಸಿಕೊಂಡಿರುವ ಹೀರೋ ಪ್ಯಾಷನ್ ಪ್ರೊ ಐ3ಎಸ್ ಕೂಡ ಈ ನಿಷೇದಕ್ಕೆ ಒಳಗಾಗಿದ್ದು, ಈ ಬೈಕ್ 97.2 ಸಿಸಿ ಎಂಜಿನ್ ಶಕ್ತಿ ಹೊಂದಿದೆ ಹಾಗು ಲಿಟರಿಗೆ 84 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಈ ಮೇಲಿನ ಬೈಕುಗಳನ್ನು ನಿಷೇದ ಮಾಡಲು ಕರ್ನಾಟಕ ಮುಂದಾಗಿದ್ದು, 'ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆದ್ರಂತೆ' ಎನ್ನುವ ಹಾಗೆ, ಅಪಘಾತಕ್ಕೂ ಈ ಪ್ರಖ್ಯಾತಿ ಪಡೆದುಕೊಡಿರುವ ಬೈಕುಗಳಿಗೂ ಏನು ಸಂಬಂಧ ಎನ್ನುವುದು ಈಗ ನಾವು ಕೇಳುತ್ತಿರುವ ಪ್ರೆಶ್ನೆಯಾಗಿದ್ದು, ಆದಷ್ಟು ಬೇಗ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರ ಬೇರೆ ರೀತಿಯ ನಿರ್ಧಾರವನ್ನು ಕೈಗೊಳ್ಳಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.

Most Read Articles

Kannada
English summary
Karnataka government has banned riding pillion on two-wheelers with engine capacity of less than 100 CC, giving effect to a 2015 court order. Here is the list of vehicles banned under 100 CC section.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X