Just In
- 11 hrs ago ಯುಗಾದಿಗೆ ಕುಟುಂಬದೊಂದಿಗೆ ದುಬಾರಿ ಬೆಲೆಯ ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕ್ಯೂಟ್ ನಟಿ!
- 11 hrs ago ಭಾರೀ ನಿರೀಕ್ಷೆ: ಜನರು ಕ್ಯೂ ನಿಂತು ಖರೀದಿಸುವ ಈ ಹ್ಯುಂಡೈ ಕಾರು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆ ಸಜ್ಜು
- 13 hrs ago ಭಾರತದಲ್ಲಿ ಭರ್ಜರಿ ಸೇಲ್: ಈ ಬೈಕನ್ನು ಲ್ಯಾಟೀನ್ ಅಮೇರಿಕಾಗೂ ಪರಿಚಯಿಸಿದ ಹೆಮ್ಮೆಯ ಬಜಾಜ್!
- 13 hrs ago Baleno: ಜನಪ್ರಿಯ ಮಾರುತಿ ಸುಜುಕಿ ಬಲೆನೊ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
Don't Miss!
- Movies Divya Uruduga: ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್ಬಾಸ್ ದಿವ್ಯಾ ಉರುಡುಗ; 'ನಿನಗಾಗಿ' ಅಂತ ಕಲರ್ಫುಲ್ ಜರ್ನಿ ಶುರು!
- News Karnataka Rain: ಏಪ್ರಿಲ್ 18ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ
- Sports LSG vs DC IPL 2024: ಕೆಎಲ್ ರಾಹುಲ್ ಬಳಗಕ್ಕೆ ಶಾಕ್ ನೀಡಿದ ರಿಷಭ್ ಪಂತ್ ಪಡೆ
- Lifestyle ಫ್ರಿಡ್ಜ್ನಲ್ಲಿ ಮೊಟ್ಟೆ ಬೆಳ್ಳುಳ್ಳಿ ಏಕಿಡಬಾರದು..? ಇಟ್ಟರೆ ಏನಾಗುತ್ತೆ ಗೊತ್ತಾ?
- Technology Instagram: ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೀಚರ್ಸ್! ಇನ್ಮುಂದೆ ಆ ತರಹದ ಫೋಟೋಗಳೆಲ್ಲಾ ಬ್ಲರ್..
- Finance ಉತ್ತಮ ಪ್ಯಾಕೇಜ್ನೊಂದಿಗೆ ಟಾಪ್ ಕಾಲೇಜುಗಳ 10,000 ಫ್ರೆಶರ್ಗಳಿಗೆ ಉದ್ಯೋಗ ನೀಡಲಿದೆ ಟಿಸಿಎಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಬಿಡುಗಡೆಯಾದ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್
ಇಟಲಿಯ ಅತಿ ಪುರಾತನ ಹಾಗೂ ಅತ್ಯಂತ ಖ್ಯಾತಿ ಪಡೆದಿರುವ ಸ್ಪೋರ್ಟ್ಸ್ ಬೈಕ್ ತಯಾರಕ ಕಂಪನಿಯಾಗಿರುವ ಎಂವಿ ಅಗಸ್ಟಾ (Meccanica Verghera Agusta)ಮತ್ತೊಂದು ನೂತನ ಬೈಕನ್ನು ಅನಾವರಣಗೊಳಿಸಿದೆ.
ಇಟಲಿಯ ಅತಿ ಪುರಾತನ ಹಾಗೂ ಅತ್ಯಂತ ಖ್ಯಾತಿ ಪಡೆದಿರುವ ಸ್ಪೋರ್ಟ್ಸ್ ಬೈಕ್ ತಯಾರಕ ಕಂಪನಿಯಾಗಿರುವ ಎಂವಿ ಅಗಸ್ಟಾ (Meccanica Verghera Agusta)ಮತ್ತೊಂದು ನೂತನ ಬೈಕನ್ನು ಅನಾವರಣಗೊಳಿಸಿದೆ.
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಫ್3, ಎಫ್4, ಬ್ರೂಟಲೆ ಹಾಗೂ ರೈವಲೆ ಸರಣಿಯ ಬೈಕ್ಗಳು ಎಂವಿ ಅಗಸ್ಟಾದ ಪ್ರಮುಖ ಉತ್ಪನ್ನಗಳಾಗಿದ್ದು, ಇದೇ ಸರಣಿಯಲ್ಲಿ ಮತ್ತೊಂದು ಬ್ರೂಟಲೆ 800 ಮಾಡೆಲ್ ಬೈಕನ್ನು ಅಗಸ್ಟಾ ಬಿಡುಗಡೆ ಮಾಡಿದೆ.
ಬೆಲೆಗಳು
ಪೂರ್ಣ ಪ್ರಮಾಣದಲ್ಲಿ ದೇಶಿಯವಾಗಿ ಉತ್ಪಾದನೆಗೊಂಡಿರುವ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್ ಬೆಲೆಯು ಎಕ್ಸ್ಶೋರಂಗಳ ಪ್ರಕಾರ ರೂ.15.59 ಲಕ್ಷಕ್ಕೆ ಲಭ್ಯವಿದ್ದು, ವಿಶೇಷವಾಗಿ ರೇಸಿಂಗ್ ವಿಭಾಗಕ್ಕಾಗಿಯೇ ಅದ್ಭುತ ವಿನ್ಯಾಸಗಳನ್ನು ಪಡೆದುಕೊಂಡಿದೆ.
798ಸಿಸಿ ಇನ್ಲೈನ್ ತ್ರಿ ಸಿಲಿಂಡರ್ ಎಂಜಿನ್ನೊಂದಿಗೆ ಅಭಿವೃದ್ದಿ ಹೊಂದಿರುವ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್, 109ಬಿಎಚ್ಪಿ ಮತ್ತು 83ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.
ಹೀಗಾಗಿ ಗಂಟೆಗೆ 237 ಕಿ.ಮಿ ಚಾಲನಾ ಶಕ್ತಿ ಪಡೆದುಕೊಂಡಿರುವ ಬ್ರೂಟಲೆ 800 ಬೈಕ್ ಆವೃತ್ತಿಯೂ ಎಂವಿಐಸಿಎಸ್ ತಂತ್ರಜ್ಞಾನದ ವ್ಯವಸ್ಥೆಯನ್ನು ಪಡೆದುಕೊಳ್ಳುವ ಮೂಲಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.
ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್ ಮಾದರಿಯಲ್ಲಿ ಮೂರು ಹಂತದ ಎಬಿಎಸ್ ವ್ಯವಸ್ಥೆಯಿದ್ದು, ರೈಡ್ ಬೈ ವೈರ್ ಸಿಸ್ಟಂ, ಸ್ಲಿಪ್ಪರ್ ಕ್ಲಚ್, ಅಲ್ಯುಮಿನಿಯಂ ಫ್ರೇಮ್ಗಳು, 17-ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿದೆ.
ಇದರ ಜೊತೆಗೆ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್ ಮುಂಭಾಗದ ಚಕ್ರವು 320ಎಂಎಂ 4-ಪಿಸ್ಟನ್ ಡಬಲ್ ಫ್ಲೋಟಿಂಗ್ ಡಿಸ್ಕ್ ಪಡೆದುಕೊಂಡಿದ್ದರೇ ಹಿಂಬದಿಯ ಚಕ್ರವೂ 2-ಪಿಸ್ಟನ್ 220-ಎಂಎಂ ಡಿಸ್ಕ್ನೊಂದಿಗೆ ಅಭಿವೃದ್ಧಿಗೊಂಡಿವೆ.
ಇನ್ನು ಬ್ರೂಟಲೆ 800 ಬೈಕ್ ಬಿಡುಗಡೆ ಮಾತನಾಡಿದ ಎಂವಿ ಅಗಸ್ಟಾ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಂಜಿಕ್ಯಾ ಫಿರೋದಾ, "ಬ್ರೂಟಲೆ 800 ಬೈಕ್ ಆವೃತ್ತಿ ಭಾರೀ ನೀರಿಕ್ಷೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ರೇಸಿಂಗ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ" ಎಂದಿದ್ದಾರೆ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ
111 ಬಿಎಚ್ಪಿ ಉತ್ಪಾದನಾ ಆವೃತ್ತಿಗಳಾದ ಟ್ರಯಂಪ್ ಸ್ಟ್ರೀಟ್ ಟ್ರಿಪ್ಪಲ್, ಕವಾಸಕಿ ಝಡ್900 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್ ಅಭಿವೃದ್ಧಿಯಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಯಾವ ರೀತಿ ಬೇಡಿಕೆಯನ್ನು ಪಡೆದುಕೊಳ್ಳುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.