ಅತಿವೇಗದ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಒಕಿನಾವಾ ಸಂಸ್ಥೆ

ವಿದ್ಯುತ್ ದ್ವಿಚಕ್ರ ವಾಹನ ಕ್ಷೇತ್ರಕ್ಕೆ ಒಕಿನಾವಾ ಸಂಸ್ಥೆಯು ತನ್ನ ವಿದ್ಯುತ್ ಪ್ರೈಸ್ ಸ್ಕೂಟರನ್ನು ಭಾರತದಲ್ಲಿ ಆರಂಭಿಸಿದೆ. ಒಕಿನಾವಾ ಪ್ರೈಸ್ ಸ್ಕೂಟರ್ ರೂ.59,889 ಎಕ್ಸ್ ಶೋರೂಂ(ದೆಹಲಿ) ದರದಲ್ಲಿ ಲಭ್ಯವಿದೆ.

By Girish

ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿದ್ಯುತ್ ದ್ವಿಚಕ್ರ ವಾಹನ ಕ್ಷೇತ್ರಕ್ಕೆ ಒಕಿನಾವಾ ಸಂಸ್ಥೆಯು ತನ್ನ ವಿದ್ಯುತ್ ಪ್ರೈಸ್ ಸ್ಕೂಟರನ್ನು ಭಾರತದಲ್ಲಿ ಆರಂಭಿಸಿದೆ. ಒಕಿನಾವಾ ಪ್ರೈಸ್ ಸ್ಕೂಟರ್ ರೂ.59,889 ಎಕ್ಸ್ ಶೋರೂಂ(ದೆಹಲಿ) ದರದಲ್ಲಿ ಲಭ್ಯವಿದೆ.

ಅತಿವೇಗದ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಒಕಿನಾವಾ ಸಂಸ್ಥೆ

ಭಾರತೀಯ ಮಾರುಕಟ್ಟೆಯಲ್ಲಿ ಓಕಿನಾವಾ ಸಂಸ್ಥೆಯು ಬಿಡುಗಡೆಗೊಳಿಸಿರುವ ಎರಡನೇ ಸ್ಕೂಟರ್ ಪ್ರೈಸ್ ಉತ್ಪನ್ನವಾಗಿದೆ. ಈ ಮೊದಲು ಕಂಪನಿಯು ರಿಡ್ಜ್ ವಿದ್ಯುತ್ ಸ್ಕೂಟರನ್ನು ಈ ವರ್ಷ ಆರಂಭಿಸಿತ್ತು. ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಓಕಿನಾವಾದ ಕಿರಿಯ ಸಹೋದರನಾದ ರಿಡ್ಜ್ ಸ್ಕೂಟರ್‌ಗೆ ಹೋಲಿಸಿದರೆ ಉತ್ತಮ ಪ್ರದರ್ಶನ ಮತ್ತು ವೈಶಿಷ್ಟ್ಯಗಳನ್ನು ಈ ಸ್ಕೂಟರ್ ಪಡೆದಿದೆ.

ಅತಿವೇಗದ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಒಕಿನಾವಾ ಸಂಸ್ಥೆ

ಈ ಎಲೆಕ್ಟ್ರಿಕ್ ಸ್ಕೂಟರ್‌ನ ಮುಂಭಾಗದ ಏಪ್ರನ್ ಆಸುಪಾಸಿನಲ್ಲಿರುವ ಎಲ್ಇಡಿ ಹೆಡ್ ಲೈಟ್‌ಗಳು ಮತ್ತು ಡಿಆರ್‌ಎಲ್‌ಗಳು ಹಾಗು ಪಿಲಿಯನ್ ಬ್ಯಾಕ್ ರೆಸ್ಟ್‌ಗಳು ಸ್ಕೂಟರಿಗೆ ಪ್ರೀಮಿಯಂ ನೋಟವನ್ನು ನೀಡುತ್ತವೆ.

ಅತಿವೇಗದ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಒಕಿನಾವಾ ಸಂಸ್ಥೆ

ಹೊಸದಾಗಿ ಬಿಡುಗಡೆಯಾದ ಒಕಿನಾವಾ 1,000 ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, ಅದು 3.35 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಮೆಚ್ಚುಗೆಯ ವಿಚಾರವೆಂದರೆ, ಈ ಸ್ಕೂಟರಿನಲ್ಲಿ ಗಂಟೆಗೆ ಗರಿಷ್ಠ 75 ಕಿ.ಮೀ ವೇಗದಲ್ಲಿ ತಲುಪಬಹುದು.

ಅತಿವೇಗದ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಒಕಿನಾವಾ ಸಂಸ್ಥೆ

ಸದ್ಯದ ಮಟ್ಟಿಗೆ ಈ ವಾಹನವನ್ನು ಆರರಿಂದ ಎಂಟು ಗಂಟೆಗಳ ಕಾಲ ಚಾರ್ಜ್ ಮಾಡಬೇಕಾಗಿದ್ದು, ಲೀಡ್-ಆಸಿಡ್ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಮುಂಬರುವ ತಿಂಗಳುಗಳಲ್ಲಿ ಲೀಥಿಯಮ್ ಅಯಾನ್ ಆವೃತ್ತಿಯನ್ನು ಪರಿಚಯಿಸಲಾಗುವುದು ಮತ್ತು ಈ ಆವೃತಿಯು ಬೆಲೆ ರೂ.5,000 ರಿಂದ 6,000ರಷ್ಟು ಹೆಚ್ಚಿಗೆ ಇರಲಿದೆ.

ಅತಿವೇಗದ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಒಕಿನಾವಾ ಸಂಸ್ಥೆ

ಓಕಿನಾವಾ ಹೇಳುವಂತೆ, ಈ ವಾಹನವು ಭಾರತದಲ್ಲೇ ಅತಿವೇಗ ಪಡೆದ ವಿದ್ಯುತ್ ಸ್ಕೂಟರ್ ಆಗಿದ್ದು, 175 ಕಿ.ಮೀ ವ್ಯಾಪ್ತಿಯಿಂದ 200 ಕಿ.ಮೀವರೆಗೆ ತಲುಪಬಹುದಾಗಿದೆ ಮತ್ತು ಒಂದು ಕಿ.ಮೀ ಗೆ ಹತ್ತು ಪೈಸೆ ವೆಚ್ಚ ತಗುಲುತ್ತದೆ.

ಅತಿವೇಗದ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಒಕಿನಾವಾ ಸಂಸ್ಥೆ

ಈ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್, ಸೈಡ್ ಸ್ಟ್ಯಾಂಡ್ ಸಂವೇದಕ, ಕೀಲಿ ಕೈ ಇಲ್ಲದ ಪ್ರವೇಶ, ಮೈ ಸ್ಕೂಟರ್ ಫಂಕ್ಷನ್, ಕಳ್ಳತನ ವಿರೋಧಿ ತಂತ್ರಜ್ಞಾನ ಮತ್ತು ಹೆಚ್ಚಿನ ಸೌಕರ್ಯಗಳನ್ನು ಪಡೆದಿದೆ. ಇದಲ್ಲದೆ, ಡಿಜಿಟಲ್ ಸಲಕರಣೆ ಕ್ಲಸ್ಟರ್ ಸಹ ಅಳವಡಿಸಲಾಗಿದೆ ಮತ್ತು 19.5 ಲೀಟರಿನ ಸೀಟ್ ಕೆಳಭಾಗದ ಶೇಖರಣೆಯನ್ನು ಹೊಂದಿದೆ.

ಅತಿವೇಗದ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಒಕಿನಾವಾ ಸಂಸ್ಥೆ

ಒಕಿನಾವಾ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್, ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಇ-ಎಬಿಎಸ್(ಇಲೆಕ್ಟ್ರಾನಿಕ್ ಅಸಿಸ್ಟೆಡ್ ಬ್ರೇಕಿಂಗ್ ಸಿಸ್ಟಮ್) ಮತ್ತು ಮುಂಭಾಗದಲ್ಲಿ ಡ್ಯುವಲ್ ಡಿಸ್ಕ್ ಬ್ರೇಕ್‌ಗಳಂತಹ ಪ್ರೀಮಿಯಂ ಉಪಕರಣಗಳನ್ನು ಸಹ ಒಳಗೊಂಡಿದೆ.

ಅತಿವೇಗದ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಒಕಿನಾವಾ ಸಂಸ್ಥೆ

ಒಕಿನಾವಾ, ನವೆಂಬರ್ ತಿಂಗಳಿನಲ್ಲಿಯೇ ತನ್ನ ಪ್ರೈಸ್ ವಾಹನದ ಬುಕಿಂಗ್ ಪ್ರಾರಂಭಿಸಿದೆ. ಕಂಪೆನಿ ದೇಶದಾದ್ಯಂತ 106 ವಿತರಕರನ್ನು ಹೊಂದಿದೆ ಮತ್ತು 2018ರೊಳಗೆ ಈ ಸಂಖ್ಯೆಯನ್ನು 150ಕ್ಕೆ ಏರಿಸಲು ಯೋಜಿಸಿದೆ.

Most Read Articles

Kannada
English summary
Okinawa Praise Electric Scooter Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X