ಹಿಂಬದಿ ಬೈಕ್ ಸವಾರಿಯನ್ನು ಬ್ಯಾನ್ ಮಾಡಿದ ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರವು ಹಿಂಬದಿ ಬೈಕ್ ಸವಾರಿಯನ್ನು ನಿಷೇಧ ಮಾಡಿದ್ದು, ಸಾರ್ವಜನಿಕರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಆದ್ರೆ ವಿರೋಧಕ್ಕೆ ಮಣಿದಿರುವ ರಾಜ್ಯ ಸರ್ಕಾರವು ಇದೀಗ ಮತ್ತೆ ಹೊಸ ಕಾನೂನಿನಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

By Praveen

ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಹಿಂಬದಿ ಬೈಕ್ ಸವಾರಿಯನ್ನು ನಿಷೇಧ ಮಾಡಿದ್ದು, ಸಾರ್ವಜನಿಕರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಆದ್ರೆ ವಿರೋಧಕ್ಕೆ ಮಣಿದಿರುವ ರಾಜ್ಯ ಸರ್ಕಾರವು ಇದೀಗ ಮತ್ತೆ ಹೊಸ ಕಾನೂನಿನಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

ಹಿಂಬದಿ ಬೈಕ್ ಸವಾರಿಯನ್ನು ಬ್ಯಾನ್ ಮಾಡಿದ ಕರ್ನಾಟಕ ಸರ್ಕಾರ

ಕಳೆದ 2 ದಿನಗಳ ಹಿಂದೆ ರಾಜ್ಯ ಸರ್ಕಾರವು 100 ಸಿಸಿ ಎಂಜಿನ್ ಸಾಮರ್ಥ್ಯಕ್ಕಿಂತ ಕಡಿಮೆ ಇರುವ ಬೈಕ್‌ಗಳಲ್ಲಿ ಹಿಂಬದಿ ಸವಾರಿಯನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಜೊತೆಗೆ ಅವೈಜ್ಞಾನಿಕ ನಿಯಮ ಜಾರಿ ಹಿನ್ನೆಲೆ ಬೈಕ್ ಸವಾರರ ಆಕ್ರೋಶಕ್ಕೆ ಕಾರಣವಾಗಿತ್ತು.

ಹಿಂಬದಿ ಬೈಕ್ ಸವಾರಿಯನ್ನು ಬ್ಯಾನ್ ಮಾಡಿದ ಕರ್ನಾಟಕ ಸರ್ಕಾರ

ಆದ್ರೆ ಸಾರ್ವಜನಿಕರ ವಿರೋಧದ ಹಿನ್ನೆಲೆ ಹೊಸ ಕಾನೂನಿನಲ್ಲಿ ಬದವಾವಣೆಗೊಳಿಸಿರುವ ರಾಜ್ಯ ಸರ್ಕಾರವು 100 ಸಿಸಿ ಬದಲಾಗಿ 50 ಸಿಸಿ ಸಾಮರ್ಥ್ಯದ ಬೈಕ್‌ ಮತ್ತು ಸ್ಕೂಟರ್‌ಗಳಲ್ಲಿ ಹಿಂಬದಿನ ಸವಾರಿಯನ್ನು ಸಂಪೂರ್ಣ ನಿಷೇಧಗೊಳಿಸಿದೆ.

ಹಿಂಬದಿ ಬೈಕ್ ಸವಾರಿಯನ್ನು ಬ್ಯಾನ್ ಮಾಡಿದ ಕರ್ನಾಟಕ ಸರ್ಕಾರ

ಒಂದು ವೇಳೆ 50 ಸಿಸಿ ಸಾಮರ್ಥ್ಯ ಬೈಕ್‌ಗಳಲ್ಲಿ ಕಾನೂನು ಬಾಹಿರವಾಗಿ ಹಿಂಬದಿ ಸವಾರಿಗೆ ಅವಕಾಶ ಕೊಟ್ಟಲ್ಲಿ ಭಾರೀ ಪ್ರಮಾಣದ ದಂಡ ತೆರಬೇಕಾಗಿದ್ದು, ತಪ್ಪಿದ್ದಲ್ಲಿ ನಿಗದಿತ ಪ್ರಮಾಣದ ಜೈಲು ಶಿಕ್ಷೆಯನ್ನು ಕೂಡಾ ವಿಧಿಸಬಹುದು.

Recommended Video

[Kannada] Tata Tiago XTA AMT Launched In India - DriveSpark
ಹಿಂಬದಿ ಬೈಕ್ ಸವಾರಿಯನ್ನು ಬ್ಯಾನ್ ಮಾಡಿದ ಕರ್ನಾಟಕ ಸರ್ಕಾರ

ಹೊಸ ಕಾನೂನು ಏಕೆ?

ರಾಜ್ಯ ಸರ್ಕಾರವು ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ ತಗ್ಗಿಸಲು ಹೊಸ ಹೊಸ ನಿಯಮಗಳನ್ನು ಜಾರಿ ಮಾಡುತ್ತಿದ್ದು, ಹಿಂಬದಿ ಸವಾರಿಗೆ ಯೋಗ್ಯವಲ್ಲದ 50 ಸಿಸಿ ಎಂಜಿನ್ ಬೈಕ್‌ಗಳಲ್ಲಿ ಇಬ್ಬರು ಪ್ರಯಾಣಿಸುವುದನ್ನು ನಿಷೇಧ ಮಾಡಿದೆ.

ಹಿಂಬದಿ ಬೈಕ್ ಸವಾರಿಯನ್ನು ಬ್ಯಾನ್ ಮಾಡಿದ ಕರ್ನಾಟಕ ಸರ್ಕಾರ

ಈ ಕುರಿತು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದ ರಾಜ್ಯ ಸರ್ಕಾರವು 100 ಸಿಸಿ ಕೆಳ ಮಟ್ಟದ ಬೈಕ್‌ಗಳಲ್ಲಿ ಹಿಂಬದಿ ಸವಾರಿಯನ್ನು ನಿಷೇಧ ಮಾಡುತ್ತಿರುವುದಕ್ಕೆ ಹಲವು ಕಾರಣಗಳನ್ನು ನೀಡಿತ್ತು. ಆದ್ರೆ ಸರ್ಕಾರದ ವಾದವನ್ನು ಅಲ್ಲಗಳೆದಿರುವು ಕೋರ್ಟ್ ಮೊದಲ ಹಂತವಾಗಿ 50 ಸಿಸಿ ಕೆಳಮಟ್ಟ ಬೈಕ್‌ಗಳಲ್ಲಿ ಹಿಂಬದಿ ಸವಾರಿಯನ್ನು ನಿಷೇಧಗೊಳಿಸುವಂತೆ ಮಹತ್ವದ ಸೂಚನೆ ನೀಡಿದೆ.

ಓದಿರಿ- ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಹಿಂಬದಿ ಬೈಕ್ ಸವಾರಿಯನ್ನು ಬ್ಯಾನ್ ಮಾಡಿದ ಕರ್ನಾಟಕ ಸರ್ಕಾರ

ಇದಕ್ಕೆ ಸಮ್ಮತಿ ಸೂಚಿಸಿರುವ ರಾಜ್ಯ ಸರ್ಕಾರವು ಕೂಡಾ ಜಾಗೃತಿ ಅಭಿಯಾನ ಮಾದರಿಯಲ್ಲಿ 50 ಸಿಸಿ ಕೆಳಮಟ್ಟದ ಬೈಕ್‌ಗಳಲ್ಲಿ ಹಿಂಬದಿ ಸವಾರಿಯನ್ನು ನಿಷೇಧಗೊಳಿಸಿದ್ದು, ತದನಂತರವಷ್ಟೇ 100 ಸಿಸಿ ಕೆಳಮಟ್ಟದ ಬೈಕ್‌ಗಳಲ್ಲಿ ಹಿಂಬದಿ ಸವಾರಿಯನ್ನು ನಿಷೇಧ ಮಾಡುವ ಗುರಿಹೊಂದಿದೆ.

ಹಿಂಬದಿ ಬೈಕ್ ಸವಾರಿಯನ್ನು ಬ್ಯಾನ್ ಮಾಡಿದ ಕರ್ನಾಟಕ ಸರ್ಕಾರ

ಆದ್ರೆ ಸರ್ಕಾರವು ರಸ್ತೆ ಅಪಘಾತಗಳನ್ನು ತಡೆ ಉದ್ದೇಶದಿಂದ ಕಠಿಣ ಕಾನೂನು ಕ್ರಮಗಳನ್ನು ಜಾರಿ ಮಾಡುತ್ತಿರುವುದು ಸ್ವಾಗತಾರ್ಹವಾದರೂ, ಅಪಘಾತಕ್ಕೆ ಕಾರಣವಾಗಿರುವ ಮೂಲ ಸಮಸ್ಯೆಗಳನ್ನು ನಿವಾರಣೆ ಮಾಡುವತ್ತ ರಾಜ್ಯ ಸರ್ಕಾರವು ಗಮನಹರಿಸುವ ಅವಶ್ಯಕತೆಯಿದೆ.

Trending On DriveSpark Kannada:

ನೀವು ನಂಬಲೇಬೇಕು! ಈ ಟಾಪ್ 10 ಬೈಕ್‌ಗಳು ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ..!

Most Read Articles

Kannada
English summary
Read in Kannada about Karnataka To Ban Pillion Riding On Two Wheelers With Engine Capacity Up To 50 cc.
Story first published: Monday, October 23, 2017, 13:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X