ಕೆಟಿಎಂ ಬೈಕ್ ಸವಾರನ ಜೊತೆ ಪೊಲೀಸರ ಕಿರಿಕ್- ಪ್ರಶ್ನಿದ್ದಕ್ಕೆ ಬಿತ್ತು ಭಾರೀ ದಂಡ..!!

ಇತ್ತೀಚೆಗೆ ಸೂಪರ್ ಬೈಕ್ ಸವಾರರಿಗೆ ಹೊಸ ರಸ್ತೆ ಸುರಕ್ಷಾ ಕಾಯ್ದೆಗಳು ಸಾಕಷ್ಟು ಹೊಂದಲ ಸೃಷ್ಠಿಸುತ್ತಿವೆ. ಇದರಿಂದಾಗಿ ಸೂಪರ್ ಬೈಕ್ ಸವಾರರನ್ನು ಅಪರಾಧಿಗಳತ್ತೆ ಕಾಣಲಾಗುತ್ತಿದ್ದು, ಕೇರಳದಲ್ಲೂ ಇಂತದ್ದೆ ಒಂದು ಪ್ರಕರಣ ನಡೆದಿದೆ.

By Praveen

ಇತ್ತೀಚೆಗೆ ಸೂಪರ್ ಬೈಕ್ ಸವಾರರಿಗೆ ಹೊಸ ರಸ್ತೆ ಸುರಕ್ಷಾ ಕಾಯ್ದೆಗಳು ಸಾಕಷ್ಟು ಹೊಂದಲ ಸೃಷ್ಠಿಸುತ್ತಿವೆ. ಇದರಿಂದಾಗಿ ಸೂಪರ್ ಬೈಕ್ ಸವಾರರನ್ನು ಅಪರಾಧಿಗಳತ್ತೆ ಕಾಣಲಾಗುತ್ತಿದ್ದು, ಕೇರಳದಲ್ಲೂ ಇಂತದ್ದೆ ಒಂದು ಪ್ರಕರಣ ನಡೆದಿದೆ.

ಬೈಕ್ ಸವಾರನ ಜತೆ ಪೊಲೀಸರ ಕಿರಿಕ್- ಪ್ರಶ್ನಿದ್ದಕ್ಕೆ ಬಿತ್ತು ಭಾರೀ ದಂಡ

ರಸ್ತೆ ನಿಯಮಗಳನ್ನು ಉಲ್ಲಂಘಿಸಿದ್ರೆ ಕಾನೂನು ಪ್ರಕಾರ ದಂಡ ವಿಧಿಸುವುದು ವಾಡಿಕೆ. ಆದ್ರೆ ಏನು ತಪ್ಪು ಮಾಡದ ಕೆಟಿಎಂ ಬೈಕ್ ಸವಾರೊಬ್ಬನ ಕಿರಿಕ್ ಮಾಡಿಕೊಂಡಿರುವ ಕೇರಳ ಪೊಲೀಸರು ಇಲ್ಲಸಲ್ಲದ ಕೇಸ್‌ಗಳನ್ನು ಜಡಿದು ದೊಡ್ಡ ಮೊತ್ತದ ದಂಡ ವಸೂಲಿ ಮಾಡಿದ್ದಾರೆ.

ಬೈಕ್ ಸವಾರನ ಜತೆ ಪೊಲೀಸರ ಕಿರಿಕ್- ಪ್ರಶ್ನಿದ್ದಕ್ಕೆ ಬಿತ್ತು ಭಾರೀ ದಂಡ

ಕೇರಳ ಕಣ್ಣೂರಿನಲ್ಲಿ ಈ ಘಟನೆ ನಡೆದಿದ್ದು, ಕೆಟಿಎಂ ಡ್ಯೂಕ್ 390 ಬೈಕ್‌ ರೈಡ್ ಮಾಡುತ್ತಿದ್ದ ಮಹಮದ್ ಇಸ್ಮಾಯಿಲ್ ಎಂ ಎಂಬುವರ ಜೊತೆ ಕೇರಳ ಪೊಲೀಸರು ಕಿರಿಕ್ ಮಾಡಿದ್ದಾರೆ. ರಸ್ತೆ ನಿಯಮ ಪ್ರಕಾರ ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸಿದ್ದರು ಬೈಕ್ ಮಾಡಿಫೈ ಮಾಡಲಾಗಿದೆ ಎಂದು ದಂಡ ವಿಧಿಸಿದ್ದಾರೆ.

ಈ ಕುರಿತು ವಿಡಿಯೋ ಕೂಡಾ ಮಾಡಿರುವ ಕೆಟಿಎಂ ಸವಾರನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು, ಕಣ್ಣೂರಿನ ಟ್ರಾಫಿಕ್ ಪೊಲೀಸರ ಕ್ರಮಕ್ಕೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಕ್ ಸವಾರನ ಜತೆ ಪೊಲೀಸರ ಕಿರಿಕ್- ಪ್ರಶ್ನಿದ್ದಕ್ಕೆ ಬಿತ್ತು ಭಾರೀ ದಂಡ

ಬೈಕ್ ಸವಾರ ಮಾಡಿರುವ ವಿಡಿಯೋದಲ್ಲಿರುವಂತೆ ಕೆಟಿಎಂ ಸವಾರನು ಹೆಲ್ಮೆಟ್ ಮೇಲೆ ಕ್ಯಾಮೆರಾ ಅಳವಡಿಕೆಯನ್ನು ಮಾಡಿಕೊಂಡಿದ್ದು ಫೇಸ್‌ಬುಕ್ ಮಾಡುತ್ತಿರುವುದು ಕಂಡುಬಂದಿದೆ. ಆದ್ರೆ ಕಾನೂನು ಪ್ರಕಾರ ಬೈಕ್ ಚಾಲನೆ ವೇಳೆ ವಿಡಿಯೋ ರೆಕಾರ್ಡಿಂಗ್ ಮಾಡುವುದು ತಪ್ಪಲ್ಲ.

ಬೈಕ್ ಸವಾರನ ಜತೆ ಪೊಲೀಸರ ಕಿರಿಕ್- ಪ್ರಶ್ನಿದ್ದಕ್ಕೆ ಬಿತ್ತು ಭಾರೀ ದಂಡ

ಆದ್ರೆ ಇದನ್ನೇ ಮುಂದಿಟ್ಟಕೊಂಡು ಕೆಟಿಎಂ ಸವಾರನಿಗೆ ಸುಮಾರು ರೂ. 3 ಸಾವಿರ ದಂಡ ವಿಧಿಸಿರುವ ಪೊಲೀಸರು ವೇಗದ ಚಾಲನೆ ಮಾಡದಂತೆ ತಾಕೀತು ಮಾಡಿದ್ದಾರೆ. ಆದ್ರೆ ಇದ್ಯಾವುದು ಕಾನೂನಾತ್ಮಕ ನಿರ್ಬಂಧವಲ್ಲ ಎನ್ನುವುದೇ ಪ್ರಮುಖ ವಿಚಾರ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕೇರಳದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಇಂತಹ ಹತ್ತಾರು ಪ್ರಕರಣಗಳು ನಡೆದಿದ್ದು, ಕಾರಣವೇ ಇಲ್ಲದೇ ಸಾಕಷ್ಟು ಸಂಖ್ಯೆಯ ಸೂಪರ್ ಬೈಕ್ ಸವಾರರು ಪೊಲೀಸರು ವಿಧಿಸುವ ದೊಡ್ಡ ಮೊತ್ತದ ದಂಡವನ್ನು ತೆರುತ್ತಲೇ ಇದ್ದಾರೆ ಎನ್ನುವುದು ಬಗ್ಗೆ ವರದಿಯಿದೆ.

Trending On DriveSpark Kannada:

Most Read Articles

Kannada
English summary
Read in Kannada about Cops stop KTM Duke 390 rider with GoPro. Says camera on bikes is illegal, as it is a modification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X