ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಯುವ ಬೈಕ್ ಸವಾರರು ಬೈಕ್ ಮಾಡಿಫೈ ಮೇಲೆ ಹೆಚ್ಚಿನ ವ್ಯಾಮೋಹ ಹೊಂದುತ್ತಿದ್ದು, ಇದು ಸಾರ್ವಜನಿಕ ಜೀವನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಕಾನೂನು ಬಾಹಿರ ಬೈಕ್ ಮಾಡಿಫೈಗಳ ಮೇಲೆ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

By Praveen

ಇತ್ತೀಚೆಗೆ ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈ ಮೇಲೆ ಹೆಚ್ಚಿನ ವ್ಯಾಮೋಹ ಹೊಂದುತ್ತಿದ್ದು, ಇದು ಸಾರ್ವಜನಿಕ ಜೀವನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಕಾನೂನು ಬಾಹಿರ ಬೈಕ್ ಮಾಡಿಫೈಗಳ ಮೇಲೆ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಹಿಂದೆ ಹಳ್ಳಿಗಳ ಕಡೆಗೆಲ್ಲಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬಂದ್ರೆ ಸಾಕು 1 ಕಿ.ಮಿ ದೂರವಿರುವಾಗಲೇ ಬೈಕ್ ಬರುತ್ತಿದೆ ಎಂಬುದು ಗೊತ್ತಾಗುತ್ತಿತ್ತು. ಆದ್ರೆ ಕಾಲ ಬದಲಾದಂತೆ ಬೈಕ್‌ಗಳ ಶಬ್ದ ಮಾಲಿನ್ಯಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ಎಕ್ಸಾಸ್ಟ್ ವೈಶಿಷ್ಟ್ಯತೆಗಳಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ.

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಆದ್ರೆ ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈಗೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೈಕ್ ಮೂಲವನ್ನೆ ಬದಲಿಸುವುದು ಸಾಕಷ್ಟು ಟ್ರೆಂಡ್ ಆಗುತ್ತಿದೆ.

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಇದರಿಂದ ಬೈಕ್ ಸವಾರನಿಗೆ ಹೆಚ್ಚಿನ ಅನುಕೂಲಕತೆಗಳಿದ್ದರು ಅದು ಸಾರ್ವಜನಿಕ ಜೀವನದಲ್ಲಿ ಹೆಚ್ಚೆಚ್ಚು ಸಮಸ್ಯೆಗಳನ್ನು ಉದ್ಭವವಾಗುವಂತೆ ಮಾಡುತ್ತಿದೆ. ಜೊತೆಗೆ ಬೈಕ್‌ಗಳ ಎಕ್ಸಾಸ್ಟ್ ಬದಲಾವಣೆಯಿಂದಾಗಿ ಹೆಚ್ಚಿನ ಶಬ್ದ ಮಾಲಿನ್ಯಕ್ಕೆ ಎಡೆಮಾಡುಕೊಡುತ್ತಿದೆ.

Recommended Video

Mahindra KUV 100 NXT Launched In India | In Kannada - DriveSpark ಕನ್ನಡ
ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಹೀಗಾಗಿ ಸಾರ್ವಜನಿಕರು ಮಾಡಿಫೈ ಬೈಕ್ ಸವಾರರ ಜೊತೆ ಹಲವು ಸಂದರ್ಭಗಳಲ್ಲಿ ವಾಗ್ವಾದಕ್ಕೆ ಕಾರಣವಾಗುತ್ತಿದ್ದು, ಮಾಡಿಫೈ ಬೈಕ್ ಸವಾರರ ವಿರುದ್ಧ ಪ್ರಕರಣಗಳನ್ನು ಕೂಡಾ ದಾಖಲಿಸುತ್ತಿದ್ದಾರೆ.

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಬೆಂಗಳೂರು ಮತ್ತು ಮೈಸೂರು, ಹುಬ್ಬಳ್ಳಿಯಲ್ಲೂ ಇಂತದ್ದೇ ಹಲವು ಪ್ರಕರಣಗಳು ನಡೆದಿದ್ದು, ಅದರಲ್ಲಿ ಅತಿ ಹೆಚ್ಚು ಪ್ರಕರಣಗಳು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮೇಲೆಯೇ ಕೇಸ್ ದಾಖಲಾಗಿವೆ.

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಸಾರ್ವಜನಿಕರು ನೀಡಿರುವ ದೂರಗಳ ಅನ್ವಯ ವಿಶೇಷ ಕಾರ್ಯಾಚರಣೆಗೆ ಇಳಿದಿರುವ ರಾಜ್ಯ ಪೊಲೀಸರು ರಾಯಲ್ ಎನ್‌ಫೀಲ್ಡ್ ಸವಾರರಿಗೆ ಶಾಕ್ ನೀಡುತ್ತಿದ್ದಾರೆ. ಎಕ್ಸಾಸ್ಟ್ ಬದಲಿಸಿರುವ ಬೈಕ್‌ಗಳ ಸೈಲೆನ್ಸರ್‌ಗಳನ್ನು ಸ್ಪಾಟ್‌ನಲ್ಲೇ ಕಿತ್ತು ಹಾಕುತ್ತಿರುವ ಪೊಲೀಸರು ಭಾರೀ ಮೊತ್ತದ ದಂಡವನ್ನು ಕೂಡಾ ವಿಧಿಸುತ್ತಿದ್ದಾರೆ.

ಓದರಿ-

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಜೊತೆಗೆ ಪ್ರಮುಖ ರಸ್ತೆಗಳಲ್ಲಿ ತಪಾಸಣಾ ಕಾರ್ಯಗಳನ್ನು ಕೈಗೊಳ್ಳುವ ಪೊಲೀಸರು ಸ್ಥಳದಲ್ಲೇ ನಿಮ್ಮ ಬೈಕ್‌ನ ಎಕ್ಸಾಸ್ಟ್ ಕಿತ್ತುಹಾಕುವುದಲ್ಲದೇ ಬೈಕ್ ಸೀಸ್ ಮಾಡುತ್ತಿದ್ದು, ಈಗಾಗಲೇ ಇಂತಹದ್ದೆ 43 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಈ ಮೂಲಕ ಎಕ್ಸಾಸ್ಟ್ ಬದಲಿಸಿರುವ ರಾಯಲ್ ಎನ್‌ಫೀಲ್ಡ್ ಸವಾರರಿಂದ ಬರೋಬ್ಬರಿ 36,200 ಸಾವಿರ ರೂಪಾಯಿ ದಂಡ ವಸೂಲಿ ಕೂಡಾ ಮಾಡಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಪತ್ತೆ ಹಚ್ಚಲು ಪ್ಲ್ಯಾನ್ ಮಾಡುತ್ತಿದ್ದಾರೆ.

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಒಂದು ವೇಳೆ ನೀವು ಕೂಡಾ ರಾಯಲ್ ಬೈಕ್ ಅಥವಾ ಇತರೆ ಸೂಪರ್ ಬೈಕ್‌ಗಳನ್ನು ಹೊಂದಿದ್ದರೆ ಕಾನೂನು ಬಾಹಿರ ಬೈಕ್ ಮಾಡಿಫೈ ಮಾಡಿಸುವ ಮತ್ತೊಮ್ಮೆ ಯೋಚಿಸಿ. ಇಲ್ಲವಾದ್ರೆ ಭಾರೀ ಪ್ರಮಾಣದ ದಂಡ ಬೀಳುವುದಲ್ಲದೇ ಬೈಕ್ ಕೂಡಾ ಸೀಸ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Trending On DriveSpark Kannada

Most Read Articles

Kannada
English summary
Read in Kannada about Royal Enfield owners with loud exhausts beware. Because Cops will seize your bike and break your silencer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X