ಎಫ್.ಐ ಆಯ್ಕೆ ಪಡೆದ ಸುಜುಕಿ ಇಂಟ್ರುಡರ್ 150 ಬೈಕ್ ಮಾಹಿತಿ ಬಹಿರಂಗ

ಕ್ರೂಸರ್‌ಗಳ ವಿಚಾರಕ್ಕೆ ಬಂದಾಗ, ಸುಜುಕಿ ನಿಮ್ಮ ಮೊದಲ ಆಯ್ಕೆ ಆಗಿಲ್ಲದೇ ಇರಬಹುದು. ಆದ್ರೆ, ನೀವೇನಾದರೂ ಸುಜುಕಿ ಸಂಸ್ಥೆಯ ಫ್ಯಾನ್ ಆಗಿದ್ದರೆ ಖಂಡಿತ ನಿಮ್ಮ ಗಮನ ಇಂಟ್ರುಡರ್ ಕ್ರೂಸರ್ ವಾಹನದ ಕಡೆ ಹರಿಯದೆ ಇರಲಾರದು.

By Girish

ಜಪಾನ್ ದೇಶದ ಪ್ರಖ್ಯಾತ ಬ್ರ್ಯಾಂಡ್ ಆಗಿರುವ ಇಂಟ್ರುಡೆರ್, ಕಡಿಮೆ ಸಾಮರ್ಥ್ಯದ ಮೊಟ್ಟ ಮೊದಲ ಸುಜುಕಿ ಇಂಟ್ರುಡರ್ 150 ಕ್ರೂಸರ್ ವಾಹನವನ್ನು ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಸದ್ಯದರಲ್ಲಿಯೇ ಈ ದ್ವಿಚಕ್ರ ವಾಹನದ ಫ್ಯುಯೆಲ್ ಇಂಜೆಕ್ಷನ್ ಆವೃತಿಯನ್ನು ಬಿಡುಗಡೆಗೊಳಿಸಿದೆ ಎನ್ನಲಾಗಿದೆ.

ಎಫ್.ಐ ಆಯ್ಕೆ ಪಡೆದ ಸುಜುಕಿ ಇಂಟ್ರುಡರ್ 150 ಬೈಕ್ ಮಾಹಿತಿ ಬಹಿರಂಗ

ವಾಹನದ ಬಿಡುಗಡೆ ಸಮಾರಂಭದಲ್ಲಿ, ಎಫ್ಐ ಆವೃತ್ತಿಯ(ಗಿಕ್ಸ್ಸರ್ ಎಸ್ಎಫ್ನಲ್ಲಿನ ಅದೇ ಎಂಜಿನ್)ನ್ನು ಆರು ತಿಂಗಳೊಳಗಾಗಿ ಗ್ರಾಹಕರಿಗೆ ತಲುಪಲಿದ್ದೇವೆ ಎಂದು ಸುಜುಕಿ ದೃಢಪಡಿಸಿದ್ದು, ಆಟೋ ಎಕ್ಸ್‌ಪೋ 2018ನಲ್ಲಿ ಈ ವಾಹನವನ್ನು ಬಹಿರಂಗಪಡಿಸುವ ನಿರೀಕ್ಷೆ ಇದೆ.

ಎಫ್.ಐ ಆಯ್ಕೆ ಪಡೆದ ಸುಜುಕಿ ಇಂಟ್ರುಡರ್ 150 ಬೈಕ್ ಮಾಹಿತಿ ಬಹಿರಂಗ

ಇಂಟ್ರುಡರ್ ವಾಹನವು 154.9 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೋಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 8000 ಆರ್‌ಪಿಎಂನಲ್ಲಿ 14 ಬಿಎಚ್‌ಪಿ ಮತ್ತು 6000 ಆರ್‌ಪಿಎಂನಲ್ಲಿ 14 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿಕೊಳ್ಳುತ್ತದೆ.

ಎಫ್.ಐ ಆಯ್ಕೆ ಪಡೆದ ಸುಜುಕಿ ಇಂಟ್ರುಡರ್ 150 ಬೈಕ್ ಮಾಹಿತಿ ಬಹಿರಂಗ

ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಮೋಟಾರ್ ಸೈಕಲ್ ಅರ್ಧ ಬೇಯಿಸಿದಂತೆ ಕಾಣುತ್ತದೆ. ಇಂಜಿನ್ ಕಾರ್ಯಕ್ಷಮತೆಯನ್ನು ಮತ್ತು ದಕ್ಷತೆಯನ್ನು ಉತ್ತಮಗೊಳಿಸಲು ಈ ರೀತಿಯ ದೊಡ್ಡ ಗಾತ್ರದ ಟೈರುಗಳನ್ನು ಇರಿಸಲಾಗಿದೆ. ಎಲ್ಇಡಿ ಟೈಲ್ ದೀಪ, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್‌ಗಳು, ಮತ್ತು ಸಿಂಗಲ್-ಚಾನೆಲ್ ಎಬಿಎಸ್ ನೀಡಲಾಗಿದೆ.

ಎಫ್.ಐ ಆಯ್ಕೆ ಪಡೆದ ಸುಜುಕಿ ಇಂಟ್ರುಡರ್ 150 ಬೈಕ್ ಮಾಹಿತಿ ಬಹಿರಂಗ

ಸ್ಟ್ಯಾಂಡರ್ಡ್ ಆವೃತ್ತಿಯು ರೂ.98,340(ದೆಹಲಿಯ ಎಕ್ಸ್ ಶೋರೂಂ) ಬೆಲೆ ಪಡೆದುಕೊಂಡಿದೆ. ಆದ್ದರಿಂದ, ಎಫ್‌ಐ ಆವೃತ್ತಿಯು ಸುಮಾರು 10,000 ರೂಪಾಯಿಗಳಷ್ಟು ಹೆಚ್ಚಿಗೆ ಇರಲಿದೆ. ಇದು ಬಜಾಜ್ ಅವೆಂಜರ್ 220 ಕ್ರೂಸರ್‌ಗಿಂತ ದುಬಾರಿಯಾಗಿದೆ.

ಎಫ್.ಐ ಆಯ್ಕೆ ಪಡೆದ ಸುಜುಕಿ ಇಂಟ್ರುಡರ್ 150 ಬೈಕ್ ಮಾಹಿತಿ ಬಹಿರಂಗ

ಭಾರತಲ್ಲಿ 150 ಕ್ರೂಸರ್ ಮಾರುಕಟ್ಟೆಯನ್ನು ಅಧ್ಯಯನ ಮಾಡಲು ಸುಜುಕಿ ಕಂಪನಿಯು ಪ್ರಾಯೋಗಿಕವಾಗಿ ಈ ಕ್ರೂಸರ್ ಬೈಕನ್ನು ಬಿಡುಗಡೆಗೊಳಿಸಿದೆ ಎನ್ನಲಾಗಿದೆ. ಆದಾಗ್ಯೂ, ಬಲಿಷ್ಠ M1800R ವಾಹನದಿಂದ ಸ್ಫೂರ್ತಿ ಪಡೆದಿದ್ದರೂ ಸಹ, ಸುಜುಕಿ ಹೇಳಿಕೆಯ ಹೊರತಾಗಿಯೂ ಬೈಕು ಉತ್ತಮ ವಿನ್ಯಾಸ ಪಡೆದಿಲ್ಲ ಎಂಬುದು ವಾಹನ ಪಂಡಿತರ ಅಭಿಪ್ರಾಯವಾಗಿದೆ.

ಎಫ್.ಐ ಆಯ್ಕೆ ಪಡೆದ ಸುಜುಕಿ ಇಂಟ್ರುಡರ್ 150 ಬೈಕ್ ಮಾಹಿತಿ ಬಹಿರಂಗ

ಇನ್ನು, ಹೊಸ ಎಫ್ಐ ಆವೃತ್ತಿಯು ಬಜಾಜ್ ಅವೆಂಜರ್‌ಗೆ ಹೋಲಿಸಿದರೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ನಾವು ಸ್ವಲ್ಪ ದಿನ ಕಾಯಬೇಕಾಗಬಹುದು.

Most Read Articles

Kannada
Read more on suzuki ಸುಜುಕಿ
English summary
At the Intruder 150 launch, Suzuki confirmed that the FI version (the same engine as in the Gixxer SF), will arrive in six months time.
Story first published: Thursday, November 16, 2017, 11:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X