ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನೀವೇನಾದರೂ ಹೊಸ ಬೈಕ್ ಖರೀದಿಸಲು ಯೋಜನೆ ಹಾಕಿಕೊಂಡರೆ, ವಿನ್ಯಾಸ ಅಥವಾ ಕಾರ್ಯಕ್ಷಮತೆಯ ಜೊತೆಗೆ ವಾಹನದ ಬೆಲೆಯ ಕಡೆ ನಿಮ್ಮಗೂ ನೀವು ಗಮನಹರಿಸುತ್ತೀರಿ. ಈ ಎಲ್ಲಾ ಲಕ್ಷಣಗಳನ್ನು ಪಡೆದ ಟಾಪ್ 5 ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ.

By Girish

ಮಧ್ಯಮ ವರ್ಗದ ಸಾಕಷ್ಟು ಯುವಕರಿಗೆ ಬೈಕ್ ಖರೀದಿಸುವುದು ಹೆಚ್ಚು ಖುಷಿಯ ಮತ್ತು ಹೆಮ್ಮೆಯ ಸಂಗತಿಯಾಗಿದೆ. ಅದರಲ್ಲಿಯೂ ಸೂಕ್ತ ಸಮಯಕ್ಕೆ ಬಜೆಟ್ ಹೊಂದಾಣಿಕೆಯಾದರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ !! ಹಣ ಹೊಂದಾಣಿಕೆಯಾಯಿತು, ಹಾಗಾದ್ರೆ ಯಾವ ವಾಹನ ಖರೀದಿ ಮಾಡಲಿ ಎಂದು ಗೊಂದಲ ಇರುವವರು ಖಂಡಿತ ಇದನ್ನು ಓದಲೇ ಬೇಕು.

ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಹೌದು, ಭಾರತದಲ್ಲಿ ವರ್ಷಕ್ಕೆ ಹತ್ತಾರು ದ್ವಿಚಕ್ರ ವಾಹನಗಳು ಬಿಡುಗಡೆಗೊಳ್ಳುತ್ತವೆ. ಇವುಗಳಲ್ಲಿ ಸಾಕಷ್ಟು ವಾಹನಗಳು ಮಧ್ಯಮ ವರ್ಗಕ್ಕೆ ಸೂಕ್ತವೆನ್ನಿಸುತ್ತವೆ. ಒಂದು ಲಕ್ಷದ ಒಳಗೆ ಇರುವಂತಹ ಶ್ರೇಷ್ಠ 5 ದ್ವಿಚಕ್ರಗಳ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಯಮಹಾ ಎಫ್‌ಝೆಡ್-ಎಸ್ ಎಫ್‌ಐ :

2008ರಲ್ಲಿ ಬಿಡುಗಡೆಗೊಂಡ ಯಮಹಾ FZ16 ಬೈಕ್, ನಿಜವಾಗಿಯೂ ಮಾರುಕಟ್ಟೆಯ ಆಟವನ್ನು ಬದಲಾಯಿತು ಎನ್ನಬಹುದು. ಒಂದು ಕಾಲದಲ್ಲಿ ತನ್ನ 150 ಸಿಸಿ ವಿಭಾಗದಲ್ಲಿ ಪ್ರಾಬಲ್ಯವನ್ನು ಹೊಂದಿತ್ತು. ಹೆಚ್ಚು ಬಲಿಷ್ಠವಾಗಿರುವ ಈ ಮೋಟಾರ್ ಬೈಕ್, ಅತ್ಯುತ್ತಮ ನಿರ್ವಹಣೆ ಗುಣಲಕ್ಷಣ ಮತ್ತು ನವೀನ ರೀತಿಯ ವಿನ್ಯಾಸ ಶೈಲಿಯನ್ನು ಪಡೆದುಕೊಂಡಿದೆ.

ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

2014ರಲ್ಲಿ ವಿ2.0 FZ-S Fi ಆವೃತಿಯೂ ಕೂಡ ಯಶಸ್ವಿಯಾಯಿತು. 149 ಸಿಸಿ ಫ್ಯುಯೆಲ್-ಇಂಜೆಕ್ಟ್ ಎಂಜಿನ್ ಬೈಕ್, 13.2 ಬಿಎಚ್‌ಪಿ ಮತ್ತು 12.8 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾಡುಸುತ್ತದೆ.ಇದು 132 ಕೆ.ಜಿ ತೂಕವನ್ನು ಹೊಂದಿದೆ ಹಾಗು ರೂ.83,042(ದೆಹಲಿ) ಬೆಲೆ ಹೊಂದಿದೆ.

ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬಜಾಜ್ ಅವೆಂಜರ್ 220 :

2005ರಿಂದ ಅವೆಂಜರ್ ವಾಹನದೊಂದಿಗೆ ಬಜಾಜ್ ಸಂಸ್ಥೆಯು ಕ್ರೂಸರ್ ವಿಭಾಗದಲ್ಲಿ ಹೆಚ್ಚು ಹೆಸರುಗಳಿಸಿದೆ ಎನ್ನಬಹುದು. ಪ್ರಸ್ತುತ ಈ ಬೈಕ್, 150 ಸಿಸಿ ಮತ್ತು 220 ಸಿಸಿ ಆಯ್ಕೆಯಲ್ಲಿ ಲಭ್ಯವಿದೆ. ಎವೆಂಜರ್ 220 ಬೈಕ್, ಪಲ್ಸರ್ 220ಯಲ್ಲಿರುವ ಕಾರ್ಬ್ಯುರೇಟೆಡ್ 220 ಸಿಸಿ, ಸಿಂಗಲ್ ಸಿಲಿಂಡರ್, ಏರ್ ಮತ್ತು ಆಯಿಲ್ ಕೋಲ್ಡ್, ಡಿಟಿಎಸ್-ಐ ಮೋಟರ್ ಎಂಜಿನ್ ಬಳಸುತ್ತದೆ.

ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಪಲ್ಸರ್ ಬೈಕಿಗೆ ಹೋಲಿಸಿದರೆ, ಈ ಬೈಕಿನ ಪವರ್ ಮತ್ತು ಟಾರ್ಕ್ ಸ್ವಲ್ಪಮಟ್ಟಿನ ಇಳಿಮುಖವಾಗಿದೆ ಎನ್ನಬಹುದು. ಈ ಬೈಕ್ ಸ್ಟ್ರೀಟ್ ಮತ್ತು ಕ್ರೂಸ್ ಎಂಬ ಎರಡು ಟ್ರಿಮ್ ಆಯ್ಕೆಯಲ್ಲಿ ಮಾರಾಟಗೊಳುತ್ತಿದೆ. ಈ ಬೈಕ್, 19.03 ಬಿಎಚ್‌ಪಿ ಮತ್ತು 17.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು ರೂ.87,738(ದೆಹಲಿ) ಬೆಲೆ ಪಡೆದುಕೊಂಡಿದೆ.

ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬಜಾಜ್ ಪಲ್ಸರ್ 200 ಎನ್ಎಸ್ :

ಈ ಪಟ್ಟಿಯಲ್ಲಿ ಎರಡನೇ ಸ್ತನವನ್ನು ಈ ಬೈಕ್ ತನ್ನದಾಗಿಸಿಕೊಂಡಿದೆ. ಬಿಎಸ್-IV ಮಾದರಿಯಾಗಿ ಮಾರುಕಟ್ಟೆಗೆ ಮತ್ತೆ ಲಗ್ಗೆ ಇಟ್ಟಿರುವ ಹೊಸ ಪಲ್ಸರ್ 200 ಎನ್ಎಸ್ ಬೈಕ್, ಸದ್ಯ ಓಡುವ ಕುದುರೆ ಎನ್ನಬಹುದು. 199.5 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೋಲ್ಡ್ ಪಡೆದಿರುವ ಈ ಬೈಕ್, ಕೆಟಿಎಂನೊಂದಿಗೆ ಸ್ಪರ್ಧೆ ನೆಡೆಸಲಿದೆ.

ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಹೆಚ್ಚು ಸಮರ್ಥವಾದ ನಿರ್ವಹಣೆಯನ್ನು ಪಡೆದಿರುವ ಈ ಬೈಕ್, ನಗರ, ಹೆದ್ದಾರಿ ಅಥವಾ ಟ್ವಿಸ್ಟಿ ಪರ್ವತ ರಸ್ತೆಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತದೆ. ಹೊಸದಾಗಿ ಬಿಡುಗಡೆಯಾದ ಪಲ್ಸರ್ 200 ಎನ್ಎಸ್ ಎಬಿಎಸ್ ರೂಪಾಂತರವು ರೂ.1 ಲಕ್ಷ ತಡೆಯಾಜ್ಞೆಯನ್ನು ದಾಟಿದರೂ ಸಹ ಉತ್ತಮ ಬೈಕ್ ಎನ್ನಬಹುದು.

ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸುಜುಕಿ ಜಿಕ್ಸರ್ ಎಸ್‌ಎಫ್ :

ಭಾರತದಲ್ಲಿ ಅಗ್ಗದ ಕ್ರೀಡಾ ಬೈಕ್ ಗಳಲ್ಲಿ ಒಂದಾಗಿರುವ ಜಿಕ್ಸರ್ ಎಸ್ ಎಫ್ ಮಾದರಿಯು ಕಾರ್ಯಕ್ಷಮತೆ, ರೋಡ್ ಗ್ರಿಪ್ ಮತ್ತು ವಿನ್ಯಾಸದಿಂದ ಜನರ ಮೆಚ್ಚುಗೆ ಗಳಿಸಿಕೊಂಡಿದೆ.

ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈ ಬೈಕ್, ಏರೋಡೈನಾಮಿಕ್ ಸ್ಪೋರ್ಟ್ಸ್ ಫೇರಿಂಗ್, ಸ್ಟೈಲಿಷ್ ಎಲ್‌ಇಡಿ ಟೈಲ್ ಲ್ಯಾಂಪ್, 7 ವಿಧಗಳಲ್ಲಿ ಹೊಂದಾಣಿಸಬಹುದಾದ ರಿಯರ್ ಮೊನೊ ಶಾಕ್ ಸಸ್ಪೆನ್ಷನ್, ಸ್ಮಾರ್ಟ್ ಡಿಜಿಟಲ್ ಇನ್ಸ್ಟ್ರುಮೆಂಟ್, ಕ್ಲಿಯರ್ ಲೆನ್ಸ್ ಇಂಡಿಕೇಟರ್, ಅಲ್ಯೂಮಿನಿಯಂ ಮಫ್ಲರ್ ಕವರ್, ಎಸ್ ಇಪಿ 155 ಸಿಸಿ ಎಂಜಿನ್, ವಿಶೇಷ ಕೀಲಿ ವಿಶೇಷತೆ ಪಡೆಯಲಿದೆ.

ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸುಜುಕಿ ಜಿಕ್ಸರ್ ಎಸ್‌ಎಫ್ ವಾಹನವು, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಸಾಮರ್ಥ್ಯದ 155 ಸಿಸಿ ಎಂಜಿನ್ ಆಯ್ಕೆಯನ್ನು ಪಡೆದಿದೆ. ಈ ಬೈಕ್ 14.8 ಬಿಎಚ್‌ಪಿ ಮತ್ತು 14 ಎನ್‌ಎಂ ಟಾರ್ಕ್ ಹೊಂದಿದೆ. ಈ ಬೈಕ್ ರೂ.80,121 ಮತ್ತು ರೂ.95,115(ಎಬಿಎಸ್) ಬೆಲೆ ಒಳಗೊಂಡಿದೆ.

ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ :

ಸ್ಟ್ಯಾಂಡರ್ಡ್ ಪಿರೆಲಿ ಟೈರ್‌ ವ್ಯವಸ್ಥೆಯೊಂದಿಗೆ ಮಾರಾಟವಾಗುವ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್, ಹೊರ ವಿನ್ಯಾಸದಲ್ಲಿ ಸಖತ್ ಲುಕ್ ಪಡೆದುಕೊಂಡಿದೆ. ಈ ಬೈಕ್, ಬಿಎಸ್ IV ಎಂಜಿನ್ ಹಾಗೂ AHO (ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆಯನ್ನು ಕೂಡಾ ಹೊಂದಿದೆ.

ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

198 ಸಿಸಿ ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿರುವ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್, 20 ಬಿಎಚ್‌ಪಿ ಮತ್ತು 18ಎಂಎನ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ವಿನೂತನ ಆವೃತ್ತಿಯ ಬೆಲೆ ಮುಂಬೈ ಎಕ್ಸ್‌ಶೋರಂ ಪ್ರಕಾರ ರೂ. 97,800ಕ್ಕೆ ಲಭ್ಯವಿದೆ.

Most Read Articles

Kannada
Read more on top 5 ಟಾಪ್ 5
English summary
Best bikes in India under 1 Lakhs – Check out the list of best bikes in India.
Story first published: Wednesday, November 22, 2017, 16:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X