Just In
- 19 min ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- 12 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 13 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 15 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
Don't Miss!
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟ್ರಯಂಪ್ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಭಾರತದಲ್ಲಿ ಬಿಡುಗಡೆ
ಬ್ರಿಟಿಷ್ ಮೋಟಾರ್ ಸೈಕಲ್ ತಯಾರಕ ಟ್ರಯಂಪ್ ಭಾರತದಲ್ಲಿ ದಿ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಪ್ರಾರಂಭಿಸಿದೆ. ಹೊಸ ಪೀಳಿಗೆಯ ಸ್ಟ್ರೀಟ್ ಟ್ರಿಪಲ್ ಮೋಟಾರ್ ಸೈಕಲ್ 10.55 ಲಕ್ಷ ಎಕ್ಸ್ ಶೋರೂಂ(ದೆಹಲಿ) ದರದಲ್ಲಿ ಲಭ್ಯವಿದೆ.
ಬ್ರಿಟಿಷ್ ಮೋಟಾರ್ ಸೈಕಲ್ ತಯಾರಕ ಟ್ರಯಂಪ್ ಭಾರತದಲ್ಲಿ ದಿ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಪ್ರಾರಂಭಿಸಿದೆ. ಹೊಸ ಪೀಳಿಗೆಯ ಸ್ಟ್ರೀಟ್ ಟ್ರಿಪಲ್ ಮೋಟಾರ್ ಸೈಕಲ್ 10.55 ಲಕ್ಷ ಎಕ್ಸ್ ಶೋರೂಂ(ದೆಹಲಿ) ದರದಲ್ಲಿ ಲಭ್ಯವಿದೆ.
ಇತ್ತೀಚಿಗೆ ಟ್ರಯಂಪ್ ಮೋಟಾರ್ ಸೈಕಲ್ ಇಂಡಿಯಾ ಪ್ರವೇಶ ಹಂತದ ಸ್ಟ್ರೀಟ್ ಟ್ರಿಪಲ್ ಎಸ್ ಬೈಕನ್ನು ಭಾರತದಲ್ಲಿ ರೂ 8.50 ಲಕ್ಷ ಎಕ್ಸ್ ಶೋರೂಂ (ದೆಹಲಿ) ದರದಲ್ಲಿ ಬಿಡುಗಡೆ ಮಾಡಿದೆ. ಸ್ಟ್ರೀಟ್ ಟ್ರಿಪಲ್ ಆರ್ಎಸ್ ಪ್ರಸ್ತುತ 765 ಸಿಸಿ ಇನ್ಲೈನ್ 3 ಸಿಲಿಂಡರ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಂಡಿದ್ದು, 77 ಎನ್ಎಂ ಟಾರ್ಕ್ ಮತ್ತು 121 ಬಿಎಚ್ಪಿ ಶಕ್ತಿ ಉತ್ಪಾದನೆ ಮಾಡಲಿದೆ.
ಈ ಮೋಟಾರ್ ಸೈಕಲ್ ಹೊಸ ಕ್ರ್ಯಾಂಕ್, ಪಿಸ್ಟನ್ಗಳು ಮತ್ತು ನಿಕಸಿಲ್ ಲೇಪಿತ ಅಲ್ಯೂಮಿನಿಯಂ ಬ್ಯಾರೆಲ್ಸ್ ಮತ್ತು ಹೆಚ್ಚಿಸಲಾದ ಬೋರ್ ಮತ್ತು ಸ್ಟ್ರೋಕ್ ಸೇರಿದಂತೆ 80 ಹೊಸ ಬಿಡಿಭಾಗಗಳನ್ನು ಪಡೆಯುತ್ತದೆ.
ಸ್ಟ್ರೀಟ್ ಟ್ರಿಪಲ್ ಆರ್ಎಸ್ ಮೋಟಾರ್ ಸೈಕಲ್ ಮುಂಚೂಣಿಯಲ್ಲಿರುವ ಬ್ರೆಂಬೊ ಎಂ50 ಬ್ರೇಕ್ಸ್, ಷೋವ ಬಿಗ್ ಪಿಸ್ಟನ್ ಫೋರ್ಕ್ಸ್ ಫ್ರಂಟ್ ಮತ್ತು ಒಹ್ಲಿನ್ ಮನೊಶಾಕ್ ಸಸ್ಪೆನ್ಷನ್ ಮುಂತಾದವುಗಳನ್ನು ಬೈಕಿನ ಹಿಂಭಾಗದಲ್ಲಿ ಅಳವಡಿಸಲಾಗಿದೆ.
ಇದಲ್ಲದೆ, ಹೊಸ ಸ್ಟ್ರೀಟ್ ಟ್ರಿಪಲ್ ಆರ್ಎಸ್ 5-ಇಂಚಿನ ಪೂರ್ಣ-ಬಣ್ಣ ಟಿಎಫ್ಟಿ ಪರದೆಯನ್ನು ಪಡೆಯುತ್ತದೆ, ಇದು ಡಬಲ್ಸ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯುತ್ತದೆ ಹಾಗು ಪರದೆಯನ್ನು ಎರಡು ವಿಭಿನ್ನ ಆವೃತಿಗಳಲ್ಲಿ ನೋಡಬಹುದು ಮತ್ತು ಚಾಲಕನಿಗೆ ಸರಿಹೊಂದುವಂತೆ ಮಾಡಬಹುದು.
ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಸ್ವಿಚ್ ಮಾಡಬಹುದಾದ ಎಬಿಎಸ್(ಆಂಟಿ ಲಾಕ್ ಬ್ರೇಕ್ ಸಿಸ್ಟಮ್), ಟ್ರಾಕ್ಷನ್ ಕಂಟ್ರೋಲ್ ಮತ್ತು ರೈಡ್-ಬೈ-ವೈರ್ ಥ್ರೊಟಲ್ಗಳನ್ನು ಒಳಗೊಂಡಿದೆ. ರಸ್ತೆ, ಮಳೆ, ಕ್ರೀಡಾ, ಟ್ರ್ಯಾಕ್ ಮತ್ತು ಇಂಡಿವಿಜುಯಲ್ ಎಂಬ ಐದು ಸವಾರಿ ವಿಧಾನಗಳನ್ನು ಸಹ ಪಡೆಯುತ್ತದೆ.
ಹೊಸದಾಗಿ ಬಿಡುಗಡೆಯಾದ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಮ್ಯಾಟ್ ಬೆಳ್ಳಿ ಐಸ್ ಮತ್ತು ಫ್ಯಾಂಟಮ್ ಕಪ್ಪು ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ.