ಇದು ಆರ್‌ಇ ಬುಲೆಟ್‌ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್...

ಮಾಡಿಫೈ ತಂತ್ರಜ್ಞಾನಕ್ಕೂ ಹೆಚ್ಚಿನ ಬೇಡಿಕೆ ಉಂಟಾಗಿದ್ದು, ವಿಭಿನ್ನ ಮಾದರಿಯ ಮಾಡಿಫೈ ವಾಹನಗಳು ಮೂಲ ವಾಹನಗಳಿಗಿಂತಲೂ ಹೆಚ್ಚಿನ ಮಟ್ಟದ ಸದ್ದುಮಾಡುತ್ತಿವೆ.

By Praveen Sannamani

ದೇಶಿಯವಾಗಿ ಆಟೋ ಮೊಬೈಲ್ ಉದ್ಯಮದಲ್ಲಿ ಹೊಸ ಹೊಸ ಅವಕಾಶ ತೆರೆದುಕೊಳ್ಳುತ್ತಿದ್ದು, ದಿನಂಪ್ರತಿ ಹೊಸ ಮಾದರಿಯ ವಾಹನ ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಅದೇ ಪ್ರಮಾಣದಲ್ಲಿ ಮಾಡಿಫೈ ತಂತ್ರಜ್ಞಾನಕ್ಕೂ ಹೆಚ್ಚಿನ ಬೇಡಿಕೆ ಉಂಟಾಗಿದ್ದು, ವಿಭಿನ್ನ ಮಾದರಿಯ ಮಾಡಿಫೈ ವಾಹನಗಳು ಮೂಲ ವಾಹನಗಳಿಗಿಂತಲೂ ಹೆಚ್ಚಿನ ಮಟ್ಟದ ಸದ್ದುಮಾಡುತ್ತಿವೆ.

ಇದು ಆರ್‌ಇ ಬುಲೆಟ್‌ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್...

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಹೊಸ ಬೈಕ್ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದ್ದು, ಪ್ರತಿ ವರ್ಷ ನಿಗದಿ ಮಟ್ಟಕ್ಕಿಂತಲೂ ಹೆಚ್ಚಿನ ಬೈಕ್‌ಗಳು ಮಾರಾಟವಾಗುತ್ತಿರುವ ಅವುಗಳ ಜನಪ್ರಿಯತೆಗೆ ಹಿಡಿದ ಕೈಗನ್ನಡಿ. ಜೊತೆಗೆ ಹೊಸ ಆರ್‌ಇ ಬೈಕ್‌ಗಳಿಗೆ ಇರುವಷ್ಟೇ ಬೇಡಿಕೆ ಹಳೆಯ ಮಾದರಿಗಳಿಗೂ ಇದ್ದು, ಮಾಡಿಫೈ ಕ್ಷೇತ್ರದಲ್ಲಿ ತನ್ನದೇ ಆದ ಬೇಡಿಕೆ ಸೃಷ್ಠಿಸಿದೆ.

ಇದು ಆರ್‌ಇ ಬುಲೆಟ್‌ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್...

ದೇಶದಲ್ಲಿ ಮಾಡಿಫೈಗೊಳ್ಳುವ ಬಹುತೇಕ ಬೈಕ್ ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳೇ ಬಳಕೆಯಾಗುತ್ತಿದ್ದು, ಇನ್ನೊಂದು ಮಾಡಿಫೈ ಸಂಸ್ಥೆಯು ಅಗ್ಗದ ಬೆಲೆಯ ಸಿಟಿ 100 ಬೈಕ್ ಅನ್ನೇ ಬಳಕೆ ಮಾಡಿ ಬುಲೆಟ್ ಮಾಡಿಫೈ ಬೈಕ್ ಸಿದ್ದಗೊಳಿಸಿದೆ.

ಇದು ಆರ್‌ಇ ಬುಲೆಟ್‌ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್...

ಭುವನೇಶ್ವರ ಮೂಲದ "ರಾಯಲ್ ಉಡೊ" ಎನ್ನುವ ಸಂಸ್ಥೆಯೊಂದು ಬುಲೆಟ್ ಹೋಲಿಕೆಯನ್ನೇ ಪಡೆದ ರಾಯಲ್ ಇಂಡಿಯನ್ ಬೊಲ್ಟ್ 100 ಎನ್ನುವ ಹೆಸರಿನೊಂದಿಗೆ ಸಿದ್ದಗೊಳಿಸಿದ್ದು, ಮೂಲ ಬುಲೆಟ್ ಮಾದರಿಯಲ್ಲೆ ಬಹುತೇಕ ವಿನ್ಯಾಸ ಪಡೆದಿದೆ.

ಇದು ಆರ್‌ಇ ಬುಲೆಟ್‌ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್...

ಬೈಕಿನ ಹೆಸರನ್ನು ಹೊರತು ಪಡಿಸಿದ್ರೆ ಮೂಲ ಬುಲೆಟ್‌ನಂತೆ ಕಾಣುವ ರಾಯಲ್ ಇಂಡಿಯನ್ ಬೊಲ್ಟ್ 100 ಬೈಕ್ ಅತಿ ಕಡಿಮೆ ಬೆಲೆಯಲ್ಲಿ ಮಾಡಿಫೈಗೊಂಡಿದ್ದು, ರಾಯಲ್ ಉಡೊ ಹೇಳಿಕೆ ಪ್ರಕಾರ ಈ ಬೈಕ್ ಬರೋಬ್ಬರಿ 85 ಕಿ.ಮೀ ಮೈಲೇಜ್ ನೀಡಲಿದೆಯೆಂತೆ.

ಇದು ಆರ್‌ಇ ಬುಲೆಟ್‌ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್...

ಇನ್ನು ರಾಯಲ್ ಇಂಡಿಯನ್ ಬೊಲ್ಟ್ 100 ಬೈಕಿನಲ್ಲಿ ವೃತ್ತಾಕಾರದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಬಳಕೆ ಮಾಡಲಾಗಿದ್ದು, ರೌಂಡ್ ಹೆಡ್‌ಲ್ಯಾಂಪ್, ಬುಲೆಟ್ ಮಾದರಿಯಲ್ಲಿ ಮಾಡಿಫೈ ಎಕ್ಸಾಸ್ಟ್, ಅಗಲವಾದ ಸೀಟುಗಳು, ಸ್ಪೋಕ್ ಚಕ್ರಗಳನ್ನು ಅಳವಡಿಸಿರುವುದು ವಿಶೇಷವಾಗಿದೆ.

MOST READ: ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕಥೆ ಏನು.?

ಇದು ಆರ್‌ಇ ಬುಲೆಟ್‌ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್...

ಎಂಜಿನ್ ಸಾಮರ್ಥ್ಯ

ರಾಯಲ್ ಉಡೊ ಸಂಸ್ಥೆ ನಿರ್ಮಿಸಿರುವ ರಾಯಲ್ ಇಂಡಿಯನ್ ಬೊಲ್ಟ್ 100 ಬೈಕ್‌ಗಳು 99ಸಿ ಎಂಜಿನ್ ಹೊಂದಿದ್ದು, ಹಾರ್ಸ್ ಪವರ್ ಮತ್ತು ಟಾರ್ಕ್ ಉತ್ಪಾದನೆ ಬಗ್ಗೆ ಮಾಹಿತಿ ನೀಡಿಲ್ಲ. ಆದ್ರೆ ಬುಲೆಟ್ ಖರೀದಿ ಮಾಡಲು ಸಾಧ್ಯವಾಗದ ಬುಲೆಟ್ ಪ್ರಿಯರು ಬೊಲ್ಟ್ 100 ಖರೀದಿ ಮಾಡಬಹುದಾಗಿದೆ.

ಇದು ಆರ್‌ಇ ಬುಲೆಟ್‌ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್...

ಇನ್ನು ಬೈಕ್ ಹ್ಯಾಂಡಲ್ ವಿನ್ಯಾಸ ಮತ್ತು ಫ್ರಂಟ್ ಸಸ್ಷೆಷನ್ ಕೂಡಾ ಕುತೂಹಲಕಾರಿಯಾಗಿದ್ದು, ಸುರಕ್ಷೆತೆಗಾಗಿ ಎರಡು ಬದಿಯಲ್ಲೂ ಡ್ರಮ್ ಬ್ರೇಕ್ ಬಳಕೆ ಮಾಡಲಾಗಿದೆ. ಆದ್ರೆ ಗ್ರಾಹಕರು ಹೆಚ್ಚುವರಿ ಹಣ ಪಾವತಿಸಿದ್ದಲ್ಲಿ ಡಿಸ್ಕ್ ಬ್ರೇಕ್ ಮಾದರಿಯನ್ನು ಸಿದ್ದ ಮಾಡಿಕೊಡಲಾಗುತ್ತದೆ.

ಇದು ಆರ್‌ಇ ಬುಲೆಟ್‌ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್...

ಬೊಲ್ಟ್ 100 ಬೈಕಿನ ಬೆಲೆ

ರಾಯಲ್ ಉಡೊ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ಈ ಬೈಕಿನ ಬೆಲೆಯು ವಿವಿಧ ನಗರಗಳಿಗೆ ಅನುಗುಣವಾಗಿ ರೂ.60 ಸಾವಿರದಿಂದ ರೂ.70 ಸಾವಿರದವರೆಗೆ ಬೆಲೆ ಇರಲಿದ್ದು, ಬೇಡಿಕೆ ಅನುಗುಣವಾಗಿ ಮಾಡಿಫೈ ಬೈಕ್‌ಗಳನ್ನು ಸಿದ್ದಗೊಳಿಸಲಿದೆ.

ಇದು ಆರ್‌ಇ ಬುಲೆಟ್‌ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್...

ಸದ್ಯ ರಾಯಲ್ ಇಂಡಿಯನ್ ಬೈಕಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವರು ಮಾಡಿಫೈಗೊಂಡ ಬೊಲ್ಟ್ 100 ಬೈಕಿನ ಬಗ್ಗೆ ಕುತೂಹಲ ವ್ಯಕ್ತಪಡಿಸಿರುವುದಲ್ಲದೇ ಖರೀದಿಗೂ ಆಸಕ್ತಿ ತೊರಿದ್ದಾರೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಇನ್ನು ಕೆಲವರು ಮಾಡಿಫೈ ಬೈಕ್ ಮೂಲಕ ಮೂಲ ಬುಲೆಟ್‌ಗೆ ಅಪಮಾನ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದು, ಒಟ್ಟಿನಲ್ಲಿ ಮಾಡಿಫೈ ರಾಯಲ್ ಇಂಡಿಯನ್ ಬೊಲ್ಟ್ 100 ಬೈಕ್ ಮಾತ್ರ ಮೂಲ ಬೈಕಿಗೆ ಸೆಡ್ಡುಹೊಡೆಯುವಂತೆ ಸಿದ್ದಗೊಂಡಿರುವುದು ಮಾತ್ರ ಆಟೋ ಉದ್ಯಮದಲ್ಲಿ ಸಂಚಲನಕ್ಕೆ ಕಾರಣವಾಗಿದ್ದು ಮಾತ್ರ ಸುಳ್ಳಲ್ಲ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮೊದಲ ಬಾರಿಗೆ ಕ್ಲಾಸಿಕ್ 350 ಸಿಗ್ನಲ್ಸ್ ಬೈಕ್ ಮೂಲಕ ಎಬಿಎಸ್ ತಂತ್ರಜ್ಞಾನ ಪರಿಚಯಿಸಿದ್ದು, ಕ್ಲಾಸಿಕ್ ಬೈಕ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ತವಕದಲ್ಲಿದೆ.

Most Read Articles

Kannada
Read more on bike modifications
English summary
Meet The Royal Indian ‘100cc Bullet’ Motorcycle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X