ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ 1260 ಮತ್ತು 1260ಎಸ್ ಬೈಕ್‍‍ಗಳು..

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಬಹುನಿರೀಕ್ಷಿತ 2018ರ ಮಲ್ಟಿಸ್ಟ್ರಾಡಾ 1260 ಮತ್ತು ಮಲ್ಟಿಸ್ಟ್ರಾಡ 1260ಎಸ್ ಅಡ್ವೆಂಚರ್ ಬೈಕ್‍‍ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

By Rahul Ts

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಬಹುನಿರೀಕ್ಷಿತ 2018ರ ಮಲ್ಟಿಸ್ಟ್ರಾಡಾ 1260 ಮತ್ತು ಮಲ್ಟಿಸ್ಟ್ರಾಡಾ 1260ಎಸ್ ಅಡ್ವೆಂಚರ್ ಬೈಕ್‍‍ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಮಲ್ಟಿಸ್ಟ್ರಾಡಾ 1260 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 15.99 ಲಕ್ಷ ಮತ್ತು 1260ಎಸ್ ಬೈಕ್ ರೂ. 18.06 ಲಕ್ಷಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಡುಕಾಟಿ ಮಲ್ಟಿಸ್ಟ್ರಾಡ 1260 ಮತ್ತು 1260ಎಸ್ ಬೈಕ್‍‍ಗಳು..

2018ರ ಮಲ್ಟಿಸ್ಟ್ರಾಡಾ 1260 ಸ್ಟ್ಯಾಂಡರ್ಡ್ ಬೈಕ್ ಗ್ರೇ ಫ್ರೇಮ್ ನೊಂದಿಗೆ ಡುಕಾಟಿ ರೆಡ್ ಮತ್ತು ಬ್ಲಾಕ್ ವ್ಹೀಲ್‍‍ಗಳನ್ನು ಪಡೆದಿದ್ದು, ಇನ್ನು 1206ಎಸ್ ವೇರಿಯಂಟ್ ಬೈಕ್ ಗ್ರೇ ಫ್ರೇಮ್ ಮತ್ತು ಗೋಲ್ಡ್ ವ್ಹೀಲ್ಸ್ ನೊಂದಿಗೆ ಐಸ್‍‍ಬರ್ಗ್ ವೈಟ್ ಮತ್ತು ವಾಲ್ಕೆನೊ ಗ್ರೇ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಡುಕಾಟಿ ಮಲ್ಟಿಸ್ಟ್ರಾಡ 1260 ಮತ್ತು 1260ಎಸ್ ಬೈಕ್‍‍ಗಳು..

ಬಿಡುಗಡೆಗೊಂಡ ಈ ಬೈಕ್‍‍ಗಳಲ್ಲಿ ಡುಕಾಟಿ ಸಂಸ್ಥೆಯ 1,262ಸಿಸಿ ಟೆಸ್ಟಸ್ಟ್ರೆಟ ಡಿವಿಟಿ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಇವು 158ಬಿಹೆಚ್‍‍ಪಿ ಮತ್ತು 129.5 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಅಂದರೆ ಪ್ರಸ್ಥುತ ಲಭ್ಯವಿರುವ ಡುಕಾಟಿ ಮಲ್ಟಿಸ್ಟ್ರಾಡ 1200 ಸರಣಿಯ ಬೈಕ್‍‍ಗಳಿಗಿಂತ 8 ಬಿಹೆಚ್‍ಪಿ ಮತ್ತು 1.5 ಎನ್ಎಮ್ ಟಾರ್ಕ್ ಅನ್ನು ಹೆಚ್ಚಗಿ ಉತ್ಪಾದಿಸಬಲ್ಲದು.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಡುಕಾಟಿ ಮಲ್ಟಿಸ್ಟ್ರಾಡ 1260 ಮತ್ತು 1260ಎಸ್ ಬೈಕ್‍‍ಗಳು..

ಡುಕಾಟಿ ಮಲ್ಟಿಸ್ಟ್ರಾಡಾ 1260 ಬೈಕ್ ಸ್ಟ್ಯಾಂಡರ್ಡ್ ಮಾಡಲ್ ಬೈಕ್‍‍ನಲ್ಲಿ ಎಲ್‍ಸಿಡಿ ಇನ್ಸ್ಟ್ರೂಮೆಂಟ್ ಪ್ಯಾನಲ್ ಮತ್ತು 1260ಎಸ್ ವೇರಿಯಂಟ್ ಬೈಕ್‍‍ಗಳಲ್ಲಿ 5 ಇಂಚಿನ ಟಿಎಫ್‍‍ಟಿ ಇನ್ಸ್ಟ್ರೂಮೆಂಟ್ ಪ್ಯಾನಲ್ ಅನ್ನು ಅಳವಡಿಸಲಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಡುಕಾಟಿ ಮಲ್ಟಿಸ್ಟ್ರಾಡ 1260 ಮತ್ತು 1260ಎಸ್ ಬೈಕ್‍‍ಗಳು..

ಡುಕಾಟಿ ಮಲ್ಟಿಸ್ಟ್ರಾಡಾ ಬೈಕ್‍‍ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡುಕಾಟಿ ಟ್ರ್ಯಾಕ್ಷನ್ ಕಂಟ್ರೋಲ್, ಕಾರ್ನೆರಿಂಗ್ ಎಬಿಎಸ್, ಡುಕಾಟಿ ವ್ಹೀಲಿ ಕಂಟ್ರೋಲ್, ಡುಕಾಟಿ ಕ್ರೂಸ್ ಕಂಟ್ರೋಲ್, ವೆಹಿಕಲ್ ಹೋಲ್ಡ್ ಕಂಟ್ರೋಲ್ ಹಾಗು ಇನ್ನಿತರೆ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಡುಕಾಟಿ ಮಲ್ಟಿಸ್ಟ್ರಾಡ 1260 ಮತ್ತು 1260ಎಸ್ ಬೈಕ್‍‍ಗಳು..

ಇದಲ್ಲದೆ ಈ ಮಲ್ಟಿಸ್ಟ್ರಾಡಾ 1260 ಎಸ್ ಬೈಕ್‍‍ನಲ್ಲಿ ಕ್ವಿಕ್‍ಶಿಫ್ಟರ್, ಸ್ಪೋರ್ಟಿಯರ್ ಸಸ್ಪೆಂಷನ್, ವಿದ್ಯುತ್‍‍ನಿಂದ ನಿಯಂತ್ರಿಸಬಹುದಾದ ಸ್ಕೈ‍ಹೂಕ್ ಸಸ್ಪೆಂಷನ್ ಸಿಸ್ಟಮ್, ಡುಕಾಟಿ ಮಲ್ಟಿಮೀಡಿಯ ಸಿಸ್ಟಮ್, ಕಾರ್ನೆರಿಂಗ್ ಲೈಟ್ಸ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಡುಕಾಟಿ ಮಲ್ಟಿಸ್ಟ್ರಾಡ 1260 ಮತ್ತು 1260ಎಸ್ ಬೈಕ್‍‍ಗಳು..

ಡುಕಾಟಿ ಮಲ್ಟಿಸ್ಟ್ರಾಡಾ 1260 ಬೈಕ್‍‍ಗಳಲ್ಲಿನ ಡುಕಾಟಿ ಮಲ್ಟಿಮೀಡಿಯಾ ಸಹಾಯದಿಂದ ಸ್ಮಾರ್ಟ್‍‍ಫೋನ್ ಅನ್ನು ಡಿಸ್ಪ್ಲೇ‍‍ಯೊಂದಿಗೆ ಕನೆಕ್ಟ್ ಮಾಡಬಹುದಾಗಿದ್ದು, ಕರೆಗಳು, ಸಂದೇಶಗಳು ಮತ್ತು ಮ್ಯೂಸಿಕ್ ಅನ್ನು ಟಿಎಫ್‍ಆರ್ ಡ್ಯಾಶ್‍‍ಬೋರ್ಡ್‍‍ನ ಸಹಾಯದಿಂದ ನಿಯಂತ್ರಿಸಬಹುದಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಡುಕಾಟಿ ಮಲ್ಟಿಸ್ಟ್ರಾಡ 1260 ಮತ್ತು 1260ಎಸ್ ಬೈಕ್‍‍ಗಳು..

ಇದಲ್ಲದೆ ಈ ಬೈಕ್‍‍ಗಳು 4 ರೈಡಿಂಗ್ ಮೋಡ್‍‍ಗಳನ್ನು ಹೊಂದಿದ್ದು, ಸ್ಪೋರ್ಟ್ ಮೋಡ್ ಕೆಂಪು ಬಣ್ಣದಲ್ಲಿ, ಟೂರಿಂಗ್ ಮೋಡ್ ಬೆಳಗಿನ ರಾತ್ರಿಯ ಸಮಯದಲ್ಲಿ ವೈಟ್ ಮತ್ತು ಮುಂಜಾವಿನ ಸಮಯದಲ್ಲಿ ಕಪ್ಪು ಬಣ್ಣ, ಅರ್ಬನ್ ಮೋಡ್ ಅನ್ನು ಗ್ರೇ ಮತ್ತು ಎನ್‍‍ಡ್ಯೂರೊ ಮೋಡ್ ಬ್ರೌನ್ ಬಣ್ಣದಲ್ಲಿ ತೋರಿಸುತ್ತದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಡುಕಾಟಿ ಮಲ್ಟಿಸ್ಟ್ರಾಡ 1260 ಮತ್ತು 1260ಎಸ್ ಬೈಕ್‍‍ಗಳು..

ಮಲ್ಟಿಸ್ಟ್ರಾಡ 1260 ಎಲ್ಲಾ ವೇರಿಯಂಟ್ ಬೈಕ್‍‍ಗಳಲ್ಲಿ ಲೈಟ್ ಅಲಾಯ್ ವೈ ಸ್ಪೋಕ್ ವ್ಹೀಲ್ಸ್, ಪಿರೆಲ್ಲಿ ಸ್ಕಾರ್ಪಿಯಾನ್ ಟ್ರೈನ್ 2 ಟೈರ್ಸ್, ಹೊಸ ನಂಬರ್ ಪ್ಲೇಟ್ ವಿನ್ಯಾಸ ಮತ್ತು ಎಲ್ಇಡಿ ರಿಯರ್ ಟರ್ನ್ ಸಿಗ್ನಲ್‍‍ಗಳನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಡುಕಾಟಿ ಮಲ್ಟಿಸ್ಟ್ರಾಡ 1260 ಮತ್ತು 1260ಎಸ್ ಬೈಕ್‍‍ಗಳು..

ಬಿಡುಗಡೆಗೊಂಡ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ 1260 ಮತ್ತು 1260ಎಸ್ ಅಡ್ವೆಂಚರ್ ಬೈಕ್‍‍ಗಳು ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಟ್ರಯಂಫ್ ಟೈಗರ್ 1200 ಮತ್ತು ಬಿಎಮ್‍‍‍ಡಬ್ಲ್ಯೂ ಆರ್ 1200 ಎಸ್ ಬೈಕ್‍‍ಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿವೆ.

Most Read Articles

Kannada
Read more on ducati new launches
English summary
2018 Ducati Multistrada 1260 launched in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X