ಅಗ್ಗದ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಏವಿಯೇಟರ್..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ ಮುಂದಿನ ತಲೆಮಾರಿನ ಏವಿಯೇಟರ್ ಸ್ಕೂಟರ್‍ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 55,157 ಸಾವಿರಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ.

By Rahul Ts

ಬಿಡುಗಡೆಗೊಂಡ ಹೊಸ 2018ರ ಏವಿಯೇಟರ್ ಸ್ಕೂಟರ್ ಈ ಬಾರಿ ವೈಶಿಷ್ಟ್ಯತೆಯಲ್ಲಿ ಮತ್ತು ವಿನ್ಯಾಸದಲ್ಲಿ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಕಿರೀಟದ ಹಾಗೆ ಕಾಣುವ ಹೊಸ ಎಲ್ಇಡಿ ಹೆಡ್‍‍ಲ್ಯಾಂಪ್ಸ್, ಮುಂಭಾಗದಲ್ಲಿ ಕ್ಲಾಸಿ ಕ್ರೋಮ್ ಅನ್ನು ಅಳವಡಿಸಿರುವ ಕಾರಣ ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದೆ.

ಅಗ್ಗದ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಏವಿಯೇಟರ್..

ಇದಲ್ಲದೆ ಹೊಸ ಏವಿಯೆಟರ್ ಸ್ಕೂಟರ್ ಸ್ಟೈಲಿಷ್ ಇನ್ಸ್ಟ್ರೂಮೆಂಟ್ ಪ್ಯಾನಲ್, 4 ಇನ್ 1 ಲಾಕ್‍‍ನೊಂದಿಗೆ ಸೀಟ್ ಓಪೆನಿಂಗ್ ಸ್ವಿಚ್, ಫ್ರಂಟ್ ಹೂಕ್ ಮತ್ತು ರೆಟ್ರಾಕ್ಟಬಲ್ ರಿಯರ್ ಹೂಕ್, ಮೆಟಲ್ ಮಫ್ಲರ್ ಹಾಗು ಇನ್ನಿತರೆ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಅಗ್ಗದ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಏವಿಯೇಟರ್..

ಏವಿಯೇಟರ್ ಸ್ಕೂಟರ್ 1802ಎಮ್ಎಮ್ ಉದ್ದ, 703ಎಮ್ಎಮ್ ಅಗಲ, 1162ಎಮ್ಎಮ್ ಎತ್ತರ, 1256ಎಮ್ಎಮ್ ವ್ಹೀಲ್ ಬೇಸ್, 145ಎಮ್ಎಮ್ ಗೌಂಡ್ ಕ್ಲಿಯರೆನ್ಸ್, 790ಎಮ್ಎಮ್ ಸೀಟ್ ಹೈಟ್, 106 ಕಿಲೋಗ್ರಾಮ್ ತೂಕವನ್ನು ಹೊಂದಿದ್ದು, ಜೊತೆಗೆ 6 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಪಡೆದಿದೆ.

ಅಗ್ಗದ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಏವಿಯೇಟರ್..

ಎಂಜಿನ್ ಸಾಮರ್ಥ್ಯ

2018ರ ಹೊಸ ತಲೆಮಾರಿನ ಏವಿಯೇಟರ್ ಸ್ಕೂಟರ್ 109.9ಸಿಸಿ, ಏರ್ ಕೂಲ್ದ್, 4 ಸ್ಟ್ರೋಕ್, ಎಸ್‍ಐ, ಬಿಎಸ್ 4 ಎಂಜಿನ್ ಸಹಾಯದಿಂದ 8ಬಿಹೆಚ್‍‍ಪಿ ಮತ್ತು 8.94ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು ವಿ-ಮ್ಯಾತಿಕ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಅಗ್ಗದ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಏವಿಯೇಟರ್..

ಏವಿಯೇಟರ್ ಸ್ಕೂಟರ್‍ ಗಂಟೆಗೆ 82 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಮುಂಭಾಗದಲ್ಲಿ 130ಎಮ್ಎಮ್ ಅಥವಾ 190ಎಮ್ಎಮ್ ಡಿಸ್ಕ್ ಬ್ರೇಕ್ ಆಯ್ಕೆಗಳಲ್ಲಿ ಲಭ್ಯವಿದ್ದು, ಹಿಂಭಾಗದಲ್ಲಿ 130ಎಮ್ಎಮ್ ಡ್ರಮ್ (ಸಿಬಿಎಸ್) ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಅಗ್ಗದ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಏವಿಯೇಟರ್..

ಇನ್ನು ಸಸ್ಪೆಂಷನ್ ವಿಚಾರದ ಬಗ್ಗೆ ಹೇಳುವುದಾದ ಏವಿಯೇಟರ್ ಸ್ಕೂಟರ್‍‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಹಯ್ಡ್ರಾಲಿಕ್ ಸಸ್ಪೆಂಷನ್ ಅನ್ನು ಅಳವಡಿಸಲಾಗಿದೆ.

ಅಗ್ಗದ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಏವಿಯೇಟರ್..

2018ರ ಹೊಸ ಏವಿಯೇಟರ್ ಸ್ಕೂಟರ್ ಪರ್ಲ್ ಇಗ್ನ್ಯೋಸ್ ಬ್ಲಾಕ್, ಮೇಟ್ ಸಿಲ್ವರ್ ಮೆಟಾಲಿಕ್, ಪರ್ಲ್ ಸ್ಪಾರ್ಟನ್ ರೆಡ್ ಮತ್ತು ಪರ್ಲ್ ಅಮೇಝಿಂಗ್ ವೈಟ್ ಎಂಬ ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಈ ಬಾರಿ ಹೊಸದಾಗಿ ರಾಯಲ್ ಸೀಟ್ ಮತ್ತು ಇನ್ನರ್ ಕವರ್ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
2018 New Honda aviator launched in India.
Story first published: Friday, July 27, 2018, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X