ಶೀಘ್ರವೇ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಅಡ್ವೆಂಚರ್ ಬೈಕ್‍‍ಗಳಿವು..

ಅಡ್ವೆಂಚರ್ ಬೈಕ್‍‍ಗಳು ಈಗಾಗಲೆ ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದಿದ್ದು, ಆದರೆ ಭಾರತದಲ್ಲಿ ಅಧಿಕ ಮೈಲೇಜ್ ಮತ್ತು ರೇಸಿಂಗ್ ಅನುಭವವನ್ನು ನೀಡುವ ಬೈಕ್‍‍ಗಳಿಗೆ ಬೇಡಿಕೆ ಹೆಚ್ಚು.

By Rahul Ts

ಅಡ್ವೆಂಚರ್ ಬೈಕ್‍‍ಗಳು ಈಗಾಗಲೆ ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದಿದ್ದು, ಆದರೆ ಭಾರತದಲ್ಲಿ ಅಧಿಕ ಮೈಲೇಜ್ ಮತ್ತು ರೇಸಿಂಗ್ ಅನುಭವವನ್ನು ನೀಡುವ ಬೈಕ್‍‍ಗಳಿಗೆ ಬೇಡಿಕೆ ಹೆಚ್ಚು. ಇದೀಗ ಅಡ್ವೆಂಚರ್ ಮೋಟಾರ್‍‍ಸೈಕಲ್‍‍ಗಳಿಗೂ ಕೂಡಾ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚುತ್ತಿದೆ.

ಶೀಗ್ರವೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಅಡ್ವೆಂಚರ್ ಬೈಕ್‍‍ಗಳಿವು..

ಈ ನಿಟ್ಟಿನಲ್ಲಿ ಈಗಾಗಲೆ ಮಾರುಕಟ್ಟೆಯಲ್ಲಿನ ವಿವಿಧ ದ್ವಿಚಕ್ರ ತಯಾರಕ ಸಂಸ್ಥೆಗಳು ತಮ್ಮ ಅಡ್ವೆಂಚರ್ ಬೈಕ್‍‍ಗಳನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದ್ದು, ಬಡ್ಜೆಟ್ ಬೆಲೆಯಲ್ಲಿ ಶೀಘ್ರವೆ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಅಡ್ವೆಂಚರ್ ಬೈಕ್‍‍ಗಳ ಬಗ್ಗೆ ಪೂರ್ತಿ ವಿವರ ಇಂದಿನ ಲೇಖನದಲ್ಲಿ.

ಶೀಗ್ರವೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಅಡ್ವೆಂಚರ್ ಬೈಕ್‍‍ಗಳಿವು..

5. ಕೆಟಿಎಮ್ ಅಡ್ವೆಂಚರ್ 390

ಕೆಟಿಎಮ್ ದೇಶಿಯ ಮಾರುಕಟ್ಟೆಯಲ್ಲಿ ಆರ್‍‍ಸಿ390 ಸ್ಪೋರ್ಟ್ ಮತ್ತು ಡ್ಯೂಕ್ 390 ನೇಕೆಡ್ ಮೋಟಾರ್ ಸೈಕಲ್‍‍ಗಳನ್ನು ಮಾರಾಟಮಾಡುತ್ತಿದ್ದು, ಇದರ ಜೊತೆಗೆ ಅದೇ ಎಂಜಿನ್‍‍ನೊಂದಿಗೆ ಅಡ್ವೆಂಚರ್ ವರ್ಷನ್ ಬೈಕ್ ಅನ್ನು ಪರಿಚಯಿಸಲಿದೆ. ಎಷ್ಟೊ ಪ್ರಯೋಗಗಳು ಮತ್ತು ಪರಿಕ್ಷೆಗಳ ನಂತರ ಪ್ರೊಡಕ್ಷನ್ ವರ್ಷನ್ ಕೆಟಿಎಮ್ ಅಡ್ವೆಂಚರ್ 390 ಬೈಕ್ ಸಿದ್ಧಗೊಂಡಿದೆ.

ಶೀಗ್ರವೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಅಡ್ವೆಂಚರ್ ಬೈಕ್‍‍ಗಳಿವು..

ವಿನ್ಯಾಸದ ಪರವಾಗಿ ಡ್ಯೂಕ್ 390 ಬೈಕ್ ಅನ್ನು ಆಧರಿಸಿ ಅಡ್ವೆಂಚರ್ ಬೈಕ್ ಅನ್ನು ಡಿಸೈನ್ ಮಾಡಲಾಗಿದೆ. ತಾಂತ್ರಿಕವಾಗಿ ಈ ಬೈಕ್ 373ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 44ಬಿಹೆಚ್‍‍ಪಿ ಮತ್ತು 37ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಬಿಡುಗಡೆಯ ಅವಧಿ - 2019 (ಅಂದಾಜು)

ಶೀಗ್ರವೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಅಡ್ವೆಂಚರ್ ಬೈಕ್‍‍ಗಳಿವು..

4. ಬಿಎಮ್‍ಡಬ್ಲ್ಯೂ ಜಿ310 ಜಿಎಸ್

ಬಿಎಮ್‍ಡಬ್ಲ್ಯೂ ಮೊಟೊರ್ರಾಡ್ ಸಂಸ್ಥೆಯು ದೇಶಿಯ ಮಾರುಕಟ್ಟೆಗಾಗಿ 313ಸಿಸಿ ಎಂಜಿನ್ ಹೊಂದಿರುವ ಎರಡು ಮೋಟಾರ್‍‍ಸೈಕಲ್‍‍ಗಳನ್ನು ಪರಿಚಯಿಸಲಿದ್ದು, ಅವುಗಳು ಜಿ310 ಜಿಎಸ್ ಮತ್ತು ಜಿ310ಆರ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳ್ಳಲಿದೆ. ಈ ಬೈಕ್‍‍‍ಗಳ ಉತ್ಪಾದನೆಯನ್ನು ಈಗಾಗಲೆ ಚೆನ್ನೈ‍ನಲ್ಲಿನ ಟಿವಿಎಸ್ ಪ್ಲಾಂಟ್‍‍ನಲ್ಲಿ ಪ್ರಾರಂಭಿಸಲಾಗಿದೆ.

ಶೀಗ್ರವೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಅಡ್ವೆಂಚರ್ ಬೈಕ್‍‍ಗಳಿವು..

ಬಿಎಮ್‍‍ಡಬ್ಲ್ಯೂ ಮತ್ತು ಟಿವಿಎಸ್ ಭಾಗಸ್ವಾಮ್ಯದಲ್ಲಿ ನಿರ್ಮಿತವಾಗಲಿರುವ ಜಿ310 ಆರ್ ನೇಕೆಡ್ ಸ್ಟ್ರೀಟ್ ಫೈಟರ್ ಬೈಕ್ ಆಗಿದ್ದು, ಇನ್ನು ಜಿ310 ಜಿಎಸ್ ಅಡ್ವೆಂಚರ್ ಬೈಕ್ ಆಗಿರಲಿದೆ. ಈ ಎರಡೂ ಬೈಕ್‍‍ಗಳಲ್ಲಿ 313ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲೆಂಡರ್ ಎಂಜಿನ್ ಅಳವಡಿಸಲಾಗಿದ್ದು, 34ಬಿಹೆಚ್‍‍ಪಿ ಮತ್ತು 28ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ ಮತ್ತು ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಯ ಅವಧಿ - ಜುಲೈ 2018

ಶೀಗ್ರವೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಅಡ್ವೆಂಚರ್ ಬೈಕ್‍‍ಗಳಿವು..

ಹೀರೋ ಎಕ್ಸ್‌ಪಲ್ಸ್ 200

ಇಂಡಿಯನ್ ಅಡ್ವೆಂಚರ್ ಮೋಟಾರ್‍‍ಸೈಕಲ್‍‍‍ಗಳ ವಿಭಾಗದಲ್ಲಿ ಬಿಡುಗಡೆಗೊಳ್ಳಲು ಸಜ್ಜುಗೊಂಡ ಬೈಕ್‍‍ಗಳಲ್ಲಿ ಹೀರೋ ಎಕ್ಸ್‌ಪಲ್ಸ್ 200 ಕೂಡಾ ಒಂದು. ಹೀರೋ ಮೋಟೊಕಾರ್ಪ್ ತನ್ನ ಇಂಪಲ್ಸ್ ಮೋಟಾರ್ ಸೈಕಲ್‍ಗೆ ಮುಂದುವರಿತ ಭಾಗವಾಗಿ ಈ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಶೀಗ್ರವೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಅಡ್ವೆಂಚರ್ ಬೈಕ್‍‍ಗಳಿವು..

ಹೊಸ ಬೈಕಿನಲ್ಲಿ 200-ಸಿಸಿ ಏರ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಒದಗಿಸಲಾಗಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಸೇರಿಸಲಾಗಿದೆ. ಇದು 18.1-ಬಿಹೆಚ್ ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಒಟ್ಟಾರೆ ಈ ಬೈಕಿನ ಡಿಸೈನ್ ಸರಳವಾಗಿದ್ದು, ಧೀರ್ಘ ಪ್ರಮಾಣದ ಸಸ್ಪೆಂಷನ್ ಸೆಟಪ್ ಅನ್ನು ಪಡೆದಿದೆ.

ಬಿಡುಗಡೆಯ ಅವಧಿ - ಸೆಪ್ಟೆಂಬರ್ 2018

ಶೀಗ್ರವೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಅಡ್ವೆಂಚರ್ ಬೈಕ್‍‍ಗಳಿವು..

ಸುಜುಕಿ ವಿ-ಸ್ಟ್ರೋಮ್ 250

ಬಿಎಮ್‍‍ಡಬ್ಲ್ಯೂ ಜಿ310 ಜಿಎಸ್ ಬೈಕಿನ ಅನಾವರಣಗೊಳಿಸಿದ ನಂತರ ಸುಜುಕಿ ಕೂಡಾ ತಮ್ಮ ವಿ-ಸ್ಟ್ರೋಮ್ 250 ಅಡ್ವೆಂಚರ್ ಬೈಕ್‍ ಅನ್ನು ಅನಾವರಣಗೊಳಿಸಿತ್ತು. ಎಂಟ್ರಿ ಲೆವೆಲ್ ವಿ-ಸ್ಟ್ರೋಮ್ 250 ಆಫ್ ರೋಡ್ ಮತ್ತು ಆನ್ ರೋಡ್ ಎರಡೂ ಕಡೆಯಲ್ಲಿ ಬಳಸಬಹುದಾಗಿದೆ.

ಶೀಗ್ರವೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಅಡ್ವೆಂಚರ್ ಬೈಕ್‍‍ಗಳಿವು..

ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ಅಡ್ವೆಂಚರ್ ಮೋಟಾರ್‍‍ಸೈಕಲ್‍ಗಳನ್ನು ಬಯಸುವ ಗ್ರಾಹಕರಿಗೆ ಇದು ಸರಿಯಾದ ಬೈಕ್ ಆಗಿದ್ದು, ಇದರಲ್ಲಿ ಬಳಸಲಾದ 250ಸಿಸಿ ಎಂಜಿನ್ ಸಹಾಯದಿಂದ 24ಬಿಹೆಚ್‍‍ಪಿ ಮತ್ತು 23.4ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಿಡುಗಡೆಯ ಅವಧಿ - 2019ರ ಮೊದಲನೆಯ ತ್ರೈಮಾಸಿಕ ಅವಧಿ

ಶೀಗ್ರವೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಅಡ್ವೆಂಚರ್ ಬೈಕ್‍‍ಗಳಿವು..

1. ಬೆನೆಲ್ಲಿ ಟಿಆರ್‍‍‍ಕೆ 502

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬೆನೆಲ್ಲಿ ಈ ಮಧ್ಯೆಯ ಅವಧಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. 2016ರ ಆಟೋ ಎಕ್ಸ್ ಪೋ ಮೇಳದಲ್ಲಿ ಬೆನೆಲ್ಲಿ ತಮ್ಮ ಟಿಆರ್‍‍‍ಕೆ 502 ಅಡ್ವೆಂಚರ್ ಮೋಟಾರ್‍‍ಸೈಕಲ್ ಅನ್ನು ಪ್ರದರ್ಶಿಸಿತ್ತು.

ಶೀಗ್ರವೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ 5 ಅಡ್ವೆಂಚರ್ ಬೈಕ್‍‍ಗಳಿವು..

ಈ ಪಟ್ಟಿಯಲ್ಲಿ ಅತ್ಯಂತ ಶಕ್ತಿಯುತವಾದ ಮಾಡಲ್ ಬೆನೆಲ್ಲಿ ಟಿಆರ್‍‍‍ಕೆ 502 ಆಗಿದ್ದು, ತಾಂತ್ರಿಕವಾಗಿ ಇದರಲ್ಲಿ 500ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ ಬಳಸಲಾಗಿದೆ. ಈ ಎಂಜಿನ್ 47ಬಿಹೆಚ್‍‍ಪಿ ಮತ್ತು 45ಎನ್ಎಮ್ ಟಾರ್ಕ್ ಅನ್ನು ಉತಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಯ ಅವಧಿ - 2018 ಕೊನೆಯ ತ್ರೈಮಾಸಿಕ ಅವಧಿ.

Most Read Articles

Kannada
English summary
5 new adventure bikes to look forward.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X