ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಜಪಾನ್ ಮೂಲದ ಯಮಹಾ ತನ್ನ ಆರ್15 ವಿ3 ಮತ್ತು ಇಟಲಿ ಮೂಲದ ಎಪ್ರಿಲಿಯಾ ಸಂಸ್ಥೆಯು ತನ್ನ ಆರ್‌ಎಸ್ 150 ಬೈಕ್‌ಗಳನ್ನು ಪ್ರದರ್ಶನಗೊಳಿಸಿದೆ.

By Rahul Ts

2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಜಪಾನ್ ಮೂಲದ ಯಮಹಾ ತನ್ನ ಆರ್15 ವಿ3 ಮತ್ತು ಇಟಲಿ ಮೂಲದ ಎಪ್ರಿಲಿಯಾ ಸಂಸ್ಥೆಯು ತನ್ನ ಆರ್‌ಎಸ್ 150 ಬೈಕ್‌ಗಳನ್ನು ಪ್ರದರ್ಶನಗೊಳಿಸಿದ್ದು, ಬೈಕ್ ಪ್ರಿಯರಲ್ಲಿ ಹೊಸ ಆಯ್ಕೆ ನೀಡುತ್ತಿರುವ ಈ ಎರಡು ಪ್ರಮುಖ ಬೈಕ್‌ಗಳ ಬಗೆಗೆ ಇಲ್ಲಿ ಚರ್ಚಿಸಲಾಗಿದೆ.

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಸದ್ಯ ಬೈಕ್ ಮಾರಾಟದಲ್ಲಿ ತನ್ನದೇ ಪ್ರಾಬಲ್ಯ ಹೊಂದಿರುವ ಯಮಹಾ ಸಂಸ್ಥೆಯು ಈಗಾಗಲೇ ಹಲವು ಮಾದರಿಯ ಬೈಕ್‌ಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಇದೀಗ ಆರ್15 ಮುಂದುವರಿದ ವರ್ಷನ್ 3.0 ಹೊರತರುತ್ತಿದೆ. ಹಾಗೆಯೇ ಸ್ಕೂಟರ್ ಆವೃತ್ತಿ ಮೂಲಕ ಜನಪ್ರಿಯತೆ ಹೊಂದುತ್ತಿರುವ ಎಪ್ರಿಲಿಯಾ ಸಂಸ್ಥೆ ಕೂಡಾ ಮೊದಲ ಬಾರಿಗೆ ಮಧ್ಯಮ ಗಾತ್ರದ ಬೈಕ್ ಒಂದನ್ನು ಅಭಿವೃದ್ಧಿ ಮಾಡಿದ್ದು, ವಿನ್ಯಾಸ ಮತ್ತು ಬೆಲೆ ಮಾಹಿತಿ ಇಲ್ಲಿದೆ ನೋಡಿ.

Recommended Video

New Maruti Swift Launch: Price; Mileage; Specifications; Features; Changes
ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಡಿಸೈನ್

ಎಪ್ರಿಲಿಯಾ ಆರ್ ಎಸ್ 150 ಮತ್ತು ಯಮಹಾ ಆರ್15 ವಿ3 ಬೈಕ‌್ಗಳು ತಮ್ಮ ರೆಗ್ಯುಲರ್ ಬೈಕ್ ಆವೃತ್ತಿಯಲ್ಲಿನ ಸಣ್ಣ ಬದಲಾವಣೆಗಳೊಂದಿಗೆ ಆರ್‌ಎಸ್ 150, ಆರ್ ಎಸ್ ವಿ 4 ಬೈಕಿಗಿಂತಲು ದೊಡ್ಡ ಗ್ರಾತ್ರವನ್ನು ಹೊಂದಿವೆ. ಅಲ್ಲದೆ ಟ್ರಿಪಲ್ ಹೆಡ್ ಲ್ಯಾಂಪ್ ಮತ್ತು ಅಪ್ಸ್ ವೆಪ್ಟ್ ಎಕ್ಸ್ಪೋಸ್ಡ್ ಫ್ರೇಮ್ ಪಿಲಿಯಾನ್ ಸೀಟ್ ಪಡೆದಿದೆ.

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಯಮಹಾ ಆರ್15 ವಿ3 ತನ್ನ ವಿನ್ಯಾಸವನ್ನು ಯಮಹಾ ವೈಝೆಡ್ಎಫ್-ಆರ್1 ಬೈಕ್‌ನಿಂದ ಪಡೆದಿದ್ದು, ಸ್ಲೀಕ್ ಟ್ವಿನ್ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಶಾರ್ಪ್ ಸ್ಟೈಲಿಂಗ್ ಅನ್ನು ವೈಝೆಡ್ಎಫ್-ಆರ್6 ಬೈಕಿನಿಂದ ಪಡೆದಿದೆ.

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಆರ್ 15 ವಿ3 ಹಿಂದಿನ ಪಿಲಿಯಾನ್ ಅಪ್ಸ್ವೆಪ್ಟ್ ಎಪ್ರಿಲಿಯಾ ಆರ್ ಎಸ್150 ಯಂತೆ ಇದ್ದರು ಹೆಚ್ಚು ದೃಷ್ಟಿ ಸೌಕರ್ಯವನ್ನು ಪಡೆದಿದೆ. ಇವೆರಡು 150 ಸಿಸಿ ಬೈಕುಗಳು ವಿನ್ಯಾಸದಲ್ಲಿ ತನ್ನ ರೆಗ್ಯುಲರ್ ಬೈಕುಗಳಿಂದ ಪಡೆದಿದೆ.

ಬೈಕ್ ವಿನ್ಯಾಸದ ಅಂಕಗಳು

ಎಪ್ರಿಲಿಯಾ ಆರ್ ಎಸ್ 150- 8/10

ಯಮಹಾ ಆರ್15 ವಿ3- 8/10

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ವೈಶಿಷ್ಟ್ಯತೆಗಳು

ಎಪ್ರಿಲಿಯಾ ಸೆಮಿ-ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕಂಸೋಲ್ಮೆಂಟ್ ನೊಂದಿಗೆ ಅನಲಾಗ್ ಮೀಟರ್‌ನ್ನು ಎಡಭಾಗದಲ್ಲಿ ಹಾಗು ಡಿಜಿಟಲ್ ಎಲ್‌ಸಿಡಿ ಬಲಭಾಗದಲ್ಲಿ ಪಡೆದಿದ್ದು, ಎಲ್ ಸಿಡಿ ಸ್ಕ್ರೀನ್ ಸ್ಪೀಡ್, ಟ್ರಿಪ್ ಮತ್ತು ಡಿಜಿಟಲ್ ಕ್ಲಾಕ್ ಅನ್ನು ತೋರಿಸುತ್ತದೆ.

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಆರ್ ಎಸ್ 150 ಹಾಲೊಜೆನ್ ಲಿಟ್ ಟ್ರಿ-ಹೆಡ್ ಲ್ಯಾಂಪ್ ಮತ್ತು ಟೈಲ್ ಲೈಟ್ ಎಲ್ಇಡಿ ಯುನಿಟ್ ನೊಂದಿಗೆ ಹ್ಯಾಂಡಲ್ ಬಾರ್ಸ್ ಮೇಲೆ ಕ್ಲಿಪ್, ಸ್ಲಿಪ್ಪರ್ ಕ್ಲಚ್, ಆಪ್ಷನಲ್ ಕ್ವಿಕ್ ಶಿಫ್ಟರ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಪಡೆದಿದೆ.

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಯಮಹಾ ಆರ್15 ವಿ3 ಪೂರ್ಣ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕಂಸೋಲ್ ಅನ್ನು ಪಡೆದಿದ್ದು, ಇನ್‌ಸ್ಟ್ರೂಮೆಂಟ್ ಕಂಸೋಲ್ ಟ್ರಿಪ್ ಮೀಟರ್, ಓಡೋಮೀಟರ್, ಫ್ಯುಯಲ್ ರೇಂಜ್, ಸರ್ವಿಸ್ ರಿಮೈಂಡರ್ ಮತ್ತು ಹೆಚ್ಚಿನ ಮಾಹಿತಿಗಳನ್ನು ಗಮನಿಸುತ್ತದೆ. ಜೊತೆಗೆ ಟ್ವಿನ್ ಹೆಡ್ ಲ್ಯಾಂಪ್ ಸೆಟಪ್, ಕ್ಲಿಪ್-ಆನ್ ಹ್ಯಾಂಡಲ್ ಬಾರ್ಸ್ ಮತ್ತು ಸ್ಲಿಪ್ಪರ್ ಕ್ಲಚ್ ಪಡೆದಿದೆ.

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಬ್ರೇಕಿಂಗ್ ಕೆಲಸದಲ್ಲಿ ಯಮಹಾ ಆರ್15 ವಿ3 282ಎಂಎಂ ಡಿಸ್ಕ್ ಬ್ರೇಕ್ ಮುಂದೆ ಮತ್ತು 220 ಎಂಎಂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. ಎಪ್ರಿಲಿಯಾ ಆರ್ ಎಸ್150 ಕೂಡಾ 300ಎಂಎಂ ಮುಂದೆ ಮತ್ತು ಹಿಂಭಾಗದಲ್ಲಿ 218 ಎಂಎಂ ಡಿಸ್ಕ್ ಬ್ರೆಕನ್ನು ಪಡೆದುಕೊಂಡಿರುತ್ತವೆ.

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಯಮಹಾ ಆರ್ 15 ವಿ3 ಎಪ್ರಿಲಿಯಾ ಆರ್ ಎಸ್ 150 ಅನ್ನು ಅದರ ಪೂರ್ಣ-ಡಿಜಿಟಲ್ ಸಲಕರಣೆ ಕನ್‌ಸೋಲ್‌ನೊಂದಿಗೆ ಅಂತ್ಯಗೊಳಿಸುವುದಲ್ಲದೇ ಆರ್‌ಎಸ್ 150 ಅನ್ನು ತ್ವರಿತ ಪರಿವರ್ತಕದಂತಹ ಐಚ್ಛಿಕ ವೈಶಿಷ್ಟ್ಯಗಳೊಂದಿಗೆ ಜೋಡಿಸಲಾಗಿದೆ.

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಇನ್ನು ಎಪ್ರಿಲಿಯಾ ಆರ್‌ಎಸ್ 150 ಕೂಡಾ ಹಿಂಭಾಗದಲ್ಲಿ ಅಪ್ ಸೈಡ್ ಡೌನ್ (ಯುಎಸ್ಡಿ) ಅಮಾನತು ಸೆಟಪ್ ಮತ್ತು ಮೊನೊ ಶೋಕ್ ಹೊಂದಿದ್ದು, ಬೈಕ್ ಉತ್ಪಾದನಾ ಖರ್ಚು ತಗ್ಗಿಸಲು ಇಂತಹ ವ್ಯವಸ್ಥೆ ಅಳವಡಿಸುವುದು ಕಂಡುಬರುತ್ತದೆ.

ಬೈಕ್ ವೈಶಿಷ್ಟ್ಯತೆಗೆ ಅಂಕಗಳು

ಎಪ್ರಿಲಿಯಾ ಆರ್ ಎಸ್ 150- 8/10

ಯಮಹಾ ಆರ್15 ವಿ3 - 8/10

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಎಂಜಿನ್ ಸಾಮರ್ಥ್ಯ

ಎಪ್ರಿಲಿಯಾ 150 ಬೈಕ್ 150 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 18 ಬಿಹೆಚ್‌ಪಿ ಮತ್ತು 14 ಎನ್ಎಂ ಟಾರ್ಕ್ ಅನ್ನು ಉತ್ಪಾದನಾ ಶಕ್ತಿ ಹೊಂದಿದ್ದು, 6 ಸ್ಪೀಡ್ ಗೇರ್ ಬಾಕ್ಸ್‌ ಜೋಡಿಸಲಾಗಿದೆ. ಜೊತೆಗೆ ಎಪ್ರಿಲಿಯಾ ಒಂದು ಐಚ್ಛಿಕ ಪರಿಕರವಾಗಿ ಕ್ವಿಕ್ ಶಿಫ್ಟರ್ ಅನ್ನು ಕೂಡಾ ನೀಡುತ್ತಿದ್ದು, ಅದು ಸಾಮಾನ್ಯ ಬೈಕ್‌ಗಿಂತ ಹೆಚ್ಚುವರಿಯಾಗಿ 15,000 ರಿಂದ 20,000 ಪಾವತಿಬೇಕಾಗುತ್ತದೆ.

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಹಾಗೆಯೇ ಯಮಹಾ ಆರ್15 ವಿ3 ಬೈಕ್ 155 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 18.70 ಬಿಹೆಚ್ ಪಿ ಮತ್ತು 15 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಲ್ಲವು. ಜೊತೆಗೆ 6 ಸ್ಪೀಡ್ ಗೇರ್ ಬಾಕ್ಸ್‌ ಜೋಡಿಸಲಾಗಿದೆ.

ಎಂಜಿನ್ ಸಾಮರ್ಥ್ಯಕ್ಕೆ ಅಂಕಗಳು

ಎಪ್ರಿಲಿಯಾ ಆರ್ ಎಸ್ 150- 7.5/10

ಯಮಹಾ ಆರ್15 ವಿ3 - 8/10

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಬೆಲೆ (ಅಂದಾಜು)

ಯಮಹಾ ತನ್ನ ಹೊಸ ಆರ್15 ವಿ3 ಬೈಕ್‌ನ ಬೆಲೆಯನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ 1.25 ಲಕ್ಷಕ್ಕೆ ನಿಗದಿಪಡಿಸುವ ಸಾಧ್ಯತೆಗಳಿದ್ದು, ಎಪ್ರಿಲಿಯಾ ಆರ್ ಎಸ್ 150 ಬೈಕಿನ ಬೆಲೆಯು ಕೂಡಾ 1.30 ರಿಂದ 1.40 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಎಪ್ರಿಲಿಯಾ ಆರ್‌ಎಸ್ 150 v/s ಯಮಹಾ ಆರ್15 ವಿ3.. ಇವುಗಳಲ್ಲಿ ಯಾವುದು ಉತ್ತಮ?

ಒಟ್ಟಾರೆ ಅಂಕಿ ಅಂಶಗಳಿಂದ ಎಪ್ರಿಲಿಯಾ ಆರ್‌ಎಸ್ 150 ಬೈಕ್ ಮೇಲಿದ್ದು, ಯಮಹಾ ಆರ್15 ವಿ3 ಬೈಕ್ ಭಾರತೀಯರ ಜನಪ್ರಿಯತೆಯನ್ನು ಗಳಿಸಲಿದೆ. ಇನ್ನು ಎಪ್ರಿಲಿಯಾ ಆರ್ ಎಸ್ 150 ಬೈಕಿನ ಬೆಲೆಗಳು ಯಮಹಾ ಆರ್15 ವಿ3 ಗಿಂತ ಕಡಿಮೆಯಾದಲ್ಲಿ ಮಾತ್ರ ಎಪ್ರಿಲಿಯಾ ಜನಪ್ರಿಯತೆ ಸಾಧಿಸಲಿವೆ.

Most Read Articles

Kannada
Read more on aprilia yamaha
English summary
Aprilia RS 150 Vs. Yamaha R15 V3 Comparison: Design, Specs, Features And Price.
Story first published: Monday, February 19, 2018, 17:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X