125 ಸಿಸಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಜನಪ್ರಿಯ ಎಸ್ಆರ್ 150 ಸ್ಕೂಟರ್ ಮಾದರಿಯಲ್ಲಿ 125 ಸಿಸಿ ಮಾದರಿಯನ್ನು ಹೊರತರುತ್ತಿದ್ದು, ಬಿಡುಗಡೆಗಾಗಿ ಹೊಸ ಸ್ಕೂಟರ್‌ಗಳು ಈಗಾಗಲೇ ಡೀಲರ್ ಯಾರ್ಡ್‌ಗಳನ್ನು ತಲುಪಿವೆ.

By Praveen

ಇಟಾಲಿಯನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾ ಎಪ್ರಿಲಿಯಾ ಸಂಸ್ಥೆಯು ಸದ್ಯದಲ್ಲೇ ತನ್ನ ಜನಪ್ರಿಯ ಎಸ್ಆರ್ 150 ಸ್ಕೂಟರ್ ಮಾದರಿಯಲ್ಲಿ 125 ಸಿಸಿ ಮಾದರಿಯನ್ನು ಹೊರತರುತ್ತಿದ್ದು, ಬಿಡುಗಡೆಗಾಗಿ ಹೊಸ ಸ್ಕೂಟರ್‌ಗಳು ಈಗಾಗಲೇ ಡೀಲರ್ ಯಾರ್ಡ್‌ಗಳನ್ನು ತಲುಪಿವೆ.

125 ಸಿಸಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಸ್ಕೂಟರ್ ವಿಭಾಗದಲ್ಲಿ ಉತ್ತಮ ಮಾರಾಟ ಪ್ರಕ್ರಿಯೆಯನ್ನು ಹೊಂದಿರುವ ಎಪ್ರಿಲಿಯಾ ಸಂಸ್ಥೆಯು ಈ ಹಿಂದಿನ ಎಸ್ಆರ್150 ಮೂಲಕ ಜನಪ್ರಿಯತೆ ಗಳಿಸಿದ್ದು, ಇದೀಗ ಎಸ್ಆರ್125 ಬಿಡುಗಡೆ ಮಾಡುವ ಮೂಲಕ ಪ್ರಮುಖ ಸ್ಕೂಟರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗುವ ತವಕದಲ್ಲಿದೆ.

Recommended Video

Fighter Jet Crash In Goa - DriveSpark
125 ಸಿಸಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಕಾರ ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್ ಮಾದರಿಗಳು ಇತರೆ ಸ್ಕೂಟರ್ ಮಾದರಿಗಳಿಂತ ಹೆಚ್ಚಿನ ಬೆಲೆ ಹೊಂದಿದ್ದು, ಇದೇ ಕಾರಣಕ್ಕೆ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಬಲ್ಲ 125 ಸಿಸಿ ಮಾದರಿಯನ್ನು ಹೊರತರುತ್ತಿದೆ.

125 ಸಿಸಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಮೂಲಗಳ ಪ್ರಕಾರ ಜನವರಿ ಕೊನೆ ವಾರದಲ್ಲಿ ಎಪ್ರಿಲಿಯಾ ಎಸ್ಆರ್ 125 ಬಿಡುಗಡೆಯಾಗಲಿದ್ದು, ಯುವ ಗ್ರಾಹಕರನ್ನು ಸೆಳೆಯಬಲ್ಲ ಸಿಲ್ವರ್ ಮತ್ತು ಬ್ಲೂ ಬಣ್ಣಗಳಲ್ಲಿ ಹೊಸ ಸ್ಕೂಟರ್‌ಗಳನ್ನು ಪರಿಚಯಿಸಲಾಗುತ್ತಿದೆ.

125 ಸಿಸಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಎಸ್ಆರ್ 125 ಬೆಲೆ

ಈ ಹಿಂದೆ ಎಸ್ಆರ್ 150 ಆವೃತ್ತಿಗೆ ರೂ. 68,463 ಬೆಲೆ ನಿಗದಿ ಮಾಡಿದ್ದ ಎಪ್ರಿಲಿಯಾ ಸಂಸ್ಥೆಯು ಎಸ್ಆರ್ 125 ಆವೃತ್ತಿಗೆ ರೂ.65, 309 ನಿಗದಿ ಮಾಡುವ ಸಾಧ್ಯತೆಗಳಿವೆ.

Trending On DriveSpark Kannada:

ನಿಯಂತ್ರಣ ತಪ್ಪಿದ ಹೈ ಸ್ಪಿಡ್‌ ಕಾರು- ಎದುರಿಗೆ ಬರುತ್ತಿದ್ದ ಹಿರೋ ಬೈಕ್ ಪೀಸ್ ಪೀಸ್..

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

2017ರಲ್ಲಿ ಬಿಡುಗಡೆಯಾದ ಟಾಪ್ 5 ಸ್ಕೂಟರ್‌ಗಳು ಯಾವವು?

125 ಸಿಸಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಇನ್ನೂ ಬಿಡುಗಡೆಗೆ ಸಿದ್ದವಾಗಿರುವ ಎಸ್ಆರ್ 125 ಆವೃತ್ತಿಯು ಈ ಹಿಂದಿನ ಎಸ್ಆರ್ 150 ಮಾದರಿಯಲ್ಲೇ ಸುರಕ್ಷಾ ವಿಧಾನಗಳನ್ನು ಪಡೆದುಕೊಂಡಿದ್ದು, ಸ್ಪೋರ್ಟಿ ಲುಕ್ ಪಡೆದಿರುವ ಹಿನ್ನೆಲೆ ಹೊಸ ಸ್ಕೂಟರ್ ಆಯ್ಕೆಯು ಕೊಟ್ಟಿರುವ ಬೆಲೆಗೆ ಉತ್ತಮ ಎನ್ನಬಹುದು.

125 ಸಿಸಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಜೊತೆಗೆ ಹೊಸ ಮಾದರಿಯ ಸ್ಕೂಟರ್‌ನಲ್ಲಿ ಎಬಿಎಸ್ ಸೌಲಭ್ಯವನ್ನು ಕೂಡಾ ಒದಗಿಸಲಾಗಿದ್ದು, 125 ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ 10.06-ಬಿಎಚ್‌ಪಿ ಮತ್ತು 10.6-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿರುವ ಮತ್ತೊಂದು ವಿಶೇಷ.

125 ಸಿಸಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ 150 ಸಿಸಿ ಸ್ಕೂಟರ್ ಮಾದರಿಗಳಿಂತ 125 ಸಿಸಿ ಸಾಮರ್ಥ್ಯದ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ಹಿನ್ನೆಲೆ ಎಪ್ರಿಲಿಯಾ ಸಂಸ್ಥೆಯು ಎಸ್ಆರ್ 150 ಜೊತೆ ಜೊತೆಯಲ್ಲೇ ಎಸ್ಆರ್ 125 ಮಾರಾಟವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.

Trending On DriveSpark Kannada:

ಬಲಿಷ್ಠ ಒಕಿನಾವಾ ಪ್ರೈಸ್ ಎಲೆಕ್ಟ್ರಿಕ್ ವಾಹನದ ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇಲ್ಲಿದೆ

ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ ಎಷ್ಟು ಗೊತ್ತಾ?

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
Aprilia SR 125 To Be Launched Soon In India.
Story first published: Thursday, January 4, 2018, 16:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X