ರೋಚಕ ಕ್ಷಣಗಳಿಗೆ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

By Praveen Sannamani

ಅಂತಿಮ ಘಟ್ಟಕ್ಕೆ ತಲುಪಿರುವ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್‌ನ 4ನೇ ಸುತ್ತಿನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಭಾರೀ ಪೈಪೋಟಿ ನಡೆದಿದ್ದು, ಚಾಂಪಿಯನ್ ಪಟ್ಟಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಹೋಂಡಾ ರೇಸಿಂಗ್ ಇಂಡಿಯಾ ತಂಡದ ಸ್ಪರ್ಧಿ ಟಿಯಾಗ್ ಹದಾ ಅವರ ಅದ್ಭುತ ಟ್ರ್ಯಾಕ್ ಪ್ರದರ್ಶನವು ಭಾರೀ ರೋಚಕತೆಗೆ ಸಾಕ್ಷಿಯಾಯ್ತು.

ರೋಚಕ ಕ್ಷಣಗಳ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

ಚೆನ್ನೈನ ಎಂಎಂಆರ್‌ಟಿ ರೇಸ್ ಟ್ರ್ಯಾಕ್‌ನಲ್ಲಿ ನಡೆದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್ ಹಲವು ಹೊಸ ದಾಖಲೆಗಳಿಗೆ ವೇದಿಕೆಯಾಗಿದ್ದಲ್ಲದೇ, ಭಾರತವನ್ನು ಪ್ರತಿನಿಧಿಸಿದ್ದ ಹೋಂಡಾ ರೇಸಿಂಗ್ ಇಂಡಿಯಾ ತಂಡದ ಸದಸ್ಯ ಟಿಯಾಗ್ ಹದಾ(Tiaga Hada)ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಭಾರತವು ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್‌ನ 4ನೇ ಹಂತದಲ್ಲಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ರೋಚಕ ಕ್ಷಣಗಳ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

ಹೋಂಡಾ ರೇಸಿಂಗ್ ಇಂಡಿಯಾ ತಂಡವನ್ನ ಪ್ರತಿನಿಧಿಸಿದ್ದ 19 ವರ್ಷದ ಟಿಯಾಗ್ ಹದಾ ವಯಸ್ಸಿನಲ್ಲಿ ಕಿರಿನಾಗಿದ್ದರು ಚಾಂಪಿಯನ್‌ಶಿಪ್‌ನಲ್ಲಿ ಹಲವಾರು ಅನುಭವಿ ಸ್ಪರ್ಧಿಗಳಿಗೆ ತ್ರೀವ ಪೈಪೋಟಿ ನೀಡುವ ಮೂಲಕ ಮೂರನೇ ಸ್ಥಾನಕ್ಕೆ ಜಿಗಿದಿರುವುದು ಫೈನಲ್ ಪಂದ್ಯದ ಆಸೆಯನ್ನ ಇನ್ನು ಜೀವಂತವಾಗಿಸಿದ್ದಾರೆ.

ರೋಚಕ ಕ್ಷಣಗಳ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

ಆರಂಭದಲ್ಲೇ ಅನುಭವಿ ಆಟಗಾರ ಆ್ಯಂಟೋನಿ ವೆಸ್ಟ್ ಜೊತೆ ತ್ರೀವ ಪೈಪೋಟಿ ನೀಡಿದ ಟಿಯಾಗ್ ಪಂದ್ಯದ ಮಧ್ಯಂತರದಲ್ಲಿ ತಾಂತ್ರಿಕ ಕಾರಣಗಳಿಂದ ಮುಗ್ಗಸಿರಿದ. ಆದರೂ, ಛಲ ಬಿಡದ ಟಿಯಾಗೊ ಟ್ರ್ಯಾಕ್ ಮುಗಿಯುವ ಹೊತ್ತಿಗೆ ಅದ್ಭುತ ಕೌಶಲ್ಯ ಪ್ರದರ್ಶನ ಮಾಡಿ ಮೂರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೀರ್ತಿ ಹೆಚ್ಚಿಸಿದರು.

ರೋಚಕ ಕ್ಷಣಗಳ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

ಸೂಪರ್ ಸ್ಪೋರ್ಟ್ 600 ವಿಭಾಗದಲ್ಲಿ ನಡೆದ ರೇಸಿಂಗ್‌ನಲ್ಲಿ ಕೇವಲ 1:41.384 ಸೇಕೆಂಡುಗಳಲ್ಲಿ ನಿಗದಿತ ತಲುಪಿದ ಟಿಯಾಗ್ ಅವರು ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್‌ನ 4ನೇ ಸುತ್ತಿನಲ್ಲಿ 16 ಅಂಕಗಳನ್ನು ಗಳಿಸಿರುವುದಲ್ಲದೇ ಈಗಾಗಲೇ ನಡೆದಿರುವ 1ನೇ, 2ನೇ ಮತ್ತು 3ನೇ ಚಾಂಪಿಯನ್‌ಶಿಪ್‌ನಲ್ಲೂ ಉತ್ತಮ ಟ್ರ್ಯಾಕ್ ಪ್ರದರ್ಶನ ತೊರಿ ಒಟ್ಟು 40 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ರೋಚಕ ಕ್ಷಣಗಳ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

ಒಟ್ಟು 40 ಅಂಕಗಳ ಮೂಲಕ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 7ನೇ ಸ್ಥಾನದಲ್ಲಿರುವ ಟಿಯಾಗ್ ಹುದಾ, ಚೆನ್ನೈ ಟ್ರ್ಯಾಕ್‌ಗೆ ಫಿದಾ ಆಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಕಳೆದ ಎರಡು ಸುತ್ತಿನ ಸ್ಪರ್ಧೆಗಿಂತಲೂ ಇದು ಉತ್ತಮ ಟ್ರ್ಯಾಕ್ ಎನ್ನಲು ನನಗೆ ಹೆಮ್ಮೆಯಿದೆ ಎಂದ ಟಿಯಾಗ್, ಭಾರತೀಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವ ನನ್ನ ಜೀವನದ ಪ್ರಮುಖ ಘಟ್ಟ ಎಂದಿದ್ದಾರೆ.

ರೋಚಕ ಕ್ಷಣಗಳ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

ಇನ್ನುಳಿದಂತೆ ಹೋಂಡಾ ರೇಸಿಂಗ್ ತಂಡವನ್ನೇ ಪ್ರತಿನಿಧಿಸಿದ್ದ ಭಾರತೀಯ ಸ್ಪರ್ಧಿಗಳಾದ ರಾಜೀವ್ ಸೇತು ಮತ್ತು ಅನೀಶ್ ಶೆಟ್ಟಿ ಕೂಡಾ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಎಪಿ250 ರೇಸ್ ವಿಭಾಗದಲ್ಲೂ ಭಾರೀ ಪೈಪೋಟಿ ನೀಡಿದ್ದಲ್ಲೇ ಉತ್ತಮ ಪ್ರದರ್ಶನ ತೊರುವ ಮೂಲಕ 4 ನೇ ಸುತ್ತಿನ ಸ್ವರ್ಧೆಯಲ್ಲಿ ಕ್ರಮವಾಗಿ 19ನೇ ಮತ್ತು 20ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ರೋಚಕ ಕ್ಷಣಗಳ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

ನಾಲ್ಕನೇ ಸುತ್ತಿನಲ್ಲಿ ಒಟ್ಟು 24 ಸ್ಪರ್ಧಿಗಳು ಭಾಗಿಯಾಗಿದ್ದಲ್ಲದೇ ಮುಂದಿನ ಸುತ್ತಿನ ಚಾಂಪಿಯನ್‌ಶಿಪ್‌ಗಾಗಿ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡ ನಾಲ್ವರು ಸ್ಪರ್ಧಿಗಳು ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತಿಮ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ. ತದನಂತರ ಅಂತಿಮ ಸ್ಪರ್ಧಿಯಲ್ಲಿ ವಿಜೇತ ಐವರು ರೈಡರ್‌ಗಳು ಮುಂದಿನ ತಿಂಗಳು ಇಂಡೋನೇಷ್ಯಾದಲ್ಲಿ ನಡೆಯಲಿರುವ ವರ್ಲ್ಡ್ ರೇಸಿಂಗ್(ಎಫ್‌ಐಎಂ) ಚಾಂಪಿಯನ್‌ಶಿಪ್ ಪಟ್ಟಕ್ಕಾಗಿ ಹಣಾಹಣಿ ನಡೆಸಲಿದ್ದಾರೆ.

ರೋಚಕ ಕ್ಷಣಗಳ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

ಈ ಬಗ್ಗೆ ಮಾತನಾಡಿರುವ ಹೋಂಡಾ ರೇಸಿಂಗ್ ಇಂಡಿಯಾ ತಂಡದ ರಾಜೀವ್ ಸೇತು ಅವರು, ಭಾರೀ ಸ್ಪರ್ಧೆಯ ಮಧ್ಯೆಯು ಉತ್ತಮ ಹೋರಾಟ ಮಾಡಿದ್ದೇನೆ ಎನ್ನುವ ವಿಶ್ವಾಸ ನನಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ತಂತ್ರಗಳೊಂದಿಗೆ ಟ್ರ್ಯಾಕ್ ಲಯ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ರೋಚಕ ಕ್ಷಣಗಳ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

ಇದಕ್ಕೆ ಬೆನ್ನೆಲುಬಾಗಿ ನಿಂತಿರುವ ಹೋಂಡಾ ಇಂಡಿಯಾ ಬ್ರ್ಯಾಂಡ್ ಕಮ್ಯೂನಿಕೇಷನ್ ವಿಭಾಗದ ಹಿರಿಯ ಅಧಿಕಾರಿ ಪ್ರಭು ನಾಗರಾಜ್ ಕೂಡಾ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹೋಂಡಾ ತಂಡದ ಸ್ಪರ್ಧಿಗಳು ಮುನ್ನಡೆ ಸಾಧಿಸಿರುವುದಕ್ಕೆ ಖುಷಿ ವ್ಯಕ್ತಪಡಿಸಿರುವುದಲ್ಲದೇ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ತಂತ್ರಗಾರಿಕೆಯೊಂದಿಗೆ ಚಾಂಪಿಯನ್‌ಶಿಪ್‌ನಲ್ಲಿ ಬಲ ಪ್ರದರ್ಶಿಸುವ ತವಕದಲ್ಲಿದ್ದೇವೆ ಎಂದಿದ್ದಾರೆ.

ರೋಚಕ ಕ್ಷಣಗಳ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

ಎಫ್ಐಎಂ ರೇಸಿಂಗ್ ಕುರಿತು ಒಂದಿಷ್ಟು.!

ವಿಶ್ವದಲ್ಲಿ ನಡೆಯುವ ಅತ್ಯಂತ ಸ್ಪರ್ಧಾತ್ಮಕ ರೋಡ್ ರೇಸ್‌ಗಳಲ್ಲಿ ಒಂದಾಗಿರುವ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್ ಹಣಾಹಣಿಯು ಬೈಕ್ ಎಂಜಿನ್ ವಿಭಾಗದ ಆಧಾರದ ಮೇಲೆ ರೇಸ್‌ಗಳನ್ನು ನಡೆಸಲಾಗುತ್ತದೆ.

ರೋಚಕ ಕ್ಷಣಗಳ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

ಇದೀಗ ಚೆನ್ನೈನಲ್ಲಿ ನಡೆದ ಸ್ಪರ್ಧೆಯು 23ನೇ ಆವೃತ್ತಿಯಾಗಿದ್ದು, ಥೈಲ್ಯಾಂಡ್‌ನಲ್ಲಿ ನಡೆಯುವ ಅಂತಿಮ ಹಂತದ ಕದನಕ್ಕಾಗಿ ಇಂಡೋನೇಷ್ಯಾದಲ್ಲಿ ನಡೆಯುವ 5ನೇ ಹಂತದ ರೇಸಿಂಗ್‌ನಲ್ಲಿ ಒಟ್ಟು 64 ಪ್ರತಿಸ್ಪರ್ಧಿಗಳು ಎದುರುಗೊಳ್ಳಲಿದ್ದಾರೆ.

ರೋಚಕ ಕ್ಷಣಗಳ ಕಾರಣವಾದ ಏಷಿಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್..!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಮೋಟಾರ್‌ಸೈಕಲ್ ರೇಸಿಂಗ್ ವಿಭಾಗವು ಪ್ರತಿ ವರ್ಷವು ವಿವಿಧ ಖಂಡಗಳಲ್ಲಿ ಪ್ರತ್ಯಕವಾಗಿ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್‌ಗಳನ್ನ ಆಯೋಜಿಸುವ ಮೂಲಕ ಪ್ರತಿಭಾನಿತ್ವ ಮೋಟಾರ್ ರೇಸಿಂಗ್ ಸ್ಪರ್ಧಿಗಳನ್ನು ಗುರುತಿಸುವುದಲ್ಲದೇ ಅಂತಾರಾಷ್ಟ್ರಿಯ ಮಟ್ಟದಲ್ಲೂ ಸ್ಪರ್ಧಿಸಲು ಅವಕಾಶಗಳನ್ನು ಒದಗಿಸುವ ಮಖ್ಯ ವೇದಿಕೆಯಾಗಿದೆ. ಇದರಲ್ಲಿ ಇನ್ನೊಂದು ಮುಖ್ಯ ವಿಚಾರ ಅಂದ್ರೆ ಪೈನಲ್ ಹಂತದಲ್ಲಿ ಭಾರತ ಪ್ರತಿನಿಧಿಸುವ ಟಿಯಾಗ್ ಈ ಬಾರಿ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿರುವುದೇ ವಿಶೇಷವಾಗಿದೆ.

Most Read Articles

Kannada
Read more on motorsport
English summary
ARRC 2018 Round Four Results: IDEMITSU Honda Racing India Sets The Pace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X