ಅವೆಂಜರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಬಜಾಜ್..

ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಜನಪ್ರಿಯತೆ ಕಂಡಿರುವ ಬಜಾಜ್ ಸಂಸ್ಥೆಯು ತನ್ನ ಅವೆಂಜರ್ 150 ಬೈಕಿನ ಮಾರಾಟವನ್ನು ಸ್ಥಗಿತಗೊಳಿಸಿದೆ.

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಜನಪ್ರಿಯತೆ ಕಂಡಿರುವ ಬಜಾಜ್ ಸಂಸ್ಥೆಯು ತನ್ನ ಅವೆಂಜರ್ 150 ಬೈಕಿನ ಮಾರಾಟವನ್ನು ಸ್ಥಗಿತಗೊಳಿಸಿದೆ.

ಅವೆಂಜರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಬಜಾಜ್..

ಹೌದು, ಮೊನ್ನೆಯಷ್ಟೇ ಬಜಾಜ್ ಸಂಸ್ಥೆಯು ಪಲ್ಸರ್ ಎಲ್ಎಲ್ 135 ಬೈಕ್ ಮಾರಾಟ ಸ್ಥಗಿತಗೊಳಿಸಿದ ಬೆನ್ನಲ್ಲೆ ಇದೀಗ ಅವೆಂಜರ್ 150 ಮಾರಾಟವನ್ನು ಸಹ ನಿಲ್ಲಿಸಿದ್ದು, ಕಡಿಮೆ ಬೆಲೆಗಳಲ್ಲಿ ಲಭ್ಯವಿದ್ದ ಬೈಕ್‌ಗಳ ಸ್ಥಗಿತವು ಬಜಾಜ್ ಪ್ರಿಯರಿಗೆ ನಿರಾಶೆ ಉಂಟುಮಾಡಿದೆ.

ಅವೆಂಜರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಬಜಾಜ್..

ಇನ್ನು ಬಜಾಜ್ ಸಂಸ್ಥೆಯು ತಮ್ಮ ಅಧಿಕೃತ ವೆಬ್‍ಸೈಟ್‍ನಿಂದಲೂ ಅವೆಂಜರ್ 150 ಬೈಕ್ ಅನ್ನು ತೆಗೆದು ಹಾಕಿದ್ದು, ಇದರ ಬದಲಾಗಿ ಹೊಸ ವಿನ್ಯಾಸ ಮತ್ತು ಹೊಸ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿರುವ ಉನ್ನತ ಮಾದರಿಯನ್ನು ಪರಿಚಯಿಸಿದೆ.

ಅವೆಂಜರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಬಜಾಜ್..

ಹೀಗಾಗಿ ಅವೆಂಜರ್ 150 ಬೈಕ್ ಮಾರಾಟಕ್ಕೆ ಗುಡ್ ಬೈ ಹೇಳಿರುವ ಬಜಾಜ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿದ ಅವೆಂಜರ್ 180 ಬೈಕಿನ ಮೇಲೆ ಗಮನಹರಿಸಿದೆ. ಈ ಮೂಲಕ ಅವೆಂಜರ್ 150 ಸಿಗುತ್ತಿಲ್ಲ ಎನ್ನವ ಗ್ರಾಹಕರಿಗೆ ಹೊಸ ಆಯ್ಕೆ ನೀಡಿದೆ.

ಅವೆಂಜರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಬಜಾಜ್..

ಇದರಿಂದಾಗಿ ಅವೆಂಜರ್ 180 ಬೈಕ್ ಬಜಾಜ್ ಸಂಸ್ಥೆಯ ಎಂಟ್ರಿ ಲೆವೆಲ್ ಕ್ರೂಸರ್ ಬೈಕ್ ಆಗಿದ್ದು, ಈ ಹೊಸ ಬೈಕ್ ಇದೇ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಗೊಂಡಿತ್ತು. ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 83,475 ಸಾವಿರ ಬೆಲೆಗೆ ಮಾರಾಟಗೊಳ್ಳುತ್ತಿದೆ.

ಅವೆಂಜರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಬಜಾಜ್..

ಹೊಸದಾಗಿ ಬಿಡುಗಡೆಗೊಂಡ ಅವೆಂಜರ್ 180 ಬೈಕ್ ತನ್ನ ಅವೆಂಜರ್ 220 ಬೈಕಿನ ವಿನ್ಯಾಸವನ್ನು ಆಧರಿಸಿದ್ದು, ಇದರಲ್ಲಿ ಬಳಸಲಾಗಿರುವ 178.ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 15.3 ಬಿಹೆಚ್‍ಪಿ ಹಾಗು 13.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಅವೆಂಜರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಬಜಾಜ್..

ಹಾಗೆಯೆ ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದ್ದು, 13 ಲೀಟರ್‍‍‍ನ ಫ್ಯುಯಲ್ ಟ್ಯಾಂಕ್ ಅನ್ನು ಹೊಂದಿದೆ. ಇದರಿಂದ ಹೊಸ ಬೈಕ್ ಸುಜುಕಿ ಇನ್‍ಟ್ರುಡರ್ 150 ಬೈಕಿಗೆ ತ್ರೀವ ಪೈಪೋಟಿ ನೀಡುತ್ತಿದೆ.

ಅವೆಂಜರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಬಜಾಜ್..

ಇನ್ನು ಬಜಾಜ್ ಸಂಸ್ಥೆಯು ಅವೆಂಜರ್ 150 ಬೈಕಿನ ಮಾರಾಟವನ್ನು ನಿಲ್ಲಿಸಿರುವ ಕಾರಣದಿಂದಾಗಿ ಗ್ರಾಹಕರು ಇನ್ಮುಂದೆ ಈ ಬೈಕ್ ಅನ್ನು ಕೊಳ್ಳಲು ಸಾಧ್ಯವಿಲ್ಲವಾದರೂ, ಅವೆಂಜರ್ ಬೈಕಿನ ಬೆಲೆಯ ಆಸುಪಾಸಿನಲ್ಲಿರುವ ಅದೇ ವೈಶಿಷ್ಟ್ಯತೆಗಳನ್ನು ಹೊಂದಿರುವ ಅವೆಂಜರ್ 180 ಬೈಕ್ ಅನ್ನು ಕೊಳ್ಳಬಹುದಾಗಿದೆ.

ಅವೆಂಜರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಬಜಾಜ್..

ಒಟ್ಟಿನಲ್ಲಿ ಅವೆಂಜರ್ 150 ಬೈಕ್ ಅನ್ನು ಮಾರಾಟಗೊಳ್ಳಿಸುವುದಿಲ್ಲ ಎನ್ನುವುದಕ್ಕಿಂತ, ಅವೆಂಜರ್ 180 ಬೈಕ್ ಆಗಿ ನವೀಕರಿಸಲಾಗಿದೆ ಎನ್ನಬಹುದು. ಮುಂಬರುವ ದಿನಗಳಲ್ಲಿ ಸಂಸ್ಥೆಯು ಮತ್ತೆ ಅವೆಂಜರ್ 150 ಬೈಕ್ ಅನ್ನು ಪರಿಚಯಿಸುವ ಯೋಜನೆಯಲ್ಲಿದ್ದರೆ ಸರ್ಕಾರದ ಹೊಸ ಆದೇಶದಂತೆ ಎಬಿಎಸ್ ತಂತ್ರಜ್ಞಾನವನ್ನು ಅಳವಡಿಸಲೇಬೇಕಾಗಿದೆ.

ಅವೆಂಜರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಬಜಾಜ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಇನ್ಮುಂದೆ ಬಜಾಜ್ ಪಲ್ಸರ್ ಎಲ್ಎಸ್135 ಬೈಕ್ ಖರೀದಿಗೆ ಸಿಗೋದಿಲ್ವಂತೆ..!!

2. ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ..

3. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

4. ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

5. ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

Most Read Articles

Kannada
Read more on avenger
English summary
Bajaj Avenger Street 150 Discontinued In India.
Story first published: Saturday, April 7, 2018, 16:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X