ಮತ್ತೆ ಬರಲಿದೆ ಜನಪ್ರಿಯ ಬಜಾಜ್ ಚೇತಕ್ ಸ್ಕೂಟರ್..

ಗತಕಾಲದ ವೈಭವ ಮರುಕಳಿಸುವ ಇರಾದೆಯಲ್ಲಿರುವ ಬಜಾಜ್ ಚೇತಕ್ ಭರ್ಜರಿ ಪುನರಾಗಮನ ಮಾಡಿಕೊಳ್ಳಲಿದೆ. ಹೌದು, ಬಜಾಜ್ ಆಟೋ ಸಂಸ್ಥೆಯು ದೇಶದ ಜನಪ್ರಿಯ ಸ್ಕೂಟರ್ ಚೇತಕ್ ಅನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದೆ.

By Rahul Ts

1972 ರಿಂದ 2006ರ ವರೆಗು ಮಾರುಕಟ್ಟೆಯಲ್ಲಿನ ತನ್ನದೇಯಾದ ಕೀರ್ತಿಯನ್ನು ಎಲ್ಲೆಡೆ ಸಾರಿ ಸ್ಕೂಟರ್‍ ಸೆಗ್ಮೆಂಟ್‍‍ನಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು ಬಜಾಜ್ ಚೇತಕ್. ಭಾರತೀಯ ಯೋಧ ರಾಣಾ ಪ್ರತಾಪ್ ಸಿಂಗ್‍‍ನ ಪ್ರಸಿದ್ಧ ಕುದುರೆಯ ಹೆಸರನ್ನು ಈ ಸ್ಕೂಟರ್‍‍ಗೆ ಇಡಲಾಯಿತು ಮತ್ತು ಕೈಗೆಟುಕುವ ಬೆಲೆಯ ಶ್ರೇಣಿಯಲ್ಲಿ ಉನ್ನತ ಗುಣಮಟ್ಟದ ಸ್ಕೂಟರ್‍‍‍ನಂತೆ ನೋಡಲಾಗುತ್ತಿತ್ತು ಮತ್ತು ಪ್ರೀತಿಯಿಂದ 'ಹಮಾರಾ ಬಜಾಜ್' ಎಂದು ಕರೆಯಲ್ಪಟ್ಟಿತು.

ಮತ್ತೆ ಬರಲಿದೆ ಜನಪ್ರಿಯ ಬಜಾಜ್ ಚೇತಕ್ ಸ್ಕೂಟರ್..

ಬಜಾಜ್ ಆಟೋ ಸಂಸ್ಥೆಯು ಒಂದು ಕಾಲದಲ್ಲಿ ಶೇಕಡ 50ರಷ್ಟು ಸ್ಕೂಟರ್‍ ಸೆಗ್ಮೆಂಟ್‍‍ನಲ್ಲಿ ಪಾಲುದಾರಿಕೆಯನ್ನು ಪಡೆದಿದ್ದು, ಆದರೆ ಈಗ ಕೇವಲ ಶೇಕಡ 15ರಷ್ಟು ಮಾರುಕಟ್ಟೆಯ ಪಾಲುದಾರಿಕೆಯನ್ನು ಪಡೆದುಕೊಂಡಿದೆ. ಇದಕ್ಕೆ ಕಾರಣ 2009ರಲ್ಲಿ ಬಜಾಜ್ ಸಂಸ್ಥೆಯು ಸ್ಕೂಟರ್‍ ವಿಭಾಗವನ್ನು ತ್ಯಜಿಸಲು ನಿರ್ಧಾರಿಸಲಾಗಿತ್ತು. ಆದ್ದರಿಂದ ಮಾರುಕಟ್ತೆಯಲ್ಲಿ ಪಾಲು ಕಡಿಮೆಯಾಗಿದೆ ಎನ್ನಲಾಗಿದೆ.

ಮತ್ತೆ ಬರಲಿದೆ ಜನಪ್ರಿಯ ಬಜಾಜ್ ಚೇತಕ್ ಸ್ಕೂಟರ್..

ಈ ಹಿಂದೆ 2007ನೇ ಇಸವಿಯಲ್ಲಿ ಬಜಾಜ್ ಚೇತಕ್ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿತ್ತು. ಆ ವೇಳೆಯಲ್ಲಿ ವಾರ್ಷಿಕವಾಗಿ ಒಂದು ಮಿಲಿಯನ್ ಗಳಷ್ಟು ಸ್ಕೂಟರ್ ಗಳು ಮಾರಾಟವಾಗುತ್ತಿತ್ತು.

ಮತ್ತೆ ಬರಲಿದೆ ಜನಪ್ರಿಯ ಬಜಾಜ್ ಚೇತಕ್ ಸ್ಕೂಟರ್..

ಮಾಹಿತಿಗಳ ಪ್ರಕಾರ ಬಿಡುಗಡೆಗೊಳ್ಳಲಿರುವ ಹೊಸ ಬಜಾಜ್ ಚೇತಕ್ ಪ್ರೀಮಿಯಮ್ ಸ್ಕೂಟರ್ ಸೆಗ್ಮೆಂಟ್‍‍ನಲ್ಲಿನ ಹೋಂಡಾ ಆಕ್ಟಿವಾ, ಪಿಯಾಜಿಯೊ ವೆಸ್ಪಾ ಮತ್ತು ಎಪ್ರಿಲಿಯಾ ಎಸ್‍ಆರ್150 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದ್ದು, 2019ರಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಮತ್ತೆ ಬರಲಿದೆ ಜನಪ್ರಿಯ ಬಜಾಜ್ ಚೇತಕ್ ಸ್ಕೂಟರ್..

ಬಜಾಜ್ ಚೇತಕ್ ಬೆಲೆಯು ಸುಮಾರು ರೂ.70,000 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಬಜಾಜ್ ಸಂಸ್ಥೆಯು ಸಾಧಾರಣಾ ಚೇತಕ್ ಅಲ್ಲದೆಯೆ ಚೇತಕ್ ಚಿಕ್ ಎಂಬ ಎಲೆಕ್ಟ್ರಿಕ್ ಮಾದರಿಯನ್ನು ಕೂಡಾ ಪರಿಚಯಿಸಲಿದೆಯಂತೆ.

ಮತ್ತೆ ಬರಲಿದೆ ಜನಪ್ರಿಯ ಬಜಾಜ್ ಚೇತಕ್ ಸ್ಕೂಟರ್..

ದೊರೆತಿರುವ ಚಿತ್ರಗಳ ಪ್ರಕಾರ ಹೊಸ ಚೇತಕ್ ಸ್ಕೂಟರ್ ಅನ್ನು ಪುರುಷರು ಹಾಗು ಮಹಿಳೆಯರು ಚಲಾಯಿಸಬಹುದಾಗಿದ್ದು, ಪ್ರೀಮಿಯಮ್ ಸ್ಕೂಟರ್ ಪ್ರಿಯರನ್ನು ಟಾರ್ಗೆಟ್ ಮಾಡಿಕೊಂಡಿದೆ. ಆರಾಮದಾಯಕ ರೈಡಿಂಗ್ ಸ್ಥಾನ, ಅಂಡರ್ ಸೀಟ್ ಸ್ಟೋರೇಜ್, ಅಪ್ರೈಟ್ ಹ್ಯಾಂಡಲ್ ಬಾರ್, ಅಗಲವಾದ ಫೂಟ್ ಪೆಗ್ಸ್ ಮತ್ತು ಬ್ಲೂಟೂತ್ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಕಂಸೋಲ್ ಅನ್ನು ಪಡೆದುಕೊಂಡಿರಲಿದೆ.

ಮತ್ತೆ ಬರಲಿದೆ ಜನಪ್ರಿಯ ಬಜಾಜ್ ಚೇತಕ್ ಸ್ಕೂಟರ್..

ಇದಲ್ಲದೆ ಯುಎಸ್‍‍ಬಿ ಚಾರ್ಜಿಂಗ್ ಪಾಯಿಂಟ್ ಅನ್ನು ಕೂಡ ಹೊಸ ಚೇತಕ್ ಸ್ಕೂಟರ್ ಪಡೆದಿರಲಿದೆ ಎನ್ನಲಾಗಿದ್ದು, ಸಿಬಿಎಸ್ ಬ್ರೇಕ್ಸ್, ಲಾರ್ಜ್ ಫ್ಯುಯಲ್ ಟ್ಯಾಂಕ್ ಮತ್ತು ಒವಲ್ ಶೇಪ್ ಹೆಡ್‍‍ಲ್ಯಾಂಪ್ ಅನ್ನು ಅಳವಡಿಸಲಾಗಿದ್ದು, ಸ್ಕೂಟರ್‍‍ಗೆ ಪ್ರೀಮಿಯಮ್ ಲುಕ್ ನೀಡಲು ಅಲ್ಯುಮೀನಿಯಮ್ ಗ್ರ್ಯಾಬ್ ರೈಲ್ಸ್ ಅನ್ನು ಅಳವಡಿಸಲಾಗಿದೆ.

ಮತ್ತೆ ಬರಲಿದೆ ಜನಪ್ರಿಯ ಬಜಾಜ್ ಚೇತಕ್ ಸ್ಕೂಟರ್..

ಬಜಾಜ್ ಚೇತಕ್ ಸ್ಕೂಟರ್‍‍ನ ತಾಂತ್ರಿಕತೆಯ ಕುರಿತಾತ ಮಾಹಿತಿಯು ಅಲಭ್ಯವಾಗಿದ್ದು, ಬಹುಷಃ 125ಸಿಸಿ ಏರ್ ಕೂಲ್ಡ್ ಎಂಜಿನ್ ಪಡೆಯಲಿದ್ದು, 9 ರಿಂದ 10 ಬಿಹೆಚ್ ಮತ್ತು 9 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ. ಹಾಗು ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿರಲಿದೆ ಎನ್ನಲಾಗಿದೆ.

ಮತ್ತೆ ಬರಲಿದೆ ಜನಪ್ರಿಯ ಬಜಾಜ್ ಚೇತಕ್ ಸ್ಕೂಟರ್..

ಇನ್ನು ಸಸ್ಪೆಂಶನ್ ವಿಚಾರಕ್ಕೆ ಬಂದಲ್ಲಿ ಚೇತಕ್ ಸ್ಕೂಟರ್‍‍‍ನ ಮುಂಭಾಗದಲ್ಲಿ ಸಿಂಗಲ್ ಆರ್ಮ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಅನ್ನು ಅಳವಡಿಸಲಾಗಿದೆ. ಹಾಗು ಎರಡು ಚಕ್ರಗಳಿಗೆ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಯ್ಕೆಯಾಗಿ ಪಡೆದಿರಲಿದೆ.

Most Read Articles

Kannada
Read more on bajaj auto scooter
English summary
Bajaj Chetak Scooter To Make A Comeback.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X