ಬಜಾಜ್ ಡೋಮಿನಾರ್ v/s ಬಿಎಂಡಬ್ಲ್ಯು ಜಿ310ಆರ್- ಡ್ರ್ಯಾಗ್ ರೇಸ್‌ಯಲ್ಲಿ ಯಾರು ಫಸ್ಟ್?

By Praveen Sannamani

ಬಿಎಂಡಬ್ಲ್ಯು ಸಂಸ್ಥೆಯು ಇದೇ ಮೊದಲ ಬಾರಿಗೆ ಟಿವಿಎಸ್ ಜೊತೆಗೂಡಿ ಅಗ್ಗದ ಬೆಲೆಯಲ್ಲಿ ಜಿ310ಆರ್ ಮತ್ತು 310 ಜಿಎಸ್ ಬೈಕ್‌ಗಳನ್ನು ಪರಿಚಯಿಸುತ್ತಿದ್ದು, ಡೋಮಿನಾರ್ 400 ಬೈಕ್‌ಗಳಿಂತಲೂ ಎಂಜಿನ್ ಸಾಮರ್ಥ್ಯದಲ್ಲಿ ಕಡಿಮೆಯಿದ್ದರೂ ಡ್ರ್ಯಾಗ್ ರೇಸ್ ಅದ್ಭುತ ಕೌಶಲ್ಯ ಪ್ರದರ್ಶನ ಮಾಡುತ್ತವೆ ಎನ್ನುವುದೇ ಪ್ರಮುಖ ವಿಚಾರ.

ಬಜಾಜ್ ಡೋಮಿನಾರ್ v/s ಬಿಎಂಡಬ್ಲ್ಯು ಜಿ310ಆರ್- ಡ್ರ್ಯಾಗ್ ರೇಸ್‌ಯಲ್ಲಿ ಯಾರು ಫಸ್ಟ್?

ಡೋಮಿನಾರ್ 400 ಮತ್ತು ಬಿಎಂಡಬ್ಲ್ಯು ಜಿ310ಆರ್ ಬೈಕ್‌ಗಳು ಪೂರ್ಣ ಪ್ರಮಾಣದಲ್ಲಿ ದೇಶಿಯವಾಗಿ ಅಭಿವೃದ್ಧಿಯಾಗಿರುವ ಬೈಕ್ ಮಾದರಿಗಳಾಗಿದ್ದು, ಕೆಟಿಎಂ 390 ಮತ್ತು ಡೋಮಿನಾರ್ 400 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರುವ ಬಿಎಂಡಬ್ಲ್ಯು ಹೊಸ ಬೈಕ್‌ಗಳು ಎಂಜಿನ್ ಪರ್ಫಾಮೆನ್ಸ್ ವಿಚಾರವಾಗಿ ಇತರೆ ಬೈಕ್‌ಗಳಿಂತ ಅತ್ಯುತ್ತಮ ಮಾದರಿಯಾಗಿವೆ ಎನ್ನುಬಹುದು.

ಬಜಾಜ್ ಡೋಮಿನಾರ್ v/s ಬಿಎಂಡಬ್ಲ್ಯು ಜಿ310ಆರ್- ಡ್ರ್ಯಾಗ್ ರೇಸ್‌ಯಲ್ಲಿ ಯಾರು ಫಸ್ಟ್?

ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು ಜುಲೈ 18ರಂದು ಬಿಡುಗಡೆ ಖಚಿತವಾಗಿದ್ದು, ಬಿಡುಗಡೆಗೂ ಮುನ್ನವೇ ಹೊಸ ಬೈಕ್‌ಗಳು ಭಾರೀ ನೀರಿಕ್ಷೆ ಹುಟ್ಟುಹಾಕಿವೆ. ಹತ್ತಾರು ಹೊಸತನಗಳೊಂದಿಗೆ ಬಿಡುಗಡೆಯಾಗುತ್ತಿರುವ ಬಿಎಂಡಬ್ಲ್ಯು ಟ್ವಿನ್ ಬೈಕ್‌ಗಳ ವಿಶೇಷತೆ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಬಜಾಜ್ ಡೋಮಿನಾರ್ v/s ಬಿಎಂಡಬ್ಲ್ಯು ಜಿ310ಆರ್- ಡ್ರ್ಯಾಗ್ ರೇಸ್‌ಯಲ್ಲಿ ಯಾರು ಫಸ್ಟ್?

ಭಾರತೀಯ ಮೂಲದ ಅತಿ ದೊಡ್ಡ ದ್ವಿಚಕ್ರ ವಾಹನ ಅಭಿವೃದ್ಧಿ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರ್ಸ್ ಜೊತೆಗಾರಿಕೆಯಲ್ಲಿ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳನ್ನು ಅಭಿವೃದ್ಧಿಪಡಿಸಿದೆ.

ಬಜಾಜ್ ಡೋಮಿನಾರ್ v/s ಬಿಎಂಡಬ್ಲ್ಯು ಜಿ310ಆರ್- ಡ್ರ್ಯಾಗ್ ರೇಸ್‌ಯಲ್ಲಿ ಯಾರು ಫಸ್ಟ್?

ತಮಿಳುನಾಡಿನ ಹೊಸೂರುನಲ್ಲಿ ಸ್ಥಿತಗೊಂಡಿರುವ ಟಿವಿಎಸ್ ಮೋಟಾರು ಘಟಕದಲ್ಲೇ ಬಿಎಂಡಬ್ಲ್ಯು ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳು ನಿರ್ಮಾಣವಾಗುತ್ತಿದ್ದು, ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗೂ ಇಲ್ಲಿಂದಲೇ ರಫ್ತುಗೊಳ್ಳಲಿವೆ.

ಬಜಾಜ್ ಡೋಮಿನಾರ್ v/s ಬಿಎಂಡಬ್ಲ್ಯು ಜಿ310ಆರ್- ಡ್ರ್ಯಾಗ್ ರೇಸ್‌ಯಲ್ಲಿ ಯಾರು ಫಸ್ಟ್?

ವಿನೂತನ ಬಿಎಂಡಬ್ಲ್ಯು ಜಿ310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳು ಎರಡರಿಂದ ಮೂರು ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವುದಾಗಿ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದ್ದು, ಸ್ಥಳೀಯವಾಗಿ ಬಿಡಿಭಾಗಗಳ ಬಳಕೆಯಿಂದಾಗಿ ಬೈಕ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಬಜಾಜ್ ಡೋಮಿನಾರ್ v/s ಬಿಎಂಡಬ್ಲ್ಯು ಜಿ310ಆರ್- ಡ್ರ್ಯಾಗ್ ರೇಸ್‌ಯಲ್ಲಿ ಯಾರು ಫಸ್ಟ್?

ಬಿಎಂಡಬ್ಲ್ಯು ಸಂಸ್ಥೆಯು ತನ್ನ ಶಕ್ತಿಶಾಲಿ ಆರ್ 1200 ಜಿಎಸ್ ಬೈಕ್ ನಿಂದ ಪ್ರೇರಣೆ ಪಡೆದುಕೊಂಡು ಜಿ310 ಜಿಎಸ್ ವಿನ್ಯಾಸವನ್ನು ರಚಿಸಿದ್ದು, ಇದು ಆಫ್ ರೋಡ್ ಸ್ನೇಹಿ ಚಕ್ರಗಳನ್ನು ಜೋಡಿಸಲಾಗಿದೆ. ಹಾಗೆಯೇ ಜಿ 310 ಆರ್ ಕೂಡಾ ಸ್ಪ್ರೀಟ್ ಫೈಟರ್ ಎನ್ನುವ ಟ್ಯಾಗ್ ಪಡೆದುಕೊಂಡಿದೆ.

ಬಜಾಜ್ ಡೋಮಿನಾರ್ v/s ಬಿಎಂಡಬ್ಲ್ಯು ಜಿ310ಆರ್- ಡ್ರ್ಯಾಗ್ ರೇಸ್‌ಯಲ್ಲಿ ಯಾರು ಫಸ್ಟ್?

ಎಂಜಿನ್ ಸಾಮರ್ಥ್ಯ

313 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು 28 ಎನ್ ಎಂ ತಿರುಗುಬಲದಲ್ಲಿ 33.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬಜಾಜ್ ಡೋಮಿನಾರ್ v/s ಬಿಎಂಡಬ್ಲ್ಯು ಜಿ310ಆರ್- ಡ್ರ್ಯಾಗ್ ರೇಸ್‌ಯಲ್ಲಿ ಯಾರು ಫಸ್ಟ್?

ಹೊಸ ಬೈಕ್‌ಗಳಲ್ಲಿ ಲಗೆಜ್ ಕ್ಯಾರಿಯರ್, ಟಾಪ್ ಬಾಕ್ಸ್, ಸೆಂಟರ್ ಸ್ಟ್ಯಾಂಡ್, ಎಲ್ ಇಡಿ ಇಂಡಿಕೇಟರ್, ಹೀಟೆಡ್ ಗ್ರಿಪ್, ಟ್ಯಾಂಕ್ ಬ್ಯಾಗ್, ಜಿಪಿಎಸ್ ಸಪೋರ್ಟ್, ಜಿಪಿಎಸ್ ನೇವಿಗೇಟರ್ ಮತ್ತು ಆಫ್ ರೋಡ್ ಚಾಲನೆಗಳನ್ನು ಗಿಟ್ಟಿಸಿಕೊಳ್ಳಲಿದೆ.

ಬಜಾಜ್ ಡೋಮಿನಾರ್ v/s ಬಿಎಂಡಬ್ಲ್ಯು ಜಿ310ಆರ್- ಡ್ರ್ಯಾಗ್ ರೇಸ್‌ಯಲ್ಲಿ ಯಾರು ಫಸ್ಟ್?

ಹಾಗೆಯೇ ಜಿ310ಆರ್ ಜೊತೆಗೆ ಡ್ರ್ಯಾಗ್ ರೇಸ್‌ನಲ್ಲಿ ಭಾಗಿಯಾಗಿದ್ದ ಬಜಾಜ್ ಡೋಮಿನಾರ್ ಬೈಕ್‌ಗಳು 373 ಸಿಸಿ ಸಿಂಗಲ್ ಸಿಲಿಂಡರ್ ಸೌಲಭ್ಯದೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದ್ದರೂ, ಬಿಎಂಡಬ್ಲ್ಯು ಜಿ310 ಆರ್ ಬೈಕ್‌ಗಳಂತೆ ಉತ್ತಮ ಆರಂಭ ಕಂಡುಕೊಳ್ಳುವಲ್ಲಿ ತುಸು ಸಮಯ ಹಿಡಿಯುತ್ತೆ ಎನ್ನಬಹುದು.

ಬಜಾಜ್ ಡೋಮಿನಾರ್ v/s ಬಿಎಂಡಬ್ಲ್ಯು ಜಿ310ಆರ್- ಡ್ರ್ಯಾಗ್ ರೇಸ್‌ಯಲ್ಲಿ ಯಾರು ಫಸ್ಟ್?

ಇದಕ್ಕೆ ಕಾರಣ, ಡೋಮಿನಾರ್ 400 ಬೈಕ್‌ಗಳಿಂತ ಎಂಜಿನ್ ಶಕ್ತಿ ಕಡಿಮೆ ಇದ್ದರೂ ತೂಕದಲ್ಲಿ ಸಾಕಷ್ಟು ಹಗರುವಾಗಿರುವ ಜಿ310ಆರ್ ಬೈಕ್‌ಗಳು ಉತ್ತಮ ಆರಂಭ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಬೆಲೆ ವಿಚಾರವಾಗಿ ಚರ್ಚೆ ಮಾಡಿದರೇ ಜಿ310ಆರ್ ಬೈಕ್‌ಗಳಿಂತಲೂ ಡೋಮಿನಾರ್ 400 ಕಡಿಮೆ ಬೆಲೆಗೆ ಲಭ್ಯವಿರುವ ಬೈಕ್ ಮಾದರಿ ಎನ್ನಬಹುದು.

ಬಜಾಜ್ ಡೋಮಿನಾರ್ v/s ಬಿಎಂಡಬ್ಲ್ಯು ಜಿ310ಆರ್- ಡ್ರ್ಯಾಗ್ ರೇಸ್‌ಯಲ್ಲಿ ಯಾರು ಫಸ್ಟ್?

ಸದ್ಯ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.1.55 ಲಕ್ಷದಿಂದ ರೂ.1.70 ಲಕ್ಷ ಬೆಲೆ ಹೊಂದಿದ್ದು, ಇನ್ನು ಬಿಡುಗಡೆಗಾಗಿ ಸಿದ್ದವಾಗಿರುವ ಜಿ310ಆರ್ ಮತ್ತು 310 ಜಿಎಸ್ ಬೈಕ್‌ಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.2.80 ಲಕ್ಷದಿಂದ ರೂ. 3.20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಈ ಬೈಕ್‌ಗಳು ವಿವಿಧ ಹಂತಗಳಲ್ಲಿ ಒಂದೊಂದು ವಿಶೇಷತೆಯನ್ನು ಪಡೆದಿವೆ ಎನ್ನಬಹುದು.

ಡೋಮಿನಾರ್ 400 ಮತ್ತು ಬಿಎಂಡಬ್ಲ್ಯು ಜಿ310ಆರ್ ಬೈಕ್ ನಡುವಿನ ಡ್ರ್ಯಾಗ್ ರೇಸ್ ವಿಡಿಯೋ ಇಲ್ಲಿದೆ ನೋಡಿ...

Most Read Articles

Kannada
Read more on bmw motorrad
English summary
Bajaj Dominar 400 Loses To BMW G310R In A Drag Race.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X