ನವೀಕರಣದೊಂದಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಡಾಮಿನಾರ್ 400

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೊ 2016ರಲ್ಲಿ ತಮ್ಮ ಡಾಮಿನಾರ್ 400 ಬೈಕ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಇದೀಗ ಬಜಾಜ್ ಸಂಸ್ಥೆಯು ಈ ಬೈಕ್ ಸ್ಪೋರ್ಟ್ಸ್ ಕ್ರೂಸರ್‍‍ನಂತೆ ಕಾಣಲು ಬೇಕಾಗುವ ಉಪಕರಣಗಳನ್ನು ಅಳವಡಿಸಲಾಗಿದೆ.

ಹೌದು, ಬಜಾಜ್ ಡಾಮಿನಾರ್ 400 ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಹಲವಾರು ಅಪ್ಡೇಟ್‍‍ಗಳನ್ನು ಪಡೆದುಕೊಂಡಿದೆ. ಅಲ್ಲದೆ ಸಂಸ್ಥೆಯು ಶೀಘ್ರವೇ ಅಪ್ಡೇಟೆಡ್ ಡಾಮಿನಾರ್ 400 ಬೈಕ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Image source: autocarindia

ನವೀಕರಣದೊಂದಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಡಾಮಿನಾರ್ 400

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಡಾಮಿನಾರ್ ಬೈಕ್ ಹೊಸ ಅಪ್‍‍ಸೈಡ್ ಡೌನ್ ಫೋರ್ಕ್ಸ್, ಹೊಸ ಟ್ವಿನ್-ಪೋರ್ಟ್ ಮಫ್ಲರ್ ಅನ್ನು ಪಡೆದ ಎಕ್ಸಾಸ್ಟ್ ಸಿಸ್ಟಂ, ಮರುವಿನ್ಯಾಸಗೊಳಿಸಲಾದ ಫ್ರಂಟ್ ಮಡ್‍‍ಗಾರ್ಡ್ ದೊಡ್ಡದಾದ ಎಂಜಿನ್ ಬೆಲ್ಲಿ ಪ್ಯಾನಲ್ ಮತ್ತು ಫ್ಲ್ಯಾಟರ್ ರಿಯರ್ ಟೈರ್ ಹಗ್ಗರ್ ಅನ್ನು ಪಡೆದುಕೊಂಡಿದೆ.

ನವೀಕರಣದೊಂದಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಡಾಮಿನಾರ್ 400

ಜೊತೆಗೆ ಫ್ಯುಯಲ್ ಟ್ಯಾಂಕ್‍‍ನ ಬದಿಗಳನ್ನು ಮತ್ತು ಹೆಡ್‍‍ಲ್ಯಾಂಪ್ ಅನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಅಪ್ಡೇಟೆಡ್ ಬಜಾಜ್ ಡಾಮಿನಾರ್ 400 ಬೈಕ್ ಹೊಸ ಡಿಒಹೆಚ್‍‍ಸಿ ಎಂಜಿನ್ ಅನ್ನು ಬಳಸಲಾಗಿದ್ದು, ಇದೇ ಎಂಜಿನ್ ಅನ್ನು ಕೆಟಿಎಮ್ ಡ್ಯೂಕ್ 390 ಬೈಕ್‍‍ನಲ್ಲಿಯು ಬಳಸಲಾಗಿದೆ.

ನವೀಕರಣದೊಂದಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಡಾಮಿನಾರ್ 400

ಇದಲ್ಲದೇ ಹೊಸ ಡಾಮಿನಾರ್ 400 ಬೈಕಿನ ಪರ್ಫಾರ್ಮೆನ್ಸ್ ಅನ್ನು ಅಧಿಕಗೊಳಿಸಲು ರೈಡ್-ಬೈ-ವೈರ್ ತ್ರೋಟಲ್ ಅನ್ನು ಕೂಡಾ ಅಳವಡಿಸಲಾಗಿದೆ ಎನ್ನುವ ಅವಕಾಶಗಳಿದೆ ಎನ್ನಲಾಗಿದೆ.

ನವೀಕರಣದೊಂದಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಡಾಮಿನಾರ್ 400

ಹೊಸ ಬಜಾಜ್ ಡಾಮಿನಾರ್ 400 ನವೀಕರಣಗೊಂಡ ನೂತನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಒದಗಿಸಲಾಗಿದ್ದು, ಪ್ರಸ್ತುತ ಡಾಮಿನಾರ್ 400 ಬೈಕಿನಲ್ಲಿ ತೋರಿಸುವ ಮಾಹಿತಿಗಿಂತಾ ಹೆಚ್ಚು ಮಾಹಿತಿಯನ್ನು ಇದು ನಿಮಗೆ ತೋರಿಸುತ್ತದೆ. ಇವುಗಳನ್ನು ಹೊರತು ಪಡಿಸಿ ಬೇರಾವ ಬದಲಾವಣೆಗಳನ್ನು ಪಡೆದಿರುವುದಿಲ್ಲ.

ನವೀಕರಣದೊಂದಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಡಾಮಿನಾರ್ 400

ಅಪ್ಡೇಟೆಡ್ ಬಜಾಜ್ ಡಾಮಿನಾರ್ 400 ಬೈಕ್ 373ಸಿಸಿ ಫ್ಯುಯಲ್ ಇಂಜೆಕ್ಟೆಡ್, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದೊಂದಿಗೆ 35ಬಿಹೆಚ್‍‍ಪಿ ಮತ್ತು 35ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಲ್ಲದೇ ಅಪ್ಡೇಟೆಡ್ ಸ್ಲಿಪ್ಪರ್ ಕ್ಲಚ್ ಅನ್ನು ಕೂಡಾ ಪಡೆದುಕೊಳ್ಳಲಿದೆ.

ನವೀಕರಣದೊಂದಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಡಾಮಿನಾರ್ 400

ಕೊನೆಗೆ ಬಜಾಜ್ ಸಂಸ್ಥೆಯು ಡಾಮಿನಾರ್ 400 ಬೈಕ್ ಅನ್ನು ಹೊಸ ಕಲರ್ ಸ್ಕೀಮ್‍‍ಗಳೊಂದಿಗೆ ಬಿಡುಗಡೆಗೊಳಿಸಬಹುದಾಗಿದ್ದು, ಈ ಎಲ್ಲಾ ಬದಲಾವಣೆಗಳ ನಂತರ ಪ್ರಸ್ತುತ ಮಾರಾಟವಾಗಿಗುತ್ತಿರುಬ ಡಾಮಿನಾರ್ 400 ಬೈಕ್‍‍ಗಿಂತಾ ಬೆಲೆಯಲ್ಲಿ 15,000 ದಿಂದ 20,000 ಹೆಚ್ಚಿರಬಹುದಾಗಿದೆ.

ನವೀಕರಣದೊಂದಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಡಾಮಿನಾರ್ 400

ಹೊಸ ಡಾಮಿನಾರ್ 400 ಬೈಕ್ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಅನ್ನು ಕೂಡಾ ಪಡೆದುಕೊಳ್ಳಲಿದ್ದು, ಎಬಿಎಸ್ ರಹಿತ ಮಾಡಲ್ ಬೈಕ್‍‍ನ ಮಾರಾಟವನ್ನು ಸ್ಥಗಿತಗೊಳಿಸಲಿದೆ. ಅಪ್ಡೇಟೆಡ್ ಡಾಮಿನಾರ್ 400 ಬೈಕ್ ಅನ್ನು ಸಂಸ್ಥೆಯು ಈ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೊಳಿಸುವ ಯೋಜನೆಯಲಿದ್ದು, ಬಿಡುಗಡೆಗೊಂಡ ನಂತರ ಮಾರಾಟದ ಸಂಖ್ಯೆಯು ಹೆಚ್ಚುಗೊಳಿಸುವ ನಿರೀಕ್ಷೆಯಲ್ಲಿದೆ.

Most Read Articles

Kannada
Read more on bajaj auto
English summary
Bajaj Dominar 400 Spotted Testing With USD Forks And Other Updates
Story first published: Thursday, September 20, 2018, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X