2020ಕ್ಕೂ ಮುನ್ನವೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಬಜಾಜ್

By Praveen Sannamani

ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ನಿರ್ಮಾಣಕ್ಕೆ ಹೊಸ ಯೋಜನೆಯೊಂದನ್ನು ರೂಪಿಸಿರುವ ಬಜಾಜ್ ಸಂಸ್ಥೆಯು 2020ರ ಹೊತ್ತಿಗೆ ಪ್ರಮುಖ ಬೈಕ್ ಮಾದರಿಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

2020ಕ್ಕೂ ಮುನ್ನವೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಬಜಾಜ್

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಎಲ್ಲಿಲ್ಲದೇ ಬೇಡಿಕೆ ಬಂದಿದ್ದೆ ತಡ ಎಲ್ಲಾ ವಾಹನ ಉತ್ಪಾದನಾ ಸಂಸ್ಥೆಗಳನ್ನು ಈ ನಿಟ್ಟಿನಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುವ ಮೂಲಕ ಬದಲಾವಣೆ ಪರ್ವಕ್ಕೆ ಮುನ್ನಡೆ ಬರೆಯುತ್ತಿದ್ದು, ಇದೀಗ ಬಜಾಜ್ ಕೂಡಾ ಇದೇ ಹಾದಿಯಲ್ಲಿ ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ.

2020ಕ್ಕೂ ಮುನ್ನವೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಬಜಾಜ್

ಈ ಬಗ್ಗೆ ಬಜಾಜ್ ಸಂಸ್ಥೆಯೇ ಅಧಿಕೃತ ಮಾಹಿತಿಯನ್ನು ಹೊರಹಾಕಿದ್ದು, ಎಂಡಿ ರಾಜೀವ್ ಬಜಾಜ್ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಭವಿಷ್ಯದ ಹೊಸ ಯೋಜನೆಯ ಬಗ್ಗೆ ಸುಳಿವು ನೀಡಿದ್ದಾರೆ.

2020ಕ್ಕೂ ಮುನ್ನವೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಬಜಾಜ್

ಇದಲ್ಲದೇ ಪ್ರಿಮಿಯಂ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ತ್ರಿ ಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಜೊತೆ ಬಿಡುಗಡೆಗೊಳಿಸಲು ನಿರ್ಧರಿಸಿರುವ ಬಜಾಜ್, ಬೆಂಗಳೂರು ಮತ್ತು ಪುಣೆ ಬೈಕ್ ಉತ್ಪಾದನಾ ಘಟಕಗಳಲ್ಲೇ ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಲಿದೆ.

2020ಕ್ಕೂ ಮುನ್ನವೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಬಜಾಜ್

ಜೊತೆಗೆ ಸದ್ಯ ಇರುವ ಬೈಕ್ ಉತ್ಪಾದನಾ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಎಲೆಕ್ಟ್ರಿಕ್ ಎಂಜಿನ್ ನಿರ್ಮಾಣದಲ್ಲಿ ಖ್ಯಾತಿ ಹೊಂದಿರುವ ಅಥೆರ್ ಬ್ಯಾಟರಿಗಳನ್ನು ಬಳಕೆ ಮಾಡಲು ಮುಂದಾಗಿದೆ.

2020ಕ್ಕೂ ಮುನ್ನವೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಬಜಾಜ್

ಹೀಗಾಗಿಯೇ ಬಜಾಜ್ ಎಲೆಕ್ಟ್ರಿಕ್ ಬೈಕ್ ಮಾದರಿಗಳು ಅತ್ಯುತ್ತಮ ಕಾರ್ಯಕ್ಷಮತೆ ಹೊಂದುವ ಭರವಸೆಯಿದ್ದು, ಮುಂಬರುವ ದಿನಗಳಲ್ಲಿ ಬಜಾಜ್ ಬೈಕ್ ಮತ್ತಷ್ಟು ಜನಪ್ರಿಯಗೊಳ್ಳುವುದಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

2020ಕ್ಕೂ ಮುನ್ನವೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಬಜಾಜ್

ರಾಜೀವ್ ಬಜಾಜ್ ಹೇಳಿರುವ ಮತ್ತೊಂದು ಮಹತ್ವದ ಹೇಳಿಕೆಯೊಂದು ಇದೀಗ ಭಾರತೀಯ ಆಟೋ ಉದ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ. ಅಗ್ಗದ ಬೆಲೆಯಲ್ಲಿ ಕಳಪೆ ಗುಣಮಟ್ಟದ ಸ್ಕೂಟರ್ ಮತ್ತು ಬೈಕ್ ಉತ್ಪಾದನೆಗೆ ಬಜಾಜ್ ಪ್ರೋತ್ಸಾಹಿಸುವುದಿಲ್ಲ ಎನ್ನುವ ಮೂಲಕ ಸುಜುಕಿ ಸಂಸ್ಥೆಯ ಯೋಜನೆಗೆ ಪರೋಕ್ಷ ಟಾಂಗ್ ನೀಡಿರುವ ರಾಜೀವ್ ಬಜಾಜ್ ಅವರು ಮುಂಬರುವ 2 ವರ್ಷದೊಳಗೆ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಬಿಎಸ್ 6 ಪ್ರೇರಿತ ವಾಹನಗಳನ್ನು ಸಹ ಬಿಡುಗಡೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2020ಕ್ಕೂ ಮುನ್ನವೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಬಜಾಜ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2030ರ ವೇಳೆಗೆ ಶೇ.90ರಷ್ಟು ವಾಹನಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ರಸ್ತೆಗಿಳಿಸುವ ಬೃಹತ್ ಯೋಜನೆಗೆ ಎಲ್ಲಾ ಆಟೋ ಉತ್ಪಾದಕರು ಮುಂದಾಗಿದ್ದು, ಈ ನಿಟ್ಟಿನಲ್ಲಿ ಬಜಾಜ್ ಕೈಗೊಂಡಿರುವ ಯೋಜನೆ ಕೂಡಾ ಮಹತ್ಪದಾಗಿದೆ.

Most Read Articles

Kannada
Read more on electric bike evergreen
English summary
Bajaj Electric Two-Wheeler Under Development — To Be Launched By 2020.
Story first published: Thursday, July 26, 2018, 10:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X