ಇನ್ಮುಂದೆ ಬಜಾಜ್ ಪಲ್ಸರ್ ಎಲ್ಎಸ್135 ಬೈಕ್ ಖರೀದಿಗೆ ಸಿಗೋದಿಲ್ವಂತೆ..!!

ಬಜಾಜ್ ಸಂಸ್ಥೆಯು ಇನ್ಮುಂದೆ ಪಲ್ಸರ್ ಎಲ್ಎಸ್ 135 ಬೈಕ್‌ಗಳ ಉತ್ಪಾದನೆಗೆ ಬ್ರೇಕ್ ಹಾಕಿದ್ದು, ಭಾರತೀಯ ಮಾರುಕಟ್ಟೆಯಲ್ಲಿನ ಹೊಸ ಎಲ್‌ಎಸ್ 135 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದೆ.

By Rahul Ts

ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಜನಪ್ರಿಯತೆಯನ್ನು ಹೊಂದಿರುವ ಬಜಾಜ್ ಸಂಸ್ಥೆಯು ಇನ್ಮುಂದೆ ಪಲ್ಸರ್ ಎಲ್ಎಸ್ 135 ಬೈಕ್‌ಗಳ ಉತ್ಪಾದನೆಗೆ ಬ್ರೇಕ್ ಹಾಕಿದ್ದು, ಭಾರತೀಯ ಮಾರುಕಟ್ಟೆಯಲ್ಲಿನ ಹೊಸ ಎಲ್‌ಎಸ್ 135 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದೆ.

ಇನ್ಮುಂದೆ ಬಜಾಜ್ ಪಲ್ಸರ್ ಎಲ್ಎಸ್135 ಬೈಕ್ ಖರೀದಿಗೆ ಸಿಗೋದಿಲ್ವಂತೆ..!!

ಕಳೆದ ಜನವರಿಯಲ್ಲಿ ಪಲ್ಸರ್ ಎಲ್ಎಸ್ 135 ಬೈಕ್‌ಗಳನ್ನು ಬಿಡುಗಡೆಗೊಳಿಸಿದ್ದ ಬಜಾಜ್ ಸಂಸ್ಥೆಯು ಇದೀಗ ಪಲ್ಸರ್ ಎಲ್ಎಸ್ 135 ಬೈಕ್ ಮಾರಾಟಕ್ಕೆ ಗುಡ್ ಬೈ ಹೆೇಳಿದ್ದು, ತನ್ನ ಅಧಿಕೃತ ವೆಬ್‍ಸೈಟ್‌ನಿಂದಲೂ ಎಲ್ಎಸ್ ಬೈಕ್‌ಗಳ ಬಗೆಗಿನ ಮಾಹಿತಿಯನ್ನು ಸಹ ತೆಗೆದು ಹಾಕಿದೆ.

ಇನ್ಮುಂದೆ ಬಜಾಜ್ ಪಲ್ಸರ್ ಎಲ್ಎಸ್135 ಬೈಕ್ ಖರೀದಿಗೆ ಸಿಗೋದಿಲ್ವಂತೆ..!!

ಇದಕ್ಕೆ ಕಾರಣ, ಬೇಡಿಕೆ ಕಡಿಮೆಯಾದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದ್ದು, ಭವಿಷ್ಯ ದಿನಗಳಲ್ಲಿ ಪಲ್ಸರ್ ಎಲ್ಎಸ್ 135 ಬೈಕುಗಳಿಗೆ ಸಮನಾಗಿ ಮತ್ತೊಂದು ಹೊಸ ಬಗೆಯ ಬೈಕ್‌ ಮಾದರಿಯನ್ನು ತಯಾರಿಸುತ್ತಿರುವ ಬಗ್ಗೆಯೂ ಮಾಹಿತಿ ಇದೆ.

ಇನ್ಮುಂದೆ ಬಜಾಜ್ ಪಲ್ಸರ್ ಎಲ್ಎಸ್135 ಬೈಕ್ ಖರೀದಿಗೆ ಸಿಗೋದಿಲ್ವಂತೆ..!!

ಬಜಾಜ್ ಪಲ್ಸರ್ ಎಲ್ಎಸ್ 135 ಬೈಕ್ ಸಂಸ್ಥೆಯ ಮೊದಲ ವೇಲ್ವ್-4 ತಂತ್ರಜ್ಞಾನ ಹೊಂದಿರುವ ಬೈಕ್ ಆಗಿದ್ದು, ವೇಲ್ವ್-4 ತಂತ್ರಜ್ಞಾನದ ಸಹಾಯದಿಂದ ಪಲ್ಸರ್ ಎಲ್ಎಸ್ 135 ಬೈಕ್ 150ಸಿಸಿ ಬೈಕ್‍‍ಗಳ ಸರಣಿಯಲ್ಲಿ ತನ್ನ ಆಕ್ರಮಣಕಾರಿ ಹಾಗು ಶಾರ್ಪ್ ಸ್ಟೈಲ್‍ನಿಂದಾಗಿ ಹೆಚ್ಚಾಗಿ ಸದ್ದುಮಾಡಿತ್ತು.

ಇನ್ಮುಂದೆ ಬಜಾಜ್ ಪಲ್ಸರ್ ಎಲ್ಎಸ್135 ಬೈಕ್ ಖರೀದಿಗೆ ಸಿಗೋದಿಲ್ವಂತೆ..!!

ಹೀಗಾಗಿ 2017ರಲ್ಲಿ ಬಜಾಜ್ ಸಂಸ್ಥೆಯು ಪಲ್ಸರ್ 135 ಬೈಕ್ ಅನ್ನು ಗ್ರಾಹಕರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿತ್ತು. ಇದರಲ್ಲಿ ಅಳವಡಿಸಲಾಗಿರುವ 135ಸಿಸಿ ಎಂಜಿನ್ ಸಹಾಯದಿಂದ 13ಬಿಹೆಚ್‍ಪಿ ಹಾಗು 11ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪದೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿತ್ತು.

ಇನ್ಮುಂದೆ ಬಜಾಜ್ ಪಲ್ಸರ್ ಎಲ್ಎಸ್135 ಬೈಕ್ ಖರೀದಿಗೆ ಸಿಗೋದಿಲ್ವಂತೆ..!!

ಮಾರಕಟ್ಟೆಯಲ್ಲಿ 125ಸಿಸಿ ಸ್ಪೋರ್ಟಿ ಬೈಕ್‌ಗಳಿಗೆ ಬೇಡಿಕೆಯು ಹೆಚ್ಚುತ್ತಿದ್ದು, ಈ ಕಾರಣದಿಂದಾಗಿಯೇ ಪಲ್ಸರ್ ಎಲ್ಎಸ್ 135 ಬೈಕ್ ಮಾರಾಟ ಮತ್ತು ಉತ್ಪಾದನೆಯನ್ನು ನಿಲ್ಲಿಸಲಾಗುತ್ತಿದೆ. ಹಾಗೆಯೇ ಪಲ್ಸರ್ 135 ಬೈಕ್ ಹೆಚ್ಚಿನ ಗ್ರಾಹಕರನ್ನು ಪಡೆಯುವಲ್ಲಿ ವಿಫಲವಾಗಿದ್ದು, ಮಾರಾಟದಲ್ಲಿಯೂ ಕೂಡ ವಿಫಲವಾಗಿತ್ತು.

ಇನ್ಮುಂದೆ ಬಜಾಜ್ ಪಲ್ಸರ್ ಎಲ್ಎಸ್135 ಬೈಕ್ ಖರೀದಿಗೆ ಸಿಗೋದಿಲ್ವಂತೆ..!!

ಬಜಾಜ್ ಪಲ್ಸರ್‍ 135 ಬೈಕ್ ಅನ್ನು ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿದ ನಂತರ ಡಿಸ್ಕವರ್ 125 ಹಾಗು ವಿ 125 ಬೈಕುಗಳು ಮಾತ್ರ ಬಜಾಜ್ ಸಂಸ್ಥೆಯ ಸ್ಥಿರವಾದ ಬೈಕುಗಳಾಗಿದ್ದು, ಬಜಾಜ್ ಸಂಸ್ಥೆಯು ಪಲ್ಸರ್ 135 ಬೈಕ್ ಅನ್ನು ಎಬಿಎಸ್ ತಂತ್ರಜ್ಞಾನವನ್ನು ಅಳವಡಿಸಿ ಮತ್ತೆ ಬಿಡುಗಡೆಗೊಳಿಸಬಹುದು ಎನ್ನಲಾಗಿದೆ.

ಇನ್ಮುಂದೆ ಬಜಾಜ್ ಪಲ್ಸರ್ ಎಲ್ಎಸ್135 ಬೈಕ್ ಖರೀದಿಗೆ ಸಿಗೋದಿಲ್ವಂತೆ..!!

ಬಜಾಜ್ ಪಲ್ಸರ್ 135 ಸಂಸ್ಥೆಯ ಸಣ್ಣ ಪ್ರಮಾಣದ ಬೈಕ್ ಆಗಿದ್ದರೂ ಮೈಲೇಜ್ ಹಾಗು ಸಾಮರ್ಥ್ಯದಲ್ಲಿ ಬಲಶಾಲಿಯಾಗಿತ್ತು. ಆದರೆ ಕಳಪೆ ಮಟ್ಟದ ಮಾರಾಟದ ಕಾರಣದಿಂದಾಗಿ ಬಜಾಜ್ ಸಂಸ್ಥೆಯು ಈ ಬೈಕ್ ಅನ್ನು ನಿಲ್ಲಿಸಲಾಗಿದ್ದು ಭವಿಷ್ಯದ ದಿನಗಳಲ್ಲಿ ಹೊಸ ನವೀಕರಣಗಳೊಂದಿಗೆ ತನ್ನ ಎದುರಾಳಿಗಳಿಗೆ ತೀವ್ರ ಪೈಪೋಟಿಯನ್ನು ನೀಡಬೇಕೆಂಬ ಯೋಜನೆಯಲ್ಲಿದೆ.

ಇನ್ಮುಂದೆ ಬಜಾಜ್ ಪಲ್ಸರ್ ಎಲ್ಎಸ್135 ಬೈಕ್ ಖರೀದಿಗೆ ಸಿಗೋದಿಲ್ವಂತೆ..!!

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಹೊಚ್ಚ ಹೊಸ ಬಜಾಜ್ ಪಲ್ಸರ್ 150 ಬೈಕಿನ ರಹಸ್ಯ ಚಿತ್ರಗಳು ಸೋರಿಕೆ..

2. ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

3. ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ...

4. ವಾಹನ ಸವಾರರ ಜೀವಕ್ಕೆ ಕುತ್ತು ತರುತಂತೆ ಟೈರ್ ಕಿಲ್ಲರ್ ಹಂಪ್?

5. ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

Most Read Articles

Kannada
Read more on pulsar
English summary
Bajaj Pulsar LS135 Discontinued In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X