ಸೆಂಕೆಂಡ್ ಹ್ಯಾಂಡ್ ಬೈಕ್‌ಗಳಿಂತಲೂ ಅಗ್ಗವಾದ ಹೊಸ ಬಜಾಜ್ ಸಿಟಿ100 ಬೆಲೆ

ನೂತನ ತಂತ್ರಜ್ಞಾನಗಳನ್ನು ಹೊಂದಿರುವ ಬಜಾಜ್ ಸಿಟಿ 100 ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಆರಂಭಿಕ ಬೆಲೆಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.30,714ಕ್ಕೆ ಲಭ್ಯವಾಗಿವೆ.

By Praveen Sannamani

ಬೈಕ್ ಖರೀದಿಗೆ ಇದೊಂದು ಸುವರ್ಣಾವಕಾಶ ಎಂದರೇ ತಪ್ಪಾಗಲಾರದು. ಏಕೆಂದರೆ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ಬಜಾಜ್ ಸಿಟಿ 100 ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಆರಂಭಿಕ ಬೆಲೆಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.30,714ಕ್ಕೆ ಲಭ್ಯವಾಗಿವೆ.

ಸೆಂಕೆಂಡ್ ಹ್ಯಾಂಡ್ ಬೈಕ್‌ಗಳಿಂತಲೂ ಅಗ್ಗವಾದ ಹೊಸ ಬಜಾಜ್ ಸಿಟಿ100 ಬೆಲೆ

ಹೊಸ ನಮೂನೆಯ ಗುರುತರ ವಿನ್ಯಾಸಗಳೊಂದಿಗೆ ಸಿದ್ಧಗೊಂಡಿರುವ ಸಿಟಿ 100 ಬೈಕ್‌ಗಳು ಒಟ್ಟು 3 ವಿವಿಧ ನಮೂನೆಗಳಲ್ಲಿ ಬಿಡುಗಡೆಗೊಂಡಿದ್ದು, ಹೊಸ ಮಾದರಿಗಳಲ್ಲಿ ಬಿಎಸ್-4 ಸೇರಿದಂತೆ ಎಎಚ್‍‌ಎ ಸೌಲಭ್ಯಗಳನ್ನು ಒದಗಿಸಿರುವ ಗುರುತರ ಬದಲಾವಣೆ ಎನ್ನಬಹುದು.

ಸೆಂಕೆಂಡ್ ಹ್ಯಾಂಡ್ ಬೈಕ್‌ಗಳಿಂತಲೂ ಅಗ್ಗವಾದ ಹೊಸ ಬಜಾಜ್ ಸಿಟಿ100 ಬೆಲೆ

ಸಿಟಿ 100 ಬೈಕ್ ಬೆಲೆಗಳು (ಎಕ್ಸ್‌ಶೋರಂ)

ಸಿಟಿ 100ಬಿ - ರೂ.30,714

ಸಿಟಿ 100 ಕೆಎಸ್ ಅಲಾಯ್ - ರೂ. 31,802

ಸಿಟಿ 100 ಇಎಸ್ ಅಲಾಯ್ - ರೂ. 39,885

ಸೆಂಕೆಂಡ್ ಹ್ಯಾಂಡ್ ಬೈಕ್‌ಗಳಿಂತಲೂ ಅಗ್ಗವಾದ ಹೊಸ ಬಜಾಜ್ ಸಿಟಿ100 ಬೆಲೆ

ಎಂಜಿನ್ ಸಾಮರ್ಥ್ಯ

ಸಿಟಿ100 ಸರಣಿಗಳು 99.27 ಸಿಸಿ ಸಿಂಗಲ್ ಸಿಲಿಂಡರ್ ಸಾಮರ್ಥ್ಯ ಹೊಂದಿದ್ದು, 8.1-ಬಿಎಚ್‌ಪಿ ಮತ್ತು 8.05-ಎಂಎನ್ ಉತ್ಪಾದನಾ ಶಕ್ತಿ ಹೊಂದಿರಲಿವೆ. ಈ ಮೂಲಕ ಮೈಲೇಜ್ ವಿಚಾರದಲ್ಲೂ ಇತರೆ ಬೈಕುಗಳಿಗೆ ಪ್ರತಿಸ್ಪರ್ಧಿಯಾಗಿರಲಿವೆ.

ಸೆಂಕೆಂಡ್ ಹ್ಯಾಂಡ್ ಬೈಕ್‌ಗಳಿಂತಲೂ ಅಗ್ಗವಾದ ಹೊಸ ಬಜಾಜ್ ಸಿಟಿ100 ಬೆಲೆ

ಇನ್ನು ಹೊಚ್ಚ ಹೊಸ ಮಾದರಿಗಳಲ್ಲಿ 4-ಸ್ಪೀಡ್ ಗೇರ್‌‌ಬಾಕ್ಸ್ ವ್ಯವಸ್ಥೆಯಿದ್ದು, ಗರಿಷ್ಠ ಪ್ರಮಾಣದಲ್ಲಿ ಪ್ರತಿಗಂಟೆಗೆ 90 ಕಿಮಿ ವೇಗ ಪಡೆದುಕೊಳ್ಳುವ ಶಕ್ತಿ ಪಡೆದುಕೊಂಡಿದ್ದು, 108-ಕೆ.ಜಿ ತೂಕ ಹೊಂದಿರುವ ಬಜಾಜ್ ಸಿಟಿ 100 ಮಾದರಿಗಳು, ಹೊಸ ವಿನ್ಯಾಸದಿಂದಾಗಿ ಗ್ರಾಹಕರನ್ನು ಸೆಳೆಯುದರಲ್ಲಿ ಯಾವುದೇ ಅನುಮಾನವಿಲ್ಲ.

ಸೆಂಕೆಂಡ್ ಹ್ಯಾಂಡ್ ಬೈಕ್‌ಗಳಿಂತಲೂ ಅಗ್ಗವಾದ ಹೊಸ ಬಜಾಜ್ ಸಿಟಿ100 ಬೆಲೆ

ಹೊಸ ಬೈಕ್‌ಗಳಲ್ಲಿ ಟೆಲಿಸ್ಕೋಪಿಕ್ ಫ್ರೋಕ್ಸ್ ಹಾಗೂ ಎಸ್ಎನ್ಎಸ್ ಅಳವಡಿಕೆಯಿದ್ದು, 110-ಎಂಎಂ ಡ್ರಮ್ ಬ್ರೇಕ್ ವ್ಯವಸ್ಥೆಯಿದೆ. ಜೊತೆಗೆ ಬಜಾಜ್ ಸಿಟಿ ಉನ್ನತ ಮಟ್ಟದ ಮಾದರಿಯಲ್ಲಿ ಅಲಾಯ್ ವೀಲ್ಹ್ ಪಡೆದುಕೊಂಡಿದೆ.

ಸೆಂಕೆಂಡ್ ಹ್ಯಾಂಡ್ ಬೈಕ್‌ಗಳಿಂತಲೂ ಅಗ್ಗವಾದ ಹೊಸ ಬಜಾಜ್ ಸಿಟಿ100 ಬೆಲೆ

ಜೊತೆಗೆ 10.5-ಲೀಟರ್ ಪ್ಯೂಲ್ ಟ್ಯಾಂಕ್ ಹಾಗೂ ಎಎಚ್‌ಒ (ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆಯಿದೆ. ಜೊತೆಗೆ ಬೈಕಿನ ಟೈರುಗಳು 3-ಇಂಚಿನಷ್ಟು ಅಗಲ ಹೊಂದಿದ್ದು, ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿರುವುದು ಬೈಕ್ ಆಯ್ಕೆಗೆ ಪ್ಲಸ್ ಪಾಯಿಂಟ್.

ಸೆಂಕೆಂಡ್ ಹ್ಯಾಂಡ್ ಬೈಕ್‌ಗಳಿಂತಲೂ ಅಗ್ಗವಾದ ಹೊಸ ಬಜಾಜ್ ಸಿಟಿ100 ಬೆಲೆ

ಇನ್ನು ಹೊಸ ಬೈಕ್‌ಗಳು ಪ್ರಮುಖ 2 ಬಣ್ಣಗಳಲ್ಲಿ ಲಭ್ಯವಿದೆ. ರೆಡ್ ಮತ್ತು ಎಬೋನಿ ಬ್ಲ್ಯಾಕ್‌ನಲ್ಲಿ ಸಿಗಲಿದ್ದು, ಬೈಕ್ ಹೊರ ವಿನ್ಯಾಸ ಸಾಕಷ್ಟು ಗಮನಸೆಳೆಯುತ್ತಿವೆ.

ಸೆಂಕೆಂಡ್ ಹ್ಯಾಂಡ್ ಬೈಕ್‌ಗಳಿಂತಲೂ ಅಗ್ಗವಾದ ಹೊಸ ಬಜಾಜ್ ಸಿಟಿ100 ಬೆಲೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಒಟ್ಟಾರೆ ಕಡಿಮೆ ಬಜೆಟ್‌ನಲ್ಲಿ ಒಂದು ಬೈಕ್ ಖರೀದಿ ಮಾಡಬೇಕೆಂಬ ಮಧ್ಯಮ ವರ್ಗಗಳಿಗೆ ಬಜಾಜ್ ಸಿಟಿ100 ಒಂದು ಅತ್ಯುತ್ತಮ ಬೈಕ್ ಮಾದರಿಯಾಗಿದ್ದು, ಸದ್ಯ ಸೆಂಕೆಂಡ್ ಹ್ಯಾಂಡ್ ಬೈಕ್ ಖರೀದಿಗೆ ಕಡಿಮೆ ಅಂದ್ರು 30 ರಿಂದ 40 ಸಾವಿರ ಬೇಕಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ಜಾಲತಾಣದಲ್ಲಿನ ವೈರಲ್ ಸ್ಟೋರಿಗಳು:

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ?

ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ಟ್ರಾಫಿಕ್ ಪೊಲೀಸ್ ಮಾಡಿದ ಅವಾಂತರಕ್ಕೆ ಗರ್ಭಿಣಿ ಸ್ಥಳದಲ್ಲೇ ಸಾವು

Most Read Articles

Kannada
Read more on ಬಜಾಜ್
English summary
Bajaj Slashes CT100 Prices Further; Makes it Shockingly Cheap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X