ವಿ12 ಬೈಕ್ ಮಾರಾಟಕ್ಕೆ ಬ್ರೇಕ್ ಹಾಕಿದ ಬಜಾಜ್..

ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ತಮ್ಮ ವಿ12 ಬೈಕ್ ಅನ್ನು ಕೆಲ ದಿನಗಳ ಕಾಲ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಭವಿಷ್ಯದಲ್ಲಿ ಮತ್ತೆ ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದೆ.

By Rahul Ts

ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ತಮ್ಮ ವಿ12 ಬೈಕ್ ಅನ್ನು ಕೆಲ ದಿನಗಳ ಕಾಲ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಭವಿಷ್ಯದಲ್ಲಿ ಮತ್ತೆ ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದೆ. ಅಸಲಿಗೆ ಹತಾಟನೆ ಈ ಬೈಕಿನ ಮಾರಾಟವನ್ನು ಸ್ಥಗಿತಗೊಳಿಸಲು ಸಂಸ್ಥೆಯು ಏಕೆ ತೀರ್ಮಾನಿಸಿದೆ ಎಂಬುದರ ಮಾಹಿತಿ ಇಂದಿನ ಲೇಖನದಲ್ಲಿ.

ಕೆಲ ದಿನಗಳ ಕಾಲ ದೊರೆಯುವುದಿಲ್ಲ ಬಜಾಜ್ ವಿ12 ಬೈಕ್..

ಕಳೆದ ವರ್ಷ ಬಿಡುಗಡೆಗೊಂಡ ಬಜಾಜ್ ವಿ12 ಬೈಕ್‍‍ಗಳು ಈ ವರ್ಷದ ಜನವರಿ ತಿಂಗಳಿನಲ್ಲಿ 1737 ಯೂನಿಟ್ ಬೈಕ್‍‍ಗಳು ಮಾರಾಟಗೊಂಡಿದ್ದವು, ಆದರೆ ನಂತರ 2018ರ ಮೇ ತಿಂಗಳಿನಲ್ಲಿ ಒಂದು ಬೈಕ್ ಕೂಡಾ ಮಾರಾಟವಾಗಲಿಲ್ಲ.

ಕೆಲ ದಿನಗಳ ಕಾಲ ದೊರೆಯುವುದಿಲ್ಲ ಬಜಾಜ್ ವಿ12 ಬೈಕ್..

ಈ ನಿಟ್ಟಿನಲ್ಲಿ ಬಜಾಜ್ ಸಂಸ್ಥೆಯ ಅಧಿಕೃತ ಡೀಲರ್‍‍ಗಳು ಕೂಡಾ ವಿ12 ಬೈಕಿನ ಸ್ಟಾಕ್ ಅನ್ನು ಪಡೆಯುವುದನ್ನು ನಿಲ್ಲಿಸಿದ್ದಾರೆ. ಇದಲ್ಲದೆ ಡೀಲರ್‍‍ಗಳು ಈ ಬೈಕ್‍‍ಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ನಿಲ್ಲಿಸಿದ್ದು, ಜೊತೆಗೆ ಸಂಸ್ಥೆಗೆ ಈ ಪರಿಸ್ಥಿತಿಯ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿ ವಿನಂತಿಸಿದ್ದಾರೆ.

ಕೆಲ ದಿನಗಳ ಕಾಲ ದೊರೆಯುವುದಿಲ್ಲ ಬಜಾಜ್ ವಿ12 ಬೈಕ್..

ಬಜಾಜ್ ವಿ12 ಬೈಕ್ ಸಂಸ್ಥೆಯ ಡಿಸ್ಕವರ್ 125 ಮತ್ತು ವಿ15 ಬೈಕ್‍‍ಗಳ ನಡುವೆ ಸ್ಥಾನವನ್ನು ಪಡೆದಿದ್ದು, ಮಾರುಕಟ್ಟೆಯಲ್ಲಿ ಡಿಸ್ಕವರ್ ಮತ್ತು ವಿ15 ಬೈಕ್‍‍ಗಳಿಗೆ ಮಾತ್ರವೇ ಬೇಡಿಕೆಯು ಹೆಚ್ಚಾಗಿದೆ.

ಕೆಲ ದಿನಗಳ ಕಾಲ ದೊರೆಯುವುದಿಲ್ಲ ಬಜಾಜ್ ವಿ12 ಬೈಕ್..

ಮೇಲೆ ಹೇಳಿದಂತೆ ಬಜಾಜ್ ವಿ12 ಕಳೆದ ವರ್ಷ ಬಿಡುಗಡೆಗೊಂಡಿದ್ದು, ಇದು ಸಂಸ್ಥೆಯ ಅಜೇಯ ವಿ ಸರಣಿಯ ಬೈಕ್ ಆಗಿದೆ. ಈ ಸರಣಿಯು ಭಾರತದ ಸಾಂಪ್ರದಾಯಿಕ ಐಎನ್ಎಸ್ ವಿಕ್ರಾಂಟ್ ಯುದ್ಧನೌಕೆಯಿಂದ ಸ್ಫೂರ್ತಿ ಪಡೆದಿದೆ.

ಕೆಲ ದಿನಗಳ ಕಾಲ ದೊರೆಯುವುದಿಲ್ಲ ಬಜಾಜ್ ವಿ12 ಬೈಕ್..

ವಿ12 ತನ್ನ ವಿ15 ಬೈಕ್‍‍ನಿಂದ ವಿನ್ಯಾಸವನ್ನು ಆಧರಿಸಿದ್ದು, ಇದರಲ್ಲಿ ಹೊಸದಾಗಿ ಕ್ರೋಮ್ ಇನ್ಸರ್ಟ್ಸ್ ಮತ್ತು ಮರುವಿನ್ಯಾಸಗೊಳಿಸಲಾದ ಟ್ಯುಬ್ ಟೈರ್ಸ್‍‍ನೊಂದಿಗೆ ಅಲಾಯ್ ವ್ಹೀಲ್‍‍ಗಳನ್ನು ಪದೆದುಕೊಂಡಿದೆ. ಇನ್ನು ಇದರಲ್ಲಿ ಸಾಧಾರಣ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಎರಡು ಬದಿಯಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಕೆಲ ದಿನಗಳ ಕಾಲ ದೊರೆಯುವುದಿಲ್ಲ ಬಜಾಜ್ ವಿ12 ಬೈಕ್..

ಎಂಜಿನ್ ಸಾಮರ್ಥ್ಯ

ಬಜಾಜ್ ವಿ12 ಬೈಕ್‍‍ಗಳು 124ಸಿಸಿ ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 10.5ಬಿಹೆಚ್‍ಪಿ ಮತ್ತು 10.9ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಕೆಲ ದಿನಗಳ ಕಾಲ ದೊರೆಯುವುದಿಲ್ಲ ಬಜಾಜ್ ವಿ12 ಬೈಕ್..

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಸಂಸ್ಥೆಯು ವಿ12 ಅನ್ನು ಸ್ಥಗಿತಗೊಳಿಸುವುದು ತಾತ್ಕಾಲಿಕವಾಗಿದ್ದು, ಕೆಲವು ತಿಂಗಳುಗಳಲ್ಲಿ ಮೋಟಾರ್ಸೈಕಲ್ ಮತ್ತೆ ಮಾರಾಟವಾಗಲಿದೆ ಎಂದು ಬಜಾಜ್ ದೃಢಪಡಿಸಿದೆ.

ಕೆಲ ದಿನಗಳ ಕಾಲ ದೊರೆಯುವುದಿಲ್ಲ ಬಜಾಜ್ ವಿ12 ಬೈಕ್..

ಆದರೆ ಇದೇ ರೀತಿಯಲ್ಲಿ ಈ ಹಿಂದೆಯು ಬಜಾಜ್ ಸಂಸ್ಥೆಯು ತಮ್ಮ ಪಲ್ಸರ್ 135ಎಲ್ಎಸ್ ಬೈಕ್ ಅನ್ನು ಕೆಲವು ತಿಂಗಳು ಕಾಲ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಮತ್ತೆ ಕೆಲದಿನಗಳ ನಂತರ ಪಲ್ಸರ್ ಬೈಕ್‍‍ನಲ್ಲಿ ಹೊಸ ವೈಶಿಷ್ಟ್ಯತೆಗಳನ್ನು ಮತ್ತು ನಿವ್ಯಾಸವನ್ನು ನವೀಕರಿಸಿ ಬಿಡುಗಡೆಗೊಳಿಸಿತ್ತು.

Most Read Articles

Kannada
Read more on bajaj auto sales bike
English summary
Bajaj V12 Discontinued Temporarily.
Story first published: Thursday, July 5, 2018, 14:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X