Just In
- 6 min ago KWID: ಜನಪ್ರಿಯ ರೆನಾಲ್ಟ್ ಕ್ವಿಡ್ ಕಾರು ಖರೀದಿಸಬೇಕೇ.. ಆನ್ - ರೋಡ್ ಬೆಲೆ ಏನು, EMI ಎಷ್ಟು?
- 33 min ago Citroen Basalt Vision: ಸಿಟ್ರನ್ ಹೊಸ ಕಾಂಪ್ಯಾಕ್ಟ್ ಎಸ್ಯುವಿ ಅನಾವರಣ... ಬಿಡುಗಡೆಗೆ ಸಜ್ಜು!
- 1 hr ago ತಂದೆಯ ಪ್ರೀತಿ: ಮಗಳಿಗೆ ರೂ.2.44 ಕೋಟಿ ಬೆಲೆಯ ಮರ್ಸಿಡಿಸ್ ಕಾರು ಗಿಫ್ಟ್ ನೀಡಿದ ಬಿಜೆಪಿ ಲೀಡರ್
- 1 hr ago ಅಮೆರಿಕದಲ್ಲಿ ಸೇತುವೆಗೆ ಹಡಗು ಡಿಕ್ಕಿ: ಜೀವ ಹಾನಿ ತಪ್ಪಿಸಿದ ಭಾರತೀಯ ಸಿಬ್ಬಂದಿಗಳು
Don't Miss!
- News ಮಹೀಂದ್ರಾ ಥಾರ್ ಮುಂದೆ ನಿಂತು ವಾರದೊಳಗೆ ಮಗಳನ್ನು ಮದುವೆಯಾದವರಿಗೆ ಬ್ಲ್ಯಾಂಕ್ ಚೆಕ್ ಕೊಡುತ್ತೇನೆಂದ ತಂದೆ-ವಿಡಿಯೋ ವೈರಲ್
- Movies Amruthadhaare ; ಅತ್ತೆ ಎದುರಿಗೇ ಗಟ್ಟಿ ಧ್ವನಿ ಎತ್ತಿದ ಮಲ್ಲಿ : ಹೆಂಡತಿಗೆ ಸುಳ್ಳು ಭರವಸೆ ಕೊಟ್ಟ ಜೈದೇವ..!
- Sports Rohit Sharma: ಆರ್ಸಿಬಿಗೆ ಬನ್ನಿ ರಾಜನಂತೆ ನೋಡ್ಕೊಂತೀವಿ- ರೋಹಿತ್ ಶರ್ಮಾಗೆ ಸ್ವಾಗತ ಕೋರಿದ ಬೆಂಗಳೂರು ಫ್ಯಾನ್ಸ್
- Finance ಹಣದ ಕಂತೆಯನ್ನೇ ಹಾಸಿಗೆ ಮಾಡಿ ಮಲಗಿದ ರಾಜಕಾರಣಿ ಫೋಟೋ ವೈರಲ್!
- Lifestyle ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ..! ಎಷ್ಟು ಲಾಭವಿದೆ ಗೊತ್ತಾ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಟಿಎಮ್ ಡ್ಯೂಕ್ 390 ಬೈಕ್ಗೆ ಪೈಪೋಟಿ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..
ಇಟಾಲಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬೆನೆಲ್ಲಿ ತಮ್ಮ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಕ್ರಿಯೆಗೊಳಿಸಲು ಹೈದೆರಾಬಾದ್ನ ಮಹವೀರ್ ಗ್ರೂಪ್ನೊಂದಿಗೆ ಕೈ ಜೋಡಿಸಿದೆ. ಬೆನೆಲ್ಲಿ ಮತ್ತು ಮಹವೀರ್ ಗ್ರೂಪ್ ಸೇರಿ ದೇಶಿಯ ಮಾರುಕಟ್ಟೆಗೆ
ಇಟಾಲಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬೆನೆಲ್ಲಿ ತಮ್ಮ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಕ್ರಿಯೆಗೊಳಿಸಲು ಹೈದೆರಾಬಾದ್ನ ಮಹವೀರ್ ಗ್ರೂಪ್ನೊಂದಿಗೆ ಕೈ ಜೋಡಿಸಿದೆ. ಬೆನೆಲ್ಲಿ ಮತ್ತು ಮಹವೀರ್ ಗ್ರೂಪ್ ಸೇರಿ ದೇಶಿಯ ಮಾರುಕಟ್ಟೆಗೆ ಹೊಸ ಬೈಕ್ಗಳನ್ನು ಪರಿಚಯಿಸುವ ಯೋಜನೆಯಲ್ಲಿದ್ದಾರೆ.
ಇದೀಗ ಮಾಹಿತಿಗಳ ಪ್ರಕಾರ ಬೆನೆಲ್ಲಿ ಸಂಸ್ಥೆಯು ಕೆಟಿಎಮ್ ಡ್ಯೂಕ್ 390 ಬೈಕ್ಗೆ ಪೈಪೋಟಿಯಾಗಿ ಟಿಎನ್ಟಿ 302ಎಸ್ ಬೈಕ್ ಅನ್ನು ಬಿಡುಗದೆಗೊಳಿಸಲಿದೆ. ಈ ಬೈಕ್ ಪ್ರಸ್ತುತ ಮಾರಟದಲ್ಲಿರುವ ಬೆನೆಲ್ಲಿ ಟಿಎನ್ಟಿ 300 ಬೈಕ್ನ ಸ್ಥಾನವನ್ನು ಭರ್ತಿ ಮಾಡಲಿದ್ದು, ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ.
ಬೆನೆಲ್ಲಿ ಟಿಎನ್ಟಿ ಆಧೂನಿಕ ವಿನ್ಯಾಸದ ಶೈಲಿಯನ್ನು ಹೊಂದಿದ್ದು, ಟಿಎನ್ತಿ 300 ಬೈಕ್ಗಿಂತಾ ಆಕರ್ಶಕವಾದ ಸ್ಪೋರ್ಟಿ ಲುಕ್ ಅನ್ನು ಪಡೆದುಕೊಂಡಿದೆ. ಬೈಕ್ನ ಮುಂಭಾಗದಲ್ಲಿ ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ನೊಂದಿಗೆ ಎಲ್ಇಡಿ ಹೆಡ್ಲ್ಯಾಂಪ್ಸ್ ಅನ್ನು ಒದಗಿಸಲಾಗಿದೆ.
ಆಕ್ರಮಣಕಾರಿ ವಿನ್ಯಾಸದಲ್ಲಿ ಕಾಣಲು ಬೆನೆಲ್ಲಿ 302ಎಸ್ ಬೈಕ್ನಲ್ಲಿ ಅಗ್ರೆಸಿವ್ ಶ್ರಾಡ್ಸ್ ನೊಂದಿಗೆ ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ಅನ್ನು ಪಡೆದಿದ್ದು, ಎತ್ತರವಾದ ಸಂಗಲ್ ಪೀಸ್ ಸೀಟ್, ಮತ್ತು ಎಲ್ಇಡಿ ಟೈಲ್ ಲೈಟ್ ಹಾಗು ಅಗಲವಾದ ರಿಯರ್ ಟೈರ್ ಅನ್ನು ಪಡೆದುಕೊಂಡಿದೆ.
ಬಿಡುಗಡೆಗೊಳ್ಳಲಿರುವ ಬೆನೆಲ್ಲಿಯ ನೇಕೆಡ್ ಮೋಟರ್ಸೈಕಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್ಲೈಟ್ ಮತ್ತು ಟೈಲ್ ಲೈಟ್, ಅಲ್ಯೂಮೀನಿಯಮ್ ಎಕ್ಸಾಸ್ಟ್ ಪ್ಲೆಟ್, ಸ್ಪ್ಲಿಟ್ ಗ್ರ್ಯಾಬ್ ರೈಲ್ಸ್ ಮತ್ತು ಅಲಾಯ್ ವ್ಹೀಲ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.
ಬೆನೆಲ್ಲಿ ಟಿಎನ್ಟಿ 302ಎಸ್ ಬೈಕ್ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದ ಚಕ್ರಗಳಿಗೆ ಟ್ವಿನ್ ಪೆಟಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿರಲಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
ಬೆನೆಲ್ಲಿ 302ಎಸ್ ಬೈಕ್ 300ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಸಹಯಾದಿಂದ 37.5 ಬಿಹೆಚ್ಪಿ ಮತ್ತು 25.6 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. 16 ಲೀಟರ್ನ ಫ್ಯುಯಲ್ ಟ್ಯಾಂಕ್ ಮತ್ತು 203 ಕಿಲೋಗ್ರಾಂ ತೂಕವನ್ನು ಹೊಂದಿರಲಿದೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಬೆನೆಲ್ಲಿ ಮತ್ತು ಮಹವೀರ್ ಗ್ರೂಪ್ ಜೊತೆಗೂಡಿ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಬೈಕ್ಗಳನ್ನು ಬಿಡುಗಡೆಗೊಳಿಸುವ ಯೋಜನೆಯಲಿದೆ. ಬೆನೆಲ್ಲಿ 302ಎಸ್ ಶೀಘ್ರವೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದ್ದು, ಮಾರುಕಟ್ಟೆಯಲ್ಲಿನ ಬಿಎಮ್ಡಬ್ಲ್ಯೂ ಜಿ 310 ಆರ್ ಮತ್ತು ಕೆಟಿಎಮ್ ಡ್ಯೂಕ್ 390 ಬೈಕ್ಗಳಿಗೆ ಪೈಪೋಟಿ ನೀಡಲಿದೆ.