200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

By Praveen Sannamani

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಕಮ್ಯೂಟರ್ ಬೈಕ್ ಮಾದರಿಗಳಿಗೆ ಭಾರೀ ಬೇಡಿಕೆಯಿದ್ದು, ಯುವ ಸಮುದಾಯವನ್ನೇ ಮುಖ್ಯ ಗುರಿಯಾಗಿಸಿಕೊಂಡು ಹಲವು ಬೈಕ್ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಮಧ್ಯಮ ಕ್ರಮಾಂಕದ ರೇಸ್ ಎಡಿಷನ್‌ಗಳನ್ನು ಪರಿಚಯಿಸುತ್ತಿವೆ. ಅದರಲ್ಲಿ ಜನಪ್ರಿಯವಾಗಿರುವ ಮತ್ತು ಖರೀದಿಗೆ ಉತ್ತಮವಾಗಿರುವ ಕೆಲವು ಬೈಕ್ ಆವೃತ್ತಿಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಹೊಸ ಬೈಕ್ ಖರೀದಿ ಯೋಜನೆಯಲ್ಲಿರುವ ಓದುಗರಿಗೆ ಇದು ಸಹಾಯವಾಗಬಹುದು.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

ಮಾರುಕಟ್ಟೆಯಲ್ಲಿ ಇದೀಗ ದಿನಕ್ಕೊಂದು ಹೊಸ ಹೊಸ ಬೈಕ್‌ ಮಾದರಿಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಆದ್ರೆ ಬೈಕ್ ಬೆಲೆ ಮತ್ತು ಪರ್ಫಾಮೆನ್ಸ್ ವಿಚಾರವಾಗಿ ಬಹುತೇಕ ಬೈಕ್ ಮಾದರಿಗಳು ಹಿನ್ನಡೆ ಅನುಭವಿಸುತ್ತಲೇ ಇವೆ. ಹೀಗಾಗಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಉತ್ತಮ ಪರ್ಫಾಮೆನ್ಸ್ ಬೈಕ್ ಪಟ್ಟಿಯನ್ನ ಇಲ್ಲಿ ನೀಡಲಾಗುತ್ತಿದ್ದು, ಇವುಗಳು ಎಲ್ಲಾ ವರ್ಗ ಗ್ರಾಹಕರಿಗೂ ಉತ್ತಮ ಮಾದರಿಗಳಾಗಬಹುದು ಎಂಬುವುದು ನಮ್ಮ ನಂಬಿಕೆ.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

ಹೀರೋ ಎಕ್ಸ್‌ಟ್ರಿಮ್ 200ಆರ್

ಹೀರೋ ಸಂಸ್ಥೆಯು ಕಮ್ಯೂಟರ್ ಬೈಕ್ ಪ್ರೇಮಿಗಳನ್ನು ಸೆಳೆಯುವ ಉದ್ದೇಶದೊಂದಿಗೆ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಯನ್ನು ಸಿದ್ದಗೊಳಿಸಿದ್ದು, ಹೀರೋ ಸಿಬಿಝೆಡ್ ಎಕ್ಸ್‌ಟ್ರಿಮ್ ಬೈಕಿನ ಮುಂದುವರೆದ ಮಾದರಿ ಇದಾಗಿದೆ. ಸದ್ಯ ಈಶಾನ್ಯ ರಾಜ್ಯಗಳಲ್ಲಿ ಮಾತ್ರವೇ ಬಿಡುಗಡೆಯಾಗಿ ಮಾರಾಟವಾಗುತ್ತಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಎಕ್ಸ್‌ಶೋರಂ ಪ್ರಕಾರ 88 ಸಾವಿರ ಬೆಲೆ ಹೊಂದಿದ್ದು, ದಸರಾ ವೇಳೆಗೆ ದೇಶಾದ್ಯಂತ ಖರೀದಿ ಲಭ್ಯವಾಗಲಿವೆ.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

ಕಡಿಮೆ ಬೆಲೆ ಗಳಲ್ಲಿ ಲಭ್ಯವಾಗುವ ಬೆಸ್ಟ್ ಪರ್ಫಾಮೆನ್ಸ್ ಬೈಕ್‌ ಇದಾಗಿದ್ದು, 200 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಗಳು 18.1-ಬಿಎಚ್‌ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

ಇದಲ್ಲದೇ ಬೈಕ್ ಮುಂಭಾಗ ಮತ್ತು ಹಿಂಭಾಗದಲ್ಲಿ 37-ಎಂಎಂ ಟೆಲಿಸ್ಕೋಪಿಕ್ ಸಸ್ಪೆಷನ್, 276-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 220-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಸುರಕ್ಷತೆಗಾಗಿ ಸಿಂಗಲ್ ಚಾನಲ್ ಎಬಿಎಸ್ ಟೆಕ್ನಾಲಜಿ ಅನ್ನು ಸಹ ಹೊಂದಿದೆ.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

ಬಜಾಜ್ ಪಲ್ಸರ್ ಎನ್ಎಸ್200

ಕಮ್ಯೂಟರ್ ಬೈಕ್ ವಿಭಾಗದಲ್ಲಿ ಮತ್ತೊಂದು ಜನಪ್ರಿಯ ಬೈಕ್ ಆವೃತ್ತಿ ಅಂದ್ರೆ ಅದು ಪಲ್ಸರ್ ಎನ್ಎಸ್200. ಕಳೆದ ವರ್ಷದ ಕೊನೆಯಲ್ಲಿ ಪಲ್ಸರ್ ಎನ್‌ಎಸ್200 ಸ್ಟ್ರೀಟ್ ಫೈಟರ್ ಎಬಿಎಸ್ ರೂಪಾಂತರವನ್ನು ಸಹ ಪರಿಚಯಿಸಲಾಗಿದ್ದು, ಸಾಮಾನ್ಯ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 1.06 ಲಕ್ಷಕ್ಕೆ ಹಾಗೂ ಎಬಿಎಸ್ ಪ್ರೇರಿತ ಮಾದರಿಯು ರೂ. 1.18 ಲಕ್ಷ ಬೆಲೆ ಹೊಂದಿವೆ.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಮಾದರಿಯು 199.5 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆ ಹೊಂದಿದ್ದು, 23.17-ಬಿಎಚ್‌ಪಿ ಮತ್ತು 18.3-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6-ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ

ದೇಶದ ಜನಪ್ರಿಯ ಬೈಕ್ ಮಾದರಿಗಳಲ್ಲಿ ಒಂದಾಗಿರುವ ಅಪಾಚೆ ಸರಣಿ ಬೈಕ್‌ಗಳಲ್ಲೇ ಆರ್‌ಟಿಆರ್ 200 4ವಿ ಮಾದರಿಯು ಅತಿಹೆಚ್ಚು ಮಾರಾಟವಾಗುತ್ತಿರುವ ಮಾದರಿಯಾಗಿದ್ದು, ಗ್ರಾಹಕರ ತಮ್ಮ ಆದ್ಯತೆ ಮೆರೆಗೆ ಅಪಾಚೆ ಆರ್‌ಟಿಆರ್ 200 4ವಿ ಮಾದರಿಯಲ್ಲೇ ರೇಸ್ ಎಡಿಷನ್ 2.0 ಮಾದರಿಯನ್ನು ಸಹ ಆಯ್ಕೆ ಮಾಡಬಹುದಾಗಿದೆ.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

197.75 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಗಳು 20.2-ಬಿಎಚ್‌ಪಿ ಮತ್ತು 18.1-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಈ ಮೂಲಕ ದೆಹಲಿ ಎಕ್ಸ್‌ಶೋರಂ ಪ್ರಕಾರ ಸಾಮಾನ್ಯ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳು ರೂ. 91,615ರಿಂದ ರೂ. 1,06,415 ಬೆಲೆ ಹೊಂದಿದ್ದರೇ ರೇಸ್ ಎಡಿಷನ್‌ಗಳು ರೂ. 95,588ರಿಂದ ರೂ. 1.10 ಲಕ್ಷ ಬೆಲೆ ಪಡೆದುಕೊಂಡಿವೆ.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

ಯಮಹಾ ಎಫ್‌ಜೆಡ್ 25

ಕಮ್ಯೂಟರ್ ಬೈಕ್ ವಿಭಾಗದಲ್ಲಿ ಸದ್ಯ ಹೆಚ್ಚಿನ ಬೇಡಿಕೆ ಕಾಯ್ದುಕೊಂಡಿರುವ ಎಫ್‌ಜೆಡ್ 25 ಬೈಕ್ ಮಾದರಿಗಳು 200 ಸಿಸಿ ಗಿಂತಲೂ ಹೆಚ್ಚಿನ ಎಂಜಿನ್ ಸಾಮರ್ಥ್ಯವನ್ನ ಪಡೆದಿದ್ದು, 249 ಸಿಸಿ ಫ್ಯೂಲ್ ಇಂಜೆಕ್ಷನ್ ಎಂಜಿನ್‌ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಸೇರಿ ಹಲವು ಹೊಸ ಸೌಲಭ್ಯಗಳನ್ನು ಪಡೆದಿದೆ.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

ದೆಹಲಿ ಎಕ್ಸ್‌ಶೋರಂ ಪ್ರಕಾರ 1.19 ಲಕ್ಷ ಬೆಲೆ ಹೊಂದಿರುವ ಯಮಹಾ ಎಫ್‌ಜೆಡ್ 25 ಬೈಕ್‌ಗಳು 123 ಟಾಪ್ ಸ್ಪೀಡ್‌ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿದ್ದು, ಬಜಾಜ್ ಎನ್ಎಸ್ 200 ಬೈಕ್‌ಗಳಿಗೆ ತ್ರೀವ ಪೈಪೋಟಿ ನೀಡುತ್ತಿದೆ.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

ಕೆಟಿಎಂ 200 ಡ್ಯೂಕ್

ಸೇಕೆಂಡ್ ಜನರೇಷನ್ ಡ್ಯೂಕ್ 200 ಮಾದರಿಗಿಂತಲೂ ವಿಶೇಷ ವಿನ್ಯಾಸಗಳನ್ನು ಹೊಂದಿರುವ ಹೊಸ ಡ್ಯೂಕ್ 200 ಬೈಕ್‌ಗಳು ಸುಧಾರಿತ ತಂತ್ರಜ್ಞಾನಗಳ ಜೊತೆ ಜೊತೆಗೆ ಆರೇಂಜ್ ಮತ್ತು ವೈಟ್ ಡ್ಯುಯಲ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 1.50 ಲಕ್ಷ ಬೆಲೆ ಹೊಂದಿವೆ.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

199.5 ಸಿಸಿ ಸಿಂಗಲ್ ಸಿಲಿಂಡರ್, ಫ್ಯೂಲ್ ಇಂಜೆಕ್ಷನ್ ಎಂಜಿನ್ ಹೊಂದಿರುವ 2018ರ ಡ್ಯೂಕ್ 200 ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 26-ಬಿಎಚ್‌ಪಿ ಮತ್ತು 19.2-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

ಬಜಾಜ್ ಅವೆಂಜರ್ 220

ಕ್ರೂಸ್ ಬೈಕ್ ಮಾದರಿಗಳಲ್ಲಿ ಸದ್ಯ ಉತ್ತಮ ಬೇಡಿಕೆಯಲ್ಲಿರುವ ಬಜಾಜ್ ಅವೆಂಜರ್ ಕ್ರೂಸ್ 220 ಮತ್ತು ಸ್ಟ್ರೀಟ್ 220 ಬೈಕ್‌ಗಳು ಕಡಿಮೆ ಬೆಲೆಗಳಲ್ಲಿ ಲಭ್ಯವಿರುವ ಉತ್ತಮ ಪರ್ಫಾಮೆನ್ಸ್ ಬೈಕ್‌ ಮಾದರಿಗಳಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.93,000 ರಿಂದ ರೂ. 1,00,083ಕ್ಕೆ ಖರೀದಿಸಬಹುದಾಗಿದೆ.

200ಸಿಸಿ ಸಾಮರ್ಥ್ಯದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು..

ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220 ಆವೃತ್ತಿಗಳು 220 ಸಿಸಿ ಟ್ವಿನ್ ಸ್ಪಾರ್ಕ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 18.7-ಬಿಎಚ್‌ಪಿ, 17.5-ಎನ್ಎಂ ಟಾರ್ಕ್ ಉತ್ಪಾದಿಬಲ್ಲವು. ಜೊತೆಗೆ ಆಯ್ಕೆ ರೂಪದಲ್ಲಿ ಎಬಿಎಸ್, ಉತ್ತಮ ಮಾದರಿಯ ಡಿಸ್ಕ್ ಬ್ರೇಕ್ ಸಿಸ್ಟಂ ಮತ್ತು ಕ್ಲಾಸಿಕ್ ಲುಕ್ ನೀಡಿರುವುದು ಹೊಸ ಬೈಕ್‌ಗಳ ಮೌಲ್ಯವನ್ನು ಹೆಚ್ಚಿಸಿವೆ ಎನ್ನಬಹುದು.

Most Read Articles

Kannada
English summary
Best 200cc Bikes In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X