ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಬಿಎಂಡಬ್ಲ್ಯು ಸಂಸ್ಥೆಯ ಬೈಕ್ ಉತ್ಪಾದನಾ ವಿಭಾಗವಾದ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಭಾರತದಲ್ಲಿ ವಿವಿಧ ಮಾದರಿಯ ಪ್ರೀಮಿಯಂ ಬೈಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ ಜುಲೈ ತಿಂಗಳಿನಲ್ಲಿ ಬಿಡುಗಡೆ ಮಾಡಿರುವ ಅಗ್ಗದ ಬೆಲೆಯ ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳ ಮೇಲೆ ಮತ್ತಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಸೂಪರ್ ಬೈಕ್‌ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಬೆಲೆಯಲ್ಲಿ ಹೊರತರಲಾಗಿರುವ ಬಿಎಂಡಬ್ಲ್ಯು ಹೊಸ ಬೈಕ್‌ಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಹತ್ತು ಹಲವು ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಬೈಕ್‌ಗಳು ಕಮ್ಯೂಟರ್ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಿವೆ. ಹೀಗಾಗಿ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಹೊಸ ಬೈಕ್ ಖರೀದಿ ಮೇಲೆ ಭರ್ಜರಿ ಆಫರ್ ನೀಡಲಾಗುತ್ತಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಮಾಹಿತಿಗಳ ಪ್ರಕಾರ, ದೇಶದ ವಿವಿಧ ನಗರಗಳಲ್ಲಿರುವ ಬಿಎಂಡಬ್ಲ್ಯು ಬೈಕ್ ಶೋರೂಂಗಳಲ್ಲಿ ಜಿ 310 ಜಿಎಸ್ ಮತ್ತು ಜಿ 310 ಆರ್ ಖರೀದಿ ಮೇಲೆ ರೂ. 40 ಸಾವಿರದಿಂದ ರೂ.50 ಸಾವಿರ ಆಫರ್ ನೀಡಲಾಗುತ್ತಿದ್ದು, ಕೆಲವು ಕಡೆಗಳಲ್ಲಿ ಉಚಿತ ವಿಮೆ ಸೇರಿದಂತೆ ವಿವಿಧ ಮಾದರಿಯ ಹೊಸ ಆಫರ್ ಘೋಷಣೆ ಮಾಡುತ್ತಿವೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಬಿಎಂಡಬ್ಲ್ಯು ಸಂಸ್ಥೆಯ ಬೈಕ್ ಉತ್ಪಾದನಾ ವಿಭಾಗವಾದ ಬಿಎಂಡಬ್ಲ್ಯು ಮೊಟೊರಾಡ್‌ನಿಂದ ಭಾರತೀಯ ಗ್ರಾಹಕರಿಗಾಗಿಯೇ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಜಿ 310 ಆರ್ ಬೈಕ್ ಮಾದರಿಯು ರೂ. 2.99 ಲಕ್ಷಕ್ಕೆ ಮತ್ತು ಜಿ 310 ಜಿಎಸ್ ಬೈಕ್ ಮಾದರಿಯು ರೂ.3.49 ಲಕ್ಷಕ್ಕೆ ಖರೀದಿಗೆ ಲಭ್ಯವಾಗಿದ್ದವು.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಇದೀಗ ಬೈಕ್‌ಗಳ ಮೇಲೆ ಆಫರ್ ಘೋಷಣೆ ಹಿನ್ನೆಲೆ ವಿವಿಧ ನಗರ ಮತ್ತು ಡಿಲರ್ಸ್‌ಗಳಿಗೆ ಅನುಗುಣವಾಗಿ ಪ್ರತಿ ಬೈಕ್ ಬೆಲೆಯಲ್ಲಿ ರೂ.40 ಸಾವಿರ ರೂ.50 ಸಾವಿರ ಕ್ಯಾಶ್ ಆಫರ್ ದೊರೆಯಲಿದ್ದು, ಈ ಹೊಸ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರಲಿವೆ ಎನ್ನಲಾಗಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಇನ್ನು ಬಿಎಂಡಬ್ಯು ಸಂಸ್ಥೆಯು ಮೊದಲ ಬಾರಿಗೆ ಭಾರತದಲ್ಲೇ ತನ್ನ ಹೊಸ ಬೈಕ್ ಉತ್ಪನ್ನಗಳನ್ನು ಅಭಿವೃದ್ಧಿ ಮಾಡಿದ್ದು, ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಟಿವಿಎಸ್ ಜೊತೆ ಕೈಜೋಡಿಸಿದೆ. ತಮಿಳುನಾಡಿನ ಹೊಸೂರುನಲ್ಲಿರುವ ಟಿವಿಎಸ್ ಬೈಕ್ ಉತ್ಪಾದನಾ ಘಟಕದಲ್ಲೇ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನ ಉತ್ಪಾದನೆ ಮಾಡಿರುವುದು ಮತ್ತೊಂದು ವಿಶೇಷ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಜಿ 310 ಆರ್ ಬೈಕ್ (ಸ್ಟ್ರೀಟ್ ಫೈಟರ್)

ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಆವೃತ್ತಿಯು ಸಹ ನಕೆಡ್ ಮೋಟಾರ್ ಸೈಕಲ್ ವಿನ್ಯಾಸಗಳೊಂದಿಗೆ ಗ್ರಾಹಕರ ಕೈ ಸೇರಿದ್ದು, ಬಿಎಂಡಬ್ಲ್ಯು ಎಸ್ 1000 ಬೈಕ್ ಮಾದರಿಯಲ್ಲೇ 41ಎಂಎಂ ಯುಎಸ್‌ಡಿ ಗೋಲ್ಡನ್ ಫೋಕ್ಸ್, 17-ಇಂಚಿನ ಫೈವ್ ಸ್ಪೋಕ್ ಕಾಸ್ಟ್ ಅಲ್ಯುನಿಯಂ ವೀಲ್ಹ್‌ಗಳನ್ನು ಪಡೆದುಕೊಂಡಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಬರೋಬ್ಬರಿ 158.5 ಕೆ.ಜಿ ತೂಕ ಹೊಂದಿರುವ ಜಿ 310 ಆರ್ ಬೈಕ್‌ಗಳು ಡ್ಯುಯಲ್ ಚಾನೆಲ್ ಎಬಿಎಸ್, 140ಎಂಎಂ ಫ್ರಂಟ್ ಸಸ್ಷೆಷನ್, 131ಎಂಎಂ ರಿಯರ್ ಸಸ್ಷೆಷನ್, 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಲಭ್ಯವಿರುವ ಬಣ್ಣಗಳು- ಒಟ್ಟು ಮೂರು ಬಣ್ಣಗಳಲ್ಲಿ ಲಭ್ಯವಿರುವ ಜಿ 310 ಆರ್ ಬೈಕ್‌ಗಳನ್ನ ಸ್ಟೈಲ್ ಹೆಚ್‌ಪಿ( ಪರ್ಲ್ ವೈಟ್ + ಹೆಚ್‌ಪಿ ಬ್ಯಾಡ್ಜ್), ಕಾಸ್ಮಿಕ್ ಬ್ಲ್ಯಾಕ್ ಮತ್ತು ರೇಸಿಂಗ್ ರೆಡ್ ಬಣ್ಣಗಳಲ್ಲಿ ಖರೀದಿಸಬಹುದು.

MOST READ: ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಜಿ 310 ಜಿಎಸ್(ಅಂಡ್ವೆಚರ್)

ಬಿಎಂಡಬ್ಲ್ಯು ಸಂಸ್ಥೆಯು ಬಿಡುಗಡೆಗೊಳಿಸಿರುವ ಜಿ 310 ಜಿಎಸ್ ಬೈಕ್‌ಗಳು ಸಿಂಗಲ್ ಸಿಲಿಂಡರ್ ಅಡ್ವೆಂಚರ್ ಪ್ರಿಮಿಯಂ ಬೈಕ್ ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಬೈಕ್ ಆವೃತ್ತಿಯಾಗಿದ್ದು, ಆಪ್ ರೋಡ್ ಮೋಟಾರ್ ಸೈಕಲ್ ಪ್ರೇಮಿಗಳಿಗೆ ಇದೊಂದು ಹಬ್ಬ ಅಂದ್ರೆ ತಪ್ಪಾಗುವುದಿಲ್ಲ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಬಿಎಂಡಬ್ಲ್ಯು ಸಂಸ್ಥೆಯ ಆರ್ 1200 ಜಿಎಸ್ ಬೈಕ್‌ಗಳಲ್ಲಿ ಬಳಸಲಾಗಿರುವ 'ಬೆಬಿ ಜಿಸ್' ಡಿಸೈನ್‌ಗಳನ್ನು ಹೊಸ ಜಿ 310 ಜಿಎಸ್ ಬೈಕ್‌ಗಳಲ್ಲೂ ಬಳಸಲಾಗಿದ್ದು, ಬ್ರೇಕ್ ಫೆಂಡರ್ ಸೇರಿದಂತೆ ಆಪ್ ರೋಡ್ ಬೈಕ್‌ಗಳ ಪ್ರಮುಖ ಗುಣಲಕ್ಷಣವಾದ ಲಗ್ಗೆಜ್ ರಾಕ್ ಕೂಡಾ ಇದರಲ್ಲಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಸ್ಟ್ರೀಟ್ ಫೈಟರ್ ಖ್ಯಾತಿಯ ಜಿ 310 ಆರ್ ಬೈಕಿಗಿಂತಲೂ ಉದ್ದಳತೆಯಲ್ಲಿ ಹೆಚ್ಚಿರುವ ಜಿ 310 ಜಿಎಸ್ ಬೈಕ್‌ಗಳು 169.5 ಕೆ.ಜಿ ತೂಕ ಪಡೆದುಕೊಂಡಿದ್ದು, ಮುಂಭಾಗದಲ್ಲಿ 19 ಇಂಚಿನ ವೀಲ್ಹ್‌ಗಳನ್ನ ಬಳಕೆ ಮಾಡಿದ್ದಲ್ಲಿ ಹಿಂಭಾಗ ಚಕ್ರಗಳು 17 ಇಂಚು ಗಾತ್ರ ಹೊಂದಿವೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಕಿಯಾ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಸುರಕ್ಷತೆಯಲ್ಲೂ ಜಿ 310 ಜಿಎಸ್ ಬೈಕಿನಲ್ಲಿ ಹೆಚ್ಚಿನ ಗಮನಹರಿಸಲಾಗಿದ್ದು, ಜಿ 310 ಆರ್ ಬೈಕಿನಂತೆಯೇ ಡ್ಯುಯಲ್ ಚಾನೆಲ್ ಎಬಿಎಸ್ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನ ಸೇರಿಸಲಾಗಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಲಭ್ಯವಿರುವ ಬಣ್ಣಗಳು- ಪ್ರಮುಖ ಮೂರು ಬಣ್ಣಗಳಲ್ಲಿ ಲಭ್ಯವಿರುವ ಜಿ 310 ಜಿಎಸ್ ಬೈಕ್‌ಗಳು ರೇಸಿಂಗ್ ರೆಡ್, ಪರ್ಲ್ ವೈಟ್ ಮೆಟಾಲಿಕ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಎಂಜಿನ್ ಸಾಮರ್ಥ್ಯ

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಎರಡು ಬೈಕ್‌ಗಳು ತಾಂತ್ರಿಕವಾಗಿ ಬೇರೆ ಬೇರೆ ವಿನ್ಯಾಸಗಳನ್ನು ಪಡೆದುಕೊಂಡಿದ್ದರೂ ಒಂದೇ ಮಾದರಿಯ ಎಂಜಿನ್ ಪಡೆದುಕೊಂಡಿವೆ. ಎರಡು ಬೈಕ್‌ಗಳಲ್ಲೂ 313 ಸಿಸಿ ಇನ್‌ಲೈನ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದೆ. ಇದೇ ಎಂಜಿನ್ ಅನ್ನು ಟಿವಿಎಸ್ ಅಪಾಚೆ ಆರ್‌ಆರ್310 ಬೈಕ್‌ನಲ್ಲಿ ನೋಡಬಹುದಾಗಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

313 ಸಿಸಿ ಇನ್‌ಲೈನ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ಗಳು 34-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಎರಡು ಬೈಕ್ ಮಾದರಿಗಳಲ್ಲೂ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಖರೀದಿ ಮೇಲೆ 50 ಸಾವಿರ ಡಿಸ್ಕೌಂಟ್

ಈ ಮೂಲಕ ಪ್ರತಿ ಗಂಟೆಗೆ 145 ಟಾಪ್ ಸ್ಪೀಡ್ ಹೊಂದಿರುವ ಬಿಎಂಡಬ್ಲ್ಯು ಹೊಸ ಬೈಕ್‌ಗಳು ಇಂಧನ ದಕ್ಷತೆಯಲ್ಲೂ ಉತ್ತಮವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 30ರಿಂದ 35 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲವು.

Most Read Articles

Kannada
English summary
BMW G 310 R And G 310 GS Discounts On Offer. Read in Kannada.
Story first published: Monday, December 10, 2018, 20:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X