ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಟಕ್ಕರ್ ನೀಡಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ ವಿಶೇಷತೆ ಏನು?

ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಕ್ರಮಾಂಕದ ಮೋಟಾರ್‌ಸೈಕಲ್ ಮಾದರಿಗಳಿಗೆ ಭಾರೀ ಬೇಡಿಕೆ ಕಂಡುಬರುತ್ತಿದ್ದು, ಇದೇ ಕಾರಣಕ್ಕೆ ಜಗತ್ತಿನ ಪ್ರಮುಖ ಬೈಕ್ ಬ್ರಾಂಡ್‌ಗಳು ಭಾರತದತ್ತ ಮುಖ ಮಾಡುತ್ತಿರುವುದು ಬೈಕ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ ಎನ್ನಬಹುದು.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.!

ಈಗಾಗಲೇ ಭಾರತದಲ್ಲಿ ಬಹಳಷ್ಟು ಐಷಾರಾಮಿ ಬೈಕ್ ತಯಾರಕ ಸಂಸ್ಥೆಗಳು ಭಾರತದಲ್ಲಿ ನೆಲೆ ಕಂಡುಕೊಂಡಿದ್ದು, ಈ ಸಾಲಿಗೆ ಹೊಸ ಸೇರ್ಪಡೆ ಅಂದ್ರೆ ಅದು ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್. ಡುಕಾಟಿ, ಹಾರ್ಲೆ ಡೇವಿಡ್ಸನ್, ಬಿಎಂಡಬ್ಲ್ಯು ಮೊಟೊರಾಡ್ ಮತ್ತು ಟ್ರಯಂಪ್ ಸಂಸ್ಥೆಗಳ ಸಾಲಿಗೆ ಸೇರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಸಂಸ್ಥೆಯು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.!

ಹೌದು, ಅಮೆರಿಕನ್ ಜನಪ್ರಿಯ ಬ್ರಾಂಡ್ ಮೋಟಾರ್‌ಸೈಕಲ್ ತಯಾರಕ ಸಂಸ್ಥೆಯಾಗಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ವಾಹನ ಉದ್ಯಮಕ್ಕೆ ಹೊಸ ಪರಿಚಯ ಎನ್ನಬಹುದು. ಈ ಸಂಸ್ಥೆಯು 2009ರಲ್ಲಿ ಸ್ಥಾಪನೆಯಾಗಿದ್ದಲ್ಲದೇ 2010ರಿಂದ ತನ್ನ ಜನಪ್ರಿಯ ಮೋಟಾರ್‌ಸೈಕಲ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.!

ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಸಂಸ್ಥೆಯು ಸದ್ಯ 25ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೈಕಿನ ಬಹುತೇಕ ಬಿಡಿಭಾಗಗಳನ್ನು ಚೀನಾದಲ್ಲಿರುವ ತನ್ನ ಅತಿದೊಡ್ಡ ಬೈಕ್ ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಮಾಡುವ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿರುವ ಮಾರುಕಟ್ಟೆಗಳಲ್ಲಿ ಅಸಂಬ್ಲಿ ಉತ್ಪನ್ನಗಳನ್ನು ಸಿದ್ದಗೊಳಿಸಿ ಮಾರಾಟ ಕೈಗೊಳ್ಳುತ್ತಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.!

ಇದಲ್ಲದೆ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ 125ಸಿಸಿಯಿಂದ 450ಸಿಸಿ ತನಕ ವಿವಿಧ ಮಾದರಿಯ ಮೋಟಾರ್‌ಸೈಕಲ್ ಉತ್ಪನ್ನಗಳನ್ನು ಸಿದ್ದಗೊಳಿಸುತ್ತಿದ್ದು, ಇವುಗಳಲ್ಲಿ ಪ್ರಮುಖ 5 ಬೈಕ್ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುವುದು ಖಚಿತವಾಗಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.!

ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಇದೇ ವರ್ಷ ಅಕ್ಟೋಬರ್ ಅಂತ್ಯಕ್ಕೆ ತನ್ನ ಹೊಸ ಬೈಕ್ ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಲಿರುವ 2 ಪ್ರಮುಖ ಬೈಕ್‌ಗಳ ಬೆಲೆಯನ್ನು ಸಹ ಇದೀಗ ಬಹಿರಂಗ ಮಾಡಿರುವುದು ಬೈಕ್ ಸವಾರರ ಆಕರ್ಷಣೆಗೆ ಕಾರಣವಾಗಿದೆ.

MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.!

ಸದ್ಯ ಭಾರತದಲ್ಲಿ ಬಿಡುಗಡೆಯಾಗಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳಲ್ಲಿ ರೆಟ್ರೋ ಕ್ಲಾಸಿಕ್ ವಿನ್ಯಾಸದ ಏಸ್ ಮತ್ತು ಪರ್ಫಾಮೆನ್ಸ್ ಬೈಕ್ ಮಾದರಿಯಾದ ಮಿಸ್‌ಫಿಟ್ ಬೈಕ್‌ಗಳು ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಬೈಕ್ ಬೆಲೆಯು ಎಕ್ಸ್‌ಶೋರಂ ಪ್ರಕಾರ ಏಸ್( 2.23 ಲಕ್ಷ) ಮತ್ತು ಮಿಸ್‌ಫಿಟ್(2.49 ಲಕ್ಷ) ಬೆಲೆ ಹೊಂದಿರಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.!

ಇದರಲ್ಲಿ ರೆಟ್ರೋ ಮಾದರಿ ಏಸ್ ಬೈಕ್‌ಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಕ್ರ್ಯಾಂಬರ್, ಡಿಲಕ್ಸ್ ಮತ್ತು ಕಫೆ ರೇಸರ್ ಮಾದರಿಯಲ್ಲಿ ಖರೀದಿಗೆ ಲಭ್ಯವಿರಲಿದ್ದು, ದೇಶಾದ್ಯಂತ ಸದ್ಯಕ್ಕೆ ತೆರೆಯಲಾಗಿರುವ 10ಕ್ಕೂ ಹೆಚ್ಚು ಡೀಲರ್ಸ್‌ಗಳಲ್ಲಿ ಹೊಸ ಬೈಕ್ ನವೆಂಬರ್‌ನಲ್ಲಿ ಮಾರಾಟಕ್ಕೆ ಸಿಗಲಿವೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.!

ಹಾಗೆಯೇ 250ಸಿಸಿ ಸಾಮರ್ಥ್ಯದ ಪರ್ಫಾಮೆನ್ಸ್ ಬೈಕ್ ಮಾದರಿಯಾಗಿರುವ ಮಿಸ್‌ಫಿಟ್ ಬೈಕ್‌ಗಳು ರೇಸಿಂಗ್ ಪ್ರಿಯರನ್ನು ಹೆಚ್ಚು ಸೆಳೆಯಲಿದ್ದು, ಹೊಸ ಉತ್ಪನ್ನಗಳನ್ನು ಆರಂಭದಲ್ಲಿ ಆಮದು ಮಾಡಿಕೊಂಡು ಮಾರಾಟ ಮಾಡಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಸಂಸ್ಥೆಯು ತದನಂತರ ಪುಣೆಯಲ್ಲಿ ಸ್ಥಾಪನೆ ಮಾಡಲಾಗುತ್ತಿರುವ ಬೈಕ್ ಉತ್ಪಾದನಾ ಘಟಕದಲ್ಲೇ ಅಭಿವೃದ್ಧಿ ಮಾಡಿ ಮಾರಾಟ ಮಾಡುವ ಗುರಿಹೊಂದಲಾಗಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.!

ರಾಯಲ್ ಎನ್‌ಫೀಲ್ಡ್‌ಗೆ ತಳಮಳ?

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ರೆಟ್ರೋ ಮಾದರಿಯ ಬೈಕ್ ಉತ್ಪಾದನೆ ತನ್ನದ ಜನಪ್ರಿಯತೆ ಹೊಂದಿರುವ ರಾಯಲ್ ಎನ್‌ಫೀಲ್ಡ್ ಇತ್ತೀಚೆಗೆ ಗ್ರಾಹಕರ ವಿಶ್ವಾಸ ಕಳೆದುಕೊಳ್ಳುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ದುಬಾರಿ ಬೆಲೆಯಿದ್ದರೂ ಬೈಕ್ ಉತ್ಪನ್ನಗಳಲ್ಲಿ ನೀಡಲಾಗುವ ಸೌಲಭ್ಯಗಳಲ್ಲಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗುತ್ತಿದ್ದು, ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಸೇರಿದಂತೆ ಪ್ರಮುಖ ಬೈಕ್ ಸಂಸ್ಥೆಗಳು ಇದರ ಲಾಭ ಪಡೆಯಲು ಮುಂದಾಗಿದೆ.

MOST READ: ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.!

ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಅಷ್ಟೇ ಅಲ್ಲದೇ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಮುಂಬರುವ 2019ರಿಂದ 250ಸಿಸಿ 350ಸಿಸಿ ಎಂಜಿನ್ ಪ್ರೇರಿತ ಅಗ್ಗದ ಬೆಲೆಯ ಬೈಕ್ ಹೊರತರುವುದಾಗಿ ಹೇಳಿಕೊಂಡಿದ್ದು, ಇದರಿಂದ ದೇಶದಲ್ಲಿ ಮತ್ತಷ್ಟು ರೆಟ್ರೋ, ಕ್ಲಾಸಿಕ್ ಬೈಕ್‌ಗಳ ಅಬ್ಬರ ಜೋರಾಗಲಿದೆ ಎನ್ನಬಹುದು.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.!

ಜೊತೆಗೆ ವಿದೇಶಿಗಳಲ್ಲಿ ವಾಹನ ಮಾರಾಟ ಅಂಶಗಳು ಕಠಿಣವಾಗುತ್ತಿರುವುದು ಸಹ ಹಲವು ಸಂಸ್ಥೆಗಳು ಮುಕ್ತ ಮಾರುಕಟ್ಟೆಯಾಗಿರುವ ಭಾರತದತ್ತ ಮುಖ ಮಾಡುತ್ತಿದ್ದು, ಮಧ್ಯಮ ವರ್ಗಗಳ ಗ್ರಾಹಕರನ್ನು ಗುರಿಯಾಗಿಸಿ ವಿವಿಧ ಮಾದರಿಯ ಬೈಕ್‌ಗಳನ್ನು ಸಿದ್ದಗೊಳಿಸುತ್ತಿರುವುದು ವಾಸ್ತವಾಂಶ.

Most Read Articles

Kannada
English summary
cleveland cyclewerks set to launch misfit and ace deluxe in india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X