ಮಧ್ಯಮ ಕ್ರಮಾಂಕದ ಬೈಕ್ ಬಿಡುಗಡೆಗೊಳಿಸಲಿವೆ ಡುಕಾಟಿ ಮತ್ತು ಹೀರೋ..

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ಭಾರತೀಯ ಮಾರುಕಟ್ಟೆಗೆ 300ಸಿಸಿ ಸ್ಪೋರ್ಟ್ಸ್ ಬೈಕ್ ಅನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಈ ಕಾರ್ಯಕ್ಕಾಗಿ ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್‍ನೊಂದಿಗೆ ಕೈ ಜೋಡಿಸಲಿ

By Rahul Ts

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ಭಾರತೀಯ ಮಾರುಕಟ್ಟೆಗೆ 300ಸಿಸಿ ಸ್ಪೋರ್ಟ್ಸ್ ಬೈಕ್ ಅನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಈ ಕಾರ್ಯಕ್ಕಾಗಿ ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್‍ನೊಂದಿಗೆ ಕೈ ಜೋಡಿಸಲಿದೆ ಎನ್ನಲಾಗಿದೆ.

ಕಡಿಮೆ ಪ್ರಮಾಣದ ಬೈಕ್ ಅನ್ನು ಪರಿಚಯಿಸಲಿರುವ ಡುಕಾಟಿ ಮತ್ತು ಹೀರೋ ಮೋಟೊಕಾರ್ಪ್..

ಡುಕಾಟಿ ಸಂಸ್ಥೆಯು ಹೀರೋ ಮೋಟೊಕಾರ್ಪ್ ಸಂಸ್ಥೆಯನ್ನು ಆಯ್ಕೆ ಏಕೆ ಮಾದಿಕೊಂಡಿದೆ ಎಂದರೇ, ಇದೊಂದೆ ಸಂಸ್ಥೆಯು ಬೇರಾವ ಕಂಪೆನಿಯೊಂದಿಗೆ ಕೈ ಜೋಡಿಸದೆ ಮಿಗಿಲಿದೆ. ಅಂದರೇ ದೇಶಿಯ ವಾಹನ ತಯಾರಕ ಸಂಸ್ಥೆಗಳಾದ ಬಜಾಜ್ ಕೆಟಿಮ್‍‍ನೊಂದಿಗೆ ಮತ್ತು ಟಿವಿಎಸ್ ಬಿಎಮ್‍‍ಡಬ್ಲ್ಯೂ ಒಂದಿಗೆ ಕೈ ಜೋಡಿಸಿ ಉತ್ಪನ್ನಗಳನ್ನು ತಯಾರಿಸುತ್ತಿದೆ.

ಕಡಿಮೆ ಪ್ರಮಾಣದ ಬೈಕ್ ಅನ್ನು ಪರಿಚಯಿಸಲಿರುವ ಡುಕಾಟಿ ಮತ್ತು ಹೀರೋ ಮೋಟೊಕಾರ್ಪ್..

ಆಲ್ಲದೇ ಹೀರೋ ಮೋಟೊಕಾರ್ಪ್ ಹಾರ್ಲೆ ಡೇವಿಡ್‍‍ಸನ್ ಸಂಸ್ಥೆಯೊಂದಿಗೆ ಕೂಡಾ ಕೈ ಜೋಡಿಸಿದ್ದು, ಇವರ ಭಾಗಸ್ವಾಮ್ಯದಲ್ಲಿ ಸಣ್ಣ ಪ್ರಮಾಣಾದ ಮೊಟರ್‍‍ಸೈಕಲ್‍‍ಗಳನ್ನು ಬಿಡುಗಡೆಗೊಳಿಸಲಿತ್ತು. ಆದರೇ ಹೀರೊ ಮೋಟೊಕಾರ್ಪ್ ಈ ಮನವಿಯನ್ನು ನಿರಾಕರಿಸಿದೆ.

ಕಡಿಮೆ ಪ್ರಮಾಣದ ಬೈಕ್ ಅನ್ನು ಪರಿಚಯಿಸಲಿರುವ ಡುಕಾಟಿ ಮತ್ತು ಹೀರೋ ಮೋಟೊಕಾರ್ಪ್..

ಡುಕಾಟಿ ಮತ್ತು ಹೀರೋ ನೇತೃತ್ವದಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನಿರೀಕ್ಷಿಸಬಹುದಾಗಿದ್ದು, ಡುಕಾಟಿಯು ಈಗಾಗಲೆ ತಮ್ಮ ನೂತನ ಟೆಕ್ನಾಲಜಿ ಮತ್ತು ಮೊಟೊ ಜಿಪಿಯ ಇಂಜಿನಿಯರಿಂಗ್ ತಜ್ಞರನ್ನು ಭಾರತಕ್ಕೆ ಕರೆತರುವ ಕಾರ್ಯದಲ್ಲಿದ್ದಾರೆ.

ಕಡಿಮೆ ಪ್ರಮಾಣದ ಬೈಕ್ ಅನ್ನು ಪರಿಚಯಿಸಲಿರುವ ಡುಕಾಟಿ ಮತ್ತು ಹೀರೋ ಮೋಟೊಕಾರ್ಪ್..

ಭಾರತದಲ್ಲಿನ ಹೀರೋ ಮೋಟೊಕಾರ್ಪ್ ಸೌಲಭ್ಯವು ಹೊಸ ಎಂಟ್ರಿ ಲೆವೆಲ್ 300cc ಡುಕಾಟಿ ಸ್ಪೋರ್ಟ್ಸ್ ಬೈಕ್‍ಗೆ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಸೇವೆ ಸಲ್ಲಿಸಲಿದೆ ಎಂದು ನಿರೀಕ್ಷಿಸಲಾಗಿದ್ದು,ಹೀರೋ ಮತ್ತು ಡುಕಾಟಿ ಸಹಭಾಗಿತ್ವವು ಸ್ಪೋರ್ಟ್ಸ್ ಬೈಕ್‍‍ನ ಆಧಾರದ ಮೇಲೆ ಒಂದು ಹೊಸ 300cc ಮೋಟಾರ್ಸೈಕಲ್ ಅನ್ನು ಪರಿಚಯಿಸಲಿದೆ.

ಕಡಿಮೆ ಪ್ರಮಾಣದ ಬೈಕ್ ಅನ್ನು ಪರಿಚಯಿಸಲಿರುವ ಡುಕಾಟಿ ಮತ್ತು ಹೀರೋ ಮೋಟೊಕಾರ್ಪ್..

ಜಾಗತಿಕವಾಗಿ ದ್ವಿಚಕ್ರ ವಾಹನಗಳಲ್ಲಿ ಮುನ್ನಡೆ ಹೊಂದಿರುವ ಹೀರೋ ಮೋಟೊಕಾರ್ಪ್ ಈ ವರೆಗೂ ಕೇವಲ ಕಮ್ಮ್ಯೂಟರ್ ಮೋಟರ್‍‍ಸೈಕಲ್‍‍ಗಳನ್ನು ಮಾತ್ರ ಉತ್ಪಾದಿಸುತ್ತಾ ಬಂದಿದ್ದು, ಪ್ರೀಮಿಯಮ್ ಮೋಟರ್‍‍ಸೈಕಲ್ ಸೆಗ್ಮೆಂಟ್‍‍ನಲ್ಲಿ ಯಾವುದೇ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಲಿಲ್ಲ.ಅದಾಗ್ಯೂ, ಇದೀಗ ಡುಕಾಟಿಯೊಂದಿಗಿನ ಸಹಭಾಗಿತ್ವದಲ್ಲಿ ಹೀರೊ ಸಂಸ್ಥೆಯು ಮೊದಲ ಬಾರಿಗೆ 300ಸಿಸಿ ಸೆಗ್ಮೆಂಟ್‍‍ನಲ್ಲಿ ಹೊಸ ಬೈಕ್ ಅನ್ನು ಪರಿಚಯಿಸಲಿದೆ.

ಕಡಿಮೆ ಪ್ರಮಾಣದ ಬೈಕ್ ಅನ್ನು ಪರಿಚಯಿಸಲಿರುವ ಡುಕಾಟಿ ಮತ್ತು ಹೀರೋ ಮೋಟೊಕಾರ್ಪ್..

ಉತ್ಪಾದನೆಗೆ ವೆಚ್ಚ ಉಳಿತಾಯದ ವಿಷಯದಲ್ಲಿ ಸಹ ಪಾಲುದಾರಿಕೆಯಿಂದ ಡಕ್ಯಾಟಿಯು ಪ್ರಯೋಜನವನ್ನು ಪಡೆಯುತ್ತದೆ, ಹಾಗೆಯೇ ತಮ್ಮ ಹೊಸ ಉತ್ಪನ್ನಕ್ಕಾಗಿ ಇನ್ನಷ್ಟು ಮಾರುಕಟ್ಟೆಗಳನ್ನು ತೆರೆಯಲು ಅವಕಾಶವನ್ನು ಮಾಡಿಕೊಳ್ಳಬಹುದಾಗಿದೆ.

ಕಡಿಮೆ ಪ್ರಮಾಣದ ಬೈಕ್ ಅನ್ನು ಪರಿಚಯಿಸಲಿರುವ ಡುಕಾಟಿ ಮತ್ತು ಹೀರೋ ಮೋಟೊಕಾರ್ಪ್..

ಡುಕಾಟಿ ಮತ್ತು ಹೀರೋ ಮೋಟೊಕಾರ್ಪ್ ಭಾಗಸ್ವಾಮ್ಯದಲ್ಲಿ ಬರಲಿರುವ ಬೈಕ್ 300ಸಿಸಿ ಲಿಕ್ವಿಡ್, ಫ್ಯುಯಲ್ ಇಂಜೀಕ್ಟೆಡ್ ಎಂಜಿನ್ ಅನ್ನು ಹೊಂದಿರಲಿದ್ದು, ಈ ಎಂಜಿನ್ ಅನ್ನು ಡುಕಾಟಿ ಸಂಸ್ಥೆಯು ಭರತದಲ್ಲಿಯೆ ಸಂಪೂರ್ಣವಾಗಿ ತಯಾರಿಸಲಿದೆ ಎಂಬ ಮಾಹಿತಿಯು ದೊರೆತಿದೆ.

ಕಡಿಮೆ ಪ್ರಮಾಣದ ಬೈಕ್ ಅನ್ನು ಪರಿಚಯಿಸಲಿರುವ ಡುಕಾಟಿ ಮತ್ತು ಹೀರೋ ಮೋಟೊಕಾರ್ಪ್..

ಇದಲ್ಲದೇ ಮಾಹಿತಿಗಳ ಪ್ರಕಾರ ಡುಕಾಟಿಯು ಇನ್ನೆರಡು ಮೋಟರ್‍‍ಸೈಕಲ್‍‍ಗಳನ್ನು ಬಿಡುಗಡೆಗೊಳಿಸಲಿದ್ದು, ಅ ಬೈಕ್‍‍ಗಳು ಇದೇ ಎಂಜಿನ್ ಅನ್ನು ಹೊಂದಿರಲಿದೆ. ಕೇವಲ ವಿನ್ಯಾಸದಲ್ಲಿ ಬದಲಾವಣೆಗಳನ್ನು ಪಡೆದಿರಲಿದ್ದು, ಸ್ಕ್ರಾಂಬ್ಲರ್ ಅಂತಯೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಿದೆ.

Most Read Articles

Kannada
Read more on ducati hero motocorp
English summary
Ducati And Hero MotoCorp Partnership — Another 300cc Sportsbike In The Works?
Story first published: Thursday, August 16, 2018, 14:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X