ಡುಕಾಟಿ ಮಾನ್ಸ್ಟರ್ 1200 ಪ್ರಿಯರಿಗೆ ಕಹಿ ಸುದ್ದಿ..!!

ಇಟಾಲಿಯನ್ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಮಾನ್ಸ್ಟರ್ 1200 ಲಿಮಿಟೆಡ್ ಎಡಿಷನ್ ಬೈಕ್‍ ಅನ್ನು ಸಂಸ್ಥೆಯ 25ನೇ ವಾರ್ಷಿಕೋತ್ಸವದ ಸಲುವಾಗಿ ಅನಾವರಗೊಳಿಸಿದೆ.

By Rahul Ts

ಇಟಾಲಿಯನ್ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಮಾನ್ಸ್ಟರ್ 1200 ಲಿಮಿಟೆಡ್ ಎಡಿಷನ್ ಬೈಕ್‍ ಅನ್ನು ಸಂಸ್ಥೆಯ 25ನೇ ವಾರ್ಷಿಕೋತ್ಸವದ ಸಲುವಾಗಿ ಅನಾವರಗೊಳಿಸಿದ್ದು, ಈ ಲಿಮಿಟೆಡ್ ಎಡಿಷನ್ ಬೈಕ್‍ '25 ಆನಿವರ್ಸರಿಯೊ' ಎಂಬ ಹೆಸರಿನಲ್ಲಿ ಕೇವಲ 500 ಯೂನಿಟ್ ಮಾತ್ರ ಖರೀದಿಗೆ ಲಭ್ಯವಿರಲಿದೆ.

ಡುಕಾಟಿ ಮಾನ್ಸ್ಟರ್ 1200 ಪ್ರಿಯರಿಗೆ ಕಹಿ ಸುದ್ದಿ..!!

ಡುಕಾಟಿ ಮಾನ್ಸ್ಟರ್ 1200 ಲಿಮಿಟೆಡ್ ಎಡಿಷನ್ ತನ್ನ 1200 ಆರ್ ಬೈಕಿನಿಂದ ತಾಂತ್ರಿಕ ಅಂಶಗಳನ್ನು ಪಡೆದಿದ್ದು ಜೊತೆಗೆ ಕಾರ್ಬನ್ ಫೈಬರ್ ಅಂಗಗಳನ್ನು ಪಡೆದುಕೊಂಡಿದೆ. ಲಿಮಿಟೆಡ್ ಎಡಿಷನ್ ಮಾನ್ಸ್ಟರ್ 1200 2008ರ ಮಾನ್ಸ್ಟರ್ ಎಸ್4ಆರ್‍‍ಎಸ್ ಟೆಸ್ಟಸ್ಟ್ರೆಟಾ ಟ್ರಿಕಲರ್ ಅನ್ನು ಪಡೆದಿದೆ.

ಡುಕಾಟಿ ಮಾನ್ಸ್ಟರ್ 1200 ಪ್ರಿಯರಿಗೆ ಕಹಿ ಸುದ್ದಿ..!!

ಈ ಮೋಟಾರ್‍‍ಸೈಕಲ್ ಇಟಲಿ ದೇಶದ ಮೂರು ಬಣ್ಣವುಳ್ಳ ಭಾವುಟವನ್ನು ವಿಂಡ್‍‍ಸ್ಕ್ರೀನ್, ಫ್ಯುಯಲ್ ಟ್ಯಾಂಕ್ ಮತ್ತು ಪಿಲ್ಲಿಯಾನ್ ಸೀಟ್‍‍‍ನ ಕವರ್ ಮೇಲೆ ಅಳವಡಿಸಲಾಗಿದೆ. 25 ವಾರ್ಷಿಕೋತ್ಸವದ ಅಂಗವಾಗಿ ವಿಶೇಷವಾಗಿ ಮಾರ್ಚೆಸಿನಿ ವ್ಹೀಲ್ಸ್ ನೊಂದಿಗೆ ಡಬ್ಲ್ಯೂ ಆಕಾರದ್ ಅಸ್ಪೋಕ್ಸ್ ಅನ್ನು ಗೋಲ್ಡ್ ಬಣ್ಣದೊಂದಿಗೆ ಸಜ್ಜುಗೊಳಿಸಲಾಗಿದೆ.

ಡುಕಾಟಿ ಮಾನ್ಸ್ಟರ್ 1200 ಪ್ರಿಯರಿಗೆ ಕಹಿ ಸುದ್ದಿ..!!

ಇದಲ್ಲದೆ ಡುಕಾಟಿ ಮಾನ್ಸ್ಟರ್ 1200 ಲಿಮಿಟೆಡ್ ಎಡಿಷನ್ ಬೈಕ್ ಅಲ್ಯೂಮೀನಿಯಮ್ ಹ್ಯಾಂಡಲ್‍‍ಬಾರ್-ಎಂಡ್, ಮಿರರ್ ಮತ್ತು ಟ್ಯಾಂಕ್ ಅನ್ನು ವಿಷೇಷವಾಗಿ ಪಡೆಯಲಿದೆ. ಮುಂಭಾಗದ ಮಡ್‍‍‍ಗಾರ್ಡ್, ಎಕ್ಸಾಸ್ಟ್ ಹೀಟ್ ಗಾರ್ಡ್ ಮತ್ತು ಕೀ ಹೋಲ್ ಕವರ್ ಅನ್ನು ಕಾರ್ಬನ್ ಫೈಬರ್‍‍‍ನಿಂದ ತಯಾರಿಸಲಾಗಿದೆ.

ಡುಕಾಟಿ ಮಾನ್ಸ್ಟರ್ 1200 ಪ್ರಿಯರಿಗೆ ಕಹಿ ಸುದ್ದಿ..!!

ಎಂಜಿನ್ ಸಾಮರ್ಥ್ಯ

ಡುಕಾಟಿ ಮಾನ್ಸ್ಟರ್ 1200 ಲಿಮಿಟೆಡ್ ಎಡಿಷನ್ ಬೈಕ್ 1,198ಸಿಸಿ ಎಲ್-ಟ್ವಿನ್ , ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 145ಬಿಹೆಚ್‍‍ಪಿ ಮತ್ತು 124ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಡುಕಾಟಿ ಮಾನ್ಸ್ಟರ್ 1200 ಪ್ರಿಯರಿಗೆ ಕಹಿ ಸುದ್ದಿ..!!

ಡುಕಾಟಿ ಮಾನ್ಸ್ಟರ್ 1200 ಆನಿವರ್ಸರಿ ಎಡಿಷನ್ ಪೂರ್ಣ ಸರಿಪಡಿಸಬಹುದಾದ ಸ್ಟೀರಿಂಗ್ ಡ್ಯಾಂಪರ್‍‍ನೊಂದಿಗೆ ಒಹ್ಲಿನ್ಸ್ ಸಸ್ಪೆಂಷನ್ ಹೊಂದಿದೆ. ಇನ್ನು ಈ ಬೈಕಿನ ಮುಂಭಾಗದಲ್ಲಿ ಬ್ರೆಂಬೊ ಎಮ್50 ಮೊನೊಬ್ಲಾಕ್ 330ಎಮ್ಎಮ್ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 245ಎಮ್ಎಮ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಡುಕಾಟಿ ಮಾನ್ಸ್ಟರ್ 1200 ಪ್ರಿಯರಿಗೆ ಕಹಿ ಸುದ್ದಿ..!!

ಇದಲ್ಲದೆ ಈ ಬೈಕ್ ಇಂಟರ್ಶಿಯಲ್ ಮೆಸುರ್‍‍ಮೆಂಟ್ ಯೂನಿಟ್ ಬಾಷ್‍‍ನ ಕಾರ್ನೆರಿಂಗ್ ಎಬಿಎಸ್ ಮತ್ತು ಡುಕಾತಿ ವ್ಹೀಲಿ ಕಂಟ್ರೋಲ್‍‍ಗೆ ಡೆಟಾವನ್ನು ರವಾನಿಸುತ್ತದೆ. ಜೊತೆಗೆ ಡುಕಾಟಿ ಟ್ರಾಕ್ಷನ್ ಕಂಟ್ರೋಲ್ ಮತ್ತು ಡುಕಾಟಿ ಕ್ವಿಕ್ ಶಿಫ್ಟ್ ಆಂಡ್ ಡೌನ್ ಹಾಗು ಸ್ಪೋರ್ಟ್ ಟೂರಿಂಗ್ ಮತ್ತು ಅರ್ಬನ್ ಎಂಬ ಮೂರು ಡ್ರೈವಿಂಗ್ ಮೋಡ್ ಅನ್ನು ಹೊಂದಿದೆ.

ಡುಕಾಟಿ ಮಾನ್ಸ್ಟರ್ 1200 ಪ್ರಿಯರಿಗೆ ಕಹಿ ಸುದ್ದಿ..!!

ಮೊದಲಿಗೆ ಮಾನ್ಸ್ಟರ್ 1200 ಲಿಮಿಟೆಡ್ ಎಡಿಷನ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುವುದಿಲ್ಲ. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಯೂರೋಪ್‍‍‍ನಲ್ಲಿ ಬಿಡುಗಡೆಗೊಳ್ಳಲಿದ್ದು, ನಂತರದ ದಿನಗಳಲಿ ಜಪಾನ್ ಯುನೈಟೆಡ್ ಸ್ಟೇಟ್ಸ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ದೊರೆಯಲಿದೆ.

Most Read Articles

Kannada
Read more on ducati monster
English summary
Ducati Monster 1200 25th Anniversary Edition Unveiled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X