ಬಿಡುಗಡೆಗೆ ಸಜ್ಜುಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್..

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಹೊಸ ಮೋಟರ್‍‍ಸೈಕಲ್‍‍ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಇದೀಗ ಬಿಡುಗಡೆಗು ಮುನ್ನವೇ ಸ್ಕ್ರ್ಯಾಂಬ್ಲರ್ 1100 ಬೈಕ್ ಚಿತ್ರಗಳು ಸೋರಿಕೆಯಾಗಿವೆ.

By Rahul Ts

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಹೊಸ ಮೋಟರ್‍‍ಸೈಕಲ್‍‍ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಇದೀಗ ಬಿಡುಗಡೆಗು ಮುನ್ನವೇ ಸ್ಕ್ರ್ಯಾಂಬ್ಲರ್ 1100 ಬೈಕ್ ಚಿತ್ರಗಳು ಸೋರಿಕೆಯಾಗಿವೆ. ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ಒಮ್ಮೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡರೇ ಎಕ್ಸ್ ಶೋರಂ ಪ್ರಕಾರ ರೂ. 11 ಲಕ್ಷದ ಬೆಲೆಯನ್ನು ಪಡೆಯಲಿದೆ.

ಬಿಡುಗಡೆಗೆ ಸಜ್ಜುಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್..

ಜಾಗತಿಕವಾಗಿ ಸ್ಕ್ರಾಂಬ್ಲರ್ ಬೈಕ್ ಸ್ಟ್ಯಾಂಡರ್ಡ್, 1100 ಸ್ಪೆಷಲ್ ಮತ್ತು 1100 ಸ್ಪೋರ್ಟ್ ಎಂಬ ಮೂರು ವೇರಿಯಂಟ್‍‍ಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಪ್ರಸ್ಥುತ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ಸ್ಕ್ರ್ಯಾಂಬ್ಲರ್ 800ಸಿಸಿ ಮಾಡಲ್‍‍ಗಿಂತ ಹೆಚ್ಚಿನ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎನ್ನಬಹುದು.

ಬಿಡುಗಡೆಗೆ ಸಜ್ಜುಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್..

ಮೋಟಾರ್‍‍ಸೈಕಲ್‍‍ನ ದೊಡ್ಡ ಸ್ಥಳಾಂತರವು ಡುಕಾಟಿಯ ಟ್ರೇಡ್‍‍ಮಾರ್ಕ್ ಸ್ಕ್ರ್ಯಾಂಬ್ಲರ್ ವಿನ್ಯಾಸ ಭಾಷೆಯನ್ನು ಉಳಿಸಿಕೊಳ್ಳಲು ಇನ್ನೂ ನಿಭಾಯಿಸುತ್ತಿದೆ. ಸ್ಕ್ರ್ಯಾಂಬ್ಲರ್ 1100 ಎಂಜಿನ್ ಕವರ್, ಕ್ಲಚ್ ಮತ್ತು ಆಲ್ಟರ್ನೇಟರ್ ಕವರ್ಗೆ ಅಲ್ಯೂಮಿನಿಯಂ ಫಿನಿಶ್ ಉಚ್ಚಾರಣೆಗಳನ್ನು ಒದಗಿಸಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್..

ಅಲ್ಲದೇ ಹೊಸ ಸ್ಕ್ರ್ಯಾಂಬ್ಲರ್ 1100 ಬೈಕ್ ಎಲ್‍‍ಸಿಡಿ ಇನ್ಸೂಮೆಂಟ್ ಪ್ಯಾನಲ್ ಅನ್ನು ಪಡೆದಿದ್ದು, ಇದು ರೈಡಿಂಗ್ ಮೋಡ್ಸ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸೆಟ್ತಿಂಗ್ ಹಾಗು ಇನ್ನುತರೆ ಮಾಹಿತಿಗಳನ್ನು ತೋರಿಸುತ್ತದೆ. ಆದರೆ ಡುಕಾಟಿ ಮಾನ್ಸ್ಟರ್ ಬೈಕ್‍‍ಗಳಲ್ಲಿ ಕಂಡಂತೆಯೆ ಇದರಲ್ಲಿಯು ಆರಾಮದಾಯಕ ಸೀಟ್‍‍ಗಳನ್ನು ನೀಡಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್..

ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ 1079ಸಿಸಿ ಏರ್ ಕೂಲ್ಡ್, ಲ್-ಟ್ವಿನ್ ಎಂಜಿನ್ ಅನ್ನು ಪಡೆದಿದ್ದು, ಈ ಎಂಜಿನ್ ಅನ್ನು ಮಾಸ್ಟರ್ 1100 ಬೈಕಿನಲ್ಲಿಯೂ ಅಳವಡಿಸಲಾಗಿದೆ. 85ಬಿಹೆಚ್‍‍ಪಿ ಮತ್ತು 88ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದ ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಸ್ಲಿಪ್ಪರ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್..

ಇನ್ನು ಈ ಬೈಕಿನ ಸಸ್ಪೆಂಷನ್ ವಿಚಾರಕ್ಕೆ ಬಂದಲ್ಲಿ ಸ್ಟ್ಯಾಂಡರ್ಡ್ ಹಾಗು ಸ್ಪೆಷಲ್ ವೇರಿಯಂಟ್‍‍ಗಳ ಮುಂಭಾಗದಲ್ಲಿ 45ಎಮ್ಎಮ್ ಮರ್ಜೊಚಿ ಯುಎಸ್‍ಡಿ ಫೋರ್ಕ್ಸ್ ಅನ್ನು ಒದಗಿಸಲಾಗಿದ್ದು, ಇನ್ನು ಹಿಂಭಾಗದಲ್ಲಿ ಕಯಾಬ ಮೊನೊಶಾಕ್ ಪ್ರೀಲೋಡ್ ಮತ್ತು ರೀಬೌಂಡ್ ಅಡ್ಸ್ಟಬಿಲಿಟಿಯನ್ನು ಒದಗಿಸಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್..

ಡುಕಾಟಿ ಸ್ಪೋರ್ಟ್ ಕಾರಿನ ಮುಂಭಾಗದಲ್ಲಿ 48ಎಮ್ಎಮ್ ಯುಎಸ್‍‍‍ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ನೀಡಲಾಗಿದೆ. ಸ್ಟ್ಯಾಂಡರ್ಡ್ ಹಾಗು ಸ್ಪೆಷಲ್ ವೇರಿಯಂಟ್‍‍ನಂತೆಯೆ ಸ್ಪೋರ್ಟ್ ವೇರಿಯಂಟ್‍‍ನಲ್ಲಿಯು ಮೋನೊಶಾಕ್ ಅನ್ನು ಪ್ರೀಲೋಡ್ ಮತ್ತು ರೀಬೌಂಡ್ ಅಡ್ಜಸ್ಟಿಬಿಲಿಟಿಯೊಂದಿಗೆ ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್..

ಪ್ರಯಾಣಿಕರ ಸುರಕ್ಷತೆಗಾಗಿ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್‍‍ನ ಮುಂಭಾಗದಲ್ಲಿ 320ಎಮ್ಎಮ್ ಸಿಂಗಲ್ ಹಾಗು ಹಿಂಭಾಗದಲ್ಲಿ 245ಎಮ್ಎಮ್ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್..

ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕಿನ ಮತ್ತೊಂದು ವಿಶೇಷವೆಂದರೇ ಇದರಲ್ಲಿ, ಇನರ್ಶಿಯಲ್ ಮೆಷರ್ಮೆಂಟ್ ಯೂನಿಟ್, ರೈಡ್-ಬೈ-ವೈರ್ ಮತ್ತು ಆಕ್ಟಿವ್, ಟೂರಿಂಗ್ ಹಾಗು ಸಿಟಿ ಎಂಬ ಒಟ್ತು ಐದು 5 ಲೆವೆಲ್ ಟ್ಯಾಕ್ಷನ್ ಕಂಟ್ರೋಲ್‍‍ಗಳಿವೆ.

Most Read Articles

Kannada
Read more on ducati
English summary
Ducati Scrambler 1100 Spied In India — Launch Expected Soon.
Story first published: Friday, August 3, 2018, 10:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X