ಇಐಸಿಎಂಎ ಬೈಕ್ ಎಕ್ಸ್‌ಪೋ: ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಅನಾವರಣ..!

2018ರ ಇಐಸಿಎಂಎ ಬೈಕ್ ಎಕ್ಸ್‌ಪೋದಲ್ಲಿ ಬ್ರಿಟಿಷ್ ಮೋಟಾರ್‌ಸೈಕಲ್ ಉತ್ಪಾದನಾ ಸಂಸ್ಥೆ ರಾಯಲ್ ಎನ್‌ಫೀಲ್ಡ್ ತನ್ನ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಬೈಕ್ ಮಾದರಿಯನ್ನು ಅನಾವರಣ ಮಾಡಿದ್ದು, ರಾಯಲ್ ಎನ್‌ಫೀಲ್ಡ್ ಇದುವರೆಗೆ ನಿರ್ಮಾಣ ಮಾಡಿರುವ ಬೈಕ್ ಮಾದರಿಗಳಿಂತಲೂ ಇದು ಅತಿ ಹೆಚ್ಚು ಸಾಮರ್ಥ್ಯದ ಎಂಜಿನ್ ಸೌಲಭ್ಯ ಹೊಂದಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಅನಾವರಣ..!

ಇಟಾಲಿಯ ಮಿಲಾನ್ ನಗರಗಳಲ್ಲಿ ಪ್ರತಿವರ್ಷ ಆಯೋಜನೆ ಮಾಡಲಾಗುವ ಇಐಸಿಎಂಎ ಬೈಕ್ ಎಕ್ಸ್‌ಪೋ ಕಾರ್ಯಕ್ರಮವು ಜಗತ್ತಿನ ಅತಿ ದೊಡ್ಡ ಮೋಟಾರ್‌ಸೈಕಲ್ ಪ್ರದರ್ಶನ ಎಂಬ ಖ್ಯಾತಿ ಪಡೆದಿದ್ದು, ಇದರಲ್ಲಿ ವಿಶ್ವದ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆಗಳು ತಮ್ಮ ಭವಿಷ್ಯದಲ್ಲಿ ಬಿಡುಗಡೆಗೊಳಿಸುವ ಬೈಕ್ ಮಾದರಿಗಳನ್ನು ಅನಾವರಣಗೊಳಿಸುತ್ತವೆ. ಈ ವೇಳೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸಹ ತನ್ನ ಬಹುನೀರಿಕ್ಷಿತ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಬೈಕ್ ಅನ್ನು ಪ್ರದರ್ಶನ ಮಾಡಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಅನಾವರಣ..!

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದುವರೆಗೆ ನಿರ್ಮಾಣ ಮಾಡಿರುವ ಇತರೆ ಬೈಕ್ ಮಾದರಿಗಳಿಂತಲೂ ವಿಭಿನ್ನ ಎನ್ನಿಸುವ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಮಾದರಿಯು ವಿ-ಟ್ವಿನ್ ಎಂಜಿನ್ ವೈಶಿಷ್ಟ್ಯತೆಯೊಂದಿಗೆ ಟ್ವಿನ್ ಪೈಪ್ ಎಕ್ಸಾಸ್ಟ್ ಪಡೆದುಕೊಂಡಿರುವುದು ಖಚಿತವಾಗಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಅನಾವರಣ..!

ಸದ್ಯ ಜಾಗತಿಕವಾಗಿ ಹಲವು ಬೈಕ್ ಉತ್ಪಾದನಾ ಸಂಸ್ಥೆಗಳು ಬಾಬ್ಬರ್ ಸ್ಟೈಲ್ ಮಾದರಿಯ ಬೈಕ್ ಉತ್ಪನ್ನ ಈಗಾಗಲೇ ಮಾರಾಟ ಮಾಡುತ್ತಿದ್ದರೂ ಸಹ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ಸ್ಟೈಲ್ ಹೊಸ ಬೈಕ್ ತಾಂತ್ರಿಕವಾಗಿ ಅವುಗಳಿಂತ ವಿಭಿನ್ನತೆಯನ್ನು ಹೊಂದಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಅನಾವರಣ..!

ಇದಕ್ಕೆ ಕಾರಣ, ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಹೊಸ ಬೈಕ್ ನಿರ್ಮಾಣಕ್ಕಾಗಿ ಯುಎಸ್ಎ ಮಾರುಕಟ್ಟೆಯಲ್ಲಿ ಅಧಿಪತಿ ಸಾಧಿಸಿರುವ ಇಂಡಿಯನ್ ಮೋಟಾರ್‌ಸೈಕಲ್(ಪೊಲಾಲಿಸ್ ಇಂಡಸ್ಟ್ರೀಸ್) ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಇಂಡಿಯನ್ ಮೋಟಾರ್‌ಸೈಕಲ್ ಸಂಸ್ಥೆಯು ಆರ್‌ಇ ಹೊಸ ಬೈಕಿಗೆ ಬೇಕಾದ ತಾಂತ್ರಿಕ ಸೌಲಭ್ಯಗಳನ್ನು ಸಿದ್ದಪಡಿಸುವ ಹೊಣೆ ಹೊತ್ತುಕೊಂಡಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಅನಾವರಣ..!

ಹೀಗಾಗಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ನಿರ್ಮಾಣ ಮಾಡುತ್ತಿರುವ ಹೊಸ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಬೈಕ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಎಂಜಿನ್ ದಕ್ಷತೆ ಮತ್ತು ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸಲು ಯುರೋ 6(ಇದು ಭಾರತದಲ್ಲಿ ಬಿಎಸ್ 6) ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಅನಾವರಣ..!

ಎಂಜಿನ್ ಸಾಮರ್ಥ್ಯ

ಆರ್‌ಇ ಹೊಸ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಬೈಕ್‌ ಮಾದರಿಯು 830ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ ಗರಿಷ್ಠ ಮಟ್ಟದ 90-ಬಿಎಚ್‌ಪಿ ಹಾರ್ಸ್ ಪವರ್ ಉತ್ಪಾದನಾ ಗುಣಹೊಂದಿದ್ದು, ಎಲ್‌ಇಡಿ ಹೆಡ್‌ಲೈಟ್, ಫ್ಲ್ಯಾಟ್ ಹ್ಯಾಂಡಲ್‌ಬಾರ್, ಟ್ರಯಂಫ್ ಬೊನೆವಿಲ್ಲೆ ಮಾದರಿಯಲ್ಲಿ ಸಿಂಗಲ್ ಸೀಟು, ಮುಂಭಾಗದ ಚಕ್ರದಲ್ಲಿ ಟ್ವಿನ್ ಡಿಸ್ಕ್ ಬ್ರೇಕ್, ಡ್ಯುಯಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವು ವಿಶ್ವದರ್ಜೆ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಅನಾವರಣ..!

ಹಾಗಾದ್ರೆ ಬಿಡುಗಡೆ ಯಾವಾಗ?

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಬೈಕ್ ಅನ್ನು ಕೇವಲ ಅನಾವರಣ ಮಾಡಿದ್ದು, ಅದಕ್ಕೂ ಮುನ್ನ ಭಾರೀ ನೀರಿಕ್ಷೆಯಲ್ಲಿರುವ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಇಐಸಿಎಂಎ ಬೈಕ್ ಎಕ್ಸ್‌ಪೋ: ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಅನಾವರಣ..!

ಇದರಿಂದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಬೈಕ್ ಅನ್ನು 2020ರ ಮಧ್ಯಂತರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಹೊಸ ಬೈಕಿನ ಬೆಲೆಯನ್ನು ಭಾರತೀಯ ಮಾರುಕಟ್ಟೆಯ ಎಕ್ಸ್‌ಶೋರೂಂ ಪ್ರಕಾರ ರೂ. 7.50 ಲಕ್ಷದಿಂದ ರೂ. 9 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಅನಾವರಣ..!

ಇನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ ಕೂಡಾ ಆರ್‌ಇ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದು, 648ಸಿಸಿ ಆಯಿಲ್ ಕೂಲ್ಡ್, ಪ್ಯಾರಾಲಲ್-ಟ್ವಿನ್ ಎಂಜಿನ್ ಸಹಾಯದಿಂದ 47-ಬಿಹೆಚ್‍‍ಪಿ ಮತ್ತು 52ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದಿವೆ.

MOST READ: ಹೋಂಡಾ ಆಕ್ಟೀವಾ ಸ್ಕೂಟರ್‌ಗಿಂತಲೂ ದುಬಾರಿ ಈ ಹೆಲ್ಮೆಟ್ ಬೆಲೆ..!

ಇಐಸಿಎಂಎ ಬೈಕ್ ಎಕ್ಸ್‌ಪೋ: ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಅನಾವರಣ..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಈಗಾಗಲೇ ವಿವಿಧ ಮಾದರಿಯ ಬೈಕ್ ಉತ್ಪನ್ನಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದು, ಇದೀಗ ಪ್ರೀಮಿಯಂ ಫೀಚರ್ಸ್ ಹೊಂದಿರುವ ಟ್ವಿನ್ ಸರಣಿ ಬೈಕ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ. ಹೀಗಾಗಿ ಬೆಲೆಯಲ್ಲಿ ದುಬಾರಿ ಎನ್ನಿಸಲಿರುವ ಈ ಬೈಕ್‌ಗಳು ದೇಶಿಯ ಗ್ರಾಹಕರು ಯಾವ ರೀತಿ ಸೆಳೆಯಲಿವೆ ಎನ್ನುವುದೇ ಸದ್ಯ ಆಟೋ ಉದ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

Most Read Articles

Kannada
English summary
EICMA 2018: Royal Enfield Bobber V-Twin Concept Teased Again.
Story first published: Tuesday, November 6, 2018, 13:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X