ಟಿವಿಎಸ್ ಅಪಾಚೆ ಆರ್‌ಆರ್310 ಬೈಕಿನಲ್ಲಿ ಸಿದ್ದವಾದ ಮೊದಲ ಮಾಡಿಫೈ ಬೈಕ್...

ಮಾಡಿಫೈ ತಂತ್ರಜ್ಞಾನ ಕೌಶಲ್ಯಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಯುವ ಗ್ರಾಹಕರ ಬೇಡಿಕೆಗೆ ತಕ್ಕಂತೆ ಎಲ್ಲಾ ಮಾದರಿಯ ಬೈಕ್ ಮತ್ತು ಕಾರು ಮಾದರಿಗಳು ಭಾರತೀಯ ರಸ್ತೆಯಲ್ಲಿ ಸದ್ದು ಮಾಡುತ್ತಿವೆ.

By Praveen Sannamani

ಮಾಡಿಫೈ ಬೈಕ್ ಆವೃತ್ತಿಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಇದೇ ಕಾರಣಕ್ಕೆ ಮಾಡಿಫೈ ತಂತ್ರಜ್ಞಾನ ಕೌಶಲ್ಯಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಯುವ ಗ್ರಾಹಕರ ಬೇಡಿಕೆಗೆ ತಕ್ಕಂತೆ ಎಲ್ಲಾ ಮಾದರಿಯ ಬೈಕ್ ಮತ್ತು ಕಾರು ಮಾದರಿಗಳು ಭಾರತೀಯ ರಸ್ತೆಯಲ್ಲಿ ಸದ್ದು ಮಾಡುತ್ತಿವೆ.

ಟಿವಿಎಸ್ ಅಪಾಚೆ ಆರ್‌ಆರ್310 ಬೈಕಿನಲ್ಲಿ ಸಿದ್ದವಾದ ಮೊದಲ ಮಾಡಿಫೈ ಬೈಕ್...

ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ಟಿವಿಎಸ್ ಅಪಾಚೆ ಆರ್‌ಆರ್310 ಬೈಕ್ ಎಂಜಿನ್ ಬಳಸಿಕೊಂಡು ಸಿದ್ದಗೊಳಿಸಲಾಗಿರುವ ಬಿಎಂಡಬ್ಲ್ಯು ಎಸ್1000ಆರ್‌ಆರ್ ಪರಿಕಲ್ಪನೆ ಸಹ ಸೂಪರ್ ಬೈಕ್ ಪ್ರಿಯರನ್ನು ಸೆಳೆಯುತ್ತಿದ್ದು, ಚೆನ್ನೈ ಮೂಲದ ಬೈಕ್ ಮಾಡಿಫೈ ಸಂಸ್ಥೆಯೊಂದು ಈ ವಿನೂತನ ಆವೃತ್ತಿಯನ್ನು ಹೊರತಂದಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ಬೈಕಿನಲ್ಲಿ ಸಿದ್ದವಾದ ಮೊದಲ ಮಾಡಿಫೈ ಬೈಕ್...

ಸದ್ಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಸ್1000ಆರ್‌ಆರ್ ಬೈಕ್‌ಗಳು 19 ಲಕ್ಷ ಬೆಲೆಯನ್ನು ಹೊಂದಿದ್ದು, 1000ಸಿಸಿ ಸಾಮರ್ಥ್ಯ ಎಂಜಿನ್‌ನೊಂದಿಗೆ ಐಷಾರಾಮಿ ಸೂಪರ್ ಬೈಕ್ ಮಾದರಿಯಾಗಿದೆ. ಅದೇ ರೀತಿಯಾಗಿ 3.20 ಲಕ್ಷ ಬೆಲೆ ಹೊಂದಿರುವ ಅಪಾಚೆ ಆರ್‌ಆರ್310 ಬೈಕ್‌ಗಳು ಬಹುತೇಕ ಎಸ್1000ಆರ್‌ಆರ್ ಹೋಲಿಕೆ ಪಡೆದಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ಬೈಕಿನಲ್ಲಿ ಸಿದ್ದವಾದ ಮೊದಲ ಮಾಡಿಫೈ ಬೈಕ್...

ಇದೇ ಕಾರಣಕ್ಕೆ ಅಪಾಚೆ ಆರ್‌ಆರ್310 ಆಯ್ಕೆ ಮಾಡಿಕೊಂಡ ಮಾಡಿಫೈ ತಂತ್ರಜ್ಞರು ದುಬಾರಿ ಬೆಲೆಯ ಬಿಎಂಡಬ್ಲ್ಯು ಎಸ್1000ಆರ್‌ಆರ್ ಬೈಕ್‌ಗಳ ಹೋಲಿಕೆ ನೀಡುವ ಪ್ರಯತ್ನ ಕೈ ಹಾಕಿದ್ದು, ಅಂತಿಮವಾಗಿ ವಿನೂತನ ಮಾಡಿಫೈ ಅವತಾರ ಬೈಕ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ಬೈಕಿನಲ್ಲಿ ಸಿದ್ದವಾದ ಮೊದಲ ಮಾಡಿಫೈ ಬೈಕ್...

ರೆಡ್ ಮತ್ತು ಬ್ಲ್ಯಾಕ್ ಬಣ್ಣದೊಂದಿಗೆ ಮಾಡಿಫೈ ಆವೃತ್ತಿಯನ್ನು ಸಿದ್ದಗೊಳಿಸಲಾಗಿದ್ದು, ಫ್ರಂಟ್ ಲುಕ್‌ನಲ್ಲಿ ಗುರುತರ ಬದಲಾವಣೆ ತರಲಾಗಿದೆ. ಹೀಗಾಗಿ ಬೈಕಿನ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲವಾದರೂ ಸ್ಮೋಕ್ಡ್ ಹೆಡ್‌ಲ್ಯಾಂಪ್, ಬ್ಲ್ಯಾಕ್ ಥೀಮ್, ಬ್ಲ್ಯಾಕ್ ಸ್ಟ್ರೀಪ್ ಸೇರಿಸಲಾಗಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ಬೈಕಿನಲ್ಲಿ ಸಿದ್ದವಾದ ಮೊದಲ ಮಾಡಿಫೈ ಬೈಕ್...

ಜೊತೆಗೆ ಬೈಕ್ ಮೇಲಿನ ಟಿವಿಎಸ್ ಲೊಗೊ ತೆಗೆದುಹಾಕಲಾಗಿದ್ದು, ಟಿವಿಎಸ್ ಲೊಗೊ ಸ್ಥಳದಲ್ಲಿ ಬಿಎಂಡಬ್ಲ್ಯು ಹೆಸರು ನೀಡಲಾಗಿದೆ. ಇದರಿಂದ ಹೊಸ ಬೈಕ್ ಬಿಎಂಡಬ್ಲ್ಯು ಆರ್‌ಆರ್ ಬೈಕ್ ಎಂದೇ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ಬೈಕಿನಲ್ಲಿ ಸಿದ್ದವಾದ ಮೊದಲ ಮಾಡಿಫೈ ಬೈಕ್...

ಎಂಜಿನ್

ಅಪಾಚೆ ಆರ್‌ಆರ್310 ಬೈಕ್ 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದಿದ್ದು, ಈ ಎಂಜಿನ್ 28 ಎನ್ಎಂ ತಿರುಗುಬಲದಲ್ಲಿ 34 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಹಾಗು 6-ಸ್ಪೀಡ್ ಗೇರ್ ಬಾಕ್ಸ್ ಸೌಲಭ್ಯ ಪಡೆದುಕೊಂಡಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ಬೈಕಿನಲ್ಲಿ ಸಿದ್ದವಾದ ಮೊದಲ ಮಾಡಿಫೈ ಬೈಕ್...

ಮಾಡಿಫೈ ಬಿಎಂಡಬ್ಲ್ಯು ಆರ್‌ಆರ್ ಬೈಕಿನ ಕೀ ಚೈನ್ ಕೂಡಾ ಬಿಎಂಡಬ್ಲ್ಯು ಮೋಟಾರ್ಡ್ ಮಾದರಿಯಲ್ಲೇ ಡಿಸೈನ್ ಹೊಂದಿದ್ದು, ಗ್ರಾಹಕನ ಬೇಡಿಕೆ ಮೆರೆಗೆ ಬೈಕಿನ ಲೈಟಿಂಗ್ ಮತ್ತು ಮಿರರ್ ವಿಭಾಗದಲ್ಲೂ ಗುರುತರ ಬದಲಾವಣೆ ತರಲಾಗಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ಬೈಕಿನಲ್ಲಿ ಸಿದ್ದವಾದ ಮೊದಲ ಮಾಡಿಫೈ ಬೈಕ್...

ಇನ್ನು ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸುವ ಉದ್ದೇಶದಿಂದ ಟಿವಿಎಸ್ ಜೊತೆಗೂಡಿರುವ ಬಿಎಂಡಬ್ಲ್ಯು ಸಂಸ್ಥೆಯು ಅಗ್ಗದ ಬೆಲೆಯಲ್ಲಿ ಉತ್ತಮ ಮಾದರಿಯ ಬೈಕ್‌ಗಳನ್ನು ಅಭಿವೃದ್ಧಿಗೊಳಿಸುವ ಮಹತ್ವದ ಯೋಜನೆ ಜಾರಿಯಲ್ಲಿದ್ದು, ಅದಕ್ಕೂ ಮುನ್ನವೇ ಬಿಎಂಡಬ್ಲ್ಯು ಪ್ರೇರಿತ ಟಿವಿಎಸ್ ಅಪಾಚೆ ಆರ್‌ಆರ್310 ಸಿದ್ದವಾಗಿರುವುದು ಕುತೂಹಲ ಹುಟ್ಟುಹಾಕಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ಬೈಕಿನಲ್ಲಿ ಸಿದ್ದವಾದ ಮೊದಲ ಮಾಡಿಫೈ ಬೈಕ್...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

ಸಲ್ಮಾನ್ ಖಾನ್ ಜೊತೆ ಜಾಲಿ ರೈಡ್‌ಗೆ ಹೋಗಿದ್ದ ನಟಿ ಜಾಕ್ವೆಲಿನ್ ಹೀಗೆ ಮಾಡಿದ್ದು ಸರಿನಾ?

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000 ಸಿಸಿ ಬೈಕ್ ಇದು...

Most Read Articles

Kannada
Read more on bike modifications
English summary
TVS Apache RR 310 In A BMW S1000RR Theme.
Story first published: Monday, April 30, 2018, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X