ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹಾರ್ಲೆ ಡೇವಿಡ್ಸನ್

ನೀವು ಐಷಾರಾಮಿ ಬೈಕ್ ಪ್ರಿಯರಾಗಿದ್ದರೂ ಹಣಕಾಸಿನ ವಿಚಾರಕ್ಕೆ ಬಂದ್ರೆ ಅವುಗಳನ್ನು ಖರೀದಿಸುವುದು ಬಹುತೇಕರಿಗೆ ಕಷ್ಟ ಸಾಧ್ಯ. ಹೀಗಿರುವಾಗ ದುಬಾರಿಯ ಬೆಲೆಯ ಹಾರ್ಲೆ ಡೇವಿಡ್ಸನ್ ಬೈಕ್‌ಗಳನ್ನು ಖರೀದಿ ಮಾಡಿ ಅವುಗಳನ್ನು ನಿರ್ವಹಣೆ ಮಾಡುವುದು ಅಷ್ಟು ಸುಲಭ ಮಾತಲ್ಲ. ಹಾಗಾಂತ ನೀವು ಚಿಂತಿಸುವುದು ಬೇಕಿಲ್ಲ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹಾರ್ಲೆ ಡೇವಿಡ್ಸನ್

ಹೌದು, ಭಾರತೀಯ ಗ್ರಾಹಕರಿಗಾಗಿಯೇ ವಿಶೇಷ ಯೋಜನೆ ರೂಪಿಸಿರುವ ಹಾರ್ಲೆ ಡೆೇವಿಡ್ಸನ್ ಸಂಸ್ಥೆಯು ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ವಿಶ್ವದರ್ಜೆಯ ಗುಣಮಟ್ಟದೊಂದಿಗೆ ತನ್ನ ನೆಚ್ಚಿನ ಉತ್ಪನ್ನಗಳನ್ನು ಮರುಮಾರಾಟ ಮಾಡುವ ಯೋಜನೆಗೆ ಗ್ರೀನ್ ಸಿಗ್ನಲ್ ತೋರಿದೆ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹಾರ್ಲೆ ಡೇವಿಡ್ಸನ್

ಹೊಸ ಬೈಕ್ ಮಾದರಿಗಳನ್ನು ಮಾರಾಟ ಮಾಡುವಾಗ ಅನುಸರಿಸುವ ಮಾರಾಟ ತಂತ್ರಗಳನ್ನೇ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಪ್ರಕ್ರಿಯೆಯಲ್ಲೂ ಬಳಕೆ ಮಾಡಲು ಮುಂದಾಗಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹಾರ್ಲೆ ಡೇವಿಡ್ಸನ್

ಈ ಬಗ್ಗೆ ಮಾತನಾಡಿರುವ ಹಾರ್ಲೆ ಡೇವಿಡ್ಸನ್ ಇಂಡಿಯಾ ವಿಭಾಗದ ಎಂಡಿ ಪೀಟರ್ ಮ್ಯಾಕೆಂಜಿ ಅವರು, ಭಾರತದಲ್ಲಿ ದುಬಾರಿ ಬೆಲೆಯ ಬೈಕ್‌ ಸರಣಿಗಳ ಮಾರಾಟ ಪ್ರಮಾಣವು ಏರಿಕೆಯಿದ್ದು, ಹೊಸ ಬೈಕಿಗಿಂತ ಸೆಕೆಂಡ್ ಹ್ಯಾಂಡ್ ಮಾದರಿಗಳಿಗೆ ಗ್ರಾಹಕರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ' ಎಂದಿದ್ದಾರೆ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹಾರ್ಲೆ ಡೇವಿಡ್ಸನ್

ಹೀಗಿರುವಾಗ ಹಾರ್ಲೆ ಡೇವಿಡ್ಸನ್ ಫಸ್ಟ್ ಹ್ಯಾಂಡ್ ಖರೀದಿ ಮಾಡಲು ಸಾಧ್ಯವಾದ ಗ್ರಾಹಕರು ಸೇಕೆಂಡ್ ಹ್ಯಾಂಡ್ ಬೈಕ್‌ಗಳನ್ನು ಖರೀದಿ ಮಾಡುವ ಅವಕಾಶ ಒದಗಿಸುತ್ತಿದ್ದು, ಭಾರತದಲ್ಲಿ ನಮ್ಮ ಹೊಸ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹಾರ್ಲೆ ಡೇವಿಡ್ಸನ್

ವಾಸ್ತವಾಂಶಕ್ಕೆ ಬಂದಲ್ಲಿ, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ವ್ಯಾಪಾರಕ್ಕೆ ಇರುವಷ್ಟೇ ಮಾನ್ಯತೆ ಸೆಕೆಂಡ್ ಹ್ಯಾಂಡ್ ವಾಹನಗಳಿಗೂ ಇದ್ದು, ದುಬಾರಿ ಹಣ ತೆತ್ತು ಹೊಸ ಬೈಕ್ ಖರೀದಿ ಮಾಡುವುದಕ್ಕಿಂತ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಸೇಕೆಂಡ್ ಬೈಕ್ ಖರೀದಿಸುವುದು ಒಂದು ಉತ್ತಮ ಮಾರ್ಗ ಎನ್ನಬಹುದು.

MOST READ: ಡೈಮಂಡ್ ರಿಂಗ್ ಹೊಂದಿರುವ ಈ ಬೈಕಿನ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!!

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹಾರ್ಲೆ ಡೇವಿಡ್ಸನ್

ಇದರಿಂದಾಗಿ ಲಕ್ಷಾಂತರ ಬೆಲೆಯೊಂದಿಗೆ ಬೈಕ್ ಉತ್ಪನ್ನಗಳನ್ನು ಮಾರಾಟ ಮಾಡುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಸೆಕೆಂಡ್ ಹ್ಯಾಂಡ್ ಬೈಕ್ ಮಾದರಿಗಳನ್ನು ಮಾರಾಟ ಮಾಡುವುದರಿಂದ ದು ಲಕ್ಷಾಂತರ ಗ್ರಾಹಕರಿಗೆ ಸಹಕಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹಾರ್ಲೆ ಡೇವಿಡ್ಸನ್

ಜೊತೆಗೆ ಹಾರ್ಲೆ ಡೇವಿಡ್ಸನ್ ಬೈಕ್‌ಗಳನ್ನು ಈಗಾಗಲೇ ಖರೀದಿಸಿರುವ ಗ್ರಾಹಕರು ಕಾಲಕ್ಕೆ ತಕ್ಕಂತೆ ಅಪ್ ಗ್ರೇಡ್ ಹೊಂದಲು ಕೂಡಾ ಸಹಕಾರಿಯಾಗಲಿದ್ದು, ಬಳಸಿದ ಬೈಕ್‌ಗಳನ್ನು ಕೆಲವು ಷರತ್ತುಗಳ ಆಧಾರ ಮೇಲೆ ಮರು ಮಾರಾಟ ಮಾಡುವುದು ಕೂಡಾ ಸಂಸ್ಥೆಗೆ ಲಾಭ ತಂದುಕೊಡಲಿದೆ.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹಾರ್ಲೆ ಡೇವಿಡ್ಸನ್

ಸೆಕೆಂಡ್ ಹ್ಯಾಂಡ್ ಬೈಕ್ ಮೇಲೂ ವಾರಂಟಿ!

ಹೊಸ ಬೈಕ್ ಮಾದರಿಯಲ್ಲೇ ಬಳಕೆ ಮಾಡಿದ ಬೈಕ್‌ಗಳನ್ನು ಸಹ ವಾರಂಟಿಯೊಂದಿಗೆ ಮಾರಾಟ ಮಾಡಲಿರುವ ಹಾರ್ಲೆ ಸಂಸ್ಥೆಯು 1 ವಾರಂಟಿ ನೀಡಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 3 ವರ್ಷದ ತನಕವು ವಾರಂಟಿ ಪಡೆದುಕೊಳ್ಳಬಹುದು.

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹಾರ್ಲೆ ಡೇವಿಡ್ಸನ್

ಸದ್ಯ ದೇಶಾದ್ಯಂತ 27ಕ್ಕೂ ಹೆಚ್ಚು ಅಧಿಕೃತ ಬೈಕ್ ಮಾರಾಟ ಮಳಿಗೆಗಳನ್ನು ಹೊಂದಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಮುಂಬರುವ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲಿದ್ದು, ಇದರ ಜೊತೆಗೆ ಮೆಟ್ರೋ ಸಿಟಿಗಳಲ್ಲಿನ ಜನಪ್ರಿಯ ಶಾಪಿಂಗ್ ಮಾಲ್‌ಗಳನ್ನು ತನ್ನ ಉತ್ಪನ್ನಗಳನ್ನು ಪ್ರದರ್ಶನ ಮಾಡುತ್ತಿದೆ.

MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹಾರ್ಲೆ ಡೇವಿಡ್ಸನ್

ಒಟ್ಟಿನಲ್ಲಿ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಜಾರಿಗೆ ತಂದಿರುವ ಹೊಸ ಯೋಜನೆಯು ಹಲವರ ಕನಸನ್ನು ನನಸು ಮಾಡಲಿದ್ದು, ಈ ಮೂಲಕ ತನ್ನ ಗ್ರಾಹಕ ಸಮುದಾಯವನ್ನು ಹೆಚ್ಚಿಸುವುದರ ಜೊತೆ ಜೊತೆಗೆ ಭಾರೀ ಪ್ರಮಾಣದ ಆದಾಯವನ್ನು ನೀರಿಕ್ಷೆ ಮಾಡುತ್ತಿದೆ.

Most Read Articles

ಹಾರ್ಲೆ ಡೇವಿಡ್ಸನ್ ಹೊಚ್ಚ ಹೊಸ ಸ್ಟ್ರೀಟ್ ರಾಡ್ 750 ಬೈಕಿನ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ..

Kannada
English summary
Harley-Davidson Enters Pre-Owned Motorcycle Segment In India.
Story first published: Saturday, September 22, 2018, 20:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X