ಬಿಡುಗಡೆಯಾದ ಹಾರ್ಲೆ ಡೇವಿಡ್ಸನ್ ಸಂಸ್ಥೆಯ ಮೂರು ಹೊಸ ಬೈಕ್‍ಗಳು..

ಅಮೆರಿಕದ ಪ್ರಸಿದ್ದ ಮೋಟಾರ್‍ ಬೈಕ್ ತಯಾರಕ ಸಂಸ್ಥೆಯಾದ ಹಾರ್ಲೆ ಡೇವಿಡ್ಸನ್ ತನ್ನ ಮೂರು ಹೊಸ ಬೈಕ್‍‍ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

By Rahul Ts

ಅಮೆರಿಕದ ಪ್ರಸಿದ್ದ ಮೋಟಾರ್‍ ಬೈಕ್ ತಯಾರಕ ಸಂಸ್ಥೆಯಾದ ಹಾರ್ಲೆ ಡೇವಿಡ್ಸನ್ ತನ್ನ ಮೂರು ಹೊಸ ಬೈಕ್‍‍ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಬಿಡುಗಡೆಯಾದ ಲೋ ರೈಡರ್ ಮತ್ತು ಡೀಲಕ್ಸ್ ಮಾದರಿಗಳ ಬೆಲೆಯನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ.12.99 ಲಕ್ಷಕ್ಕೆ ಮತ್ತು ರೂ.17.99 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಬಿಡುಗಡೆಯಾದ ಹಾರ್ಲೆ ಡೇವಿಡ್ಸನ್ ಸಂಸ್ಥೆಯ ಮೂರು ಹೊಸ ಬೈಕ್‍ಗಳು..

ಹೊಸ ಲೋ ರೈಡರ್ ಮತ್ತು ಡೀಲಕ್ಸ್ ಮಾದರಿಗಳ ಜೊತೆಗೆ 2018ರ ಫ್ಯಾಟ್ ಬಾಯ್ ಮಾದರಿಯನ್ನು ಕೂಡಾ ಬಿಡುಗಡೆ ಮಾಡಿದ್ದು, ಇದರ ಬೆಲೆಯನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ.19.79 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

Recommended Video

2018 ನೆಕ್ಸಾನ್ ಎಎಂಟಿ | Tata Nexon AMT Details & Specifications - DriveSpark
ಬಿಡುಗಡೆಯಾದ ಹಾರ್ಲೆ ಡೇವಿಡ್ಸನ್ ಸಂಸ್ಥೆಯ ಮೂರು ಹೊಸ ಬೈಕ್‍ಗಳು..

ಹೊಸ ಫ್ಯಾಟ್‍‍ಬಾಯ್ ವಾರ್ಷಿಕೋತ್ಸವದ ಆವೃತ್ತಿಯು ರೆಗ್ಯುಲರ್ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಇದರಲ್ಲಿ ಹೊಸದಾಗಿ ಎಲ್ಇಡಿ ಹೆಡ್‍‍ಲೈಟ್, ಲೇಕ್‍‍ಸ್ಟೆರ್ ಸಾಲಿಡ್ ಡಿಸ್ಕ್ ವೀಲ್ಸ್ ಮತ್ತು ಚಂಕಿ ಟೈರ್‍‍ಗಳನ್ನು ಪಡೆದಿದ್ದು, 2018ರ ಫ್ಯಾಟ್‍‍ಬಾಯ್ ಬೈಕ್ ದೊಡ್ಡ ಗಾತ್ರದ ಮಿಲ್ವಾವ್ಕೀ-8 114 ಎಂಜಿನ್ ಅನ್ನು ಹೊಂದಿದೆ.

ಬಿಡುಗಡೆಯಾದ ಹಾರ್ಲೆ ಡೇವಿಡ್ಸನ್ ಸಂಸ್ಥೆಯ ಮೂರು ಹೊಸ ಬೈಕ್‍ಗಳು..

ಹಾರ್ಲೆ ಡೇವಿಡ್ಸನ್ ಹೊಸ ಫ್ಯಾಟ್‍‍ಬಾಯ್ ಆವೃತ್ತಿಯು 1,868 ಸಿಸಿ ವಿ-ಟ್ವಿನ್ ಎಂಜಿನ್ ಜೋಡಣೆಯೊಂದಿಗೆ 161.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಹೊಸ ಎಂಜಿನ್‌ ಸಹಾಯದೊಂದಿಗೆ ಶೇ.13ರಷ್ಟು ಹೆಚ್ಚಿನ ವೇಗ ಪಡೆದಿದೆ.

ಬಿಡುಗಡೆಯಾದ ಹಾರ್ಲೆ ಡೇವಿಡ್ಸನ್ ಸಂಸ್ಥೆಯ ಮೂರು ಹೊಸ ಬೈಕ್‍ಗಳು..

ಜೊತೆಗೆ ಸಂಸ್ಥೆಯು ಇನ್ನೆರಡು ಹೊಸ ಸಾಫ್ಟೈಲ್ ಮಾದರಿಗಳಾದ ಲೋ ರೈಡರ್ ಮತ್ತು ಡೀಲಕ್ಸ್ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದ್ದು, ಲೋ ರೈಡರ್ ಮಾಮೂಲಾದ ಎಲಿಗಂಟ್ ವಿನ್ಯಾಸವನ್ನು ಹೊಂದಿದೆ.

ಬಿಡುಗಡೆಯಾದ ಹಾರ್ಲೆ ಡೇವಿಡ್ಸನ್ ಸಂಸ್ಥೆಯ ಮೂರು ಹೊಸ ಬೈಕ್‍ಗಳು..

ಇದು 1970ರ ಕಸ್ಟಮ್ ಚಾಪರ್ ಏರ್ 2-ಇನ್ಟೂ-2 ಶಾಟ್‍‍ಗನ್ ಎಕ್ಸಾಸ್ಟ್ ಪ್ರೇರಿತ ಪಡೆದಿದ್ದು, ಇದಲ್ಲದೆ 19 ಇಂಚಿನ ಮುಂದಿನ ಹಾಗು 16 ಇಂಚಿನ ಹಿಂಭಾಗದ ಅಲಾಯ್ ವೀಲ್‍‍ಗಳನ್ನು ಪಡೆದುಕೊಂಡಿದೆ.

ಬಿಡುಗಡೆಯಾದ ಹಾರ್ಲೆ ಡೇವಿಡ್ಸನ್ ಸಂಸ್ಥೆಯ ಮೂರು ಹೊಸ ಬೈಕ್‍ಗಳು..

ಹಾರ್ಲೆ ಡೇವಿಡ್ಸನ್ ಡಿಲಕ್ಸ್ ಬೈಕ್ ಕೂಡಾ ಕ್ರೋಮ್ ಟ್ರೀಟ್ಮೆಂಟ್‍‍ನೊಂದಿಗೆ ಅಮೆರಿಕಾದ ಕ್ರೂಸರ್ ತಯಾರಕರಿಂದ ಸ್ಥಿರವಾದ ಮೋಟಾರ್‍‍ ಸೈಕಲ್ ಆಗಿದ್ದು, ವೈರ್ ಸ್ಪೋಕ್ ವೀಲ್ಸ್, ಆಲ್ ಎಲ್ಇಡಿ ಲೈಟ್‍‍ನಿಂಗ್ ಮತ್ತು ಸಿಗ್ನೇಚರ್ ಪುಲ್ ಬ್ಯಾಕ್ ಹ್ಯಾಂಡಲ್‍‍ಬಾರ್‍ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇನ್ನೂ ಈ ಬೈಕ್ ಸಿಂಗಲ್ ಸೀಟ್ ಮತ್ತು ಪಿಲ್ಲಿಯಾನ್ ಸೀಟ್ ಎರಡು ವಿಭಿನ್ನವಾದ ಆಯ್ಕೆಗಳಲ್ಲಿ ದೊರೆಯಲಿದೆ.

ಬಿಡುಗಡೆಯಾದ ಹಾರ್ಲೆ ಡೇವಿಡ್ಸನ್ ಸಂಸ್ಥೆಯ ಮೂರು ಹೊಸ ಬೈಕ್‍ಗಳು..

ಇನ್ನು ಸಾಫ್ಟೈಲ್ ಮಾದರಿಗಳಾದ ಲೋ ರೈಡರ್ ಮತ್ತು ಡೀಲಕ್ಸ್ ಮಿಲ್ವೌಕೀ-ಎಯ್ಟ್ 107 1,746ಸಿಸಿ ವಿ ಟ್ವಿನ್ ಎಂಜಿನ್ ಸಹಾಯದಿಂದ 149 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡುಕೊಂಡಿರಲಿವೆ.

ಬಿಡುಗಡೆಯಾದ ಹಾರ್ಲೆ ಡೇವಿಡ್ಸನ್ ಸಂಸ್ಥೆಯ ಮೂರು ಹೊಸ ಬೈಕ್‍ಗಳು..

ಹಾರ್ಲೆ ಡೆವಿಡ್ಸನ್ ದೃಢವಾದ ಮೈಲ್ಡ್ ಸ್ಟೀಲ್ ಟ್ಯುಬ್ಲರ್ ಫ್ರೇಮ್ ಶೇಕಡಾ 34ರಷ್ಟು ಗಟ್ಟಿಗೊಳಿಸಿದ್ದು, 14.5 ಕಿಲೋಗ್ರಾಂ ತೂಕವನ್ನು ಕಡಿಮೆಗೊಳಿಸಿದೆ. ಹೊಸ ಬೈಕ್‍‍ಗಳು ಮೋನೊಶಾರ್ಕ್ ಸಸ್ಪೆಷನ್ ಸೆಟಪ್ ಮತ್ತು ಶೋವಾ ಡ್ಯುಯಲ್ ಬೆಂಡಿಂಗ್ ವಾಲ್ವ್ (ಎಸ್‍‍ಡಿಬಿವಿ) ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‍‍ಗಳನ್ನು ಪಡೆದಿದೆ.

Most Read Articles

Kannada
Read more on harley davidson
English summary
Harley-Davidson Launches Low Rider, Deluxe And Fat Boy 114 In India.
Story first published: Thursday, March 1, 2018, 11:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X