ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

By Praveen Sannamani

ಹೀರೋ ಮೋಟೋಕಾರ್ಪ್ ಸಂಸ್ಥೆಯು ಮುಂಬರುವ ಉತ್ಸವ ದಿನಗಳಲ್ಲಿ ತನ್ನ ಬಹುನೀರಿಕ್ಷಿತಿ ಡ್ಯುಯೆಟ್ 125 ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದೀಗ ಹೊಸ ಸ್ಕೂಟರ್ ಅನ್ನು ಡ್ಯುಯೆಟ್‌ 125 ಬದಲಾಗಿ ವಿನೂತನ ರೀತಿಯ ಮರುನಾಮಕರಣಕ್ಕೆ ಮುಂದಾಗಿದೆ.

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಹೀರೋ ಸಂಸ್ಥೆಯು ಹೊಸ ಡ್ಯುಯೆಟ್ 125 ಸ್ಕೂಟರ್ ಅನ್ನು ಡೆಸ್ಟಿನಿ 125 ಎಂದು ಮರುನಾಮಕರಣ ಮಾಡಿದೆ ಎಂಬ ಮಾಹಿತಿಗಳು ಲಭ್ಯವಾಗಿದ್ದು, ಹೊಸ ಹೆಸರಿನ ಬ್ಯಾಡ್ಜ್ ಪಡೆದುಕೊಂಡಿರುವ ಡೆಸ್ಟಿನಿ 125 ಸ್ಕೂಟರ್‌ಗಳನ್ನ ಹೀರೋ ಸಂಸ್ಥೆಯು ಈಗಾಗಲೇ ಡೀಲರ್ಸ್ ಯಾರ್ಡ್‌ಗಳಿಗೆ ರವಾನೆ ಮಾಡುತ್ತಿರುವುದಾಗಿ ಕೆಲವು ಸುದ್ದಿಮಾಧ್ಯಮಗಳು ವರದಿ ಮಾಡಿವೆ.

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿದ್ದ ವೇಳೆ ಹೊಸ ಸ್ಕೂಟರ್ ಅನ್ನು ಡ್ಯುಯೆಟ್ 125 ಎಂದೇ ನಾಮಕರಣ ಮಾಡಿ ಪ್ರದರ್ಶನ ಮಾಡಿದ್ದ ಹೀರೋ ಸಂಸ್ಥೆಯು ಇದೀಗ ಗ್ರಾಹಕರ ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಹೆಸರು ಬದಲಿ ಮಾಡಿದೆ ಎನ್ನಲಾಗಿದೆ.

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಈಗಾಗಲೇ ಹೀರೋ ಸಂಸ್ಥೆಯ ಸಾಮಾನ್ಯ ಮಾದರಿಯ ಡ್ಯುಯೆಟ್ ಸ್ಕೂಟರ್‌ಗಳು ಮಾರಾಟಕ್ಕೆ ಲಭ್ಯವಿದ್ದು, ಪ್ರಿಮಿಯಂ ವೈಶಿಷ್ಟ್ಯತೆಗಳನ್ನು ಹೊತ್ತುಬರುತ್ತಿರುವ ಹೊಸ ಡ್ಯುಯೆಟ್ 125 ಸ್ಕೂಟರ್‌ಗಳಿಗೆ ಮತ್ತದೇ ಹೆಸರು ನೀಡಿರುವ ಬಗ್ಗೆ ಮಹತ್ವದ ಮಾತುಕತೆ ನಡೆದಿತ್ತು.

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಅಂತಿಮವಾಗಿ ಡ್ಯುಯೆಟ್ 125 ಬದಲಾಗಿ ಡೆಸ್ಟಿನಿ 125 ಎಂದು ಮರುನಾಮಕರಣ ಮಾಡಲು ಒಪ್ಪಿಗೆ ಸೂಚಿಸಲಾಗಿದ್ದು, 125 ಸಿಸಿ ಸ್ಕೂಟರ್ ಎಂಜಿನ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ಈ ಸ್ಕೂಟರ್ ಹೋಂಡಾ ಆಕ್ಟಿವಾ 125 ಸ್ಕೂಟರ್‌ಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ.

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಎಂಜಿನ್ ಸಾಮರ್ಥ್ಯ

ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳು 124.6 ಸಿಸಿ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಎಂಜಿನ್ ಸಹಾಯದಿಂದ 8.7 ಬಿಹೆಚ್‍‍ಪಿ ಮತ್ತು 10.2 ಎನ್ಎಮ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು ವೇರಿಯೊಮೇಟಿಕ್ ಡ್ರೈವ್ ಆಟೋಮ್ಯಾಟಿಕ್ ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಇದಲ್ಲದೆ ಹೊಸ ಸ್ಕೂಟರ್‌ನಲ್ಲಿ ವಿಶೇಷವಾದ ಹೀರೋ ಸಂಸ್ಥೆಯ ಐ3ಎಸ್ ಐಡಲ್ ಸ್ಟಾರ್ಟ್-ಸ್ಟಾಪ್ ಟೆಕ್ನಾಲಿಜಿಯನ್ನು ಪಡೆದಿದ್ದು, ಕೆಲವು ಸೆಕೆಂಡುಗಳಿಗಿಂತ ಹೆಚ್ಚು ಕಾಲ ವಾಹನ ನಿಷ್ಕ್ರಿಯವಾಗಿದ್ದಾಗ ಐ3ಎಸ್ ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಸ್ವಯಂಚಾಲಿತವಾಗಿ ಎಂಜಿನ್ ಅನ್ನು ಬದಲಿಸುತ್ತದೆ.

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಬೈಕಿನ ವೈಶಿಷ್ಟ್ಯತೆಗಳು

ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ಎಲ್ಇಡಿ ಟೈಲ್ ಲೈಟ್, ಹೊರ ಭಾಗದಲ್ಲಿ ಇರುವ ಫ್ಯೂಲ್ ಟ್ಯಾಂಕ್ ಕ್ಯಾಪ್, ಬಾಡಿ ಕಲರ್ ಮಾದರಿಯಲ್ಲೇ ರಿಯರ್ ವ್ಯೂ ಮಿರರ್ ಬಣ್ಣದ ಆಯ್ಕೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೂಟ್ ಲೈಟ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನ ಇದರಲ್ಲಿ ನೀಡಲಾಗಿದೆ.

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಇನ್ನು ಬಿಡುಗಡೆಗೊಳ್ಳಲಿರುವ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳು 1,830ಎಂಎಂ ಉದ್ದ, 726ಎಂಎಂ ಅಗಲ ಮತ್ತು 1,155ಎಂಎಂ ಎತ್ತರ ಹೊಂದಿದ್ದು, 1245ಎಂಎಂ ವ್ಹೀಲ್ ಬೇಸ್ ಹಾಗು 155ಎಂಎಂ ನಷ್ಟು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿರಲಿದೆ.

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಹಾಗೆಯೇ ಈ ಸ್ಕೂಟರ್‍‍ನ ಸಸ್ಷೆಷನ್ ವಿಚಾರಕ್ಕೆ ಬಗ್ಗೆ ಹೇಳುವುದಾದರೇ, ಮುಂಭಾಗದಲ್ಲಿ ಅಪ್‍‍ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಿಂಭಾಗದಲ್ಲಿ ಸ್ಪ್ರಿಂಗ್ ಮಾದರಿಯ ಹೈಡ್ರಾಲಿಕ್ ಶಾಕ್ಬರ್ಜರ್ ಅನ್ನು ಪಡೆದುಕೊಂಡಿರಲಿದೆ.

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಸುರಕ್ಷಾ ಸಾಧನಗಳು

ಹೀರೋ ಡೆಸ್ಟಿನಿ 125 ಸ್ಕೂಟರ್‍‍ಗಳಲ್ಲಿ 130-ಎಂಎಂ ಮುಂಭಾಗದ ಡ್ರಮ್ ಬ್ರೇಕ್ಸ್ ಮತ್ತು ಹಿಂಭಾಗದಲ್ಲಿ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದ್ದು, ಆಯ್ಕೆ ರೂಪದಲ್ಲಿ ಮುಂಭಾಗದ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಸೌಲಭ್ಯ ನೀಡಲಾಗುತ್ತದೆ.

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಒಟ್ಟಿನಲ್ಲಿ 125ಸಿಸಿ ಸೆಗ್ಮೆಂಟ್‌ನಲ್ಲಿರುವ ಇತರೆ ಸ್ಕೂಟರ್‌ಗಳಿಂತಲೂ ವಿಭಿನ್ನವಾಗಿರುವ ಡೆಸ್ಟಿನಿ ಸ್ಕೂಟರ್‌ಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.62,000 ದಿಂದ ರೂ.65,000 ತನಕ ಇರಬಹುದೆಂದು ಅಂದಾಜಿಸಲಾಗಿದ್ದು, ಹೋಂಡಾ ಗ್ರಾಜಿಯಾ, ಟಿವಿಎಸ್ ಎನ್‌ಟಾರ್ಕ್ 125, ಸುಜುಕಿ ಬರ್ಗಮನ್ ಸ್ಟ್ರೀಟ್ ಮತ್ತು ಎಪ್ರಿಲಿಯಾ ಸ್ಕೂಟರ್‌ಗಳಿಗೆ ತ್ರೀವ ಪೈಪೋಟಿ ನೀಡಬಹುದಾದ ಗುಣಲಕ್ಷಣಗಳನ್ನ ಹೊಂದಿದೆ ಎನ್ನಬಹುದು.

Source: GaadiWaadi

Most Read Articles

Kannada
Read more on hero motocorp scooter
English summary
Hero Duet 125 Renamed As Destini 125 — Launch Soon.
Story first published: Tuesday, August 14, 2018, 13:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X