ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಏರಿಸಿದ ಹೀರೋ ಮೋಟೊಕಾರ್ಪ್..

ಭಾರತ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್ ತಮ್ಮ ಸ್ಕೂಟರ್ ಮತ್ತು ಮೋಟಾರ್‍‍ಸೈಕಲ್‍‍ಗಳ ಮೇಲೆ ಬೆಲೆಯನ್ನು ಏರಿಸಲಿದೆ.

By Rahul Ts

ಭಾರತ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್ ತಮ್ಮ ಸ್ಕೂಟರ್ ಮತ್ತು ಮೋಟಾರ್‍‍ಸೈಕಲ್‍‍ಗಳ ಮೇಲೆ ಬೆಲೆಯನ್ನು ಏರಿಸಲಿದೆ. ದೇಶವ್ಯಾಪ್ತಿಯಾಗಿ ಮಾರಾಟಮಾಡುತ್ತಿರುವ ಸಂಸ್ಥೆಯ ಎಲ್ಲಾ ದ್ವಿಚಕ್ರ ವಾಹನಗಳ ಮೇಲೆ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.500 ಏರಿಕೆ ಮಾಡಲಿದೆ.

ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಏರಿಸಿದ ಹೀರೋ ಮೋಟೊಕಾರ್ಪ್..

ಹೀರೋ ಮೋಟೊಕಾರ್ಪ್ ತಮ್ಮ ದ್ವಿಚಕ್ರ ವಾಹನಗಳ ಮೇಲೆಯ ಬೆಲೆ ಏರಿಕೆ ಪ್ರಕ್ರಿಯೆಯು ಈಗಾಗಲೆ ಜಾರಿಗೊಂಡಿದ್ದು, ಹೂಡಿಕೆಯ ಖರ್ಚು ಅಧಿಕವಾಗಿ ಬೆಳೆಯುತ್ತಿರುವುದರಿಂದ, ಬಿಡಿ ಭಾಗಗಳ ಬೆಲೆಯ ಏರಿಕೆ ಮತ್ತು ಕರೆನ್ಸಿ ಮಾರ್ಪಾಡಿನ ರೇಟ್ ಎಂಬ ಅಂಶಗಳಿಂದ ಸಂಸ್ಥೆಯು ಬೆಲೆಯನ್ನು ಏರಿಸಿದೆ.

ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಏರಿಸಿದ ಹೀರೋ ಮೋಟೊಕಾರ್ಪ್..

ವಿವಿಧ ವೇರಿಯಂಟ್‍‍ಗಳ ಮೇಲೆ ಎಷ್ಟು ಬೆಲೆ ಏರಿಕೆ ಮತ್ತು ಯಾವ ಮಾಡಲ್ ಮೇಲೆ ಎಷ್ಟು ಬೆಲೆಯನ್ನು ಏರಿಸಿದೆ ಎಂಬುದರ ಬಗ್ಗೆ ಇನ್ನು ಸಂಪೂರ್ಣವಾದ ಮಾಹಿತಿಯು ತಿಳಿದುಬಂದಿಲ್ಲವಾದರೂ, ಆದರೆ ಪ್ರತೀ ಮಾಡಲ್‍‍ಗಳ ಮೇಲೆ 500 ರುಪಾಯಿ ವರೆಗು ಹೆಚ್ಚಿಸಿವೆ ಎನ್ನಬಹುದಾಗಿದೆ.

ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಏರಿಸಿದ ಹೀರೋ ಮೋಟೊಕಾರ್ಪ್..

ಹೀರೋ ಮೋಟೊಕಾರ್ಪ್ ಭಾರತ ದೇಶದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು, ಜೂನ್ ತಿಂಗಳಿನಲ್ಲಿ ಹೀರೋ ಸಂಸ್ಥೆಯು ಮಾರುಕಟ್ಟೆಯಲ್ಲಿ ತಮ್ಮ ಶೇರ್ ಅನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.

ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಏರಿಸಿದ ಹೀರೋ ಮೋಟೊಕಾರ್ಪ್..

ಹೀರೋ ಮೋಟೊಕಾರ್ಪ್ 2018ರ ಜೂನ್ ತಿಂಗಳಿನಲ್ಲಿ 7,04,562 ಯೂನಿಟ್ ಬೈಕ್‍‍ಗಳನ್ನು ಮಾರಾಟ ಮಾಡಿದ್ದು, 2017ರ ಜೂನ್ ತಿಂಗಳಿನಲ್ಲಿ 6,24,185 ಯೂನಿಟ್ ಬೈಕ್‍‍ಗಳನ್ನು ಮಾರಾಟ ಮಾಡಿದೆ. ಅಂದರೆ ಕಳೆದ ಜೂನ್‍‍ಗಿಂತ ಈ ವರ್ಷದ ಜೂನ್ ತಿಂಗಳಿನಲ್ಲಿ ಶೇಕಡ 13ರಷ್ಟು ಹೆಚ್ಚು ಮಾರಾಟ ಮಾಡಿದೆ.

ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಏರಿಸಿದ ಹೀರೋ ಮೋಟೊಕಾರ್ಪ್..

ಕಳೆದ ದಿನಗಳಲ್ಲಿ ಹೀರೋ ಮೋಟೊಕಾರ್ಪ್ ಮತ್ತೊಂದು ಮೈಲಿಗಲ್ಲನ್ನು ತಲುಪಿದ್ದು, ಈ ವರ್ಷದ ಮೊದಲ ಆರ್ಥಿಕ ತ್ರೈಮಾಸಿಕ ಅವಧಿಯಲ್ಲಿ (ಏಪ್ರಿಲ್-ಮೇ-ಜೂನ್) ಸುಮಾರು 21 ಲಕ್ಷ ಯೂನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಏರಿಸಿದ ಹೀರೋ ಮೋಟೊಕಾರ್ಪ್..

ಹೀರೋ ಮೋಟೊಕಾರ್ಪ್ ಈ ಮಾನ್ಸೂನ್ ಸೀಸನ್‍‍ನಲ್ಲಿ ಮತ್ತಷ್ಟು ವಾಹನಗಳನ್ನು ಮಾರಾಟಮಾಡುವ ಆಲೋಚನೆಯಲಿದ್ದು, ಈ ವರ್ಷದ ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಸಂಖ್ಯೆಯಲ್ಲಿ ಮಾರಾಟ ಮಾಡುವ ಯೋಜನೆಯಲ್ಲಿದೆ.

ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಏರಿಸಿದ ಹೀರೋ ಮೋಟೊಕಾರ್ಪ್..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೀರೋ ಮೋಟೊಕಾರ್ಪ್ ಭವಿಷ್ಯದಲ್ಲಿ ಪರ್ಫಾರ್ಮೆನ್ಸ್ ಮೋಟಾರ್‍‍ಸೈಕಲ್‍‍ಗಳ ವಿಭಾಗದಲ್ಲಿ ನೂತನವಾದ ವಾಹನಗಳನ್ನು ಮತ್ತು ಕಮ್ಯೂಟರ್ ಸೆಗ್ಮೆಂಟ್‍‍ನಲ್ಲಿ ಕೂಡ ವಿನೂತನ ವಾಹನಗಳನ್ನು ಉತ್ಪಾದಿಸಿ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಪ್ರಥಮ ಸ್ಥಾನವನ್ನು ತಲುಪುವ ತವಕದಲ್ಲಿದೆ.

ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಏರಿಸಿದ ಹೀರೋ ಮೋಟೊಕಾರ್ಪ್..

ಹೀರೋ ಮೋಟೊಕಾರ್ಪ್ ಮೊದಲಿಗೆ ಎಕ್ಸ್‌ಟ್ರಿಮ್ 200ಆರ್ ಬೈಕ್ ಅನ್ನು ಬಿಡುಗಡೆಗೊಳಿಸಿ, ಆನಂತರ 125ಸಿಸಿ ಡ್ಯುಯೆಟ್ ಮತ್ತು ಮಾಯೆಸ್ಟ್ರೋ ಎಡ್ಜ್ ಸ್ಕೂಟರ್‍‍ಗಳ ಜೊತೆಗೆ ಎಕ್ಸ್‌ಟ್ರಿಮ್ 200ಆರ್ ಆಧಾರಿತ ಎಕ್ಸ್ ಪಲ್ಸ್ ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Hero motocorp bikes price hike across range.
Story first published: Tuesday, July 10, 2018, 11:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X