ಕಳೆದ ಒಂದು ವರ್ಷದಲ್ಲಿ ಹೀರೋ ಬೈಕ್‌ಗಳ ಬೆಲೆ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?

ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ಕಳೆದ ಒಂದು ವರ್ಷದಿಂದ ಬೈಕ್ ಬೆಲೆಯಲ್ಲಿ ಹೆಚ್ಚಳ ಮಾಡಿತ್ತಲೇ ಇದೆ.

By Praveen Sannamani

ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ಕಳೆದ ಒಂದು ವರ್ಷದಿಂದ ಬೈಕ್ ಬೆಲೆಯಲ್ಲಿ ಹೆಚ್ಚಳ ಮಾಡಿತ್ತಲೇ ಇದೆ. ಅದರಲ್ಲೂ ಕಳೆದ ಮೂರು ತಿಂಗಳ ಅಂತರದಲ್ಲಿ ಮೂರು ಬಾರಿ ಬೈಕ್ ಉತ್ಪನ್ನಗಳ ಬೆಲೆಗಳನ್ನ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ನೀಡಿದೆ.

ಕಳೆದ ಒಂದು ವರ್ಷದಲ್ಲಿ ಹೀರೋ ಬೈಕ್‌ಗಳ ಬೆಲೆ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?

ಬಿಡಿಭಾಗಗಳು ಮತ್ತು ಸರಕು ಸಾಗಾಣಿಕ ವೆಚ್ಚ ಹೆಚ್ಚಳದಿಂದಾಗಿ ದ್ವಿಚಕ್ರ ವಾಹನಗಳ ಬೆಲೆಗಳನ್ನ ಹೆಚ್ಚಿಸಿರುವ ಬಗ್ಗೆ ಸಮರ್ಥನೆ ನೀಡಿರುವ ಹೀರೋ ಮೊಟೊಕಾರ್ಪ್ ಸಂಸ್ಥೆಯು ಕಳೆದ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 2ರಿಂದ 2.5 ಸಾವಿರ ಬೆಲೆ ಎರಿಕೆ ಮಾಡಿದ್ದು, ಬೈಕ್ ಮಾರಾಟದಲ್ಲಿ ಸದ್ಯ ನಂ.1 ಸ್ಥಾನದಲ್ಲಿರುವ ಹೀರೋ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್ ನೀಡುತ್ತಿದೆ.

ಕಳೆದ ಒಂದು ವರ್ಷದಲ್ಲಿ ಹೀರೋ ಬೈಕ್‌ಗಳ ಬೆಲೆ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?

ವರ್ಷದ ಆರಂಭದಲ್ಲೇ ತನ್ನೆಲ್ಲಾ ಬೈಕ್‌ಗಳ ಮೇಲೂ ರೂ.400 ಹೆಚ್ಚಳ ಮಾಡಿದ್ದ ಹೀರೋ ಸಂಸ್ಥೆಯು ಮೇ ಅವಧಿಯಲ್ಲಿ ರೂ.625 ಏರಿಕೆ ಮಾಡಿತ್ತು. ಇದೀಗ ಮತ್ತೊಮ್ಮೆ ಬೆಲೆ ಏರಿಕೆ ಮಾಡಿದ್ದು, ಪ್ರತಿ ಬೈಕ್ ಮೇಲೂ ಎಕ್ಸ್‌ಶೋರಂ ಪ್ರಕಾರ ರೂ.500 ಬೆಲೆ ಹೆಚ್ಚಳ ಮಾಡಿದೆ.

ಕಳೆದ ಒಂದು ವರ್ಷದಲ್ಲಿ ಹೀರೋ ಬೈಕ್‌ಗಳ ಬೆಲೆ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?

ಹೀರೋ ಸಂಸ್ಥೆಯು ಹೆಚ್ಚಳ ಮಾಡಿರುವ ಬೆಲೆಗಳು ಎಕ್ಸ್‌ಶೋರಂ ಬೆಲೆಗಳಾಗಿದ್ದು, ಇದು ಆನ್‌ರೋಡ್ ಬೆಲೆಗಳಿಗೆ ಬಂದಾಗ ಮತ್ತಷ್ಟು ಹೆಚ್ಚಳವಾಗುತ್ತೆ. ಹೀಗಾಗಿ ಬೈಕ್ ಒಂದರ ಬೆಲೆಯನ್ನು ಕಳೆದ ವರ್ಷದ ಅಕ್ಟೋಬರ್-ನವೆಂಬರ್ ಬೆಲೆಗಳಿಗೆ ಹೊಲಿಕೆ ಮಾಡಿದಲ್ಲಿ ಕನಿಷ್ಠ ಅಂದ್ರು ರೂ. 2 ರಿಂದ 2.5 ಸಾವಿರ ಬೆಲೆ ಹೆಚ್ಚಳವಾಗಿವೆ.

ಕಳೆದ ಒಂದು ವರ್ಷದಲ್ಲಿ ಹೀರೋ ಬೈಕ್‌ಗಳ ಬೆಲೆ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?

ಪ್ರಸ್ತುತ ಹೀರೋ ಮೊಟೊಕಾರ್ಪ್ ಸಂಸ್ಥೆಯು, ಪ್ರವೇಶ ಮಟ್ಟದ ಹೆಚ್ಎಫ್ ಡಿಲಕ್ಸ್, ಪ್ಲೆಷರ್ ಮತ್ತು ಹೊಸ ಶ್ರೇಣಿಯ ಪ್ಯಾಶನ್ ಪ್ರೊ, ಪ್ಯಾಶನ್ ಎಕ್ಸ್‌ಪ್ರೊ ಮತ್ತು ಸೂಪರ್ ಸ್ಪ್ಲೆಂಡರ್‌ನಂತಹ ಪ್ರಯಾಣಿಕ ಮೋಟಾರ್ ಸೈಕಲ್‌ಗಳನ್ನು ಸಹ ಮಾರಾಟ ಮಾಡುತ್ತಿದ್ದು, ಎಲ್ಲಾ ಮೂರು ಪ್ರಯಾಣಿಕ ದ್ವಿಚಕ್ರ ವಾಹನಗಳೂ ಕೂಡಾ ಅತ್ಯಾಕರ್ಷಕ ವೈಶಿಷ್ಟ್ಯಗಳು ಮತ್ತು ವಿನ್ಯಾಸ ಅಂಶಗಳನ್ನು ಪಡೆದುಕೊಂಡಿವೆ.

ಕಳೆದ ಒಂದು ವರ್ಷದಲ್ಲಿ ಹೀರೋ ಬೈಕ್‌ಗಳ ಬೆಲೆ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?

ಮೇಲೆ ಹೇಳಿದ ಹೀರೊ ಮೊಟೊಕಾರ್ಪ್ ಕಂಪನಿಯ ಹೊಸ ಪ್ಯಾಶನ್ ಪ್ರೊ, ಎಕ್ಸ್‌ಪ್ರೊ ಮತ್ತು ಸೂಪರ್ ಸ್ಪ್ಲೆಂಡರ್‌ ವಾಹನಗಳ ಹೊಸ ಆವೃತಿಗಳನ್ನು ಸಹ ಬಿಡುಗಡೆ ಮಾಡಿದ್ದು, ಬೆಲೆ ಹೆಚ್ಚಳದಿಂದ ಬೈಕ್ ಮಾರಾಟ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎಂಬುವುದೇ ಸದ್ಯದ ಪ್ರಶ್ನೆ.

ಕಳೆದ ಒಂದು ವರ್ಷದಲ್ಲಿ ಹೀರೋ ಬೈಕ್‌ಗಳ ಬೆಲೆ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?

ಆದರೇ, ಕಮ್ಯುಟರ್ ಬೈಕ್ ವಿಭಾಗದದಲ್ಲಿ ತನ್ನದೇ ಜನಪ್ರಿಯತೆ ಹೊಂದಿರುವ ಹೀರೋ ಸಂಸ್ಥೆಯು ಬೆಲೆ ಹೆಚ್ಚಳದಿಂದ ಯಾವುದೇ ಪರಿಣಾಮ ಬೀರದು ಎಂಬ ವಿಶ್ವಾಸದಲ್ಲಿದ್ದು, ಹೀರೋ ಮಾದರಿಯಲ್ಲೇ ಇತರೆ ಬೈಕ್ ಉತ್ಪಾದನಾ ಸಂಸ್ಥೆಗಳು ಸಹ ಬೆಲೆ ಏರಿಕೆ ಮಾಡಲಿವೆ ಎನ್ನಲಾಗುತ್ತಿದೆ.

ಕಳೆದ ಒಂದು ವರ್ಷದಲ್ಲಿ ಹೀರೋ ಬೈಕ್‌ಗಳ ಬೆಲೆ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?

ಇದರಿಂದಾಗಿ ಬೆಲೆ ಹೆಚ್ಚಳವು ಬೈಕ್ ಮಾರಾಟ ಮೇಲೆ ಯಾವುದೇ ಪರಿಣಾಮ ಬೀರದು ಎನ್ನುವ ವಿಶ್ವಾಸದಲ್ಲಿರುವ ಹೀರೋ ಸಂಸ್ಥೆಯು ಮುಂದಿನ ದಿನಗಳಲ್ಲಿ ಬಹುನೀರಿಕ್ಷಿತ ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್, ಎಕ್ಸ್‌ಟ್ರಿಮ್ 200ಆರ್ ಮತ್ತು ಎಕ್ಸ್‌ಪಲ್ಸ್ 200 ಬೈಕ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿವೆ.

ಕಳೆದ ಒಂದು ವರ್ಷದಲ್ಲಿ ಹೀರೋ ಬೈಕ್‌ಗಳ ಬೆಲೆ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

ದೇಶದ ಅಗ್ಗದ ಕಾರು 'ನ್ಯಾನೊ'ಗೆ ಗುಡ್ ಬೈ ಹೇಳಿದ ಟಾಟಾ..!?

Most Read Articles

Kannada
Read more on hero motocorp price
English summary
Hero MotoCorp Hikes Prices Of Two-Wheelers.
Story first published: Thursday, July 5, 2018, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X