ಹೊಸ ನಮೂನೆಯ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಹೀರೋ ಮೊಟೋಕಾರ್ಪ್ ಸಂಸ್ಥೆಯು ಕೇವಲ ದೇಶದಲ್ಲಿ ಅಷ್ಟೇ ಅಲ್ಲ. ವಿಶ್ವದ ನಂ.1 ಬೈಕ್ ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಿದೆ. ಬೈಕ್ ಮಾರಾಟದಲ್ಲಿ ವಿದೇಶಿ ಬೈಕ್ ಸಂಸ್ಥೆಗಳನ್ನೇ ಹಿಂದಿಕ್ಕಿರುವ ಹೀರೋ ಸಂಸ್ಥೆಯು ಸದ್ಯ ಪ್ರೀಮಿಯಂ ವೈಶಿಷ್ಟ್ಯತೆಯ ಬೈಕ್ ಉತ್ಪಾದನೆ ಮೇಲೆ ಹೆಚ್ಚಿನ ಗಮನ ಹರಿಸಲು ಮುಂದಾಗಿಯೆಂತೆ.

ಹೊಸ ನಮೂನೆಯ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಬೈಕ್‌ಗಳಲ್ಲಿ ಮೊದಲ ನಾಲ್ಕು ಬೈಕುಗಳು ಹೀರೋ ನಿರ್ಮಾಣ ಬೈಕ್ ಮಾದರಿಗೆ ಸ್ಥಾನ ಗಿಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಕಮ್ಯೂಟರ್ ಜೊತೆ ಜೊತೆಗೆ ಗೇಮ್‌ ಚೇಂಜರ್‌ ಪ್ರೀಮಿಯಂ ಬೈಕ್‌ಗಳ ಉತ್ಪಾದನೆ ಬಗ್ಗೆ ಹೀರೋ ಮೊಟೋಕಾರ್ಪ್ ಸಂಸ್ಥೆಯು ಹೆಚ್ಚಿನ ಆಸಕ್ತಿ ತೊರುತ್ತಿದೆ.

ಹೊಸ ನಮೂನೆಯ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

100ಸಿಸಿಯಿಂದ 125ಸಿಸಿ ಎಂಜಿನ್ ಸಾಮರ್ಥ್ಯದ ಹೀರೋ ಬೈಕ್‌ಗಳಿಗೆ ಭಾರೀ ಬೇಡಿಕೆಯಿದ್ದು, ಇದೀಗ 200ಸಿಸಿಯಿಂದ 300ಸಿಸಿ ಬೈಕ್ ಸೆಗ್ಮೆಂಟ್ ಮೇಲೂ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಇದಕ್ಕೆ ಉದಾಹರಣೆ ಎಕ್ಸ್‌ಟ್ರಿಮ್ 200ಆರ್ ಮತ್ತು ಎಕ್ಸ್‌ಪಲ್ಸ್ 200 ಬೈಕ್‌ಗಳು ಪ್ರೀಮಿಯಂ ಬೈಕ್ ಸವಾರರ ಆಕರ್ಷಣೆಗೆ ಕಾರಣವಾಗಿವೆ.

ಹೊಸ ನಮೂನೆಯ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಇವುಗಳಲ್ಲಿ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಈಗಾಗಲೇ ಬಿಡುಗಡೆಗೊಂಡು ಮಾರಾಟವಾಗುತ್ತಿದ್ದು, 199 ಸಿಸಿ ಫೌರ್ ಸ್ಟೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ 18-ಬಿಎಚ್‌ಪಿ ಮತ್ತು 17.1-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಹೊಸ ನಮೂನೆಯ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಹಾಗೆಯೇ, ಎಕ್ಸ್‌ಪಲ್ಸ್ 200 ಅಡ್ವೆಂಚರ್ ಬೈಕ್ ಸಹ 200 ಸಿಸಿ ಏರ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಒದಗಿಸಲಾಗಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಸೇರಿಸಲಾಗಿದೆ. ಇದು 18.1-ಬಿಹೆಚ್ ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಒಟ್ಟಾರೆ ಈ ಬೈಕಿನ ಡಿಸೈನ್ ಸರಳವಾಗಿದ್ದು, ಧೀರ್ಘ ಪ್ರಮಾಣದ ಸಸ್ಪೆಷನ್ ಸೆಟಪ್ ಅನ್ನು ಪಡೆದಿದೆ.

ಹೊಸ ನಮೂನೆಯ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಈ ಮೂಲಕ ಪ್ರೀಮಿಯಂ ಸ್ಮೆಗೆಟ್‌ನಲ್ಲಿ ಹೊಸ ಸಂಚಲನ ಮೂಡಿಸಲು ಮುಂದಾಗಿರುವ ಹೀರೋ ಸಂಸ್ಥೆಯು 2019ರ ವೇಳೆಗೆ ತನ್ನ ಹೊಸ ಪ್ರೀಮಿಯಂ ಬೈಕ್ ಪ್ರದರ್ಶನಗೊಳಿಸುವ ಇರಾದೆಯಲ್ಲದ್ದು, ಕೆಟಿಎಂ ಡ್ಯೂಕ್ 200 ಸೇರಿದಂತೆ ಪ್ರಮುಖ ಬೈಕ್‌ಗಳಿಗೆ ಟಕ್ಕರ್ ನೀಡಲಿದೆ.

MOST READ: ಟ್ರಾಫಿಕ್ ಪೊಲೀಸ್‍‍ರಿಂದ ತಪ್ಪಿಸಿಕೊಳ್ಳಬಹುದು ಆದ್ರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.!

ಹೊಸ ನಮೂನೆಯ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಇನ್ನು ಇಮ್‌ಪಲ್ಸ್ 150 ಬೈಕ್ ಪ್ರೇರಣೆಯೊಂದಿಗೆ ಸಿದ್ದವಾಗಿರುವ ಎಕ್ಸ್‌ಪಲ್ಸ್ 200 ಬೈಕ್‌ಗಳು ಆಪ್ ರೋಡ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿದ್ದು, ಹೊಸ ಬೈಕಿನ ಬೆಲೆಗಳನ್ನ ಹೊರತು ಪಡಿಸಿ ಬಹುತೇಕ ತಾಂತ್ರಿಕ ಅಂಶಗಳ ಕುರಿತಾದ ಮಾಹಿತಿಯನ್ನ ಹೀರೋ ಸಂಸ್ಥೆಯು ಈಗಾಗಲೇ ಬಿಟ್ಟುಕೊಟ್ಟಿದೆ. ಹೀಗಾಗಿ ಬೈಕಿನ ಬೆಲೆಗಳ ಮೇಲೆ ಎಕ್ಸ್‌ಪಲ್ಸ್ 200 ಬೈಕಿನ ಜನಪ್ರಿಯತೆ ನಿರ್ಧಾರವಾಗಲಿದೆ ಎನ್ನಬಹುದು.

ಹೊಸ ನಮೂನೆಯ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಹೊರತುಪಡಿಸಿ ಯಾವುದೇ ಬೈಕ್ ಮಾದಿರಯು ಕಡಿಮೆ ಬೆಲೆಯಲ್ಲಿ ಲಭ್ಯವಿಲ್ಲದ ಹಿನ್ನೆಲೆ ಹೀರೋ ಎಕ್ಸ್‌ಪಲ್ಸ್ 200 ಭಾರೀ ಜನಪ್ರಿಯತೆ ಪಡೆಯಲಿದ್ದು, ಬೈಕಿನ ಬೆಲೆಯನ್ನು 1.20 ಲಕ್ಷದೊಳಗೆ ನಿರ್ಧರಿಸುವ ಬಗ್ಗೆ ಇರಾದೆಯಲ್ಲಿದೆ.

ಹೊಸ ನಮೂನೆಯ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಒಂದು ವೇಳೆ ಹೀರೋ ಮೋಟಾರ್ ಕಾರ್ಪ್ ಸಂಸ್ಥೆಯು ಹೊಸ ಬೈಕಿನ ಬೆಲೆಯನ್ನು 1.20 ಲಕ್ಷದೊಳಗೆ ನಿರ್ಧರಿಸಿದ್ದೇ ಆದಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿಗೂ ತೀವ್ರ ಪೈಪೋಟಿ ನೀಡಲಿರುವ ಎಕ್ಸ್‌ಪಲ್ಸ್ 200 ಬೈಕ್‌ಗಳು ಅಡ್ವೆಂಚರ್ ಪ್ರಿಯರನ್ನು ತನ್ನತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಸ ನಮೂನೆಯ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಈ ಮೂಲಕ ಪ್ರೀಮಿಯಂ ಸೆಗ್ಮೆಂಟ್‌ನಲ್ಲೂ ತನ್ನ ಪ್ರಭಾವ ಹೊಂದಲಿರುವ ಹೀರೋ ಸಂಸ್ಥೆಯು ಕೆಟಿಎಂ, ಬಜಾಬ್, ಹೋಂಡಾ ಮತ್ತು ಟಿವಿಎಸ್ ಸಂಸ್ಥೆಯ ಪ್ರೀಮಿಯಂ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡುವ ಯೋಜನೆಯಲ್ಲಿದ್ದು, ಹೊಸ ಎಕ್ಸ್‌ಪಲ್ಸ್ 200 ಬೈಕ್ ಯಾವ ರೀತಿಯ ಬೇಡಿಕೆ ಪಡೆದುಕೊಳ್ಳಲಿದೆ ಎನ್ನುವುದರ ಮೇಲೆ ಹೀರೋ ಹೊಸ ಯೋಜನೆಗಳ ಹಣೆಬರಹ ನಿರ್ಧಾರವಾಗಲಿದೆ ಎನ್ನಬಹುದು.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

Most Read Articles

Kannada
Read more on hero motocorp
English summary
Hero MotoCorp To Launch New Premium Bikes In India.
Story first published: Tuesday, September 11, 2018, 20:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X